Tag: Mysore

ಆಧಾರ್ ಕಾರ್ಡ್‍ಗೆ ನೂಕುನುಗ್ಗಲು: ಕರ್ನಾಟಕ ಒನ್ ಸೆಂಟರ್‍ನಲ್ಲಿ ಏಕಮಾತ್ರ ಸಿಬ್ಬಂದಿ, ಸಾರ್ವಜನಿಕರ ಆಕ್ರೋಶ
ಮೈಸೂರು

ಆಧಾರ್ ಕಾರ್ಡ್‍ಗೆ ನೂಕುನುಗ್ಗಲು: ಕರ್ನಾಟಕ ಒನ್ ಸೆಂಟರ್‍ನಲ್ಲಿ ಏಕಮಾತ್ರ ಸಿಬ್ಬಂದಿ, ಸಾರ್ವಜನಿಕರ ಆಕ್ರೋಶ

June 13, 2019

ಮೈಸೂರು: ಬೆಳಿಗ್ಗೆ ನಾಲ್ಕೈದು ಗಂಟೆಗೆ ಬಂದು ನಿಂತರೂ ಆಧಾರ್ ಕಾರ್ಡ್ ಮಾಡಿಸಲು ಟೋಕನ್ ಸಿಗುತ್ತಿಲ್ಲ. ದಿನನಿತ್ಯ ಇದೇ ಕೆಲಸವಾದರೆ, ನಮ್ಮ ಹೊಟ್ಟೆ ಪಾಡಿನ ಗತಿಯೇನು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಅತ್ತ ಆಧಾರ್ ಕೌಂಟರ್‍ನಲ್ಲಿರುವ ಒಬ್ಬರೇ ಸಿಬ್ಬಂದಿ ಸಾರ್ವಜನಿಕರು ಹಾಕುತ್ತಿರುವ ಹಿಡಿ ಶಾಪಕ್ಕೆ ದಿಕ್ಕು ತೋಚದಂತಾಗುತ್ತಿದ್ದಾರೆ. ಇದು ಮೈಸೂರಿನ ಶೇಷಾದ್ರಿ ಐಯ್ಯರ್ ರಸ್ತೆಯಲ್ಲಿರುವ ಕರ್ನಾಟಕ ಓನ್ ಕೇಂದ್ರದ ಚಿತ್ರಣವಾಗಿದ್ದು, ಟೋಕನ್‍ಗಾಗಿ ಅಲೆದಾಡಿ ತಾಳ್ಮೆ ಕಳೆದುಕೊಂಡಿದ್ದ ಸಾರ್ವಜನಿಕರು ಬುಧವಾರ ಈ ಕೇಂದ್ರದ ಎದುರು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ…

ವಸ್ತು ಪ್ರದರ್ಶನ ಮೈದಾನ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್
ಮೈಸೂರು

ವಸ್ತು ಪ್ರದರ್ಶನ ಮೈದಾನ ಪರಿಶೀಲಿಸಿದ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್

June 13, 2019

ಮೈಸೂರು: ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರಿನ ದಸರಾ ವಸ್ತು ಪ್ರದ ರ್ಶನ ಮೈದಾನದಲ್ಲಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಅಜೀಜ್ (ಅಬ್ದುಲ್ಲಾ) ಬುಧವಾರ ಪರಿಶೀಲನೆ ನಡೆಸಿದರು. ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ಹೊಂದಿಕೊಂಡಿರುವ ದೊಡ್ಡ ಮೋರಿಯ ಹೂಳು ತೆಗೆಸುವುದು, ಬೆಳೆದು ನಿಂತಿರುವ ಗಿಡ-ಗಂಟಿಗಳನ್ನು ತೆರವುಗೊಳಿಸಿ ಮಳಿಗೆ ಗಳ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸು ವುದು ಸೇರಿದಂತೆ ದಸರಾ ವಸ್ತು ಪ್ರದ ರ್ಶನ ಆಯೋಜನೆ ಹಿನ್ನೆಲೆಯಲ್ಲಿ ಆಗ ಬೇಕಿರುವ ಕೆಲಸ-ಕಾರ್ಯಗಳ ಸಂಬಂಧ ಪರಿಶೀಲನೆ…

