ಜೂ.15 ರಿಂದ 23 ರವರೆಗೆ 30 ರೈಲುಗಳ ಸಂಚಾರ ರದ್ದು
ಮೈಸೂರು

ಜೂ.15 ರಿಂದ 23 ರವರೆಗೆ 30 ರೈಲುಗಳ ಸಂಚಾರ ರದ್ದು

June 12, 2019

ಮೈಸೂರು: ಮೈಸೂರು ರೈಲ್ವೆ ಸಂಚಾರದಲ್ಲಿ ಆಧುನೀಕರಣ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ.15 ರಿಂದ 23 ರವರೆಗೆ 30 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ರೈಲ್ವೆ ಸೀನಿಯರ್ ಡಿವಿಜನಲ್ ಕಮರ್ಷಿಯಲ್ ಮ್ಯಾನೇಜರ್ ಡಾ.ಎಸ್.ಜಿ.ಯತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೀ ನಾನ್ ಇಂಟರ್‍ಲಾಕಿಂಗ್ ಕೆಲಸವು ಈಗಾಗಲೇ ಜೂನ್ 7 ರಿಂದ ಆರಂಭವಾಗಿದ್ದು, 15 ರವರೆಗೆ ಮುಂದುವರಿಯಲಿದೆ. ಆದ್ದರಿಂದ 30 ರೈಲುಗಳ ಸಂಚಾರ ರದ್ದುಪಡಿಸಿದ್ದು, ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ ಎಂದು ಅವರು ತಿಳಿಸಿದರು.

ರದ್ದಾದ ರೈಲುಗಳು:
1. ಮೈಸೂರಿನಿಂದ ಹೊರಡುವ ಮೈಸೂರು-ರೇಣಿಗುಂಟ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 11065) ಜೂನ್ 21 ರಂದು ರದ್ದಾಗಿದೆ. 2. ರೇಣಿಗುಂಟದಿಂದ ಹೊರಡುವ ರೇಣಿಗುಂಟ-ಮೈಸೂರು ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 11066) ಜೂನ್ 22 ರಂದು ರದ್ದಾಗಿದೆ. 3. ಚಾಮರಾಜನಗರದಿಂದ ಹೊರಡುವ ಚಾಮರಾಜನಗರ-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56201) ಜೂನ್ 16 ರಿಂದ 23 ರವರೆಗೆ ರದ್ದಾಗಿದೆ. 4.ಮೈಸೂರು-ಯಶವಂತ ಪುರ ಪ್ಯಾಸೆಂಜರ್ (ರೈಲು ಸಂಖ್ಯೆ 56216) ಜೂ. 16 ರಿಂದ 23 ರವರೆಗೆ ರದ್ದಾಗಿದೆ. 5.ಯಶವಂತಪುರ-ಸೇಲಂ ಪ್ಯಾಸೆಂಜರ್ (ರೈಲು ಸಂಖ್ಯೆ 56242) ಜೂ. 16 ರಿಂದ 23 ರವರೆಗೆ. 6. ಸೇಲಂ-ಯಶವಂತಪುರ ಪ್ಯಾಸೆಂಜರ್ (ರೈಲು ಸಂಖ್ಯೆ 56241) ಜೂ.17 ರಿಂದ 24 ರವರೆಗೆ. 7.ಯಶವಂತಪುರ-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56215) ಜೂ.17 ರಿಂದ 24 ರವರೆಗೆ 8.ಮೈಸೂರು-ಚಾಮರಾಜನಗರ ಪ್ಯಾಸೆಂಜರ್ (ರೈಲು ಸಂಖ್ಯೆ 56202) ಜೂ. 16 ರಿಂದ 23 ರವರೆಗೆ 9. ಚಾಮರಾಜ ನಗರ-ಕೆಎಸ್‍ಆರ್ ಬೆಂಗಳೂರು ಪ್ಯಾಸೆಂಜರ್ (ರೈಲು ಸಂಖ್ಯೆ 56281) ಜೂ. 16 ರಿಂದ 23ರವರೆಗೆ. 10. ಕೆಎಸ್‍ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್, (ರೈಲು ಸಂಖ್ಯೆ 56227) ಜೂ. 16 ರಿಂದ 23 ರವರೆಗೆ. 11. ಶಿವಮೊಗ್ಗ ಟೌನ್-ಕೆಎಸ್‍ಆರ್ ಬೆಂಗಳೂರು ಪ್ಯಾಸೆಂಜರ್, (ರೈಲು ಸಂಖ್ಯೆ 56228) ಜೂ. 17 ರಿಂದ 24 ರವರೆಗೆ.
