ಮಕ್ಕಳನ್ನು ಶಾಲಾ ವಾಹನದಲ್ಲಿ ಕಳುಹಿಸಲು ಸಲಹೆ
ಹಾಸನ

ಮಕ್ಕಳನ್ನು ಶಾಲಾ ವಾಹನದಲ್ಲಿ ಕಳುಹಿಸಲು ಸಲಹೆ

May 22, 2019

ಅರಸೀಕೆರೆ: ಪೋಷಕರು ಎಚ್ಚೆತ್ತು ತಮ್ಮ ಮಕ್ಕಳನ್ನು ಶಾಲಾ ವಾಹನ ಗಳಲ್ಲೇ ಕಳುಹಿಸುವಲ್ಲಿ ಮುಂದಾಗಬೇಕು. ಅಪಘಾತಗಳು ಸಂಭವಿಸಿದ ಬಳಿಕ ಪಶ್ಚಾ ತ್ತಾಪ ಪಡುವುದಕ್ಕಿಂತ ಅಪಘಾತಗಳು ಸಂಭವಿಸಿದಂತೆ ಮುಂಜಾಗೃತಾ ಕ್ರಮವಹಿ ಸುವುದು ಜಾಣತನ ಎಂದು ಬಾಣಾವರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅರುಣ್‍ಕುಮಾರ್ ಸಲಹೆ ನೀಡಿದರು.

ಪಟ್ಟಣದ ಬಿಆರ್‍ಸಿ ಕಚೇರಿ ಆವರಣ ದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಾಲಾ ವಿದ್ಯಾರ್ಥಿಗಳನ್ನು ಸರಕು ಸಾಗಾಣಿಕೆ ವಾಹನದಲ್ಲಿ ಶಾಲೆಗೆ ಕರೆದೊಯ್ಯುವು ದನ್ನು ನಿಷೇಧಿಸುವ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ಹಾಗೂ ಪೋಷಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಮಕ್ಕಳನ್ನು ಇಂತಹÀ ಶಾಲೆಯಲ್ಲೇ ಓದಿಸಬೇಕು ಎಂದು ಆಸೆ ಪಡುವ ಪೋಷ ಕರು ಮಕ್ಕಳು ಶಾಲೆಗೆ ಹೋಗುವ ವಾಹ ನದ ಬಗ್ಗೆ ಹೆಚ್ಚು ಜಾಗೃತೆ ಹೊಂದಿರ ಬೇಕು. ಪೋಷಕರು ಸೇರಿದಂತೆ ಆಯಾ ವಿದ್ಯಾ ಸಂಸ್ಥೆಗಳು ಎಚ್ಚರವಹಿಸಿಕೊಳ್ಳದೇ ಇರುವುದರಿಂದ ಕೆಲವು ಬಾರಿ ಅಪಘಾತ ಗಳು ಸಂಭವಿಸಿ ಸಾವು ನೋವಿಗೆ ಕಾರಣ ವಾಗುತ್ತಿರುವ ಪ್ರಕರಣಗಳನ್ನು ಕಾಣುತ್ತಿ ದ್ದೇವೆ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿ ವಿಶೇಷ ಗಮನ ಹರಿಸಿ ಮಕ್ಕಳನ್ನು ಸರಕು ಸಾಗಾಣಿಕೆ ವಾಹನದಲ್ಲಿ ಶಾಲೆಗೆ ಕರೆತರು ವುದನ್ನು ನಿಷೇಧಿಸುವ ಸಂಕಲ್ಪ ಮಾಡ ಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಶಿಕ್ಷಕರು ಹಾಗೂ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಷ್ಟಪಟ್ಟು ಶಾಲೆಗೆ ಕಳಿಸುವ ಪೋಷಕರು ವಿದ್ಯೆಗೆ ಕೊಡುವ ಮಹತ್ವವನ್ನು ಶಾಲೆಗೆ ತಲುಪುವ ವಾಹನ ಗಳ ಬಗ್ಗೆಯೂ ಗಮನ ಹರಿಸಿದರೆ ಸಂಭವಿಸ ಬಹುದಾದ ದುರ್ಘಟನೆಗಳಿಂದ ಪಾರಾಗ ಬಹುದು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಿದ್ದು ಸÀರ್ಕಾರಿ ಶಾಲೆಗಳು ಸೇರಿದಂತೆ ಅನುದಾನಿತ ಹಾಗೂ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು, ಆಡ ಳಿತ ಮಂಡಳಿಯ ಮುಖ್ಯಸ್ಥರ ಸಭೆಯನ್ನು ಕರೆದು ಸಲಹೆ ಸೂಚನೆಗಳನ್ನು ನೀಡಲಾ ಗುತ್ತಿದೆ. ಸಭೆಗೆ ಗೈರಾದವರ ವಿರುದ್ಧ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆರ್‍ಟಿಇ ಹೀಗೆ ಸಂಬಂಧಿಸಿದಂತೆ ಪೋಷಕರಿಂದ ಯಾವುದಾದರೂ ದೂರು ಬಂದರೇ ನಿರ್ದಾಕ್ಷಿಣ್ಯವಾಗಿ ಸಂಬಂಧಪಟ್ಟ ಶಾಲೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯುವು ದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಗ ದೀಶ್ ನಾಯಕ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಪೋಷಕರು ಪಾಲ್ಗೊಂಡಿದ್ದರು.

Translate »