ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಸಾವಿರಾರು ಕೋಟಿ ವಂಚನೆ ಪ್ರಕರಣ ಬಯಲಾಗಿದ್ದು, ಗ್ರಾಹಕ ರಿಂದ ಕೋಟ್ಯಾಂತರ ರೂ. ಠೇವಣಿ ಸಂಗ್ರಹಿಸಿದ್ದ ಶಿವಾಜಿನಗರದ ಐಎಂಎ ಜ್ಯುವೆಲ್ಲರ್ಸ್ ಮಾಲೀಕ ಮನ್ಸೂರ್ ಅಲಿಖಾನ್, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪೊಲೀಸ್ ಆಯುಕ್ತರಿಗೆ ಆಡಿಯೋ ರವಾನಿಸಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ಮನ್ಸೂರ್ ಅಲಿಖಾನ್‍ನ ಆಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ಬಳಿ ಹೂಡಿಕೆ ಮಾಡಿದ್ದ ಸಾವಿರಾರು ಗ್ರಾಹಕರು ಐಎಂಎ ಜ್ಯುವೆಲ್ಲರ್ಸ್ ಮುಂದೆ ಜಮಾಯಿಸಿ ಪ್ರತಿಭಟನೆಗಿಳಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ವಂಚನೆ ಗೊಳಗಾಗಿರುವ…
`ಕಿಶೋರ 7 ಪಾಸ್ 8’ ಚಿತ್ರತಂಡದಿಂದ ಗಿರೀಶ್ ಕಾರ್ನಾಡ್‍ಗೆ ನಮನ
June 11, 2019ಮೈಸೂರು: ರಂಗಕರ್ಮಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನದ ಹಿನ್ನೆಲೆಯಲ್ಲಿ `ಕಿಶೋರ 7 ಪಾಸ್ 8’ ಚಿತ್ರತಂಡ ಚಿತ್ರೀಕರಣ ವನ್ನು ಸ್ಥಗಿತಗೊಳಿಸಿ, ಸಂತಾಪ ವ್ಯಕ್ತಪಡಿಸಿತು. ಮೈಸೂರಿನ ಕುವೆಂಪುನಗರದ ಪ್ರಮತಿ ಶಿಕ್ಷಣ ಸಂಸ್ಥೆಯ ಹಿಂಭಾಗ ಸೋಮವಾರ ಚಿತ್ರೀಕರಣ ನಡೆಯುತ್ತಿತ್ತು. ಗಿರೀಶ್ ಕಾರ್ನಾಡ್ ಅವರ ನಿಧನದ ಸುದ್ದಿ ತಿಳಿ ಯುತ್ತಿದ್ದಂತೆ ಚಿತ್ರೀಕರಣ ಸ್ಥಗಿತಗೊಳಿಸ ಲಾಯಿತು. ಅಲ್ಲದೆ ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರತಂಡದ ಸದಸ್ಯರು ಕಾರ್ನಾಡರ ಭಾವಚಿತ್ರವಿಡಿದು ಕೆಲ ಕಾಲ ಮೌನ ಆಚರಿಸಿ, ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ…
ಇಂದಿನಿಂದ ದ್ವಿತೀಯ ಪಿಯು ಪೂರಕ ಪರೀಕ್ಷೆ
June 11, 2019ಮೈಸೂರು: ಕಳೆದ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿ ಗಳಿಗೆ ನಾಳೆ (ಜೂ.11)ಯಿಂದ ಜೂ. 20ರವರೆಗೆ ಪೂರಕ (ಸಪ್ಲಿಮೆಂಟರಿ) ಪರೀಕ್ಷೆ ನಡೆಯಲಿದೆ. 