ಮೈಸೂರು: ಮೈಸೂರಿನ ಕೆಲವೆಡೆ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಐದಾರು ಅಂಗಡಿಗಳಿಗೆ ಹಾನಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ ಮೈಸೂರಿನ ಕೆಲ ಬಡಾವಣೆಗಳು ಹಾಗೂ ಹೊರ ವಲಯದಲ್ಲಿ ಮಳೆ ಸುರಿದಿದೆ. ಹೊಸ ಹುಂಡಿ ರಿಂಗ್‍ರೋಡ್‍ನಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ಐದಾರು ಅಂಗಡಿಗಳ ಮೇಲ್ಛಾವಣಿ ಶೀಟ್‍ಗಳು ಹಾರಿ ಹೋಗಿವೆ. ಒಂದೆರಡು ಅಂಗ ಡಿಯ ಗೋಡೆಗೂ ಹಾನಿಯಾಗಿದೆ. ಅಂಗಡಿಗಳ ಒಳಗಿದ್ದ ವಸ್ತುಗಳೆಲ್ಲಾ ಮಳೆಯಲ್ಲಿ ತೋಯ್ದು, ನಷ್ಟವಾಗಿದೆ. ಅಲ್ಲದೆ ಅಂಗಡಿಯೊಂದರ ಬಳಿ ನಿಂತಿದ್ದ ಇಬ್ಬರಿಗೆ ಶೀಟ್ ಬಡಿದು ಗಾಯ ಗೊಂಡಿದ್ದಾರೆಂದು…
17ನೇ ಲೋಕಸಭೆ ಚುನಾವಣೆ ಮುಕ್ತಾಯಕೊನೆಯ ಹಂತದಲ್ಲಿ ಶೇ.64.26 ದಾಖಲೆ ಮತದಾನ
May 20, 2019ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಶತ್ರುಘ್ನ ಸಿನ್ಹಾ, ಮನೀಷ್ ತಿವಾರಿ ಸೇರಿದಂತೆ ಅನೇಕ ಘಟಾನುಘಟಿ ನಾಯಕರು ಸ್ಪರ್ಧೆ ಮಾಡಿದ್ದ ಕ್ಷೇತ್ರಗಳಿಗೆ ಇಂದು ನಡೆದ ಏಳನೇ ಹಂತದ ಮತದಾನ ಅಂತ್ಯ ಗೊಂಡಿದೆ. ಈ ಮೂಲಕ 17ನೇ ಲೋಕ ಸಭೆ ಚುನಾವಣೆಯ 7 ಹಂತದ ಮತ ದಾನ ಮುಗಿದಿದ್ದು, ಭಾರತದ ಮುಂದಿನ ಐದು ವರ್ಷಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ವಾರಣಾಸಿ ಸೇರಿದಂತೆ ಎಂಟು ರಾಜ್ಯಗಳ 59 ಕ್ಷೇತ್ರಗಳಿಗೆ ನಡೆದ ಮತದಾನ ಮುಕ್ತಾಯವಾಗಿದ್ದು, ಶೇ.64.26ರಷ್ಟು…
ನಮ್ಮನ್ನು ವ್ಯಂಗ್ಯವಾಗಿ ತೋರಿಸುವ ಹಕ್ಕು ನಿಮಗೆ ಕೊಟ್ಟಿದ್ದು ಯಾರು? ನಾವೇನು ಕಾಮಿಡಿ ಪೀಸ್‍ಗಳಾ…?
