ಮತ ಎಣಿಕೆ ವಿಧಾನದಲ್ಲಿ ಬದಲಾವಣೆ: ಫಲಿತಾಂಶ ಪ್ರಕಟ ವಿಳಂಬ
ಹಾಸನ

ಮತ ಎಣಿಕೆ ವಿಧಾನದಲ್ಲಿ ಬದಲಾವಣೆ: ಫಲಿತಾಂಶ ಪ್ರಕಟ ವಿಳಂಬ

May 22, 2019
  • ಸಂಜೆ ಹೊತ್ತಿಗೆ ಅಧಿಕೃತ ಫಲಿತಾಂಶ ಪ್ರಕಟ,
  • ಭದ್ರತೆಗೆ 1200 ಸಿಬ್ಬಂದಿ ನೇಮಕ,
  • ನಾಳೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ

ಹಾಸನ: ಮತ ಎಣಿಕೆ ವಿಧಾನದಲ್ಲಿ ಬದಲಾವಣೆ ಆಗಿರುವು ದರಿಂದ ಈ ಬಾರಿ ಲೋಕಸಭಾ ಚುನಾ ವಣೆಯ ಫಲಿತಾಂಶ ಪ್ರಕಟವಾಗುವುದು ತಡವಾಗುತ್ತದೆ ಎಂದು ಜಿಲ್ಲಾ ಚುನಾ ವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಮತ ಎಣಿಕೆ ಕೇಂದ್ರವಾಗಿರುವ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಸಿದ್ಧತೆಗಳ ಕುರಿತು ಪರಿ ಶೀಲನೆ ನಡೆಸಿದ ಅವರು ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದರು.

ಪ್ರತಿ ವಿಧಾನಸಭಾ ಕ್ಷೇತ್ರದ 5 ಮತ ಗಟ್ಟೆಗಳ ವಿವಿಪ್ಯಾಟ್ ಎಣಿಕೆ ನಡೆಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಫಲಿತಾಂಶ ಪ್ರಕಟಿಸಲಾಗುವುದು. ಅಂಚೆ ಮತಗಳ ಎಣಿಕೆ ಮೊದಲು ಪೂರ್ಣ ಗೊಳ್ಳುತ್ತದೆ. ನಂತರ ವಿದ್ಯುನ್ಮಾನ ಮತ ಯಂತ್ರಗಳ ಎಣಿಕೆ ನಡೆಸಲಾಗುವುದು. ಆ ಬಳಿಕ ಲಾಟರಿ ಮೂಲಕ ವಿವಿಪ್ಯಾಟ್ ಆಯ್ಕೆ ಮಾಡಿ ಎಣಿಕೆ ಆರಂಭಿಸಲಾಗುತ್ತದೆ. ವಿದ್ಯುನ್ಮಾನ ಯಂತ್ರಗಳ ಎಣಿಕೆಯಲ್ಲೇ ಯಾವ ಅಭ್ಯರ್ಥಿ ಮುನ್ನಡೆ ಸಾಧಿಸಿ ದ್ದಾರೆಂಬುದನ್ನು ಅರಿಯಬಹುದು. ಆದರೆ, ಅಧಿಕೃತ ಘೋಷಣೆಗಾಗಿ ಸಂಜೆವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದರು.

ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಪ್ರತ್ಯೇಕ ಕೊಠಡಿ ತೆರೆದಿದ್ದು, ತಲಾ 14 ಟೇಬಲ್ ಅಳವಡಿಸಲಾಗಿದೆ. ಅಂಚೆ ಮತ ಪತ್ರಗಳ ಎಣಿಕೆಗಾಗಿ 10 ಟೇಬಲ್ ಜೋಡಿಸಲಾ ಗಿದೆ. ಪ್ರತಿ ಟೇಬಲ್‍ಗೆ ಮೂವರು ಅಧಿಕಾರಿ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ವೀಕ್ಷಕರ ಟೇಬಲ್ ಹತ್ತಿರ ಇಬ್ಬರು ಹೆಚ್ಚುವರಿ ಮೈಕ್ರೋ ಅಬ್ಸರ್‍ವರ್‍ಗಳನ್ನು ನೇಮಿಸ ಲಾಗಿದ್ದು, ಒಟ್ಟಾರೆ 408 ಸಿಬ್ಬಂದಿ, 8 ಜನ ಎ.ಆರ್.ಒ, ತಹಸೀಲ್ದಾರ್‍ಗಳನ್ನು ಒಳಗೊಂಡಿರುತ್ತದೆ ಎಂದರು.

