ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನದಲ್ಲಿ ಮತ ಎಣಿಕೆಗೆ ಕ್ಷಣಗಣನೆ
ಮೈಸೂರು

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನದಲ್ಲಿ ಮತ ಎಣಿಕೆಗೆ ಕ್ಷಣಗಣನೆ

May 22, 2019

ಮೈಸೂರು: ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕಾಗಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲಾಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.

ಈ ನಾಲ್ಕು ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಿಸಲು ಸರ್ವ ರೀತಿ ಸಜ್ಜಾಗಿವೆ.

ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಮೇ 23ರಂದು ಪಡು ವಾರಹಳ್ಳಿ ಬಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿ ನಲ್ಲಿ ನಡೆಯಲಿದ್ದು, ಈಗಾಗಲೇ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತ ಎಣಿಕಾ ಕಾರ್ಯದ ಸಿದ್ಧತೆ ಕುರಿತು ಮಾತನಾಡಿದ ಅವರು, ಗುರುವಾರ ಬೆಳಿಗ್ಗೆ 8 ಗಂಟೆ ಯಿಂದ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಯೊಳಗೆ ಇವಿಎಂ ಮತ ಯಂತ್ರ ಎಣಿಕೆ ಕಾರ್ಯ ಪೂರ್ಣಗೊ ಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 18,94,384 ಮತ ದಾರರಿದ್ದು, 13,12,404 ಮಂದಿ ಮತ ಚಲಾಯಿಸಿದ್ದಾರೆ. ಶೇ.69.28ರಷ್ಟು ಮತದಾನವಾಗಿದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ಕ್ಷೇತ್ರಗಳ ಪೈಕಿ ಮೊದಲ ಮಹಡಿಯಲ್ಲಿ ಮಡಿಕೇರಿಯ 1,69,769 ಮತಗಳನ್ನು 15 ಟೇಬಲ್‍ಗಳಲ್ಲಿ 18 ಸುತ್ತುಗಳಲ್ಲಿ ಎಣಿಕೆ ಮಾಡಲಾಗುವ Åದು. ಹಾಗೆಯೇ ನೆಲಮಹಡಿಯಲ್ಲಿ ವಿರಾಜ ಪೇಟೆ ವಿಧಾನಸಭಾ ಕ್ಷೇತ್ರದ 1,59,227 ಮತಗಳನ್ನು 15 ಟೇಬಲ್‍ಗಳಲ್ಲಿ 19 ಸುತ್ತು, 3ನೇ ಮಹಡಿಯಲ್ಲಿ ಪಿರಿಯಾ ಪಟ್ಟಣ ವಿಧಾನಸಭಾ ಕ್ಷೇತ್ರದ 144812 ಮತಗಳನ್ನು 15 ಟೇಬಲ್‍ಗಳಲ್ಲಿ 16 ಸುತ್ತು, ಮೊದಲ ಮಹಡಿಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ 175284 ಮತ ಗಳನ್ನು 15 ಟೇಬಲ್‍ಗಳಲ್ಲಿ 19 ಸುತ್ತು, ಮೊದಲನೇ ಮಹಡಿಯಲ್ಲಿ ಚಾಮುಂಡೇ ಶ್ವರಿ ಕ್ಷೇತ್ರ 217027 ಮತಗಳನ್ನು 18 ಟೇಬಲ್‍ಗಳಲ್ಲಿ 19 ಸುತ್ತು, 2ನೇ ಮಹಡಿ ಯಲ್ಲಿ ಕೆ.ಆರ್.ವಿಧಾನಸಭಾ ಕ್ಷೇತ್ರದ 146907 ಮತಗಳನ್ನು 15 ಟೇಬಲ್‍ಗಳಲ್ಲಿ 18 ಸುತ್ತು, 2ನೇ ಮಹಡಿಯಲ್ಲಿ ಚಾಮ ರಾಜ ವಿಧಾನಸಭಾ ಕ್ಷೇತ್ರದ 139809 ಮತಗಳನ್ನು 15 ಟೇಬಲ್‍ಗಳಲ್ಲಿ 17 ಸುತ್ತು ಹಾಗೂ 2ನೇ ಮಹಡಿಯಲ್ಲಿ ಎನ್. ಆರ್.ಕ್ಷೇತ್ರದ 159569 ಮತಗಳನ್ನು 15 ಟೇಬಲ್‍ಗಳಲ್ಲಿ 19 ಸುತ್ತುಗಳಲ್ಲಿ ಎಣಿಕೆ ನಡೆಯಲಿದ್ದು, ಅಂಚೆ ಮತಪತ್ರವನ್ನು ಎಣಿಕೆ ಮಾಡಲಾಗುತ್ತದೆ ಎಂದರು.

ಭದ್ರತೆ ವ್ಯವಸ್ಥೆ: ಮತ ಎಣಿಕೆ ಕೇಂದ್ರದ 100 ಮೀಟರ್ ಸುತ್ತಲೂ ಬ್ಯಾಡಿಕೇಡಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ಪಾದ ಚಾರಿಗಳ ವಲಯ ಎಂದು ಗುರುತಿಸ ಲಾಗಿದೆ. ಜತೆಗೆ ವಾಹನದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೇ22ರ ಬುಧವಾರ ಮಧ್ಯರಾತ್ರಿಯಿಂದ 23ರ ಗುರುವಾರ ಮಧ್ಯರಾತ್ರಿವರೆಗೆ ಜಿಲ್ಲಾ ದ್ಯಂತ ಎಲ್ಲಾ ಮದ್ಯದಂಗಡಿ ನಿಷೇಧಿಸಿ ಒಣ ದಿವಸಗಳೆಂದು ಘೋಷಿಸಲಾಗಿದೆ.

