ಅನಧಿಕೃತ ಟೆಲಿಕಾಂ ನೆಟ್‍ವರ್ಕ್ ಕೇಬಲ್ ಅಳವಡಿಕೆ ಹತ್ತಿಕ್ಕಲುನಗರ ಪಾಲಿಕೆ, ಚೆಸ್ಕಾಂ ಜಂಟಿ ಕಾರ್ಯಾಚರಣೆ
ಮೈಸೂರು

ಅನಧಿಕೃತ ಟೆಲಿಕಾಂ ನೆಟ್‍ವರ್ಕ್ ಕೇಬಲ್ ಅಳವಡಿಕೆ ಹತ್ತಿಕ್ಕಲುನಗರ ಪಾಲಿಕೆ, ಚೆಸ್ಕಾಂ ಜಂಟಿ ಕಾರ್ಯಾಚರಣೆ

ಮೈಸೂರು: ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಟೆಲಿಕಾಂ ನೆಟ್‍ವರ್ಕ್ ಕೇಬಲ್ ಅಳವಡಿಕೆ ಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಾಳೆ (ಜೂ.12)ಯಿಂದಲೇ ಮೈಸೂರು ನಗರ ಪಾಲಿಕೆ ಹಾಗೂ ಚೆಸ್ಕಾಂ ಜಂಟಿ ಕಾರ್ಯಾ ಚರಣೆ ನಡೆಸಲು ನಿರ್ಧರಿಸಲಾಗಿದೆ.

ಮೈಸೂರು ನಗರ ಪಾಲಿಕೆ ನವೀಕೃತ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಹಾಗೂ ಚೆಸ್ಕಾಂ ಅಧಿಕಾರಿಗಳ ಜಂಟಿ ಸಭೆಯಲ್ಲಿ ವಿಸ್ತøತ ಚರ್ಚೆಯ ಬಳಿಕ ಕೇಬಲ್ ಮಾಫಿಯಾ ಹತ್ತಿಕ್ಕಲು ಪಾಲಿಕೆ ಹಾಗೂ ಚೆಸ್ಕಾಂ ಸೂಪ ರಿಂಟೆಂಡೆಂಟ್ ಇಂಜಿನಿಯರ್‍ಗಳ ನೇತೃತ್ವ ದಲ್ಲಿ ಈಗಾಗಲೇ ಅನಧಿಕೃತವಾಗಿ ಅಳ ವಡಿಸಿರುವ ಕೇಬಲ್ ತೆರವಿಗೆ ಕಾರ್ಯಾ ಚರಣೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ರುವ ವಿದ್ಯುತ್ ಕಂಬಗಳಲ್ಲಿ ಯಾವುದೇ ಕೇಬಲ್ ಅಳವಡಿಸಬೇಕಿದ್ದರೂ ಪಾಲಿಕೆ ಅನುಮತಿ ಪಡೆಯಲೇಬೇಕು. ವಿದ್ಯುತ್ ಕಂಬಗಳು ಪಾಲಿಕೆ ಜಾಗದಲ್ಲಿರುವುದ ರಿಂದ ಕೇಬಲ್ ಅಳವಡಿಕೆಗೆ ಚೆಸ್ಕಾಂ ಅನುಮತಿ ನೀಡುವಂತಿಲ್ಲ. ಹಾಗೇನಾ ದರೂ ಅನುಮತಿ ನೀಡಿದ್ದಲ್ಲಿ ಅದು ಕಾನೂನು ಬಾಹಿರ. ಅಲ್ಲದೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್(ಕೆಎಂಸಿ) ಕಾಯ್ದೆ ಅನ್ವಯ ಶಿಕ್ಷಾರ್ಹ ಅಪರಾಧವಾಗ ಲಿದೆ ಎಂಬುದನ್ನು ಸಭೆಯಲ್ಲಿ ಚೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ವೇಳೆ ಚೆಸ್ಕಾಂ ಅಧಿಕಾರಿಯೊಬ್ಬರು ಮೇಲಧಿಕಾರಿಗಳ ಸೂಚನೆ ಮೇರೆಗೆ ಕೆಲವೆಡೆ ಕೇಬಲ್ ಅಳವಡಿಕೆಗೆ ಅನುಮತಿ ನೀಡಲಾಗಿತ್ತು. ಆದರೆ ಹಲವೆಡೆ ಚೆಸ್ಕಾಂ ಅಥವಾ ಪಾಲಿಕೆ ಅನುಮತಿಯಿಲ್ಲದೆ ಅನಧಿಕೃತ ವಾಗಿ ಅಳವಡಿಸಿರುವುದಾಗಿ ಒಪ್ಪಿಕೊಂಡರು.