ಸುವಿಧ ಅಫ್ಲಿಕೇಷನ್ ಮೂಲಕ ಮೇ 23 ರಂದು ಹೇಗೆ ಡೇಟಾ ಎಂಟ್ರಿ ಮಾಡ ಬೇಕೆಂದು ತಿಳಿಸಲಾಗುತ್ತಿದೆ. ಇಂಟ ರ್ನೆಟ್, ಟೆಲಿಪೋನ್ ಕನೆಕ್ಷನ್, ಪವರ್ ಲೋಡಿಂಗ್‍ಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸಲಾಗು ತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಮಾತನಾಡಿ ಮೇ 23ರಂದು ಮತ ಎಣಿಕೆ ಹಿನ್ನೆಲೆ ಸ್ಟ್ರಾಂಗ್ ರೂಂ, ಇವಿಎಂ ಸಾಗಾಟ ಮತ್ತು ಕೌಂಟಿಂಗ್ ಹಾಲ್‍ಗಳಿಗೆ ಪ್ಯಾರಾ ಮಿಲಿಟರಿಗಳನ್ನು ನಿಯೋಜಿಸಲಾಗಿದೆ. ಇವರ ಸಮಾಕ್ಷಮ ಎಲ್ಲಾ ರೀತಿಯ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ ಎಂದು ತಿಳಿಸಿದರು.

ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಕೌಂಟಿಂಗ್ ಸೆಂಟರ್‍ಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಇದೆ. ರಕ್ಷಣೆ ದೃಷ್ಟಿಯಿಂದ 1200 ಸಿಬ್ಬಂದಿಗಳ ನೇಮಕವಾಗಿದೆ. ಅಂದು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯ ಲ್ಲಿದ್ದು, ರಾಜಕೀಯ ಪ್ರೇರಿತವಾದ ಮೆರವ ಣಿಗೆಗಳು ನಡೆಯುವಂತಿಲ್ಲ, ಹಾಗೂ ಮದÀ್ಯಪಾನ ನಿಷೇಧವಿರುವುದು ಎಂದರು.

ಮತ ಎಣಿಕೆ ದಿನದಂದು ಇಲ್ಲಿಗೆ ಬರುವ ಎಲ್ಲಾ ಅಧಿಕಾರಿಗಳೂ, ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜೆಂಟರ್ ಇನ್ನಿತರ ಸದಸ್ಯ ರನ್ನು ಡೈರಿ ಸರ್ಕಲ್‍ನಿಂದ ಚುನಾವಣೆ ಎಣಿಕೆ ಒಳಗಡೆ ಬರುವವರೆಗೆ 3 ಕಡೆಯಲ್ಲಿ ಪರಿಶೀಲಿಸಲಾಗುವುದು. ಪ್ಯಾರಾ ಮಿಲಿಟರ್ ನೇತೃತ್ವದಲ್ಲಿ ಈ ಪರಿಶೀಲನೆ ವ್ಯವಸ್ಥೆ ನಡೆಯುವುದು ಎಂದು ತಿಳಿಸಿದರು.

ಇನ್ನೂ 123 ಪ್ರದೇಶಗಳನ್ನು ಸೂಕ್ಷ್ಮ ಸ್ಥಳಗಳೆಂದು ಗುರುತಿಸಿದ್ದು ಅವುಗಳಿಗೆ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಈ ಗ್ರಾಮಗಳಲ್ಲಿ ಯಾವುದೇ ರೀತಿಯ ಅಹಿತ ಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದರು.

ಮತ ಎಣಿಕೆ ದೃಶ್ಯಾವಳಿ ಚಿತ್ರೀಕರಣ ಕ್ಕಾಗಿ ದೃಶ್ಯ ಮಾಧ್ಯಮದ ಕ್ಯಾಮರಾಮನ್ ಗಳು ಎಣಿಕೆ ಕೇಂದ್ರದೊಳಗೆ ಪ್ರವೇಶಿಸು ವಂತಿಲ್ಲ. ಕೊಠಡಿಯ ದ್ವಾರದಲ್ಲೇ ಹಳದಿ ಬಣ್ಣದ ಗೆರೆ ಹಾಕಿದ್ದು, ಅಲ್ಲಿಯೇ ನಿಂತು ಚಿತ್ರೀಕರಣ ಮಾಡಿಕೊಳ್ಳಬೇಕು. ಆದರೆ ಇದಕ್ಕೂ ನೋಡಲ್ ಅಧಿಕಾರಿಗಳಾದ ವಿನೋದ್‍ಚಂದ್ರ ಹಾಗೂ ರೂಪಾಶೆಟ್ಟಿ ಅವರನ್ನು ಜತೆಗೆ ಕರೆತರಬೇಕು ಎಂಬ ಕಟ್ಟಪ್ಪಣೆಯನ್ನು ಚುನಾವಣಾ ಆಯೋಗ ಹೊರಡಿಸಿದೆ ಎಂದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ಎಲ್.ವೈಶಾಲಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ನಂದಿನಿ, ಎಲ್ಲಾ ತಾಲೂಕು ತಹಸೀಲ್ದಾರರು ಹಾಜರಿದ್ದರು.

Translate »