2018-19ನೇ ಸಾಲಿನ ದ್ವಿತೀಯ ಪರೀಕ್ಷೆ ಯಲ್ಲಿ ನಪಾಸಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವಾಗಿರುವ ಪೂರಕ ಪರೀಕ್ಷೆಯ ಮೊದಲ ದಿನ(ಜೂ.11) ಬೆಳಿಗ್ಗೆ 1015ಕ್ಕೆ ಸಮಾಜಶಾಸ್ತ್ರ, ಅಕೌಂಟೆನ್ಸಿ, ಗಣಿತ, ಮಧ್ಯಾಹ್ನ 2.20ಕ್ಕೆ ಗೃಹ ವಿಜ್ಞಾನ (ಹೋಮ್ ಸೈನ್ಸ್) ಪರೀಕ್ಷೆಗಳು ನಡೆಯ ಲಿವೆ. ಜೂ.12ರಂದು ಬೆಳಿಗ್ಗೆ ಇಂಗ್ಲಿಷ್, ಮಧ್ಯಾಹ್ನ ಇನ್ಫಾರ್ಮೇಷನ್ ಟೆಕ್ನಾಲಜಿ, ರಿಟೈಲ್, ಆಟೋಮೊಬೈಲ್, ಹೆಲ್ತ್‍ಕೇರ್, ಬ್ಯೂಟಿ ಅಂಡ್…
ಶತಮಾನ ಪೂರೈಸಿದ ಶಾಲೆಯ ಶಿಥಿಲಾವಸ್ಥೆ!
June 11, 2019ಮೈಸೂರು: ನೋಡಿದರೆ ಸಾಕು ಯಾವಾಗ ಬೀಳು ತ್ತದೋ ಎಂಬ ಆತಂಕ ಮೂಡದೇ ಇರದು. ಅಷ್ಟರ ಮಟ್ಟಿಗೆ ಶಿಥಿಲಾವಸ್ಥೆಗೆ ತಲುಪಿದೆ ಶತಮಾನ ಪೂರೈಸಿದ ಸರ್ಕಾರಿ ಶಾಲೆಯ ಕಟ್ಟಡ. ಮೈಸೂರಿನ ತಿಲಕನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು. ಪಾಳು ಬಿದ್ದಂತೆ ಕಂಡು ಬರುವ ವಾತಾವರಣ ಅಲ್ಲಿ ನಿರ್ಮಾಣವಾಗಿದ್ದು, ಕಟ್ಟಡದ ಗೋಡೆಗಳಲ್ಲಿ ಬಿರುಕು, ಸಿಮೆಂಟ್ ಕಿತ್ತು ಬಂದಿರುವುದು ಸೇರಿದಂತೆ ದುರಾವಸ್ಥೆಯೇ ಇಲ್ಲಿ ನೆಲೆ ನಿಂತಂತಿದೆ. ತಲೆ ಎತ್ತಿ ನೋಡಿದರೆ ಮೇಲ್ಛಾವಣಿ ಬೀಳುವಂತೆ ಭಾಸವಾಗದೇ ಇರದು. ಕತ್ತಲಲ್ಲಿ ಇತ್ತ ಕಣ್ಣಾಯಿಸಿದರೆ…
2018ರ ‘ಬಹುರೂಪಿ’ ನಾಟಕೋತ್ಸವಕ್ಕೆ ಚಾಲನೆ ನೀಡಿದ್ದ ಗಿರೀಶ್ ಕಾರ್ನಾಡ್
June 11, 2019ಮೈಸೂರು: ಹಿರಿಯ ಸಾಹಿತಿ, ನಾಟಕಕಾರ, ನಟ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್ ಅವರು 2018ರ ರಾಷ್ಟ್ರೀಯ ಬಹುರೂಪಿ ನಾಟಕೋತ್ಸವವನ್ನು ಉದ್ಘಾಟಿಸಿದ್ದರು. ರಂಗಾಯಣದ ವನರಂಗದಲ್ಲಿ `ವಲಸೆ’ ಶೀರ್ಷಿಕೆ ಯಡಿ ನಡೆದ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2018’ಕ್ಕೆ ವಲಸೆಗಾರರ ವೇಷದಲ್ಲಿ ಬಂದ ಕುಟುಂಬಕ್ಕೆ ಛತ್ರಿ, ನೀರು, ಬೆಲ್ಲ, ಪುಸ್ತಕ ನೀಡುವ ಮೂಲಕ ವಿನೂತನ ವಾಗಿ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು 2ನೇ ಬಾರಿಗೆ ಉದ್ಘಾಟಿಸಿದ್ದರು. ಇದು ಸಾಹಿತಿ ಗಿರೀಶ್ ಕಾರ್ನಾಡ್ ಅವರು ಸಾಂಸ್ಕøತಿಕ ನಗರಿ ಮೈಸೂರಿಗೆ ನೀಡಿದ ಕಡೆಯ ಭೇಟಿಯಾಗಿತ್ತು….