ಸ್ಕೂಟರ್‍ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆಡಿ ಕಾರನ್ನು 34 ಗಂಟೆಯೊಳಗೆ ಬೆಂಗಳೂರಿನಲ್ಲಿ ಪತ್ತೆ ಮಾಡಿದ ಮೈಸೂರು ಸಂಚಾರಿ ಪೊಲೀಸರು
ಮೈಸೂರು

ಸ್ಕೂಟರ್‍ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆಡಿ ಕಾರನ್ನು 34 ಗಂಟೆಯೊಳಗೆ ಬೆಂಗಳೂರಿನಲ್ಲಿ ಪತ್ತೆ ಮಾಡಿದ ಮೈಸೂರು ಸಂಚಾರಿ ಪೊಲೀಸರು

June 13, 2019

ಮೈಸೂರು:  ಸ್ಕೂಟರ್‍ಗೆ ಡಿಕ್ಕಿ ಹೊಡೆದು, ವೃದ್ಧ ರೊಬ್ಬರ ಬಲಿ ಪಡೆದು ಪರಾರಿಯಾಗಿದ್ದ ಕಾರು ಮತ್ತು ಚಾಲಕನನ್ನು ದುರಂತ ನಡೆದ 34 ಗಂಟೆಯೊಳಗಾಗಿ ಮೈಸೂರಿನ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀ ಸರು ಬೆಂಗಳೂರಲ್ಲಿ ಪತ್ತೆ ಮಾಡಿದ್ದಾರೆ. ಚಾಲಕ ನಾಸಿರ್ ಮತ್ತು ಆಡಿ ಕಾರನ್ನು (ಕೆಎ03-ಎಂಎಕ್ಸ್9699) ಮಂಗಳವಾರ ರಾತ್ರಿ ಬೆಂಗಳೂರಿನ ಜಯನಗರದ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆ ಮಾಡಿರುವ ಸಿದ್ದಾರ್ಥನಗರ ಸಂಚಾರ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿ, ವಾಹನದೊಂದಿಗೆ ಇಂದು ಬೆಳಿಗ್ಗೆ ಮೈಸೂರಿಗೆ ಕರೆತಂದಿದ್ದಾರೆ. ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲ ಕೃಷ್ಣ ನಿರ್ದೇಶನದಂತೆ…

ಮೈಸೂರಿನ ನಾಲ್ಕು ಕಡೆ 2000 ಗುಂಪು ಮನೆ ನಿರ್ಮಿಸಲು ಮುಡಾ ತಯಾರಿ
ಮೈಸೂರು

ಮೈಸೂರಿನ ನಾಲ್ಕು ಕಡೆ 2000 ಗುಂಪು ಮನೆ ನಿರ್ಮಿಸಲು ಮುಡಾ ತಯಾರಿ

June 12, 2019

ಮೈಸೂರು: ನಿರಾಶ್ರಿತರಿಗೆ ಕೈಗೆಟಕುವ ದರದಲ್ಲಿ ಆಶ್ರಯ ಒದಗಿಸಲು ಮುಂದಾ ಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಇದಕ್ಕಾಗಿ ಗುಂಪು ಮನೆ ಯೋಜನೆ ಜಾರಿಗೊಳಿಸಲು ತಯಾರಿ ನಡೆಸಿದೆ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 20-25 ವರ್ಷ ಗಳಿಂದ ಸಾವಿರಾರು ಮಂದಿ ಕಾಯುತ್ತಿದ್ದರೂ, ವಸತಿ ಬಡಾವಣೆ ನಿರ್ಮಿಸಲು ಭೂಮಿ ಅಲಭ್ಯತೆ ಯಿಂದಾಗಿ ಸಾಧ್ಯವಾಗುತ್ತಿಲ್ಲವಾದ್ದರಿಂದ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿರುವ ಮುಡಾ ಜಾಗವನ್ನೇ ಬಳಸಿಕೊಂಡು ಬಹುಮಹಡಿ ಕಟ್ಟಡ ನಿರ್ಮಿಸಿ ಅಲ್ಲಿ ಸುಮಾರು 2000 ಮನೆಗಳನ್ನು ಕೈಗೆಟಕುವ ದರ (ಓo Pಡಿoಜಿiಣ-ಓo ಐoss)ದಲ್ಲಿ ಪ್ರಾಧಿಕಾರಕ್ಕೂ…