12. ಕೆಎಸ್‍ಆರ್ ಬೆಂಗಳೂರು-ಚಾಮರಾಜನಗರ ಪ್ಯಾಸೆಂಜರ್ (ರೈಲು ಸಂಖ್ಯೆ 56282) ಜೂನ್ 17 ರಿಂದ 24ರವರೆಗೆ. 13.ಮೈಸೂರು-ಕೆಎಸ್‍ಆರ್ ಬೆಂಗಳೂರು ಪ್ಯಾಸೆಂಜರ್ (ರೈಲು ಸಂಖ್ಯೆ 56231) ಜೂ. 16 ರಿಂದ 23 ರವರೆಗೆ 14.ಕೆಎಸ್‍ಆರ್ ಬೆಂಗಳೂರು-ಮೈಸೂರು ಪ್ಯಾಸೆಂ ಜರ್ (ರೈಲು ಸಂಖ್ಯೆ 56238) ಜೂ. 16 ರಿಂದ 23 ರವರೆಗೆ 15. ಮೈಸೂರು-ಚಾಮರಾಜನಗರ ಪ್ಯಾಸೆಂಜರ್ (ರೈಲು ಸಂಖ್ಯೆ 56204) ಜೂ. 16 ರಿಂದ 23 ರವರೆಗೆ. 16. ಚಾಮರಾಜ ನಗರ-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56203) ಜೂ. 16 ರಿಂದ 23 ರವರೆಗೆ. 17. ಮೈಸೂರು-ಕೆಎಸ್‍ಆರ್ ಬೆಂಗಳೂರು ಪ್ಯಾಸೆಂಜರ್ (ರೈಲು ಸಂಖ್ಯೆ 56237) ಜೂ. 16 ರಿಂದ 23 ರವರೆಗೆ 18. ಕೆಎಸ್‍ಆರ್ ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್ (ರೈಲು ಸಂಖ್ಯೆ 56223) ಜೂ. 16 ರಿಂದ 23 ರವರೆಗೆ 19. ಅರಸೀಕೆರೆ-ಕೆಎಸ್‍ಆರ್ ಬೆಂಗಳೂರು ಪ್ಯಾಸೆಂಜರ್ (ರೈಲು ಸಂಖ್ಯೆ 56224) ಜೂ. 17 ರಿಂದ 24 ರವರೆಗೆ. 20. ಕೆಎಸ್‍ಆರ್ ಬೆಂಗಳೂರು-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56232) ಜೂ. 17 ರಿಂದ 24 ರವರೆಗೆ. 21. ಮೈಸೂರು-ತಾಳಗುಪ್ಪ ಪ್ಯಾಸೆಂಜರ್ (ರೈಲು ಸಂಖ್ಯೆ 56276) ಜೂ. 16 ರಿಂದ 23 ರವರೆಗೆ. 22. ತಾಳಗುಪ್ಪ-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56275) ಜೂ.17 ರಿಂದ 24 ರವರೆಗೆ. 23. ಮೈಸೂರು-ಚಾಮರಾಜ ನಗರ ಪ್ಯಾಸೆಂಜರ್ (ರೈಲು ಸಂಖ್ಯೆ 56208) ಜೂ. 16 ರಿಂದ 23 ರವರೆಗೆ. 24. ಚಾಮರಾಜನಗರ-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56209) ಜೂ. 16 ರಿಂದ 23 ರವರೆಗೆ. 25. ಮೈಸೂರು-ನಂಜನಗೂಡು ಟೌನ್ ಪ್ಯಾಸೆಂಜರ್ (ರೈಲು ಸಂಖ್ಯೆ 56206) ಜೂ. 16 ರಿಂದ 23 ರವರೆಗೆ. 26. ನಂಜನಗೂಡು ಟೌನ್-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56205) ಜೂ. 16 ರಿಂದ 23ರವರೆಗೆ. 