ಮೈಸೂರು ವಿವಿ ವ್ಯಾಪ್ತಿಯ ಶೈಕ್ಷಣಿಕ ಕೇಂದ್ರಗಳಲ್ಲಿ ಹಸಿರೀಕರಣ
ಮೈಸೂರು

ಮೈಸೂರು ವಿವಿ ವ್ಯಾಪ್ತಿಯ ಶೈಕ್ಷಣಿಕ ಕೇಂದ್ರಗಳಲ್ಲಿ ಹಸಿರೀಕರಣ

June 14, 2019

ಮೈಸೂರು: ಮೈಸೂರು ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜು ಹಾಗೂ ಶೈಕ್ಷಣಿಕ ಕೇಂದ್ರಗಳನ್ನು ಹಸಿರೀಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಜಿ.ಹೇಮಂತ್‍ಕುಮಾರ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಆವರಣದಲ್ಲಿ ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ವತಿ ಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಟ್ಟು ನೀರೆರೆದು ಅವರು ಮಾತನಾಡಿದರು.

ಹಸಿರೀಕರಣ ಮಾಡುವ ಚಟುವಟಿಕೆ ಒಂದೇ ದಿನಕ್ಕೆ ಸೀಮಿತ ಆಗದೇ ನಿತ್ಯ ನಡೆಯಬೇಕು. ಮೈಸೂರು ವಿವಿ ಕ್ಯಾಂಪಸ್ ಹಾಗೂ ವಿವಿ ವ್ಯಾಪ್ತಿಯ ಎಲ್ಲಾ ಕಾಲೇಜು ಆವರಣವನ್ನು ಹಸಿರೀಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಮಹಿಳಾ ಪೆÇಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾದ ಧರಣಿದೇವಿ ಮಾಲ ಗತ್ತಿ, ಮೈಸೂರು ವಿವಿ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ, ಪರೀಕ್ಷಾಂಗ ಕುಲ ಸಚಿವ ಪ್ರೊ.ಕೆ.ಎಂ.ಮಹದೇವನ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಸಿ.ಪಿ. ಸುನೀತಾ, ಸಂಜೆ ಕಾಲೇಜು ಪ್ರಾಂಶು ಪಾಲ ಆಂಜನೇಯ, ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ಕಾನೂನು ಸಲಹೆಗಾರ ಉಮೇಶ್, ಅಧ್ಯಕ್ಷ ಆರ್.ವಾಸು ದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯ ದರ್ಶಿ ವಿನೋದ್, ಸಹ ಕಾರ್ಯದರ್ಶಿ ಭರತ್ ರಾಜ್, ಗೌರವ ಕಾರ್ಯದರ್ಶಿ ಮಹೇಶ್‍ಬಾಬು ರೆಡ್ಡಿ ಹಾಜರಿದ್ದರು.

Translate »