ಬಿರುಗಾಳಿ-ಮಳೆ: ಇಬ್ಬರಿಗೆ ಗಾಯ, ಅಂಗಡಿಗಳಿಗೆ ಹಾನಿ
ಮೈಸೂರು

ಬಿರುಗಾಳಿ-ಮಳೆ: ಇಬ್ಬರಿಗೆ ಗಾಯ, ಅಂಗಡಿಗಳಿಗೆ ಹಾನಿ

May 22, 2019

ಮೈಸೂರು: ಮೈಸೂರಿನ ಕೆಲವೆಡೆ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಐದಾರು ಅಂಗಡಿಗಳಿಗೆ ಹಾನಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮಂಗಳವಾರ ಸಂಜೆ ಮೈಸೂರಿನ ಕೆಲ ಬಡಾವಣೆಗಳು ಹಾಗೂ ಹೊರ ವಲಯದಲ್ಲಿ ಮಳೆ ಸುರಿದಿದೆ. ಹೊಸ ಹುಂಡಿ ರಿಂಗ್‍ರೋಡ್‍ನಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ಐದಾರು ಅಂಗಡಿಗಳ ಮೇಲ್ಛಾವಣಿ ಶೀಟ್‍ಗಳು ಹಾರಿ ಹೋಗಿವೆ. ಒಂದೆರಡು ಅಂಗ ಡಿಯ ಗೋಡೆಗೂ ಹಾನಿಯಾಗಿದೆ. ಅಂಗಡಿಗಳ ಒಳಗಿದ್ದ ವಸ್ತುಗಳೆಲ್ಲಾ ಮಳೆಯಲ್ಲಿ ತೋಯ್ದು, ನಷ್ಟವಾಗಿದೆ. ಅಲ್ಲದೆ ಅಂಗಡಿಯೊಂದರ ಬಳಿ ನಿಂತಿದ್ದ ಇಬ್ಬರಿಗೆ ಶೀಟ್ ಬಡಿದು ಗಾಯ ಗೊಂಡಿದ್ದಾರೆಂದು ತಿಳಿದುಬಂದಿದೆ.

ಮೈಸೂರು ನಗರದ ಜೆ.ಪಿ.ನಗರ ಸಾಯಿಬಾಬಾ ದೇವಾಲಯ ಹಾಗೂ ಕವಿತಾ ಬೇಕರಿ ಬಳಿ ಮರದ ಕೊಂಬೆ ಮುರಿದು ಬಿದ್ದಿದ್ದು, ಪಾಲಿಕೆಯ ಅಭಯ ತಂಡದವರು ತೆರವು ಮಾಡಿದ್ದಾರೆ. ಕೆ.ಸಿ.ನಗರ, ಜೆ.ಪಿ.ನಗರ, ಸಿದ್ಧಾರ್ಥ ನಗರ ಸೇರಿದಂತೆ ವಿವಿಧ ಬಡಾವಣೆ ಗಳ ವಿದ್ಯುತ್ ಸಂಪರ್ಕ ಕಡಿತ ಗೊಂಡು, ಸಾರ್ವಜನಿಕರು ಪರದಾ ಡುವಂತಾಗಿತ್ತು. ತಗ್ಗು ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗಿತ್ತು. ಮಳೆಯ ಪ್ರಮಾಣ ಕಡಿಮೆಯಿದ್ದ ಕಾರಣ ಹೆಚ್ಚಿನ ತೊಂದರೆಯಾಗಿಲ್ಲ.

Translate »