ಮೈಸೂರು: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ (KRS-PMFBY) ಅನು ಷ್ಠಾನಗೊಳಿಸಲಾಗುತ್ತಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ. ಮೈಸೂರು ತಾಲೂಕು ಜಯಪುರ ಹೋಬಳಿಗೆ ಟೊಮ್ಯಾಟೋ ಹಾಗೂ ಎಲೆಕೋಸು, ವರುಣ ಮತ್ತು ಇಲವಾಲ ಹೋಬಳಿಗೆ ಟೊಮ್ಯಾಟೋ ಬೆಳೆ ನಿಗದಿ ಪಡಿಸಲಾಗಿದೆ. ಕೃಷ್ಣರಾಜನಗರ ತಾಲೂಕು ಹೆಬ್ಬಾಳು ಹೋಬಳಿ ಹಾಗೂ ತಿ.ನರಸೀಪುರ ತಾಲೂಕು ಬನ್ನೂರು ಹಾಗೂ ಸೋಸಲೆ ಹೋಬಳಿಗೆ ಟೊಮ್ಯಾಟೋ ಬೆಳೆ ನಿಗದಿಪಡಿಸಲಾಗಿದೆ. ನಂಜನಗೂಡು ತಾಲೂಕಿನ ಕಸಬಾ, ದೊಡ್ಡಕೌಲಂದೆ, ಬಿಳಿಗೆರೆ…
ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ
June 14, 2019ಮೈಸೂರು: ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋ ಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧ ರಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯದ 164 ತಾಲೂಕು ಗಳಲ್ಲಿ ಬರವಿದ್ದು, ಕುಡಿಯಲು ನೀರಿಲ್ಲದೆ ದುಸ್ಥಿತಿ ಎದುರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನತೆ ಕಂಗಾಲಾಗಿದ್ದು, ಇದಕ್ಕೆ ಪರಿಹಾರೋಪಾಯ ನೀಡಬೇಕಿದ್ದ ರಾಜ್ಯ ಮೈತ್ರಿ ಸರ್ಕಾರ…
ಮೈಸೂರು ವಿವಿ ವ್ಯಾಪ್ತಿಯ ಶೈಕ್ಷಣಿಕ ಕೇಂದ್ರಗಳಲ್ಲಿ ಹಸಿರೀಕರಣ
June 14, 2019ಮೈಸೂರು: ಮೈಸೂರು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜು ಹಾಗೂ ಶೈಕ್ಷಣಿಕ ಕೇಂದ್ರಗಳನ್ನು ಹಸಿರೀಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಜಿ.ಹೇಮಂತ್‍ಕುಮಾರ್ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಆವರಣದಲ್ಲಿ ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ವತಿ ಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಟ್ಟು ನೀರೆರೆದು ಅವರು ಮಾತನಾಡಿದರು. ಹಸಿರೀಕರಣ ಮಾಡುವ ಚಟುವಟಿಕೆ ಒಂದೇ ದಿನಕ್ಕೆ ಸೀಮಿತ ಆಗದೇ ನಿತ್ಯ ನಡೆಯಬೇಕು. ಮೈಸೂರು ವಿವಿ ಕ್ಯಾಂಪಸ್ ಹಾಗೂ ವಿವಿ ವ್ಯಾಪ್ತಿಯ ಎಲ್ಲಾ…
ಮೈಸೂರು ಉದ್ಯಮಿ ಆತ್ಮಹತ್ಯೆ
June 14, 2019ನಂಜನಗೂಡು: ಮೈಸೂರಿನ ಮದ್ಯ ಮಾರಾಟಗಾರರೊಬ್ಬರು ಸಾಲಗಾರರ ಕಾಟ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ದಾಸೇಗೌಡ ಎಂಬುವರ ಪುತ್ರ ರಮೇಶ್(45) ನೇಣಿಗೆ ಶರಣಾದವರಾಗಿದ್ದು, ಇವರು ನಂಜನಗೂಡಿನ ಅಂಗಡಿ ಬೀದಿಯಲ್ಲಿರುವ ಲಾಡ್ಜ್‍ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಗುರುವಾರ ಸಂಜೆಯಾ ದರೂ ಕೊಠಡಿಯಿಂದ ರಮೇಶ್ ಹೊರ ಬಾರದೇ ಇದ್ದಾಗ ಸಂಶಯ ಗೊಂಡ ಲಾಡ್ಜ್ ಸಿಬ್ಬಂದಿ ಕೊಠಡಿಗೆ ತೆರಳಿ ಗಮನಿಸಿದಾಗ ಅವರು ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಸರ್ಕಲ್…