May 20, 2019ಮೈಸೂರು: `ರಾಜಕಾರಣಿಗಳನ್ನು ವ್ಯಂಗ್ಯವಾಗಿ ತೋರಿ ಸುವ ಹಕ್ಕು ಕೊಟ್ಟಿದ್ದು ಯಾರು?’. `ನಾವೇನು ಕಾಮಿಡಿ ಪೀಸ್‍ಗಳಾ?’. ಎಲ್ಲದಕ್ಕೂ ಇತಿಮಿತಿ ಇರುತ್ತದೆ. ನಿಮ್ಮ ಟಿಆರ್‍ಪಿಗಾಗಿ ನಮ್ಮನ್ನೇಕೆ ಬಳಸಿಕೊಳ್ಳುತ್ತೀರಿ? ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ಮೈಸೂರಿನ ಕಲಾಮಂದಿರದಲ್ಲಿ ಭಾನುವಾರ ನಡೆದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ನೈತಿಕತೆ ಕಳೆದುಕೊಳ್ಳುತ್ತಿವೆ. ಈ ಹಿಂದೆ ಇದ್ದ ಗಾಂಭಿರ್ಯ ದೂರವಾಗು ತ್ತಿದೆ. ಇದರ ಪರಿಣಾಮದಿಂದಲೇ ಕಳೆದ ಒಂದು ತಿಂಗಳಿಂದ…
ಜೆಡಿಎಸ್ ನಾಯಕರಿಂದಲೂ ಸುಮಲತಾಗೆ ಬೆಂಬಲನರೇಂದ್ರಸ್ವಾಮಿ ಹೊಸ ಬಾಂಬ್
May 20, 2019ಮಂಡ್ಯ: 2019ರ ಲೋಕ ಸಭಾ ಚುನಾ ವಣೆಯಲ್ಲಿ ಜೆಡಿಎಸ್‍ನ ಕೆಲ ನಾಯಕರು ಸಹ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಕೊಟ್ಟಿದ್ದು, ಎಲ್ಲದಕ್ಕೂ ಸಾಕ್ಷಿ ಇದೆ. ಫಲಿತಾಂಶ ಪ್ರಕಟವಾದ ಮುಂದಿನ ದಿನಗಳಲ್ಲಿ ಇದೆಲ್ಲವು ಚರ್ಚೆಗೆ ಬರಲಿವೆ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೊಸಬಾಂಬ್ ಸಿಡಿಸಿದ್ದಾರೆ. ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ್ಯಾರು ಕುಮಾರಸ್ವಾಮಿಯವರಿಗೆ ಮೋಸ ಮಾಡಿದ್ದಾರೆ. ದೇವೇಗೌಡರ ಹೆಸರೇ ಳ್ತಿದ್ದವರು ಯಾರು ಎಲ್ಲಿ ಮೋಸ ಮಾಡಿದ್ದಾರೆಂದು ಈಗಾಗಲೇ ಚರ್ಚೆಗೆ ಬರುತ್ತಿದೆ. ಮಂಡ್ಯದಲ್ಲಿ…
ವಿದ್ಯುತ್ ಸ್ಪರ್ಶ: ಮೂವರು ಕಾರ್ಮಿಕರ ದಾರುಣ ಸಾವು
May 20, 2019ಮಡಿಕೇರಿ: ಕಾಫಿ ತೋಟದಲ್ಲಿ ಮರ ಕಪಾತು ನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಓರ್ವ ಮಹಿಳೆ ಸೇರಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿ, ಮತ್ತೋರ್ವ ಕಾರ್ಮಿಕ ಮಹಿಳೆ ಗಂಭೀರವಾಗಿ ಗಾಯಗೊಂಡ ದುರಂತ ನಾಪೋಕ್ಲು ಸಮೀಪದ ದೊಡ್ಡ ಪುಲಿ ಕೋಟು ಗ್ರಾಮದಲ್ಲಿ ಭಾನುವಾರ ನಡೆದಿದೆ. ಬಲ್ಲಮಾವಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡ ಪುಲಿಕೋಟು ಗ್ರಾಮದ ಮಾದೇಯಂಡ ಕುಂಞ್ಞಪ್ಪ ಎಂಬುವರ ಕಾಫಿತೋಟದಲ್ಲಿ ಮರ ಕಪಾತು ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕೂಲಿ ಕಾರ್ಮಿಕರಾದ ದಾಯನ ತಮ್ಮಯ್ಯ (45), ಅನಿಲ್ (44) ಹಾಗೂ…
ರಾಜಕಾರಣ ಜಾತೀಯತೆ ಸ್ವರೂಪ ಪಡೆದುಕೊಂಡಿದೆ
May 20, 2019ಮೈಸೂರು: ಜಾತ್ಯಾತೀತ ನೆಲೆಗಟ್ಟಿನಿಂದ ಕೂಡಿದ್ದ ಮೈಸೂರಿನ ರಾಜಕಾರಣ ಇತ್ತೀಚಿನ ದಿನ ಗಳಲ್ಲಿ ಜಾತೀಯತೆ ಸ್ವರೂಪ ಪಡೆದು ಕೊಂಡಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಷಾದಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಭಾನು ವಾರ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ `ಸಮುದಾಯದ ನಾಯಕರು’ ಹಾಗೂ `ಸಮಾಜಮುಖಿ ಶ್ರೀಸಾಮಾನ್ಯರು’ ಕೃತಿ ಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆ ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿದ ಹಲವು ನಾಯಕರು ಸೇವೆ ಸಲ್ಲಿಸಿದ್ದಾರೆ. ರಾಜ್ಯ ರಾಜಕೀಯಕ್ಕೆ ಪ್ರಮುಖ ನಾಯಕರನ್ನು ಕೊಡುಗೆ ನೀಡಿದ…