ಮೈಸೂರಿನಲ್ಲಿ ಸಂದೇಶ್-ನೇತ್ರಾವತಿ ದಂಪತಿ ವಿವಾಹ ಸುವರ್ಣ ಸಂಭ್ರಮ
June 11, 2019ಮೈಸೂರು: ವಿಧಾನ ಪರಿಷತ್ ಸದಸ್ಯ, ಉದ್ಯಮಿ ಸಂದೇಶ್ ನಾಗರಾಜು ಹಾಗೂ ನೇತ್ರಾ ವತಿ ದಂಪತಿ 50ನೇ ವಿವಾಹ ವಾರ್ಷಿ ಕೋತ್ಸವ ಸೋಮವಾರ ಇಂದಿರಾನಗ ರದ ಸ್ವಗೃಹದಲ್ಲಿ ಅಪಾರ ಹಿತೈಷಿಗಳ ಸಮ್ಮುಖ ದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮೈಸೂರಿನ ಇಂದಿರಾನಗರ (ಇಟ್ಟಿಗೆ ಗೂಡು)ದಲ್ಲಿರುವ ನಿವಾಸದಲ್ಲಿ ನಡೆದ 50ನೇ ವಿವಾಹ ವಾರ್ಷಿಕೋತ್ಸವದಲ್ಲಿ ರಾಜ ಕೀಯ, ಚಲನಚಿತ್ರ ರಂಗದ ಪ್ರಮುಖರು, ಅಧಿಕಾರಿ ವರ್ಗ, ಸಾಮಾಜಿಕ ಕ್ಷೇತ್ರದ ಗಣ್ಯರು ಪಾಲ್ಗೊಂಡು ಶುಭ ಕೋರಿದರು. ಪುರೋಹಿತ ವೆಂಕಟೇಶ್ ನೇತೃತ್ವದಲ್ಲಿ ವಿವಾಹ ಕಾರ್ಯದಲ್ಲಿ ನಡೆಯುವ ಎಲ್ಲಾ ಶಾಸ್ತ್ರಗಳನ್ನು…
ಮಾಜಿ ಶಾಸಕ ಸತ್ಯನಾರಾಯಣ, ಗಿರೀಶ್ ಕಾರ್ನಾಡರಿಗೆ ಕಾಂಗ್ರೆಸ್‍ನಿಂದ ಶ್ರದ್ಧಾಂಜಲಿ
June 11, 2019ಮೈಸೂರು: ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸೋಮ ವಾರ ನಡೆದ ಸಭೆಯಲ್ಲಿ ಇತ್ತೀಚೆಗೆ ನಿಧನ ರಾದ ಮಾಜಿ ಶಾಸಕ ಎಂ.ಸತ್ಯನಾರಾಯಣ ಹಾಗೂ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದಿ. ಎಂ.ಸತ್ಯನಾರಾಯಣ ಹಾಗೂ ದಿ. ಗಿರೀಶ್ ಕಾರ್ನಾಡ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಿಸಿ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ. ಹೆಚ್.ವಿಜಯಶಂಕರ್ ಮಾತನಾಡಿ, ರಾಜಕೀಯ ಹಾಗೂ ಸಾಹಿತ್ಯ…
ಗಿರೀಶ್ ಕಾರ್ನಾಡ್ ಎಲ್ಲಾ ಕ್ಷೇತ್ರದಲ್ಲೂ ಅಸ್ತಿತ್ವವುಳ್ಳವರು
June 11, 2019ಮೈಸೂರು: ಸಾಮಾ ಜಿಕ ಚಿಂತನೆಯುಳ್ಳ ಗಿರೀಶ್ ಕಾರ್ನಾಡ್ ಸಮಕಾಲೀನ ವಾಗ್ವಾದಗಳ ನಾಯಕತ್ವ ವಹಿಸುತ್ತಿದ್ದವರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಸ್ಮರಿಸಿದರು. ಮೈಸೂರಿನ ಕಲಾಮಂದಿರದ ಮನೆ ಯಂಗಳದಲ್ಲಿ ಗುರುತು