ಉಪಮೇಯರ್ ಷಫೀ ಅಹವದ್, ಮಾಜಿ ಮೇಯರ್‍ಗಳಾದ ಅಯೂಬ್ ಖಾನ್, ಆರಿಫ್ ಹುಸೇನ್, ಮಾಜಿ ಉಪ ಮೇಯರ್ ಶಾಂತಕುಮಾರಿ, ಪಾಲಿಕೆ ವಿಪಕ್ಷ (ಬಿಜೆಪಿ) ನಾಯಕ ಬಿ.ವಿ.ಮಂಜು ನಾಥ್, ಸದಸ್ಯರಾದ ಶಿವಕುಮಾರ್ ಹಾಗೂ ಕೆ.ವಿ.ಶ್ರೀಧರ್ ಮಾತನಾಡಿ, ವಿದ್ಯುತ್ ಕಂಬಗಳಲ್ಲಿ ಕೇಬಲ್ ಅಳವಡಿಸಿ ದರೆ ನಗರದ ಅಂದ ಕೆಡುವುದರ ಜೊತೆಗೆ ಹಲವು ರೀತಿಯ ಅನಾಹುತಕ್ಕೂ ಆಸ್ಪದ ಮಾಡಿಕೊಟ್ಟಂತಾಗುತ್ತದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಿದ್ಯುತ್ ಕಂಬಗಳಲ್ಲಿ ಯಾವುದೇ ಕೇಬಲ್ ಅಳವಡಿಸಬೇಕಿ ದ್ದರೂ ಪಾಲಿಕೆ ಅನುಮತಿ ನೀಡಬೇಕೇ ಹೊರತು ಚೆಸ್ಕಾಂಗೆ ಅಧಿಕಾರವಿಲ್ಲ. ಕರ್ನಾ ಟಕ ಪೌರ ನಿಗಮಗಳ ಅಧಿನಿಯಮ 20(ಎ)ರಲ್ಲಿ `ನಿಗಮದಲ್ಲಿ ನಿಹಿತವಾಗಿ ರುವ ಯಾವುದೇ ಬೀದಿಗಳು ಅಥವಾ ಸ್ವತ್ತಿನ ಕೆಳಗೆ, ಮೇಲೆ, ಉದ್ದಕ್ಕೂ, ಅಡ್ಡಕ್ಕೆ, ಒಳಗೆ ಅಥವಾ ಹೊರಗೆ ಹಾಕಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್‍ಗಳನ್ನು ಒಳ ಗೊಂಡಂತೆ ಅನಧಿಕೃತ ಕೇಬಲ್ ಅನ್ನು ತೆಗೆದು ಹಾಕುವುದು’ ಎಂಬ ನಿಯಮ ವಿದೆ. ಅಂದರೆ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಕೇಬಲ್‍ಗಳನ್ನು ಯಾವುದೇ ನೋಟೀಸ್ ನೀಡದೆ ತೆರವು ಮಾಡುವ ಅಧಿಕಾರ ಪಾಲಿಕೆಗಿದೆ. ಇನ್ನು ಮುಂದೆ ಮೈಸೂರು ನಗರದ ಸೌಂದರ್ಯಕ್ಕೆ ಧಕ್ಕೆಯಾಗುವ, ಸಾರ್ವಜನಿಕರಿಗೆ ತೊಂದರೆಯಾಗುವ ಕೆಲಸಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕೆಂದು ಎಚ್ಚರಿಸಿದರು.

