ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್ ಅವರು ವಿಧಿವಶರಾದ ಹಿನ್ನೆಲೆ ಕರ್ನಾಟಕ ಪ್ರಜಾ ಪಾರ್ಟಿ ವತಿಯಿಂದ ಮೈಸೂರಿನ ಜಿಲ್ಲಾ ಸತ್ರ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಕ್ಯಾಂಡಲ್ ಬೆಳಗಿಸಿ, ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ಸಂಸ್ಥಾಪಕ ಬಿ.ಶಿವಣ್ಣ ಮಾತ ನಾಡಿ, ಕನ್ನಡ ನಾಡಿನ ಹೆಸರಾಂತ ಸಾಹಿತಿ ಗಿರೀಶ್ ಕಾರ್ನಾಡ್ ಇಂದು ದೈವಾಧೀನರಾಗಿರುವುದು ನಾಡಿನ ಜನತೆಗೆ ದುಃಖ ತರಿಸುವ ಸಂಗತಿಯಾಗಿದೆ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಆತ್ಮಕ್ಕೆ ಶಾಂತಿಯನ್ನು ದೇವರು ಪಾಲಿಸಲಿ ಎಂದು ಕರ್ನಾ ಟಕ ಪ್ರಜಾ ಪಾರ್ಟಿ ಕೋರುತ್ತದೆ ಎಂದರು. ಕರ್ನಾಟಕ ಪ್ರಜಾ ಪಾರ್ಟಿ ರಾಜ್ಯ ಪ್ರದಾನ ಕಾರ್ಯದರ್ಶಿ ಎಂ.ಸಿ.ಕಾರ್ತಿಕ್, ಸೋಮೇಶ್, ಹಾಲಪ್ಪ, ವೆಂಕಟೇಶ್, ವಿನ್ಸೆಂಟ್, ಬಾರ್ಬರ, ಹಿರಿಯ ವಕೀಲ ಅಮೃತೇಶ್ ಭಾಗವಹಿಸಿದ್ದರು.