ಬೆಂಗಳೂರಿನಲ್ಲಿ ಇನ್ನೊಬ್ಬ ವಂಚಕನ ಬಂಧನ
June 14, 2019ಬೆಂಗಳೂರು: ಎರಡು ತಿಂಗಳ ಹಿಂದೆ ತನ್ನ ಹೂಡಿಕೆದಾರರಿಗೆ 90 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ಇಂಜಾಝ್ ಬಿಲ್ಡರ್ಸ್ ಸಂಸ್ಥಾಪಕ ನಿರ್ದೇಶಕ ಮಿಸ್ಬಾ ಮುಕರ್ರಮ್ ಅನ್ನು ಬೆಂಗಳೂರು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಈತ ರಿಯಲ್ ಎಸ್ಟೇಟ್ ಮತ್ತು ವೈಮಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಇನ್ನೊಂದೆಡೆ ಹೊಸದಾಗಿ ರೂಪುಗೊಂಡ ಎಸ್‍ಐಟಿ ತಂಡ ಐಎಂಎ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಹುಡುಕುತ್ತಿದೆ. “ಇನ್ಸ್‍ಪೆಕ್ಟರ್ ಯತಿರಾಜ್ ನೇತೃತ್ವದ ಸಿಸಿಬಿ ತಂಡ ಕಳೆದ ರಾತ್ರಿ ಮುಕರ್ರಮ್‍ನನ್ನು ಬಂಧಿಸಿದೆ. ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆತ ಹಲವಾರು…
ಜು.13ರಂದು ಮೈಸೂರು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್
June 14, 2019ಮೈಸೂರು: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಂಭೀರ ಸ್ವರೂಪವಲ್ಲದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿ ಸುವ ನಿಟ್ಟಿನಲ್ಲಿ ಜು.13ರಂದು ಮೈಸೂರು ಜಿಲ್ಲೆಯ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ತಿಳಿಸಿದ್ದಾರೆ. ಮೈಸೂರಿನ ಮಳಲವಾಡಿಯಲ್ಲಿರುವ ನ್ಯಾಯಾಲಯ ಕಟ್ಟಡದ ಎಡಿಆರ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕರ್ನಾ ಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿ ಕಾರ ಮತ್ತು…
ಮೊಬೈಲ್ ಬಿಡಿ, ಆಟ ಆಡಿ…
June 14, 2019ಮೈಸೂರು: ಕ್ರೀಡಾ ಪ್ರೇಮಿ ಗಳಿಂದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಸರ್ಕಾರಿ ಶಾಲೆಯಲ್ಲಿ ಮೊಬೈಲ್ ಬಿಡಿ ಆಟ ಆಡಿ ಎಂಬ ವಿನೂತನ ಕಾರ್ಯ ಕ್ರಮವನ್ನು ಗುರುವಾರ ಆಯೋಜಿಸಲಾ ಗಿತ್ತು. ಎಲ್ಲಾ ರೀತಿಯ ಕ್ರಿಕೆಟ್‍ಗೆ ಯುವ ರಾಜ್ ಸಿಂಗ್ ವಿದಾಯ ಹೇಳಿರುವ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳನ್ನು ನೀಡಲಾಯಿತು. ನಂತರ ಮಾತನಾಡಿದ ಹರೀಶ್ ನಾಯ್ಡು ಅವರು ಕ್ರಿಕೆಟ್ ಒಂದು ನಾಗರಿಕ ಕ್ರೀಡೆ ಯಾಗಿತ್ತು. ಅದರ ಗೌರವವನ್ನು ಹೆಚ್ಚಿಸು ವಲ್ಲಿ ಯುವರಾಜ್ ಸಿಂಗ್ ಅವರು ಬಹಳ ಶ್ರಮ…
