ಮೈಸೂರು: ಮಂಡಿ ಮೊಹಲ್ಲಾ ಮಿಷನ್ ಆಸ್ಪತ್ರೆ ಸುತ್ತ ಮುತ್ತ ಫುಟ್‍ಪಾತ್ ಒತ್ತುವರಿಯಿಂದಾಗಿ ದಿನನಿತ್ಯ ಓಡಾಡುವ ಪಾದಚಾರಿಗಳಿಗೆ ಹಾಗೂ ದ್ವಿ ಚಕ್ರವಾಹನ ನಿಲುಗಡೆಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಮತ್ತು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಶಾಸಕ ಎಲ್.ನಾಗೇಂದ್ರ ಒತ್ತಾಯಿಸಿದ್ದಾರೆ. ಮೈಸೂರಿನ ಮಂಡಿಮೊಹಲ್ಲಾದ ಚಿಕ್ಕ ಮಾರುಕಟ್ಟೆ ಬಳಿ ಭಾನುವಾರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ನಡೆದ ಘರ್ಷಣೆಯಲ್ಲಿ ನೊಂದ ಕುಟುಂಬಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿದ…
ಪ್ರವಾಸಿ ಮೈಸೂರಿನ ಹೊಸ ಆಕರ್ಷಣೆ ವನ್ಯಜೀವಿ ಅಸ್ಥಿಪಂಜರ ಗ್ಯಾಲರಿ
May 22, 2019ಮೈಸೂರು: ಪ್ರಾಣಿ-ಪಕ್ಷಿ ಸಂಕುಲದ ಜೀವ ವೈವಿಧ್ಯತೆಯ ವೈಶಿಷ್ಟ್ಯ ಹಾಗೂ ನಿಸರ್ಗದ ಒಡಲಿನ ಅನೇಕ ವಿಸ್ಮಯಗಳ ಮಾದರಿಗಳ ತಾಣವೇ ಮೈಸೂರಿನ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ. ಜನಸಾಮಾನ್ಯರು ಹಾಗೂ ಮಕ್ಕಳಿಗೆ ಪರಿಸರ ಪ್ರಜ್ಞೆ ಮತ್ತು ಕಳಕಳಿ ಮೂಡಿ ಸುತ್ತಿರುವ ಈ ವಸ್ತು ಸಂಗ್ರಹಾಲಯ ದಲ್ಲಿ (ಆರ್‍ಎಂಎನ್‍ಹೆಚ್) ಇದೀಗ ಜೋಡಿಸಲ್ಪಟ್ಟ ಪ್ರಾಣಿಗಳ ಅಸ್ಥಿಪಂಜರ ಗ್ಯಾಲರಿ ಸಿದ್ಧಗೊಳ್ಳುತ್ತಿದೆ. ಇನ್ನೊಂದು ವರ್ಷದಲ್ಲಿ ಈ ಗ್ಯಾಲರಿಯಲ್ಲಿ ನಾನಾ ಪ್ರಾಣಿ ಸಂಕುಲದ ವೈವಿಧ್ಯತೆಯನ್ನು ಅವು ಗಳ ಅಸ್ಥಿಪಂಜರಗಳು ತೆರೆದಿಡಲಿವೆ. ಮೈಸೂರಿನ ಸಿದ್ಧಾರ್ಥನಗರದಲ್ಲಿ ರುವ ಪ್ರಾದೇಶಿಕ…
ಗಾಂಧಿ ಕೊಂದ ಗೋಡ್ಸೆ ದಿನಾಚರಣೆಯೇ?ದೇಶ ಎತ್ತ ಸಾಗುತ್ತಿದೆ: ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆತಂಕ
May 22, 2019ಮೈಸೂರು: ಅಹಿಂಸಾತ್ಮಕವಾಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರನ್ನು ವಿಶ್ವದ ಇತರೆಡೆ ಸ್ಮರಿಸು ತ್ತಿದ್ದರೆ, ಅವರನ್ನು ಅಮಾನವೀಯವಾಗಿ ಕೊಲೆ ಮಾಡಿದ ನಾಥುರಾಂ ಗೋಡ್ಸೆ ದಿನಾಚರಣೆಗೆ ಹಲವರು ಮುಂದಾಗಿರು ವುದನ್ನು ಗಮನಿಸಿದರೆ ದೇಶ ಎತ್ತ ಸಾಗುತ್ತಿದೆ ಎಂಬ ಆತಂಕ ವಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಟ್ಟದಪುರ ಠಾಣೆಯಲ್ಲಿ ರೈತ ಸಂಘದ ಮುಖಂಡರೊಬ್ಬರಿಗೆ ಪೊಲೀಸ್ ಅಧಿಕಾರಿ ಕಿರುಕುಳ ನೀಡಿದ್ದಾರೆನ್ನುವ ಘಟನೆ ಕುರಿತಂತೆ ಮಾತನಾಡಿ,…
ಮೈಸೂರಿನ ಯೋಗಾನರಸಿಂಹಸ್ವಾಮಿ 22ನೇ ವರ್ಷದ ಕುಂಭಾಭಿಷೇಕ