ಮೈಸೂರು-ಕೊಡಗು ಕ್ಷೇತ್ರ ಮತ ಎಣಿಕೆ:ವಾಹನ ಸಂಚಾರ, ನಿಲುಗಡೆ ನಿರ್ಬಂಧ
May 20, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದ ಸುತ್ತ ವಾಹನ ಸಂಚಾರ ಮತ್ತು ನಿಲುಗಡೆಯನ್ನು ನಿರ್ಬಂ ಧಿಸಲಾಗಿದೆ. ನಗರದ ವಾಲ್ಮೀಕಿ ರಸ್ತೆಯಲ್ಲಿರುವ ಮಹಾ ರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಕಟ್ಟಡ ದಲ್ಲಿ ನಡೆಯುತ್ತಿರುವ ಮತ ಎಣಿಕೆ ಕೇಂದ್ರದ ಬಳಿ ಸಾರ್ವ ಜನಿಕರು, ವಿವಿಧ ರಾಜಕೀಯ ಪಕ್ಷಗಳ ಬೆಂಬಲಿಗರು ಹಾಗೂ ಮತ ಎಣಿಕೆಯಲ್ಲಿ ತೊಡಗಿರುವ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತ ದೃಷ್ಟಿಯಿಂದ ಮತ ಎಣಿಕೆ…
ಬಲಮುರಿ: ಜಲ ಸಮಾಧಿ
May 20, 2019ಮೈಸೂರು:ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳೊಂದಿಗೆ ಬಲಮುರಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ಶನಿವಾರ ಸಂಜೆ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ದಿನಸಿ ವ್ಯಾಪಾರಿ ನಾಗರಾಜು ಮತ್ತು ಜ್ಯೋತಿ ದಂಪತಿ ಪುತ್ರ ಹೇಮಂತ್ (16) ಮೃತಪಟ್ಟ ದುರ್ದೈವಿ. ಬೇಲೂ ರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ತೇರ್ಗಡೆ ಹೊಂದಿದ್ದ ಈತ, ಶಾಲಾ ಶಿಕ್ಷಕರು ಹಾಗೂ ಸಹಪಾಠಿಗಳೊಂದಿಗೆ ಬಲಮುರಿಗೆ ಪ್ರವಾಸಕ್ಕೆ ಬಂದಿದ್ದ ವೇಳೆಯಲ್ಲಿ ನೀರಿನಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ…
ಮಹಾ ಮಹನೀಯರನ್ನು ಜಾತಿಗೆ ಸೀಮಿತಗೊಳಿಸುತ್ತಿರುವುದಕ್ಕೆ ಶಾಸಕ ರಾಮದಾಸ್ ಬೇಸರ
May 20, 2019ಮೈಸೂರು: ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮಹ ನೀಯರನ್ನು ಜಾತಿಗಳಿಗೆ ಸೀಮಿತಗೊಳಿಸ ಲಾಗಿದೆ ಎಂದು ಶಾಸಕ ಎಸ್.ಎ.ರಾಮ ದಾಸ್ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಶ್ರೀ ಶೃಂಗೇರಿ ಶಂಕರ ಮಠದ ಆವರಣದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ `ಶ್ರೀ ಶಂಕರ ಜಯಂತಿ-ತತ್ವ ಜ್ಞಾನಿಗಳ ದಿನಾಚರಣೆ’ ಉದ್ಘಾಟಿಸಿ ಅವರು ಮಾತ ನಾಡಿದರು. ಪ್ರಸ್ತುತ ಇಡೀ ಜಗತ್ತು ನೆಮ್ಮದಿ ಗಾಗಿ ಹುಡುಕಾಟ ನಡೆಸುತ್ತಿದೆ. ಸಾರ್ಥಕ ಹಾಗೂ ನೆಮ್ಮದಿ ಬದುಕಿಗೆ ಅಗತ್ಯವಾದ ವಿಚಾರ ಧಾರೆಯನ್ನು ಶ್ರೀ ಶಂಕರಾಚಾರ್ಯರು ಅಂದೇ ವಿಶ್ವಕ್ಕೆ ನೀಡಿದ್ದಾರೆ….
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
May 20, 2019ಮೈಸೂರು: ನಂಜನಗೂಡು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತದ ವತಿಯಿಂದ ಮೇ 21ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ 66/11 ಕೆ.ವಿ ಹುಲ್ಲಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಗೂ ಮೇ 21ರಂದೇ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ 66/11 ಕೆ.ವಿ ದೇವನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ, 66/11 ಕೆ.ವಿ ಸುತ್ತೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ, 66/11 ಕೆ.ವಿ ತಲಕಾಡು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮತ್ತು 66/11 ಕೆ.ವಿ ಪರಿಣಮಿಪುರ ವಿದ್ಯುತ್…










