ರಾಜಕಾರಣ ಜಾತೀಯತೆ ಸ್ವರೂಪ ಪಡೆದುಕೊಂಡಿದೆ
ಮೈಸೂರು

ರಾಜಕಾರಣ ಜಾತೀಯತೆ ಸ್ವರೂಪ ಪಡೆದುಕೊಂಡಿದೆ

May 20, 2019

ಮೈಸೂರು: ಜಾತ್ಯಾತೀತ ನೆಲೆಗಟ್ಟಿನಿಂದ ಕೂಡಿದ್ದ ಮೈಸೂರಿನ ರಾಜಕಾರಣ ಇತ್ತೀಚಿನ ದಿನ ಗಳಲ್ಲಿ ಜಾತೀಯತೆ ಸ್ವರೂಪ ಪಡೆದು ಕೊಂಡಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಷಾದಿಸಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಭಾನು ವಾರ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ `ಸಮುದಾಯದ ನಾಯಕರು’ ಹಾಗೂ `ಸಮಾಜಮುಖಿ ಶ್ರೀಸಾಮಾನ್ಯರು’ ಕೃತಿ ಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆ ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿದ ಹಲವು ನಾಯಕರು ಸೇವೆ ಸಲ್ಲಿಸಿದ್ದಾರೆ. ರಾಜ್ಯ ರಾಜಕೀಯಕ್ಕೆ ಪ್ರಮುಖ ನಾಯಕರನ್ನು ಕೊಡುಗೆ ನೀಡಿದ ಅಪರೂಪದ ಜಿಲ್ಲೆ ಮೈಸೂರು ಜಿಲ್ಲೆ ಯಾಗಿದೆ. ಮಾಜಿ ಮುಖ್ಯಮಂತ್ರಿ ದೇವ ರಾಜ ಅರಸ್ ತಮ್ಮ ಆಡಳಿತಾವಧಿಯಲ್ಲಿ ಬಡವರು, ಶೋಷಿತರ ಪರ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದಾರೆ. ಇದು ವರೆಗೂ ಜಾತಿ ರಾಜಕಾರಣದಿಂದ ನಾಯಕರನ್ನು ಗುರುತಿಸದ ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜಾತೀ ಯತೆ ಸೋಂಕು ಪಸರಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ಸಮುದಾಯದ ನಾಯಕರು ಪುಸ್ತಕದಲ್ಲಿ ಮಾಜಿ ಸಚಿವ ಎನ್.ರಾಚಯ್ಯ ಅವ ರಿಂದ ಆರಂಭವಾಗಿ ಹೊಸದಾಗಿ ಆಯ್ಕೆ ಯಾದ ಶಾಸಕರವರೆಗೂ ಹಲವಾರು ಹೆಸರನ್ನು ಪ್ರಸ್ತಾಪಿಸಿದ್ದಾರೆ. ಯುವ ಪೀಳಿಗೆ ನಾಯಕರವರೆಗೂ ಪುಸ್ತಕದಲ್ಲಿ ವಿವರಣೆ ನೀಡಲಾಗಿದೆ. ಒಂದು ಸಾವಿರ ಮತದಾರ ರಿಲ್ಲದ ಸಮುದಾಯವಾಗಿರುವ ದೇವಾಂಗ ಜನಾಂಗಕ್ಕೆ ಸೇರಿದ್ದ ಶಂಕರಯ್ಯ ಅವರನ್ನು ಸಂಸದರಾಗಿ ಆಯ್ಕೆ ಮಾಡಿದ ಜಿಲ್ಲೆ ಇದಾಗಿದೆ. ಹಲವಾರು ಕಾಲಘಟ್ಟದಲ್ಲಿ ಬಂದ ನಾಯಕರ ಬಗ್ಗೆಯೂ ಪ್ರಸ್ತಾಪವಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 13 ಬಜೆಟ್ ಮಂಡಿಸಿದ್ದು, ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ 13 ಚುನಾವಣೆ ಎದುರಿಸಿ ದಾಖಲೆ ನಿರ್ಮಾಣ ಮಾಡಿರುವುದು ಹಾಗೂ ಹಲವು ಏಳು ಬೀಳುಗಳ ಪ್ರಸ್ತಾಪ ಪುಸ್ತಕದಲ್ಲಿದೆ ಎಂದು ವಿವರಿಸಿದರು.