27. ಮಾಲ್‍ಗುಡಿ ಎಕ್ಸ್‍ಪ್ರೆಸ್ ಮೈಸೂರು – ಯಲಹಂಕ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16023) ಜೂ. 16 ರಿಂದ 23 ರವರೆಗೆ. 28. ಮಾಲ್ ಗುಡಿ ಎಕ್ಸ್‍ಪ್ರೆಸ್ ಯಲಹಂಕ-ಮೈಸೂರು ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16024) ಜೂ. 16 ರಿಂದ 23 ರವರೆಗೆ. 29. ರಾಜ್ಯ ರಾಣಿ ಎಕ್ಸ್‍ಪ್ರೆಸ್ ಮೈಸೂರು-ಕೆಎಸ್‍ಆರ್ ಬೆಂಗಳೂರು ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16557) ಜೂ. 16 ರಿಂದ 23 ರವರೆಗೆ. 30. ರಾಜ್ಯರಾಣಿ ಎಕ್ಸ್‍ಪ್ರೆಸ್-ಕೆಎಸ್‍ಆರ್ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16558) ಜೂ. 16 ರಿಂದ 23 ರವರೆಗೆ.

ಭಾಗಶಃ ರದ್ದು: 1. ಕಾಚಿಗೂಡು-ಮೈಸೂರು ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 12785) (ಪಾಂಡವಪುರ-ಮೈಸೂರು ನಡುವೆ). ಪಾಂಡವಪುರದಲ್ಲಿ ಈ ರೈಲು ಸಂಚಾರ ರದ್ದು. 2. ಮೈಸೂರು-ಕಾಚಿಗೂಡು ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 12786) ಮೈಸೂರು ಬದಲಾಗಿ ಪಾಂಡವಪುರದಿಂದ ಹೊರಡಲಿದೆ. ಮೈಸೂರು-ಪಾಂಡವಪುರ ನಡುವೆ ಭಾಗಶಃ ರದ್ದಾಗಿದೆ. 3. ಚೆನ್ನೈ ಸೆಂಟ್ರಲ್ -ಮೈಸೂರು ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 12609) ಪಾಂಡವ ಪುರ-ಮೈಸೂರು ನಡುವೆ ಜೂ. 16 ರಿಂದ 23 ರವರೆಗೆ ಭಾಗಶಃ ರದ್ದು. ಈ ರೈಲು ಪಾಂಡವಪುರದಲ್ಲಿ ರದ್ದಾಗಲಿದೆ. 4.ಮೈಸೂರು-ಚೆನ್ನೈ ಸೆಂಟ್ರಲ್ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 12610) ಜೂ. 17 ರಿಂದ 24 ರವರೆಗೆ ಮೈಸೂರಿನಿಂದ ಹೊರಡುವ ಬದಲು ಪಾಂಡವಪುರದಿಂದ ಹೊರಡಲಿದೆ. ಈ ರೈಲು ಸಂಚಾರ ಮೈಸೂರು-ಪಾಂಡವಪುರ ನಡುವೆ ಭಾಗಶಃ ರದ್ದು. 5.ಮೈಸೂರು-ಅರಸೀಕೆರೆ ಪ್ಯಾಸೆಂಜರ್ (ರೈಲು ಸಂಖ್ಯೆ 56266) ಜೂ. 16 ರಿಂದ 23 ರವರೆಗೆ ಮೈಸೂರು ಬದಲಾಗಿ ಬೆಳಗೊಳ ದಿಂದ ಹೊರಡಲಿದೆ. ಈ ರೈಲು ಮೈಸೂರು-ಬೆಳಗೊಳ ನಡುವೆ ಭಾಗಶಃ ರದ್ದು. 