ಅನಧಿಕೃತ ಟೆಲಿಕಾಂ ನೆಟ್‍ವರ್ಕ್ ಕೇಬಲ್ ಅಳವಡಿಕೆ ಹತ್ತಿಕ್ಕಲುನಗರ ಪಾಲಿಕೆ, ಚೆಸ್ಕಾಂ ಜಂಟಿ ಕಾರ್ಯಾಚರಣೆ
ಮೈಸೂರು

ಅನಧಿಕೃತ ಟೆಲಿಕಾಂ ನೆಟ್‍ವರ್ಕ್ ಕೇಬಲ್ ಅಳವಡಿಕೆ ಹತ್ತಿಕ್ಕಲುನಗರ ಪಾಲಿಕೆ, ಚೆಸ್ಕಾಂ ಜಂಟಿ ಕಾರ್ಯಾಚರಣೆ

June 12, 2019

ಮೈಸೂರು: ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಟೆಲಿಕಾಂ ನೆಟ್‍ವರ್ಕ್ ಕೇಬಲ್ ಅಳವಡಿಕೆ ಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಾಳೆ (ಜೂ.12)ಯಿಂದಲೇ ಮೈಸೂರು ನಗರ ಪಾಲಿಕೆ ಹಾಗೂ ಚೆಸ್ಕಾಂ ಜಂಟಿ ಕಾರ್ಯಾ ಚರಣೆ ನಡೆಸಲು ನಿರ್ಧರಿಸಲಾಗಿದೆ. ಮೈಸೂರು ನಗರ ಪಾಲಿಕೆ ನವೀಕೃತ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಹಾಗೂ ಚೆಸ್ಕಾಂ ಅಧಿಕಾರಿಗಳ ಜಂಟಿ ಸಭೆಯಲ್ಲಿ ವಿಸ್ತøತ ಚರ್ಚೆಯ ಬಳಿಕ ಕೇಬಲ್ ಮಾಫಿಯಾ ಹತ್ತಿಕ್ಕಲು ಪಾಲಿಕೆ ಹಾಗೂ ಚೆಸ್ಕಾಂ ಸೂಪ ರಿಂಟೆಂಡೆಂಟ್ ಇಂಜಿನಿಯರ್‍ಗಳ ನೇತೃತ್ವ ದಲ್ಲಿ…

ಜೂ.15 ರಿಂದ 23 ರವರೆಗೆ 30 ರೈಲುಗಳ ಸಂಚಾರ ರದ್ದು
ಮೈಸೂರು

ಜೂ.15 ರಿಂದ 23 ರವರೆಗೆ 30 ರೈಲುಗಳ ಸಂಚಾರ ರದ್ದು

June 12, 2019

ಮೈಸೂರು: ಮೈಸೂರು ರೈಲ್ವೆ ಸಂಚಾರದಲ್ಲಿ ಆಧುನೀಕರಣ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ.15 ರಿಂದ 23 ರವರೆಗೆ 30 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ರೈಲ್ವೆ ಸೀನಿಯರ್ ಡಿವಿಜನಲ್ ಕಮರ್ಷಿಯಲ್ ಮ್ಯಾನೇಜರ್ ಡಾ.ಎಸ್.ಜಿ.ಯತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೀ ನಾನ್ ಇಂಟರ್‍ಲಾಕಿಂಗ್ ಕೆಲಸವು ಈಗಾಗಲೇ ಜೂನ್ 7 ರಿಂದ ಆರಂಭವಾಗಿದ್ದು, 15 ರವರೆಗೆ ಮುಂದುವರಿಯಲಿದೆ. ಆದ್ದರಿಂದ 30 ರೈಲುಗಳ ಸಂಚಾರ ರದ್ದುಪಡಿಸಿದ್ದು, ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ಅವರು ತಿಳಿಸಿದರು. ರದ್ದಾದ ರೈಲುಗಳು: 1. ಮೈಸೂರಿನಿಂದ ಹೊರಡುವ ಮೈಸೂರು-ರೇಣಿಗುಂಟ…