ಅಗ್ರಹಾರದ ತ್ಯಾಗರಾಜ ರಸ್ತೆಯನ್ನು ವೈರ್‍ಲೆಸ್ ರಸ್ತೆಯನ್ನಾಗಿ ಘೋಷಿಸ ಲಾಗಿದೆ. ಆದರೆ ವಿದ್ಯುತ್ ಕಂಬಗಳಲ್ಲಿ ಕೇಬಲ್‍ಗಳು ಜೋತು ಬಿದ್ದಿರುವುದನ್ನು ನೋಡಿದರೆ ಅದನ್ನು ವೈರ್‍ಮುಕ್ತ ರಸ್ತೆ ಎಂದು ಕರೆಯಲು ಸಾಧ್ಯವೇ ಇಲ್ಲ ಎಂದು ಸದಸ್ಯ ಬಿ.ವಿ.ಮಂಜುನಾಥ್ ಸಭೆಯಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು, ಕೂಡಲೇ ಕೇಬಲ್ ತೆರವಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚೆಸ್ಕಾಂಗೆ ಹೆಚ್‍ಡಿಡಿ ಮೂಲಕ ಓಎಫ್‍ಸಿ ಕೇಬಲ್ ಅಳವಡಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಆದರೆ ಪಾಲಿ ಕೆಯ ಯಾವುದೇ ಅಧಿಕಾರಿಗೂ ಮಾಹಿತಿ ನೀಡದೆ ಹಲವೆಡೆ ರಸ್ತೆ ಅಗೆದು ಕೇಬಲ್ ಅಳವಡಿಸಿ, ಬಳಿಕ ದುರಸ್ತಿಪಡಿಸದೆ ಹಾಗೆಯೇ ಬಿಡಲಾಗುತ್ತಿದೆ. ಅಲ್ಲದೆ ನೀರು ಸರಬ ರಾಜು ಹಾಗೂ ಒಳಚರಂಡಿ ಕೊಳವೆ ಮಾರ್ಗಕ್ಕೆ ಹಾನಿಯುಂಟು ಮಾಡಲಾಗಿದೆ. ವಿದ್ಯುತ್ ತಂತಿಗಳಿಗೆ ತಾಕುವ ಮರದ ಕೊಂಬೆಗಳನ್ನು ಕತ್ತರಿಸಿ, ಅಲ್ಲಿಯೇ ಬಿಡುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇನ್ನು ಮುಂದೆ ಯಾವುದೇ ಯುಜಿ ಕೇಬಲ್ ಅಳವಡಿ ಸುವ ಸಂದರ್ಭದಲ್ಲಿ ವಲಯ ಕಚೇರಿ ಆಯುಕ್ತರ ಗಮನಕ್ಕೆ ತರಬೇಕು. ಪಾಲಿಕೆ ತೋಟಗಾರಿಕೆ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿಯೇ ಮರದ ಕೊಂಬೆಗಳನ್ನು ಕತ್ತರಿಸಬೇಕೆಂದು ಚೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು.

ಗಾಳಿ, ಮಳೆ ಇನ್ನಿತರ ಕಾರಣಗಳಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೂಡಲೇ ತೆರವುಗೊಳಿಸಬೇಕು. ಕುಡಿ ಯುವ ನೀರು ಸರಬರಾಜು ಹೆಡ್‍ವರ್ಕ್ ಗಳ ಪಂಪ್‍ಗಳ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾದರೆ ತಕ್ಷಣ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯ ಲ್ಲಿರುವ ಕೊಳವೆಬಾವಿ ಸಬ್ ಮರ್ಸಿಬಲ್ ಪಂಪ್‍ಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಕಲ್ಪಿಸಬೇಕೆಂದು ತಿಳಿಸಲಾ ಯಿತು. ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಸೇರಿದಂತೆ ಪಾಲಿಕೆ ಹಾಗೂ ಚೆಸ್ಕಾಂನ ಅನೇಕ ಅಧಿಕಾರಿಗಳು ಸಭೆಯಲ್ಲಿದ್ದರು.

June 12, 2019

Leave a Reply

Your email address will not be published. Required fields are marked *