6. ಅರಸೀಕೆರೆ-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56265) ಜೂ. 16 ರಿಂದ 22 ರವರೆಗೆ ಬೆಳಗೊಳ-ಮೈಸೂರು ನಡುವೆ ಭಾಗಶಃ ರದ್ದು. ಈ ರೈಲು ಸಂಚಾರ ಬೆಳಗೊಳದಲ್ಲಿ ಕೊನೆಗೊಳ್ಳುತ್ತದೆ. 7. ಮೈಸೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್ (ರೈಲು ಸಂಖ್ಯೆ 56270) ಜೂ. 16 ರಿಂದ 23 ರವರೆಗೆ ಮೈಸೂರಿನಿಂದ ಹೊರಡುವ ಬದಲು ಬೆಳಗೊಳದಿಂದ ಹೊರಡಲಿದೆ. ಈ ರೈಲು ಮೈಸೂರು-ಬೆಳಗೊಳ ನಡುವೆ ಭಾಗಶಃ ರದ್ದಾಗಲಿದೆ. 8. ಶಿವಮೊಗ್ಗ ಟೌನ್-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56269) ಜೂ. 16 ರಿಂದ 23 ರವರೆಗೆ ಬೆಳಗೊಳ-ಮೈಸೂರು ನಡುವೆ ರದ್ದಾಗಲಿದೆ. ಈ ರೈಲು ಸಂಚಾರ ಬೆಳಗೊಳದಲ್ಲಿ ಕೊನೆಗೊಳ್ಳಲಿದೆ. 9. ಮೈಸೂರು-ಅರಸೀಕೆರೆ ಪ್ಯಾಸೆಂಜರ್ (ರೈಲು ಸಂಖ್ಯೆ 56268) ಜೂ. 16 ರಿಂದ 23 ರವರೆಗೆ ಮೈಸೂರಿನಿಂದ ಹೊರಡುವ ಬದಲಾಗಿ ಬೆಳಗೊಳದಿಂದ ಹೊರಡಲಿದೆ. ಈ ರೈಲು ಸಂಚಾರ ಮೈಸೂರು-ಬೆಳಗೊಳ ನಡುವೆ ರದ್ದಾಗಲಿದೆ. 10. ಅರಸೀಕೆರೆ-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56267) ಜೂ. 16 ರಿಂದ 23 ರವರೆಗೆ ಬೆಳಗೊಳ-ಮೈಸೂರು ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಸಂಚಾರ ಬೆಳಗೊಳದಲ್ಲಿ ಕೊನೆಗೊಳ್ಳಲಿದೆ. 11. ಮೈಸೂರು-ಕೆಎಸ್‍ಆರ್ ಬೆಂಗಳೂರು ಪ್ಯಾಸೆಂಜರ್ (ರೈಲು ಸಂಖ್ಯೆ 56263) ಜೂ. 16 ರಿಂದ 22 ರವರೆಗೆ ಮೈಸೂರಿನಿಂದ ಹೊರಡುವ ಬದಲು ನಾಗನಹಳ್ಳಿಯಿಂದ ಹೊರಡಲಿದೆ. ಈ ರೈಲು ಸಂಚಾರ ಮೈಸೂರು-ನಾಗನಹಳ್ಳಿ ನಡುವೆ ಭಾಗಶಃ ರದ್ದಾಗಲಿದೆ. 12. ಕೆಎಸ್‍ಆರ್ ಬೆಂಗಳೂರು-ಮೈಸೂರು ಪ್ಯಾಸೆಂಜರ್ (ರೈಲು ಸಂಖ್ಯೆ 56264) ಜೂ. 15 ರಿಂದ 22 ರವರೆಗೆ ನಾಗನಹಳ್ಳಿ-ಮೈಸೂರು ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಸಂಚಾರ ಮೈಸೂರು ಬದಲಾಗಿ ನಾಗನಹಳ್ಳಿಯಲ್ಲಿ ಕೊನೆಗೊಳ್ಳಲಿದೆ. 13. ಕೆಎಸ್‍ಆರ್ ಬೆಂಗಳೂರು-ಮೈಸೂರು ಮೆಮೋ (ರೈಲು ಸಂಖ್ಯೆ 06575) ಜೂ. 