ಯುವಕನ ಬೆತ್ತಲೆ ಮೆರವಣಿಗೆಗೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮನ್ವಯ ವೇದಿಕೆ ಖಂಡನೆ
June 14, 2019ಗುಂಡ್ಲುಪೇಟೆಯಿಂದ ಶನೇಶ್ವರ ದೇವಸ್ಥಾನದವರೆಗೆ ಕಾಲ್ನಡಿಗೆ ಜಾಥಾ ಮೈಸೂರು: ಗುಂಡ್ಲುಪೇಟೆ ತಾಲೂಕಿನ ಶ್ಯಾನಾಡ್ರಹಳ್ಳಿ ಗ್ರಾಮದ ಎಸ್.ಪ್ರತಾಪ್ ಎಂಬ ಯುವಕನನ್ನು ಬೆತ್ತಲು ಮಾಡಿ ಅಮಾನವೀಯವಾಗಿ ಮೆರವಣಿಗೆ ನಡೆಸಿದ ಘಟನೆಯನ್ನು ಖಂಡಿಸಿ, `ಮನುಷ್ಯತ್ವಕ್ಕಾಗಿ ಹುಡುಕಾಟ’ ಘೋಷಣೆಯೊಂದಿಗೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮನ್ವಯ ವೇದಿಕೆ ಜೂ.17ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆಯಿಂದ ಶ್ಯಾನಾಡ್ರಹಳ್ಳಿಯ ಶನೇಶ್ವರ ದೇವಸ್ಥಾನದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ. ವೇದಿಕೆ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ದಲಿತ ಯುವಕನ ಮೇಲೆ…
ಮುಡಾ ಅಧಿಕಾರಿಗಳಿಂದ ಭೋವಿ ಜನಾಂಗದ ಮನೆ, ಶೆಡ್‍ಗಳ ತೆರವು ಕಾರ್ಯಕ್ಕೆ ಖಂಡನೆ
June 14, 2019ಮೈಸೂರು: ಮೈಸೂರಿನ ಹೊರ ವಲಯದ ಹಿನಕಲ್ ಗ್ರಾಮದ ಹುಂಡಿ ಬೀದಿಯಲ್ಲಿ ವಾಸವಾಗಿರುವ ಭೋವಿ ಜನಾಂಗದವರ ಜಾಗವನ್ನು ಮುಡಾ ಅಧಿಕಾರಿಗಳು ತೆರವುಗೊಳಿಸುವ ಮೂಲಕ ಹಿಂದುಳಿದ ಭೋವಿ ಜನಾಂಗದವರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಶಿವಯೋಗಿ ಸಿದ್ದ ರಾಮೇಶ್ವರ ಭೋವಿ ಸಂಘದ ಪದಾಧಿಕಾರಿ ಜಿ. ನಾಗರಾಜು ಆರೋಪಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ 5 ಕುಂಟೆ ಜಮೀನು ಉಳುವವನೇ ಭೂಮಿ ಒಡೆಯ ಕಾನೂನಿನಡಿ ಕೆಲ ಭೋವಿ ಕುಟುಂಬ ಗಳಿಗೆ ಸೇರಿದ್ದಾಗಿದೆ. ವಾಸ್ತವವಾಗಿ…
ನಾಳೆ `ಮೇಘ ಮಾಸದಲ್ಲಿ ವಸಂತ ಗೀತೆಗಳು’ ಸಂಗೀತ ಸಂಜೆ
June 14, 2019ಮೈಸೂರು: ಹಳೆ ಬೇರು ಹೊಸ ಚಿಗುರು ಗಾಯಕರ ಗೆಳೆ ಯರ ಬಳಗದ ವತಿಯಿಂದ ಜೂ.15ರ ಸಂಜೆ 5 ಗಂಟೆಗೆ ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ `ಮೇಘ ಮಾಸದಲ್ಲಿ ವಸಂತ ಗೀತೆಗಳು’ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಬಳಗದ ಕಾರ್ಯದರ್ಶಿ ರೇವಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಳಗದ ಕಾರ್ಯದರ್ಶಿ ರೇವಣ್ಣ ಮಾತನಾಡಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಹುಣಸೂರು ಶಾಸಕ ಅಡ ಗೂರು…