ಬಳಗ, ಶ್ರೀನಿಧಿ ಪುಸ್ತಕಗಳು ಜಂಟಿ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ ಬಳಗದ ಮೊದಲ ವಾರ್ಷಿಕೋ ತ್ಸವದಲ್ಲಿ ಗಿರೀಶ್ ಕಾರ್ನಾಡ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ `ಗುರುತು -ವರ್ತಮಾನಕ್ಕೊಂದು ಕನ್ನಡಿ’ ಕೃತಿ ಬಿಡು ಗಡೆಗೊಳಿಸಿ…
ಗಿರೀಶ್ ಕಾರ್ನಾಡರಿಗೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂತಾಪ
June 11, 2019ಮೈಸೂರು: ಸಾಹಿತಿ, ನಾಟಕಕಾರ, ನಟ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಸಂತಾಪ ಸೂಚಿಸಲಾಯಿತು. ಈ ವೇಳೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನೀಲಗಿರಿ.ಎಂ.ತಳ ವಾರ್ ಮಾತನಾಡಿ, ಗಿರೀಶ್ ಕಾರ್ನಾಡ್ ಅವರಂತಹ ಲೇಖಕರು ಒಂದು ನಾಡಿನಲ್ಲಿ ಹುಟ್ಟಿರುವುದು ವಿರಳ. ಅಪರೂಪಕ್ಕೆಂಬಂತೆ ಅಂತಹ ಮಹನೀಯರ ಜನ್ಮವಾಗುತ್ತದೆ. ಅವರ ಕಾರ್ಯಕ್ಷೇತ್ರ ಕರ್ನಾಟಕವಾದರೂ ಇಡೀ ದೇಶದಾದ್ಯಂತ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ತಮ್ಮ ಕೃತಿಗಳ ಮೂಲಕ ಸಂಚಾರ ಮಾಡಿದ್ದಾರೆ….
ಗಿರೀಶ್ ಕಾರ್ನಾಡ್‍ಗೆ ಭಾವಪೂರ್ಣ ಶ್ರದ್ಧಾಂಜಲಿ
June 11, 2019ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್ ಅವರು ವಿಧಿವಶರಾದ ಹಿನ್ನೆಲೆ ಕರ್ನಾಟಕ ಪ್ರಜಾ ಪಾರ್ಟಿ ವತಿಯಿಂದ ಮೈಸೂರಿನ ಜಿಲ್ಲಾ ಸತ್ರ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಕ್ಯಾಂಡಲ್ ಬೆಳಗಿಸಿ, ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ಸಂಸ್ಥಾಪಕ ಬಿ.ಶಿವಣ್ಣ ಮಾತ ನಾಡಿ, ಕನ್ನಡ ನಾಡಿನ ಹೆಸರಾಂತ ಸಾಹಿತಿ ಗಿರೀಶ್ ಕಾರ್ನಾಡ್ ಇಂದು ದೈವಾಧೀನರಾಗಿರುವುದು ನಾಡಿನ ಜನತೆಗೆ ದುಃಖ ತರಿಸುವ ಸಂಗತಿಯಾಗಿದೆ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ ಹಿರಿಯ…