May 22, 2019ವಿವಿಧ ಸಾಂಸ್ಕøತಿಕ, ಆಧ್ಯಾತ್ಮಿಕ ಕಾರ್ಯಕ್ರಮ 27ರಂದು ಸಿಎಂ ಸ್ವ ಹಸ್ತದಿಂದ ಮಹಾಸುದರ್ಶನ ಯಾಗದ ಪೂರ್ಣಾಹುತಿ ಮೈಸೂರು: ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ 22ನೇ ವರ್ಷದ ಕುಂಭಾಭಿಷೇಕ ಕಾರ್ಯಕ್ರಮಗಳು ಮೇ 25ರಿಂದ 27ರವರೆಗೆ ನಡೆಯಲಿದೆ. ಇದರ ಅಂಗವಾಗಿ ಮೇ 25ರಂದು ಬೆಳಿಗ್ಗೆ 8ಕ್ಕೆ ದೇವರಿಗೆ ಅಭಿಷೇಕ ಮತ್ತು ಲಕ್ಷಾರ್ಚನೆ. 26ರಂದು ಬೆಳಿಗ್ಗೆ 8ಕ್ಕೆ ಸಹಸ್ರ ಕ್ಷೀರಾಭಿಷೇಕ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎಸ್.ಶ್ರೀನಿವಾಸನ್ ತಿಳಿಸಿದ್ದಾರೆ. ಮೇ 27ರಂದು ಬೆಳಿಗ್ಗೆ 8 ಗಂಟೆಗೆ ಲೋಕಕಲ್ಯಾಣಾರ್ಥವಾಗಿ ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ…
ಕಾರ್ಖಾನೆಗಳ ತ್ಯಾಜ್ಯ ವಿಲೇವಾರಿಗೆ ಶೀಘ್ರವೇ ಡಂಪಿಂಗ್ ಯಾರ್ಡ್
May 22, 2019ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನ ಅಂದಕ್ಕೆ ಸವಾಲಾಗಿ ಪರಿಣಮಿಸುತ್ತಿದ್ದ ಕೈಗಾರಿಕೆಗಳ ಅನುಪ ಯುಕ್ತ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನಗರದ ಹೊರ ವಲಯದಲ್ಲಿ ನಾಲ್ಕು ಕಡೆ ಡಂಪಿಂಗ್ ಯಾರ್ಡ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೂರ್ಗಳ್ಳಿಯಲ್ಲಿ ಎರಡು ಎಕರೆಯಲ್ಲಿ ಹೊಸದಾಗಿ ಡಂಪಿಂಗ್ ಯಾರ್ಡ್ ಕಾರ್ಯಾ ರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರು ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಕಾಲಕ್ಕೆ ವಿಲೇವಾರಿ ಮಾಡದೇ ಇದ್ದ ಹಿನ್ನೆಲೆಯಲ್ಲಿ ವಿದ್ಯಾರಣ್ಯ ಪುರಂನಲ್ಲಿರುವ ಸೂಯೇಜ್ ಫಾರಂ ನಲ್ಲಿ ಲಕ್ಷಾಂತರ ಟನ್ ಕಸ ಸಂಗ್ರಹಣೆ ಯಾಗಿ ದೊಡ್ಡ ಸವಾಲಾಗಿ ಪರಿಣಮಿಸಿರುವ…
ಕರ್ಜನ್ ಪಾರ್ಕ್‍ನಲ್ಲಿ ಮೇ 24ರಿಂದ 28ರವರೆಗೆ ಮಾವು, ಹಲಸು ಮೇಳ
May 22, 2019ಮೈಸೂರು: ಉತ್ತಮ ಆರೋಗ್ಯಕ್ಕೆ ಪೂರಕವಾದ, ನೈಸರ್ಗಿಕ ಪದ್ಧತಿಯಲ್ಲಿಯೇ ಮಾಗಿಸಿದ ಮಾವಿನ ಹಣ್ಣನ್ನು ಕಡಿಮೆ ಬೆಲೆಯಲ್ಲಿ ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸಲು ಮೈಸೂ ರಿನ ಕರ್ಜನ್ ಪಾರ್ಕ್‍ನಲ್ಲಿ ಮೇ 24ರಿಂದ ಐದು ದಿನಗಳ ಮಾವು ಮತ್ತು ಹಲಸು ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಸಂಜಯ್ ತಿಳಿಸಿದ್ದಾರೆ. ಕರ್ಜನ್ ಪಾರ್ಕ್‍ನಲ್ಲಿರುವ ತೋಟ ಗಾರಿಕಾ ಇಲಾಖೆ ಹಿರಿಯ ಉಪ ನಿರ್ದೇ ಶಕರ ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ…
ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಗುಂಪುಗಾರಿಕೆ
May 22, 2019ಮೈಸೂರು: ಸಮಸ್ತ ಕನ್ನಡಿಗರ ಆಸ್ತಿಯಾಗಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಇಂದು ಒಂದು ಗುಂಪಿನ ಹಿಡಿತಕ್ಕೆ ಸಿಲುಕಿದ್ದು, ಈ ಗುಂಪು ಪರಿಷತ್ತಿನ ಆರ್ಥಿಕ ಮೂಲ ವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಆರೋಪಿಸಿದರು. ಮೈಸೂರಿನ ಸುಬ್ಬರಾಯನಕೆರೆಯ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ ವನ ಆವರಣದ ಬಯಲು ರಂಗಮಂದಿ ರದಲ್ಲಿ ಮೈಸೂರು ಕನ್ನಡ ವೇದಿಕೆ ವತಿ ಯಿಂದ ಕಾರ್ಮಿಕ ದಿನಾಚರಣೆ ಅಂಗ ವಾಗಿ ಮಂಗಳವಾರ ಹಮ್ಮಿಕೊಂಡಿದ್ದ `ಕಾಯಕ ಯೋಗಿ ಪ್ರಶಸ್ತಿ’ ಪ್ರದಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್…