ಗುರುತಿನ ಚೀಟಿ ಹೊಂದಿದ್ದು, ಎಣಿಕೆ ಕೇಂದ್ರದೊಳಗೆ ಪ್ರವೇಶಿಸುವವರನ್ನು 3 ಹಂತಗಳಲ್ಲಿ ತಪಾಸಣೆಗೆ ಒಳಪಡಿಸಲಾಗು ತ್ತದೆ. ಜತೆಗೆ ಎಣಿಕಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಹಾಗೆಯೇ ಮೊಬೈಲ್ ಹಾಗೂ ಇತರೆ ಮೆಟಲ್ ಸಾಧನಗಳು, ಬೀಡಿ-ಸಿಗರೇಟ್, ಗುಟಕಾ, ಬೆಂಕಿ ಪೊಟ್ಟಣ ಹಾಗೂ ಇತರೆ ಸ್ಫೋಟಕ ವಸ್ತುಗಳು ಮತ್ತು ಯಾವುದೇ ರೀತಿಯ ಆಕ್ಷೇಪಾರ್ಹ ವಸ್ತುಗಳನ್ನು ನಿರ್ಬಂಧಿಸಲಾಗಿದೆ.

ಮತ ಎಣಿಕೆಯ ಎಲ್ಲಾ ಹಂತಗಳನ್ನು ಚಿತ್ರೀಕರಿಸಲು 18 ವಿಡಿಯೋ ಕ್ಯಾಮರಾ ಉಪಯೋಗಿಸಿದರೆ, ತುರ್ತು ಪರಿಸ್ಥಿತಿ ಎದುರಿಸಲು ಅಗ್ನಿಶಾಮಕ ದಳ ನಿಯೋ ಜನೆ ಮತ್ತು ತುರ್ತು ಆರೋಗ್ಯ ಪ್ರಥಮ ಚಿಕಿತ್ಸೆಗಾಗಿ ಮತ ಎಣಿಕೆ ಕೇಂದ್ರ ಕೊಠಡಿ ಯೊಳಗೆ ವೈದ್ಯಕೀಯ ತಂಡವುಳ್ಳ ಕೇಂದ್ರ ತೆರೆಯಲಾಗಿದ್ದು, ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕೆ ಏಜೆಂಟರು ಗಳು ಟೇಬಲ್‍ನಿಂದ-ಟೇಬಲ್‍ಗೆ, ಕೊಠಡಿ ಯಿಂದ-ಕೊಠಡಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ಎಣಿಕಾ ಕೇಂದ್ರಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗಳಿಗೆ ಬೆಳಿಗ್ಗೆ ತಿಂಡಿ, ಊಟದ ವ್ಯವಸ್ಥೆ ಮಾಡ ಲಾಗಿದೆ ಎಂದು ವಿವರಿಸಿದರು.

ಎಣಿಕಾ ವಿಧಾನ: ಅಂಚೆ ಮತ ಪತ್ರಗಳ ಎಣಿಕಾ ಕಾರ್ಯ ಮೊದಲು ಆರಂಭಿಸ ಲಾಗುವುದು. ನಂತರ ಇವಿಎಂಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ಕಾರ್ಯ ನಡೆಸಿ, ರೌಂಡ್ ವೈಸ್ ರಿಸಲ್ಟ್ ಗಳನ್ನು ಘೋಷಿಸಲಾಗುವುದು. ಎಲ್ಲಾ ಸುತ್ತುಗಳ ಮುಗಿದ ನಂತರ ಚುನಾವಣಾ ವೀಕ್ಷಕರ ಅನುಮತಿ ಪಡೆದು ಚುನಾವಣಾ ಫಲಿತಾಂಶ ಘೋಷಿಸಲಾಗುವುದು ಎಂದರು.

ಮೆರವಣಿಗೆ, ಸಭೆ ನಿಷೇಧ: ಎಣಿಕೆ ಯಾದ ಬಳಿಕ ಯಾವುದೇ ಅಹಿತಕರ ಘಟನೆಗಳು ನಡೆಯದಿರಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಮೆರವಣಿಗೆ, ಸಭೆ, ಸಮಾ ರಂಭಗಳ ಆಚರಣೆ, ಪ್ರಚೋದÀನಾಕಾರಿ ಭಾಷಣ, ಪಟಾಕಿಗಳನ್ನು ಸಾರ್ವಜನಿಕ ಸ್ಥಳ ಹಾಗೂ ವಾಸದ ಮನೆಗಳ ಮುಂದೆ ಸಿಡಿಸುವುದು, ಯಾವುದೇ ವ್ಯಕ್ತಿ ಸ್ಫೋಟಕ ವಸ್ತು, ಮಾರಕಾಸ್ತ್ರ ಒಯ್ಯುವುದನ್ನು ನಿಷೇಧಿ ಸಲಾಗಿದೆ. ಮತದಾರರು, ಸಾರ್ವಜನಿಕರು, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಸಹಕರಿಸುವಂತೆ ಮನವಿ ಮಾಡಿದರು.

Translate »