19 ರಿಂದ 22 ರವರೆಗೆ ರಾಮನಗರ-ಮೈಸೂರು ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಸಂಚಾರ ರಾಮ ನಗರದಲ್ಲಿ ಕೊನೆಗೊಳ್ಳಲಿದೆ. 14. ಮೈಸೂರು-ಕೆಎಸ್‍ಆರ್ ಬೆಂಗಳೂರು ಮೆಮೋ (ರೈಲು ಸಂಖ್ಯೆ 06576) ಜೂ. 19 ರಿಂದ 22 ರವರೆಗೆ ಮೈಸೂರು-ರಾಮನಗರ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ರಾಮನಗರದಿಂದ ಹೊರಡಲಿದೆ. 15. ಮೈಸೂರು-ಕೆಎಸ್‍ಆರ್ ಬೆಂಗಳೂರು ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 12613) ಜೂ. 18 ಮತ್ತು 19 ರಂದು ಮೈಸೂರು-ಮಂಡ್ಯ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಮಂಡ್ಯದಿಂದ ಸಂಚಾರ ಆರಂಭಿಸಲಿದೆ.

ಮಾರ್ಗ ಬದಲಾವಣೆ: 1. ಕೆಎಸ್‍ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16517/16523) ಜೂ. 16, 17, 18 ರಂದು ಮಂಡ್ಯ, ಮೈಸೂರು, ಹಾಸನ ಮಾರ್ಗದ ಬದಲಾಗಿ ಚಿಕ್ಕಬಾಣಾವಾರ, ನೆಲಮಂಗಲ, ಶ್ರವಣಬೆಳಗೊಳ, ಹಾಸನ ನಡುವೆ ಸಂಚರಿಸಲಿದೆ. 2. ಕಣ್ಣೂರು/ಕಾರವಾರ-ಕೆಎಸ್‍ಆರ್ ಬೆಂಗಳೂರು ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16518/16524) ಜೂ. 15, 20, 21 ಮತ್ತು 22 ರಂದು ಹಾಸನ, ಮೈಸೂರು, ಮಂಡ್ಯ ಮಾರ್ಗದ ಬದಲಾಗಿ ಹಾಸನ, ಶ್ರವಣಬೆಳಗೊಳ, ನೆಲಮಂಗಲ ಮತ್ತು ಚಿಕ್ಕಬಾಣಾವರ ಮಾರ್ಗವಾಗಿ ಸಂಚರಿಸಲಿದೆ.

ರಿಷೆಡ್ಯೂಲ್ಡ್: 1.ಮೈಸೂರು-ಬಾಗಲಕೋಟೆ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 17307) ಜೂ. 18 ಮತ್ತು 19 ರಂದು ಕ್ರಮವಾಗಿ 75 ನಿಮಿಷ ಮತ್ತು 120 ನಿಮಿಷ ತಡವಾಗಿ ಹೊರಡಲಿದೆ. 2. ಮೈಸೂರು-ಸೋಲಾಪುರ್ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16535) ಜೂ. 19 ರಂದು ಮೈಸೂರಿನಿಂದ 30 ನಿಮಿಷ ತಡವಾಗಿ ಹೊರಡಲಿದೆ. 3. ಮೈಸೂರು-ಮೈಲುಡಾತುರೈ ಎಕ್ಸ್‍ಪ್ರೆಸ್ (ರೈಲು ಸಂಖ್ಯೆ 16232) ಜೂ.19ರಂದು ಮೈಸೂರಿನಿಂದ 15 ನಿಮಿಷ ತಡವಾಗಿ ಹೊರಡಲಿದೆ.