ಹೆಬ್ಬಾಳು ಕೈಗಾರಿಕಾ ಪ್ರದೇಶ ಈಗ ತ್ಯಾಜ್ಯ ವಿಲೇವಾರಿ ಬಯಲು!
ಮೈಸೂರು

ಹೆಬ್ಬಾಳು ಕೈಗಾರಿಕಾ ಪ್ರದೇಶ ಈಗ ತ್ಯಾಜ್ಯ ವಿಲೇವಾರಿ ಬಯಲು!

May 22, 2019

ಮೈಸೂರು: ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶಕ್ಕೆ ರಾಶಿ ರಾಶಿ ತ್ಯಾಜ್ಯ ಸೇರುತ್ತಿದೆ.

ಮೈಸೂರು ನಗರ ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಕಟ್ಟಡ ತ್ಯಾಜ್ಯ, ಸಭೆ ಸಮಾರಂಭ ಹಾಗೂ ಹೋಟೆಲ್ ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಲಾರಿ, ಟ್ರಾಕ್ಟರ್, ಆಟೋಗಳಲ್ಲಿ ತಂದು, ಕೈಗಾರಿಕಾ ಪ್ರದೇಶದ ಕಂಡ ಕಂಡ ಸ್ಥಳ ದಲ್ಲಿ ಸುರಿಯಲಾಗುತ್ತಿದೆ. ಹೀಗೆಯೇ ಮುಂದುವರೆದರೆ ಕೆಲವೇ ತಿಂಗಳಲ್ಲಿ ಕೈಗಾರಿಕಾ ಪ್ರದೇಶ ತ್ಯಾಜ್ಯ ಸಂಗ್ರಹ ಸ್ಥಳ ವಾಗಿ ಬದಲಾಗುತ್ತದೆ ಎಂಬ ಆತಂಕ ಕೈಗಾರಿಕೋದ್ಯಮಿಗಳನ್ನು ಕಾಡುತ್ತಿದೆ.

ರಿಂಗ್‍ರಸ್ತೆ ಸಮೀಪ ರಿಸರ್ವ್ ಬ್ಯಾಂಕ್ ಕಾಂಪೌಂಡ್ ಪಕ್ಕದಲ್ಲಿರುವ ಮಳೆ ನೀರು ಚರಂಡಿಗೆ ನಿತ್ಯ ಕಲುಷಿತ ನೀರನ್ನು ಹರಿ ಬಿಡಲಾಗುತ್ತಿದೆ. ಕಾರ್ಖಾನೆ, ಛತ್ರ, ಕಾಂಪ್ಲೆಕ್ಸ್, ಮನೆಗಳ ಟ್ಯಾಂಕ್‍ಗಳನ್ನು ಶುಚಿ ಗೊಳಿಸಿದ ರಾಸಾಯನಿಕಯುಕ್ತ ಕಲುಷಿತ ನೀರನ್ನು ಫಿಟ್ ಕ್ಲೀನಿಂಗ್ ಟ್ಯಾಂಕರ್‍ಗಳಲ್ಲಿ ತುಂಬಿಕೊಂಡು ಬಂದು ಈ ಮಳೆ ನೀರು ಚರಂಡಿಗೆ ಬಿಡಲಾ ಗುತ್ತಿದೆ. ಪರಿಣಾಮ ಸುತ್ತಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ಯಾವುದೇ ಭಯವಿಲ್ಲದೆ ನಿತ್ಯ ಈ ಕೃತ್ಯವೆಸಗುತ್ತಿದ್ದಾರೆ.

