ಪ್ರವಾಸಿ ಮೈಸೂರಿನ ಹೊಸ ಆಕರ್ಷಣೆ ವನ್ಯಜೀವಿ ಅಸ್ಥಿಪಂಜರ ಗ್ಯಾಲರಿ
ಮೈಸೂರು

ಪ್ರವಾಸಿ ಮೈಸೂರಿನ ಹೊಸ ಆಕರ್ಷಣೆ ವನ್ಯಜೀವಿ ಅಸ್ಥಿಪಂಜರ ಗ್ಯಾಲರಿ

May 22, 2019

ಮೈಸೂರು: ಪ್ರಾಣಿ-ಪಕ್ಷಿ ಸಂಕುಲದ ಜೀವ ವೈವಿಧ್ಯತೆಯ ವೈಶಿಷ್ಟ್ಯ ಹಾಗೂ ನಿಸರ್ಗದ ಒಡಲಿನ ಅನೇಕ ವಿಸ್ಮಯಗಳ ಮಾದರಿಗಳ ತಾಣವೇ ಮೈಸೂರಿನ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ.

ಜನಸಾಮಾನ್ಯರು ಹಾಗೂ ಮಕ್ಕಳಿಗೆ ಪರಿಸರ ಪ್ರಜ್ಞೆ ಮತ್ತು ಕಳಕಳಿ ಮೂಡಿ ಸುತ್ತಿರುವ ಈ ವಸ್ತು ಸಂಗ್ರಹಾಲಯ ದಲ್ಲಿ (ಆರ್‍ಎಂಎನ್‍ಹೆಚ್) ಇದೀಗ ಜೋಡಿಸಲ್ಪಟ್ಟ ಪ್ರಾಣಿಗಳ ಅಸ್ಥಿಪಂಜರ ಗ್ಯಾಲರಿ ಸಿದ್ಧಗೊಳ್ಳುತ್ತಿದೆ. ಇನ್ನೊಂದು ವರ್ಷದಲ್ಲಿ ಈ ಗ್ಯಾಲರಿಯಲ್ಲಿ ನಾನಾ ಪ್ರಾಣಿ ಸಂಕುಲದ ವೈವಿಧ್ಯತೆಯನ್ನು ಅವು ಗಳ ಅಸ್ಥಿಪಂಜರಗಳು ತೆರೆದಿಡಲಿವೆ.

ಮೈಸೂರಿನ ಸಿದ್ಧಾರ್ಥನಗರದಲ್ಲಿ ರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯವು 1995ರಲ್ಲಿ ಸ್ಥಾಪನೆಗೊಂಡಿತು. `ರಾಷ್ಟ್ರೀಯ ಪ್ರಾಕೃ ತಿಕ ವಿಜ್ಞಾನ ವಸ್ತು ಸಂಗ್ರಹಾಲಯ’ದ ಪ್ರಪ್ರಥಮ ಪ್ರಾದೇಶಿಕ ಸಂಗ್ರಹಾಲಯ ಎಂಬ ಹೆಗ್ಗಳಿಕೆಗೆ ಇದು ಭಾಜನವಾ ಗಿದೆ. ಭಾರತ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧೀನದಲ್ಲಿ ರಾಷ್ಟ್ರೀಯ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯ ಕಾರ್ಯನಿರ್ವಹಿಸುತ್ತಿದೆ.

ಮೈಸೂರಿನ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ಖಾಯಂ ಪ್ರದರ್ಶನಾಂಗಣಗಳು ಪ್ರಾಕೃತಿಕ ಇತಿ ಹಾಸದ ಮೇಲೆ ಬೆಳಕು ಚೆಲ್ಲುತ್ತಿವೆ. ದಕ್ಷಿಣ ಭಾರತದ ಜೀವವೈವಿಧ್ಯದ ಬಗೆಗೆ ಸಮಗ್ರ ಮಾಹಿತಿ ಒದಗಿಸುತ್ತಿರುವ ಈ ಕೇಂದ್ರದಲ್ಲಿ ಈಗ ಪ್ರಾಣಿಗಳ ಅಸ್ಥಿಪಂಜರ ಜೋಡಿಸಿ ಪ್ರದರ್ಶಿಸುವ ಮೂಲಕ ಪ್ರಾಣಿ ಸಂಕುಲದ ನಾನಾ ವೈಶಿಷ್ಟ್ಯ ಸಾದರಪಡಿಸಲಾಗುತ್ತಿದೆ.