ಕೆರೆ-ಕಟ್ಟೆ ಉಳಿವಿಗಾಗಿ ಪಣ ತೊಡಿ
ಮೈಸೂರು

ಕೆರೆ-ಕಟ್ಟೆ ಉಳಿವಿಗಾಗಿ ಪಣ ತೊಡಿ

June 12, 2019

ಮೈಸೂರು: ನಾನೊಬ್ಬ ಕೆರೆ ಕಟ್ಟಿದರೆ ಸಾಲದು. ನಿಮಗೆ ಸ್ಥಳ ಕೊಟ್ಟು ಮುಂದಕ್ಕೆ ಹೋಗುವಷ್ಟು ವಯಸ್ಸು ನನಗಾಗಿದ್ದು, ನೀವೆಲ್ಲಾ ಕೆರೆ-ಕಟ್ಟೆ ಉಳಿವಿ ಗಾಗಿ ಪಣ ತೊಡಬೇಕು ಎಂದು ಅಲ್ಲಿ ನೆರೆದಿದ್ದ ವಿದ್ಯಾರ್ಥಿ ಸಮೂಹಕ್ಕೆ ತಮ್ಮ ಮುಗ್ಧ ದನಿಯಲ್ಲಿ ತಿಳಿಸಿದರು ಆ ಹಿರಿಯ ಪರಿಸರ ಪ್ರೇಮಿ. ಹೌದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಿಜಿ ಪುರ ಹೋಬಳಿಯ ದಾಸನದೊಡ್ಡಿ ಗ್ರಾಮದ ಪರಿಸರ ಪ್ರೇಮಿ ಕೆರೆ ಕಾಮೇಗೌಡ ಅವರ ಕಳಕಳಿಯ ನುಡಿಗಳಿವು. ಇವರು 14 ಕೆರೆಗಳನ್ನು ನಿರ್ಮಿಸಿ ಹಲವು ಪ್ರಶಸ್ತಿಗಳಿಗೆ ಭಾಜನ…

ಮೈಸೂರಲ್ಲಿ ವಕೀಲರಿಂದ ಕೋರ್ಟ್ ಕಲಾಪ ಬಹಿಷ್ಕಾರ
ಮೈಸೂರು

ಮೈಸೂರಲ್ಲಿ ವಕೀಲರಿಂದ ಕೋರ್ಟ್ ಕಲಾಪ ಬಹಿಷ್ಕಾರ

June 12, 2019

ಮೈಸೂರು: ಕುವೆಂಪುನಗರ ಠಾಣೆ ಇನ್‍ಸ್ಪೆಕ್ಟರ್ ರಾಜು ಅವರು ತಮ್ಮ ಮೇಲೆ ಮಾನಸಿಕ ದೌರ್ಜನ್ಯ ನಡೆಸಿ, ದರ್ಪ ಮೆರೆದಿದ್ದಾರೆ ಎಂದು ಮೈಸೂರಿನ ವಕೀಲೆ ಹೆಚ್.ಕೆ.ಭಾಗ್ಯ ಅವರು ಆರೋಪಿಸಿದ್ದಾರೆ. ಈ ಕುರಿತು ಮೈಸೂರು ವಕೀಲರ ಸಂಘದ ಅಧ್ಯಕ್ಷರಿಗೆ ಲಿಖಿತ ದೂರು ಸಲ್ಲಿಸಿರುವ ಭಾಗ್ಯ ಅವರು, ಸೋಮ ವಾರ ಮಧ್ಯಾಹ್ನ 12.10 ಗಂಟೆ ವೇಳೆಗೆ ಲತಾ ಕುಮಾರಿ ಎಂಬುವರ ದೂರು ಕುರಿತು ಚರ್ಚಿಸಲು ಕುವೆಂಪುನಗರ ಠಾಣೆಗೆ ಹೋಗಿದ್ದಾಗ ಇನ್‍ಸ್ಪೆಕ್ಟರ್ ರಾಜು ಅವಾಚ್ಯ ಶಬ್ದಗಳಿಂದ ಬೈದು ‘ನಿನ್ನಂತಹ ವಕೀಲರನ್ನು ನಾನು ಎಷ್ಟು ನೋಡಿಲ್ಲ,…

