ಜೆಡಿಎಸ್ ನಾಯಕರಿಂದಲೂ ಸುಮಲತಾಗೆ ಬೆಂಬಲನರೇಂದ್ರಸ್ವಾಮಿ ಹೊಸ ಬಾಂಬ್
ಮೈಸೂರು

ಜೆಡಿಎಸ್ ನಾಯಕರಿಂದಲೂ ಸುಮಲತಾಗೆ ಬೆಂಬಲನರೇಂದ್ರಸ್ವಾಮಿ ಹೊಸ ಬಾಂಬ್

May 20, 2019

ಮಂಡ್ಯ: 2019ರ ಲೋಕ ಸಭಾ ಚುನಾ ವಣೆಯಲ್ಲಿ ಜೆಡಿಎಸ್‍ನ ಕೆಲ ನಾಯಕರು ಸಹ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಕೊಟ್ಟಿದ್ದು, ಎಲ್ಲದಕ್ಕೂ ಸಾಕ್ಷಿ ಇದೆ. ಫಲಿತಾಂಶ ಪ್ರಕಟವಾದ ಮುಂದಿನ ದಿನಗಳಲ್ಲಿ ಇದೆಲ್ಲವು ಚರ್ಚೆಗೆ ಬರಲಿವೆ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೊಸಬಾಂಬ್ ಸಿಡಿಸಿದ್ದಾರೆ.

ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ್ಯಾರು ಕುಮಾರಸ್ವಾಮಿಯವರಿಗೆ ಮೋಸ ಮಾಡಿದ್ದಾರೆ. ದೇವೇಗೌಡರ ಹೆಸರೇ ಳ್ತಿದ್ದವರು ಯಾರು ಎಲ್ಲಿ ಮೋಸ ಮಾಡಿದ್ದಾರೆಂದು ಈಗಾಗಲೇ ಚರ್ಚೆಗೆ ಬರುತ್ತಿದೆ. ಮಂಡ್ಯದಲ್ಲಿ ಏನೇನು ನಡೆದಿದೆ ಎಲ್ಲವು ಮುಂದಿನ ದಿನಗಳಲ್ಲಿ ಗೊತ್ತ್ತಾಗಲಿದೆ ಎಂದರು.

ಉಚ್ಛಾಟಿತ ಕೆಪಿಸಿಸಿ ಸದಸ್ಯ ಇಂಡು ವಾಳು ಸಚ್ಚಿದಾನಂದ, ಕೈ ಪಕ್ಷದ ಪರಾಜಿತ ನಾಯಕರು ಸುಮಲತಾ ಪರ ಕೆಲಸ ಮಾಡಿದ್ದಾರೆಂಬ ವಿಚಾರ ವಾಗಿ ಆರೋಪ ಮಾಡುವುದಕ್ಕೂ ದಾಖಲೆಗಳು ಬೇಕು ಅಥವಾ ಏನಾದ್ರು ಹೇಳಿಕೆ ಕೊಡೋದಕ್ಕೂ ದಾಖಲೆ ಬೇಕು. ನಾನು ತಟಸ್ಥನಾ ಗಿದ್ದೆ. ಈ ಬಗ್ಗೆ ನಮ್ಮ ಕಾಂಗ್ರೆಸ್ ವರಿಷ್ಠರಿಗೂ ಸ್ಪಷ್ಟಪಡಿಸಿದ್ದೇನೆ. ಅವರ ವೈಯಕ್ತಿಕ ವಿಚಾರಗಳಿಗೆ ನಾನು ಬೆಲೆ ಕೊಡುವುದಿಲ್ಲ ಎಂದರು.

ಲೋಕಸಭಾ ಚುನಾವಣೆಯ ತೀರ್ಪು ಜನರ ತೀರ್ಪಾಗಿರುತ್ತದೆ ಎಂದ ಅವರು, ಸುಮಲತಾ ಪರ ಕೆಲಸ ಮಾಡಿಲ್ಲ ಅಂತ ಹೇಳುವುದಾದರೆ ಮಹದೇಶ್ವರನ ಮೇಲೆ ಆಣೆ ಮಾಡಿ ಎಂದು ಶಾಸಕ ಅನ್ನದಾನಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಪಿ.ಎಂ.ನರೇಂದ್ರಸ್ವಾಮಿ, ಯೋಗ್ಯರು ಮಾತನಾಡಿದಾಗ ಮಾತ್ರ ಉತ್ತರ ಕೊಡುತ್ತೇನೆ, ನಾನು ಅಂತಹವರಿಗೆ ಉತ್ತರ ಕೊಡುವ ಆಗತ್ಯವಿಲ್ಲ ಎಂದು ತಿಳಿಸಿದರು.

ನನ್ನ ಪಕ್ಷದ ಬಗ್ಗೆ ಮತ್ತು ನನ್ನ ತೀರ್ಮಾನದ ಬಗ್ಗೆಯಾಗಲಿ ಪ್ರಶ್ನೆ ಮಾಡುವುದಕ್ಕೆ ಆತನಿಗೆ ಯಾವುದೇ ಅರ್ಹತೆ ಇಲ್ಲ. ನನಂತೂ ಸ್ವಷ್ಟಪಡಿಸಿದ್ದೇನೆ, ನಾನೊಬ್ಬ ಸ್ವಾಭಿಮಾನಿ ಅಂತ. ಸ್ವಾಭಿಮಾನಕ್ಕೆ ಧÀಕ್ಕೆ ತರುವಂತಹ ಯಾವುದೇ ಕೆಲಸ ಮಾಡಲ್ಲ ಎಂದು ವಿವರಿಸಿದರು.

ಜೆಡಿಎಸ್ 37 ಸ್ಥಾನ ಪಡೆದಿದ್ದರೂ, ಕಾಂಗ್ರೆಸ್ ವರಿಷ್ಠ ರಾಹುಲ್‍ಗಾಂಧಿ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಬಾರದು ಎಂಬ ಉದೇಶದಿಂದ ಮುಖ್ಯಮಂತ್ರಿ ಸ್ಥಾನವನ್ನು ಕುಮಾರಸ್ವಾಮಿಗೆ ನೀಡಿದ್ದರು. ಈಗ ಕಾಂಗ್ರೆಸ್‍ನವರು ಸಹಕಾರ ನೀಡುತ್ತಿಲ್ಲ ಎಂಬ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದ ಅವರು, ನಾನು ಸಿದ್ದರಾಮಯ್ಯನವರ ಅಭಿಮಾನಿಯಾಗಿದ್ದು, ಅವರ ಅಡಳಿತ ಅವಧಿಯಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಸಿದ್ದರಾಮಯ್ಯರವರು ಮತ್ತೊಮ್ಮೆ ಮುಖ್ಮಮಂತ್ರಿಯಾಗಬೇಕೆಂಬುದು ಜನರ ಕೂಗಾಗಿದೆ ಅದರಲ್ಲಿ ನಾನು ಒಬ್ಬನಾಗಿದ್ದೇನೆಂದು ಹೇಳಿದರು.

Translate »