ಜೂ.16ರಂದು ಮೈಸೂರಲ್ಲಿ ಆಚಾರ್ಯತ್ರಯರ ಜಯಂತಿ
ಮೈಸೂರು

ಜೂ.16ರಂದು ಮೈಸೂರಲ್ಲಿ ಆಚಾರ್ಯತ್ರಯರ ಜಯಂತಿ

June 12, 2019

ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಎಕೆಬಿಎಂಎಸ್ ಮೈಸೂರು ವಲಯದ ವತಿಯಿಂದ ಜೂ.16ರಂದು ಬೆಳಿಗ್ಗೆ 10 ಗಂಟೆಗೆ ಆಚಾರ್ಯತ್ರಯರ ಜಯಂತಿ ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ಲಕ್ಷ್ಮೀಪುರಂ ಬಿಎಸ್‍ಎನ್‍ಎಲ್ ಕಚೇರಿ ಪಕ್ಕದ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾಯರ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಉದ್ಘಾಟನೆ ನೆರವೇರಿಸಲಿ ದ್ದಾರೆ. ಮೂವರು ಆಚಾರ್ಯತ್ರಯರು ಹಾಗೂ ಅವರ ಕೊಡುಗೆ ಗಳ ಬಗ್ಗೆ ಹೆಚ್.ವಿ.ನಾಗರಾಜರಾವ್, ಶೆಲ್ವಪಿಳ್ಳೈ ಅಯ್ಯಂಗಾರ್, ಮುಕುಂದಾ ಚಾರ್ಯ ಉಪನ್ಯಾಸ ನೀಡಲಿದ್ದಾರೆ. ಇದಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಗೆ ಚಾಮುಂಡಿಪುರಂ ವೃತ್ತದಿಂದ ಶೋಭಾಯಾತ್ರೆ ಆರಂಭವಾಗ ಲಿದ್ದು, ನಂಜುಮಳಿಗೆ ಮಾರ್ಗವಾಗಿ ಕಾರ್ಯಕ್ರಮ ಸ್ಥಳಕ್ಕೆ ತಲುಪಲಿದೆ.

ಈ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಮಂಗಳವಾರ ಕಾಡಾ ಕಚೇರಿಯಲ್ಲಿರುವ ತಮ್ಮ ಕಚೇರಿಯಲ್ಲಿ ಶಾಸಕ ಎಸ್.ಎ. ರಾಮದಾಸ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಶಂಕರಾಚಾರ್ಯರ ಜಯಂತಿ ಪ್ರಾರಂಭಿಸಿದೆ. ಆದರೆ ನಮ್ಮಲ್ಲಿ ಮೂವರು ಆಚಾರ್ಯರ ಪರಂಪರೆ ಇದ್ದು, ಆ ಮೂವರೂ ಆಚಾರ್ಯರ ಜಯಂತಿಯನ್ನು ಸರ್ಕಾರ ಆಚರಿಸಲು ಮುಂದಾಗಬೇಕಿದೆ ಎಂದರು.

ಆಚಾರ್ಯತ್ರಯರ ಜಯಂತಿ ಮೂಲಕ ತ್ರಿಮತಸ್ಥರೆಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಇದಾಗಿದ್ದು,  ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಗರದ ವಿಪ್ರ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದು ಹೇಳಿದರು.

ನಂತರ ಮಾತನಾಡಿದ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ. ಪ್ರಕಾಶ್, ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಸಾಹಿತಿ ಗಳು, ಚಲನಚಿತ್ರ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಎಸ್‍ಎಸ್ ಫೌಂಡೇಷನ್ ಸಂಸ್ಥಾಪಕ ಶ್ರೀಹರಿ, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷ ಗೋಪಾಲ ರಾವ್, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ಎಂ.ಆರ್.ಬಾಲಕೃಷ್ಣ, ಬ್ರಾಹ್ಮಣ ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್,  ಕೆ.ಎಂ.ನಿಶಾಂತ್, ಕೃಷ್ಣ, ಕಡಕೊಳ ಜಗದೀಶ್, ರಂಗನಾಥ್, ಜಯಂಸಿಂಹ ಶ್ರೀಧರ್, ಅಪೂರ್ವ ಸುರೇಶ್, ಹರೀಶ್, ಸುಚೀಂದ್ರ, ಚಕ್ರಪಾಣಿ, ಜ್ಯೋತಿ ಇನ್ನಿತರರು ಉಪಸ್ಥಿತರಿದ್ದರು.

 

 

Translate »