ಸದ್ಭಾವನಾ ದಿನಾಚರಣೆ: ಕಾಂಗ್ರೆಸ್‍ನಿಂದ ರಾಜೀವ್‍ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ
May 22, 2019ಮೈಸೂರು: ಹೋರಾಟದ ಕುಟುಂಬದಿಂದ ಬಂದು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ರಾಜಕಾರಣ ಪ್ರವೇಶಿಸಿ, ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆ ಅಲಂಕರಿಸಿ ಉತ್ತಮ ಆಡಳಿತ ನೀಡುವ ಮೂಲಕ ದೇಶವನ್ನು ವಿಶ್ವಮಟ್ಟ ದಲ್ಲಿ ಗುರ್ತಿಸುವಂತೆ ಮಾಡಿದವರು ದಿ.ರಾಜೀವ್‍ಗಾಂಧಿ ಎಂದು ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಇಂದಿಲ್ಲಿ ತಿಳಿಸಿದರು. ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಕಾಂಗ್ರೆಸ್ ಕಚೇರಿ ಯಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಸದ್ಭಾವನಾ ದಿನದ ಅಂಗವಾಗಿ ರಾಜೀವ್‍ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ…
ಮೇ 24ರಿಂದ ಬ್ರಾಹ್ಮಣ ಯುವಕರಿಗಾಗಿ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ
May 22, 2019ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರು ಬ್ರಾಹ್ಮಣ ಯುವ ವೇದಿಕೆ ಆಶ್ರಯದಲ್ಲಿ ಮೇ 24ರಿಂದ ಮೂರು ದಿನಗಳ ಕಾಲ ಬ್ರಾಹ್ಮಣ ಯುವಕರಿಗಾಗಿ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ಜೆ.ಕೆ.ಮೈದಾನದಲ್ಲಿ ನಡೆಯುವ ಪಂದ್ಯಾವಳಿಗೆ ಮೈಸೂರು, ಮಂಡ್ಯ, ಬೆಂಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ರಾಜ್ಯದ…
ಸರ್ಕಾರಿ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಕೌನ್ಸಿಲಿಂಗ್ ಆರಂಭ
May 22, 2019ಮೈಸೂರು: ಮೈಸೂರು ಜಿಲ್ಲೆಯಲ್ಲಿರುವ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿ ಅಂಬೇಡ್ಕರ್ ವಸತಿ ಶಾಲೆಗಳಿಗೆ 2019-20ನೇ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಕೌನ್ಸಿಲಿಂಗ್ ಪ್ರಾರಂಭವಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಸಿಪಿಓ ಪ್ರಭುಸ್ವಾಮಿ ತಿಳಿಸಿದರು. ನಜರ್‍ಬಾದ್‍ನಲ್ಲಿರುವ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ 6ನೇ ತರಗತಿ ಕೌನ್ಸಿಲಿಂಗ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 38 ವಸತಿ ಶಾಲೆಗಳಿದ್ದು 1840 ಸೀಟ್‍ಗಳಿಗೆ ಕೌನ್ಸಿಲಿಂಗ್ ನಡೆಯುತ್ತಿದೆ. ಒಂದು ಸೀಟ್‍ಗೆ ಇಬ್ಬರಂತೆ ಸಂದರ್ಶನಕ್ಕೆ…