ಇಲ್ಲಿನ ಹೆಚ್‍ಪಿ ಗ್ಯಾಸ್ ರಸ್ತೆಯಲ್ಲಿ ತ್ಯಾಜ್ಯದ ರಾಶಿ ಬಿದ್ದಿದೆ. ಹೋಟೆಲ್ ಹಾಗೂ ಸಭೆ-ಸಮಾರಂಭಗಳಲ್ಲಿ ಉತ್ಪತ್ತಿಯಾಗುವ ಪೇಪರ್ ಶೀಟ್, ಲೋಟ, ತಟ್ಟೆ, ಪ್ಲಾಸ್ಟಿಕ್ ಬಾಟಲ್, ಉಳಿದ ಆಹಾರ, ತರಕಾರಿ ತ್ಯಾಜ್ಯವನ್ನು ತಂದು ಇಲ್ಲಿನ ಪ್ರೀತಿ ಗ್ರಾನೈಟ್ ಪಕ್ಕದ ಸ್ಥಳದಲ್ಲಿ ರಾಶಿ ಹಾಕಲಾಗಿದೆ. ತ್ಯಾಜ್ಯದ ರಾಶಿ ಬಿದ್ದು ಐದಾರು ದಿನಗಳಾ ದರೂ ವಿಲೇವಾರಿ ಮಾಡಿಲ್ಲ. ದಿನೇ ದಿನೆ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಲಿದ್ದು, ಕೊಳಚೆ ಪ್ರದೇಶದಂತೆ ಕಾಣುತ್ತಿದೆ.

ಹೆಬ್ಬಾಳು ಕೆರೆ ರಸ್ತೆಯಲ್ಲಿ ದೊಡ್ಡ ಟ್ರಕ್ ಗಳು ಸಾಲುಗಟ್ಟಿ ನಿಲ್ಲುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ಸ್ವಚ್ಛ ತೆಯೂ ಹಾಳಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ಇಲ್ಲದ ಪರಿಣಾಮ ಎಂಎಸ್‍ಐಎಲ್ ಉಗ್ರಾಣಕ್ಕೆ ಬರುವ ಟ್ರಕ್‍ಗಳನ್ನು ರಸ್ತೆ ಬದಿಯಲ್ಲೇ ಸಾಲಾಗಿ ನಿಲ್ಲಿಸಲಾಗುತ್ತದೆ. ಇದರಿಂದ ಇತರೆ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ. ಅಲ್ಲದೆ ಟ್ರಕ್‍ಗಳ ಚಾಲಕ ಹಾಗೂ ಸಹಾಯಕರು ರಸ್ತೆ ಬದಿ ಯನ್ನೇ ಶೌಚಾಲಯದಂತೆ ಬಳಸು ತ್ತಿದ್ದಾರೆ. ಹಾಗಾಗಿ ಇಡೀ ರಸ್ತೆಯಲ್ಲೇ ಅಶುಚಿತ್ವ ತಾಂಡವವಾಡುತ್ತಿದೆ.

ಇನ್ನು ಕೂರ್ಗಳ್ಳಿ ಕೈಗಾರಿಕಾ ಪ್ರದೇಶಕ್ಕೆ ಟ್ರ್ಯಾಕ್ಟರ್‍ನಿಂದ ತ್ಯಾಜ್ಯ ತಂದು ಸುರಿಯ ಲಾಗುತ್ತಿದೆ. ಸುತ್ತಮುತ್ತಲ ಗ್ರಾಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಕೂರ್ಗಳ್ಳಿ ಗ್ರಾಪಂನಿಂದ ಸಂಗ್ರಹಿಸಿ, ವಾಹನದಲ್ಲಿ ತುಂಬಿಕೊಂಡು ಕೈಗಾರಿಕಾ ಪ್ರದೇಶದ ಖಾಲಿ ನಿವೇಶನಗಳಿಗೆ ಸುರಿಯಲಾ ಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಗಳು ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳ ದಿದ್ದರೆ ಕೈಗಾರಿಕಾ ಪ್ರದೇಶ ತ್ಯಾಜ್ಯ ಸಂಗ್ರ ಹದ ಸ್ಥಳವಾಗಿ ರೂಪಾಂತರವಾಗುತ್ತದೆ. ಕೈಗಾರಿಕೋದ್ಯಮಿಗಳು, ಕಾರ್ಮಿಕರು ಸಾಂಕ್ರಾಮಿಕ ರೋಗಗಳು ಬಾಧಿಸುವ ಭೀತಿಯಲ್ಲಿದ್ದಾರೆ. ಅಲ್ಲದೆ ಹೀಗೆ ಎಲ್ಲೆಂದ ರಲ್ಲಿ ತ್ಯಾಜ್ಯ ಸುರಿಯುವುದರಿಂದ ಪ್ರಕೃತಿ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ ಎಂದು ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಆತಂಕ ವ್ಯಕ್ತಪಡಿಸಿದ್ದಾರೆ

Translate »