ಕಾಡೆಮ್ಮೆ ಅಸ್ಥಿಪಂಜರ ಈ ಗ್ಯಾಲರಿಯ ಮೊಟ್ಟಮೊದಲ ಯಶಸ್ವಿ ಜೋಡಣೆ. ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ. ಚರ್ಮ ಪ್ರಸಾದದ ಕಾರ್ಯದಲ್ಲಿ ಖ್ಯಾತನಾಮ ರಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಮೆಸರ್ಸ್ ವ್ಯಾನ್ ಇಂಗೆನ್ ಅವರ ಸಂಗ್ರಹ ದಲ್ಲಿದ್ದ ಕಾಡೆಮ್ಮೆ ಅಸ್ಥಿಪಂಜರ ಇದಾಗಿದೆ. ವೆನ್ನಿಗನ್ ಬಂಗಲೆಯಲ್ಲಿದ್ದ ಇದು ದಾನ ವಾಗಿ ವಸ್ತು ಸಂಗ್ರಹಾಲಯಕ್ಕೆ ಬಂದಿತ್ತು. ಭುವನೇಶ್ವರ್‍ನ ಸೆಂಚುರಿಯನ್ ವಿವಿಯ ಪ್ರಾಧ್ಯಾಪಕ ಡಾ.ಶಿಬಾ ಪ್ರಸಾದ್ ಪರೀದಾ ಅವರ ಮಾರ್ಗದರ್ಶನದಲ್ಲಿ ಯಶಸ್ವಿ ಯಾಗಿ ಜೋಡಣೆ ಮಾಡಲಾಗಿದೆ.

ಗ್ಯಾಲರಿಯಲ್ಲಿ ಗಾಜಿನ ಹಿನ್ನೆಲೆಯಲ್ಲಿ ಕಾಡೆಮ್ಮೆ ಅಸ್ಥಿಪಂಜರ ಸುರಕ್ಷಿತವಾಗಿ ಜೋಡಿಸಿದ್ದು, ನೋಡುಗರಲ್ಲಿ ಅನೇಕ ಕೌತುಕ ಉಂಟು ಮಾಡುತ್ತಿದೆ. ಈಗಾಗಲೇ ಪಶ್ಚಿಮ ಘಟ್ಟಗಳ ಪ್ರಾಕೃತಿಕ ಪರಂಪರೆ ಕುರಿತು ನಿರ್ಮಿಸಲಾಗಿರುವ ಪ್ರದರ್ಶಕ ದೊಂದಿಗೆ ಇದೊಂದು ಹೊಸ ಸೇರ್ಪಡೆ. ಪೈಲಟ್ ತಿಮಿಂಗಲದ ಎರಡು ಅಸ್ಥಿಪಂಜರ ಇಲ್ಲಿನ ಮತ್ತೊಂದು ಆಕರ್ಷಣೆ. ಆ ಮೂಲಕ ಕಡಲ ದೈತ್ಯ ಜೀವಿ ತಿಮಿಂಗಲದ ಅಸ್ತಿ ಪಂಜರದ ದರ್ಶನ ಇಲ್ಲಿ ಲಭ್ಯವಾಗಿದೆ. 2016ರಲ್ಲಿ ತಮಿಳುನಾಡು ಮೂಲದಿಂದ ಈ ಎರಡು ಪೈಲಟ್ ತಿಮಿಂಗಲಗಳ ಅಸ್ತಿ ಪಂಜರ ತರಿಸಿಕೊಳ್ಳಲಾಗಿದೆ. ಎರಡು ಆನೆಗಳ ತಲೆಬುರುಡೆ ಹಾಗೂ ದವಡೆಗಳೂ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಇವುಗಳಿಗೂ ಒಂದು ವಿನ್ಯಾಸ ನೀಡಲು ಉದ್ದೇಶಿಸಲಾಗಿದೆ.
ಎಂ.ಬಿ.ಪವನ್‍ಮೂರ್ತಿ

Translate »