`ಸಮುದಾಯದ ನಾಯಕರು’ ಪುಸ್ತಕ ಕುರಿತು ಶಾಸಕ, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಮಾತ ನಾಡಿ, ಕರ್ನಾಟಕವನ್ನು ಕಟ್ಟಿ ಬೆಳೆಸುವಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆ ಹಲವು ನಾಯಕರು ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಟಿಪ್ಪು ಸುಲ್ತಾನ್ ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮ ಯ್ಯರ ಆಡಳಿತದವರೆಗೂ ಪುಸ್ತಕದಲ್ಲಿ ಪ್ರಸ್ತಾಪ ಮಾಡಲಾಗಿದೆ. ದೇವರಾಜ ಅರಸು ಅಧಿಕಾರದಲ್ಲಿದ್ದಾಗ ದೇಶದಲ್ಲಿಯೇ ಮೊದಲ ಬಾರಿಗೆ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಸಾವಿರಾರು ದಲಿತ ಕುಟುಂಬ ಗಳಿಗೆ ನೆರವಾಗಿದ್ದರು. ಈ ವೇಳೆ ಈ ಭಾಗದ ಮತ್ತೊಬ್ಬ ಮಹಾನ್ ನಾಯಕ ರಾದ ರಾಚಯ್ಯ ಅವರು ಮಂತ್ರಿಯಾಗಿದ್ದ ವಿಧಾನಸಭೆಯಲ್ಲಿಯೇ ಭೂ ಸುಧಾರಣಾ ಕಾಯ್ದೆಯಡಿಯಲ್ಲಿ ಭೂಮಿ ಪಡೆದ ದಲಿತ ಕುಟುಂಬಗಳಿಗೆ ಯಾರಾದರೂ ತೊಂದರೆ ನೀಡಿದರೆ ನನ್ನ ಮನೆ ನಂಬರ್ 22222 ಹಾಗೂ ಕಚೇರಿ ನಂಬರ್ 444 444 ಸಂಖ್ಯೆಗೆ ಕರೆ ಮಾಡಿದರೆ ನಿಮ್ಮನೆ ದೇವರಿಗಿಂತ ಮೊದಲು ಪ್ರತ್ಯಕ್ಷನಾಗುವು ದಾಗಿ ಹೇಳಿಕೆ ನೀಡಿದ್ದರು. ಆ ಹೇಳಿಕೆ ಯಿಂದ ನಾನು ಒಳಗೊಂಡಂತೆ ಹಲವು ಮಂದಿ ಸಚಿವರಾಗಿದ್ದ ರಾಚಯ್ಯ ಅವರಿಗೆ ಕರೆ ಮಾಡಿದ್ದೆವು. ಅದಕ್ಕೆ ಸ್ಪಂದಿಸಿ ನಮ್ಮ ಸಮಸ್ಯೆ ಈಡೇರಿಸಿದ್ದರು ಎಂದು ವಿಶ್ವ ನಾಥ್ ವಿವರಿಸಿದರು. ಇದೇ ವೇಳೆ ಸಮಾಜ ಮುಖಿ ಶ್ರೀಸಾಮಾನ್ಯರು ಕೃತಿ ಕುರಿತು ಅಂಕಣಕಾರ ಗುಬ್ಬಿಗೂಡು ರಮೇಶ್ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಮೈಸೂರು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ರೋಹನ್ ವಿ.ಗಂಗಡ್ಕಾರ್(ವಕೀಲ ಲಾಗೈಡ್ ವೆಂಕಟೇಶ್ ಪುತ್ರ) ಅವರನ್ನು ಮುಖ್ಯ ಮಂತ್ರಿ ಕುಮಾರಸ್ವಾಮಿ ಸನ್ಮಾನಿಸಿದರು.