ಜೂ.16ರಂದು ಮೈಸೂರಲ್ಲಿ ಆಚಾರ್ಯತ್ರಯರ ಜಯಂತಿ
ಮೈಸೂರು

ಜೂ.16ರಂದು ಮೈಸೂರಲ್ಲಿ ಆಚಾರ್ಯತ್ರಯರ ಜಯಂತಿ

June 12, 2019

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಎಕೆಬಿಎಂಎಸ್ ಮೈಸೂರು ವಲಯದ ವತಿಯಿಂದ ಜೂ.16ರಂದು ಬೆಳಿಗ್ಗೆ 10 ಗಂಟೆಗೆ ಆಚಾರ್ಯತ್ರಯರ ಜಯಂತಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಲಕ್ಷ್ಮೀಪುರಂ ಬಿಎಸ್‍ಎನ್‍ಎಲ್ ಕಚೇರಿ ಪಕ್ಕದ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾಯರ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿ ದ್ದಾರೆ. ಮೂವರು ಆಚಾರ್ಯತ್ರಯರು ಹಾಗೂ ಅವರ ಕೊಡುಗೆ ಗಳ ಬಗ್ಗೆ ಹೆಚ್.ವಿ.ನಾಗರಾಜರಾವ್, ಶೆಲ್ವಪಿಳ್ಳೈ ಅಯ್ಯಂಗಾರ್, ಮುಕುಂದಾ ಚಾರ್ಯ ಉಪನ್ಯಾಸ ನೀಡಲಿದ್ದಾರೆ. ಇದಕ್ಕೂ…

ಬೆಳೆ ಭೂಮಿ ಮೇಲೆ ವಿದ್ಯುತ್ ಲೈನ್ ಖಂಡಿಸಿ ರೈತರ ಪ್ರತಿಭಟನೆ
ಮೈಸೂರು

ಬೆಳೆ ಭೂಮಿ ಮೇಲೆ ವಿದ್ಯುತ್ ಲೈನ್ ಖಂಡಿಸಿ ರೈತರ ಪ್ರತಿಭಟನೆ

June 12, 2019

ಮೈಸೂರು: ಹಿರಿ ಯೂರಿನಿಂದ-ಮೈಸೂರಿನವರೆಗೆ 400 ಕೆವಿ ವಿದ್ಯುತ್ ಪವರ್‍ಗ್ರೀಡ್ ಲೈನ್ ಅನ್ನು ಇಲವಾಲ ಹೋಬಳಿ ವ್ಯಾಪ್ತಿಯಲ್ಲಿ ತೋಟಗಳ ಮೇಲೆ ತೆಗೆದುಕೊಂಡು ಹೋಗಲು ಉದ್ದೇಶಿಸಿದ್ದು, ಇದನ್ನು ಕೈಬಿಟ್ಟು ಪರ್ಯಾಯ ಮಾರ್ಗದಲ್ಲಿ ತೆಗೆದುಕೊಂಡು ಹೋಗುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ತಾಲೂಕಿನ ಇಲವಾಲ ಬಳಿಯ ಮೈದುನಹಳ್ಳಿಯಲ್ಲಿರುವ ಪವರ್ ಗ್ರೀಡ್ ಕಾರ್ಪೋರೇಷನ್ ಆಫ್ ಇಂಡಿಯಾ ಕಚೇರಿ ಎದುರು ಜಮಾಯಿಸಿದ ಪ್ರತಿಭಟ ನಾಕಾರರು, ಫಲವತ್ತಾದ ಭೂಮಿಯ ಮೇಲೆ ಪವರ್ ಗ್ರೀಡ್…

1 276 277 278 279 280 330
Translate »