ಮಂಡಿ ಮೊಹಲ್ಲಾ ಘರ್ಷಣೆ: ನೊಂದ ಕುಟುಂಬಗಳಿಗೆ ಧೈರ್ಯ ತುಂಬಿದ ಶಾಸಕ ಎಲ್.ನಾಗೇಂದ್ರ
ಮೈಸೂರು

ಮಂಡಿ ಮೊಹಲ್ಲಾ ಘರ್ಷಣೆ: ನೊಂದ ಕುಟುಂಬಗಳಿಗೆ ಧೈರ್ಯ ತುಂಬಿದ ಶಾಸಕ ಎಲ್.ನಾಗೇಂದ್ರ

May 22, 2019

ಮೈಸೂರು: ಮಂಡಿ ಮೊಹಲ್ಲಾ ಮಿಷನ್ ಆಸ್ಪತ್ರೆ ಸುತ್ತ ಮುತ್ತ ಫುಟ್‍ಪಾತ್ ಒತ್ತುವರಿಯಿಂದಾಗಿ ದಿನನಿತ್ಯ ಓಡಾಡುವ ಪಾದಚಾರಿಗಳಿಗೆ ಹಾಗೂ ದ್ವಿ ಚಕ್ರವಾಹನ ನಿಲುಗಡೆಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಮತ್ತು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಶಾಸಕ ಎಲ್.ನಾಗೇಂದ್ರ ಒತ್ತಾಯಿಸಿದ್ದಾರೆ.

ಮೈಸೂರಿನ ಮಂಡಿಮೊಹಲ್ಲಾದ ಚಿಕ್ಕ ಮಾರುಕಟ್ಟೆ ಬಳಿ ಭಾನುವಾರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ನಡೆದ ಘರ್ಷಣೆಯಲ್ಲಿ ನೊಂದ ಕುಟುಂಬಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ನಂತರ ಮಾಧ್ಯಮ ಗಳೊಂದಿಗೆ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಕ್ಷುಲ್ಲಕ ವಿಚಾರವನ್ನೇ ನೆಪ ಮಾಡಿಕೊಂಡ ಒಂದು ಕೋಮಿನ ಕೆಲ ಯುವಕರು, ಇಲ್ಲಿನ ನಿವಾಸಿಗಳ ಮನೆಗಳ ಬಳಿ ತೆರಳಿ ಕಿಟಕಿ ಗ್ಲಾಸ್ ಒಡೆದು, ಮನೆ ಮುಂದೆ ನಿಂತಿದ್ದ ಕಾರು, ಸ್ಕೂಟರ್‍ಗಳಿಗೆ ಡ್ಯಾಮೇಜ್ ಮಾಡಿ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿದ್ದಾರೆ. ಅಲ್ಲದೆ, ಇಲ್ಲಿನ ನಿವಾಸಿ ಗಳಿಗೆ ಬೆದರಿಕೆ ಹಾಕಿ, ಭಯದ ವಾತಾ ವರಣ ಸೃಷ್ಟಿಸಿದ್ದಾರೆ. ಇಂಥ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಮಂಡಿಮೊಹಲ್ಲಾದ ಚಿಕ್ಕ ಮಾರುಕಟ್ಟೆ, ಪಟ್ಟೇಗಾರ್ ಬೀದಿ, ಕಬೀರ್ ರಸ್ತೆ, ಅಕ್ಬರ್ ರಸ್ತೆ ಹಾಗೂ ಮಿಷನ್ ಆಸ್ಪತ್ರೆ ಸುತ್ತಮುತ್ತ ಲಿನ ಅಂಗಡಿ ಮಾಲೀಕರು ಫುಟ್‍ಪಾತ್ ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂ ದಾಗಿ, ದ್ವಿ ಚಕ್ರ ವಾಹನಗಳ ಪಾರ್ಕಿಂಗ್ ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆ ಯಾಗುತ್ತಿದೆ. ಇದರಿಂದಾಗಿಯೇ ಮಂಡಿ ಮೊಹಲ್ಲಾದ ಕೆಲವು ರಸ್ತೆಗಳಲ್ಲಿ ಓಡಾಟ ತುಂಬಾ ದುಸ್ತರವಾಗಿದ್ದು, ಆಗಾಗ ಇಲ್ಲಿನ ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಇದರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ಆಗ್ರಹಿಸಿದರಲ್ಲದೆ, ಲೋಕಸಭೆ ಫಲಿತಾಂಶ ಬಳಿಕ ಈ ಘಟನೆ ಸಂಬಂಧ ನಿವಾಸಿಗಳ ಶಾಂತಿಸಭೆ ಕರೆಯಲಾಗುವುದು ಎಂದರು.

ಈ ಘಟನೆಯಲ್ಲಿ ಕೆಲ ಕಿಡಿಗೇಡಿಗಳು ನಗರ ಪಾಲಿಕೆ ಮಾಜಿ ಸದಸ್ಯ ಹೇಮಂತ ಕುಮಾರ್ ಅವರ ಮನೆಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ವಕೀಲ ಮಂಜು ನಾಥ್‍ನವರಿಗೆ ಸೇರಿದ ಕಾರಿನ ಗ್ಲಾಸನ್ನು ಪುಡಿಗಟ್ಟಿದ್ದಾರೆ. ಕರಿಯಮ್ಮ, ಮರಿಯಮ್ಮ, ಕನಕಮ್ಮ ಅವರಿಗೆ ಸೇರಿದ ಮನೆಗಳ ಕಿಟಕಿ ಗ್ಲಾಸ್‍ಗಳನ್ನು ಒಡೆದು ಹಾಕಿದ್ದಾರೆ. ಇವರ ಮನೆಗಳಿಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿರು ವುದಾಗಿ ತಿಳಿಸಿದರು.

ಈ ವೇಳೆ ನಗರ ಪಾಲಿಕೆಯ ಸದಸ್ಯ ರಾದ ರಂಗಸ್ವಾಮಿ, ಗುರುವಿನಾಯಕ್, ವಾರ್ಡ್ ಅಧ್ಯಕ್ಷ ವಿಜಿ, ರಾಜು, ಶ್ರೀನಿ ವಾಸ್, ವಕೀಲ ಸತ್ಯಮೂರ್ತಿ, ಸೋಮ ಶೇಖರ್ ರಾಜು, ಜಸ್ಕೋ ರವಿ, ಹರ್ಷ, ಚಿಕ್ಕ ವೆಂಕಟ, ಬದ್ರೀಶ್ ಸೇರಿದಂತೆ ಹಲವರು ಜತೆಗಿದ್ದರು.

.

Translate »