ಕಬ್ಬು ಬೆಳೆಗಾರರಿಂದ ಸಿಎಂ ಭೇಟಿ; ಕಬ್ಬಿನ ಬಾಕಿ  ಪಾವತಿ, ರೈತರ ಮೇಲಿನ ಕೇಸ್ ವಾಪಸ್ಸಿಗೆ ಮನವಿ
ಮೈಸೂರು: ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಬಾಕಿ ಹಣ ಬರದೇ ಬರಗಾಲದ ಸಂದರ್ಭದಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಸರ್ಕಾರ ಈ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳ ದಿರುವುದರಿಂದ ರೈತರು ಇನ್ನಷ್ಟು ತೊಂದ ರೆಗೆ ಒಳಗಾಗಿದ್ದಾರೆ ಎಂದು ಕಬ್ಬು ಬೆಳೆ ಗಾರರು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಇಂದಿಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ರಾಜ್ಯಾದ್ಯಂತ ಕಬ್ಬು ಬೆಳೆಗಾರ ರೈತ ರಿಗೆ ಸಕ್ಕರೆ ಕಾರ್ಖಾನೆಗಳಿಂದ ರೂ. 3000 ಕೋಟಿಗೂ ಹೆಚ್ಚು ಕಬ್ಬಿನ ಬಾಕಿ ಹಣ ಬರಬೇಕಾಗಿದೆ. ನಾಲ್ಕೈದು ತಿಂಗಳಿಂ ದಲೂ ರೈತರಿಗೆ ಹಣ ಪಾವತಿಸದೆ ವಿಳಂಬ ಮಾಡುತ್ತಿರುವುದು ಬರಗಾಲದಿಂದ ತತ್ತ ರಿಸುತ್ತಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿರು ವುದರಿಂದ ಸಮಸ್ಯೆ ಮತ್ತಷ್ಟು ಕಗ್ಗಂಟಾ ಗುತ್ತಿದೆ. ಕೇಂದ್ರ ಸರ್ಕಾರ ಸಕ್ಕರೆ ಬೆಲೆ ಯನ್ನು ರೂ. 29ರಿಂದ ರೂ.31ಕ್ಕೆ ಕನಿಷ್ಠ ಮಾರಾಟ ದರ ಏರಿಕೆ ಮಾಡಿರುವುದು ಸಕ್ಕರೆ ಕಾರ್ಖಾನೆಗಳಿಗೆ ಲಾಭ ಬರುವಂತಾ ಗಿದ್ದರೂ ಕಬ್ಬು ಸರಬರಾಜು ಮಾಡಿದ ರೈತ ರಿಗೆ ಹಣ ಪಾವತಿಸದೇ ವಿಳಂಬ ಮಾಡುತ್ತಿ ರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು. ಬರಗಾಲದ ಸಮಸ್ಯೆಗಳಿಂದ ಜನರಿಗೆ ಕುಡಿಯುವ ನೀರು, ಜಾನುವಾರು ಗಳಿಗೆ ಮೇವಿಗಾಗಿ ತೀವ್ರ ಸಂಕಷ್ಟ ಪಡುತ್ತಿ ದ್ದಾರೆ. ಬರ ಪರಿಹಾರ ವೀಕ್ಷಣೆಗೆ ಮುಖ್ಯ ಮಂತ್ರಿಗಳೇ ಪ್ರವಾಸ ಮಾಡಿ ಸಮಸ್ಯೆಗಳನ್ನು ಅರಿತು ಪರಿಹಾರ ಕ್ರಮಗಳನ್ನು ಕೈಗೊಳ್ಳ ಬೇಕು. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ರೈತರ ಮೇಲಿನ ಹೋರಾಟದ ಮೊಕದ್ದಮೆಗಳನ್ನು ವಾಪಸ್ಸು ಪಡೆಯದೇ ನಿರ್ಲಕ್ಷ್ಯತನ ತೋರುತ್ತಿರು ವುದು ಸರಿಯಲ್ಲ. ಮುಖ್ಯಮಂತ್ರಿಗಳೇ ಅಧಿ ಕಾರಕ್ಕೆ ಬಂದಾಗ ಮೊಕದ್ದಮೆ ವಾಪಸ್ಸು ಪಡೆಯುವ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದರೂ ಇನ್ನೂ ಜಾರಿಯಾಗಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ತಿಂಗಳ 27ರೊಳಗಾಗಿ ರೈತರ ಮೊಕ ದ್ದಮೆ ವಾಪಸ್ಸು ಪಡೆಯಲು ಸಂಪುಟ ಸಭೆಗೆ ವರದಿ ನೀಡಬೇಕೆಂದು ಕೇಳಲಾ ಗಿದೆ. 15 ದಿನಗಳಲ್ಲಿ ರೈತರ ಎಲ್ಲಾ ಮೊಕ ದ್ದಮೆಗಳನ್ನು ವಾಪಸ್ಸು ಪಡೆಯಲು ಕ್ರಮ ಕೈಗೊಳ್ಳುವುದಾಗಿ ಕುಮಾರಸ್ವಾಮಿ ರೈತ ರಿಗೆ ಭರವಸೆ ನೀಡಿದರು.

ರೈತ ಮುಖಂಡರ ನಿಯೋಗದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘ ಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವ ರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ತಾಲೂಕು ಅಧ್ಯಕ್ಷ ಬಿದರಹಳ್ಳಿ ಮಾದಪ್ಪ, ವರಕೋಡು ಕೃಷ್ಣೇಗೌಡ, ಮುಖಂಡರಾದ ಹೆಗ್ಗೂರು ರಂಗರಾಜ್, ಗಳಿಗರಹುಂಡಿ ವೆಂಕ ಟೇಶ್, ಅಂಬಳೆ ಮಂಜುನಾಥ್, ಪಿ. ರಾಜು, ಕೃಷ್ಣಪ್ಪ, ಮುದ್ದಲಿಂಗೇಗೌಡ ಇನ್ನಿತರರು ಉಪಸ್ಥಿತರಿದ್ದರು.

Translate »