Tag: Mysore

ಹಿಂದೂ ಧರ್ಮದ ಪುನರುತ್ಥಾನಗೊಳಿಸಿದ ಶ್ರೀ ಶಂಕರಾಚಾರ್ಯ
ಮೈಸೂರು

ಹಿಂದೂ ಧರ್ಮದ ಪುನರುತ್ಥಾನಗೊಳಿಸಿದ ಶ್ರೀ ಶಂಕರಾಚಾರ್ಯ

May 10, 2019

ಮೈಸೂರು: “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರ ಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಎಂಬುದು ಅದ್ವೈತ ತತ್ವದ ಮೂಲ ಮಂತ್ರ. ಇದಲ್ಲದೇ ಆದಿ ಶಂಕರಾಚಾರ್ಯರು ಪರಮಾತ್ಮ, ಅಂದರೆ “ಆತ್ಮ”, ಅದು ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮ ನಿಂದಲೇ ಆವರಿಸಲ್ಪಟ್ಟಿದೆ) ಎಂಬು ದಾಗಿ ಜಗತ್ತಿಗೆ ಸಾರಿದರು. ಶ್ರೀ ಶಂಕರಾಚಾರ್ಯರ ಜಯಂತಿ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ…

ನವ ಜಾತ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯ: ಚೆಲುವಾಂಬ ಆಸ್ಪತ್ರೆಯಲ್ಲಿ ಸಂಬಂಧಿಕರ ಪ್ರತಿಭಟನೆ
ಮೈಸೂರು

ನವ ಜಾತ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯ: ಚೆಲುವಾಂಬ ಆಸ್ಪತ್ರೆಯಲ್ಲಿ ಸಂಬಂಧಿಕರ ಪ್ರತಿಭಟನೆ

May 10, 2019

ಮೈಸೂರು: ನವ ಜಾತ ಶಿಶು ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಪೋಷಕರು ಹಾಗೂ ಸಂಬಂಧಿಕರು ಇಂದು ಬೆಳಿಗ್ಗೆ ಮೈಸೂ ರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ಎನ್.ಆರ್.ಮೊಹಲ್ಲಾದ ಗಣೇಶನಗರ ನಿವಾಸಿ ಹರೀಶ ಅವರ ಪತ್ನಿ ಶ್ರೀಮತಿ ಲಕ್ಷ್ಮಿ ಬುಧವಾರ ಬೆಳಿಗ್ಗೆ ಹೆರಿಗೆ ನೋವಿನಿಂದ ಚೆಲುವಾಂಬ ಆಸ್ಪತ್ರೆಗೆ ದಾಖ ಲಾಗಿದ್ದರು. ಸಂಜೆವರೆಗೂ ತಪಾಸಣೆ ನಡೆ ಸಿದ ವೈದ್ಯರು, ಆಕೆ ಆರೋಗ್ಯವಾಗಿದ್ದಾ ರೆಂದು ತಿಳಿಸಿದ್ದರು ಎಂದು ಪೋಷಕರು ಹೇಳಿದರು. ಇಂದು ಮುಂಜಾನೆ…

ಉತ್ತರಪ್ರದೇಶ ಮೂಲದ ಬಾಲಕ ನಾಪತ್ತೆ
ಮೈಸೂರು

ಉತ್ತರಪ್ರದೇಶ ಮೂಲದ ಬಾಲಕ ನಾಪತ್ತೆ

May 10, 2019

ಮೈಸೂರು: ಉತ್ತರಪ್ರದೇಶ ಮೂಲದ ಬಾಲಕನೋರ್ವ ನಾಪತ್ತೆಯಾದ ಬಗ್ಗೆ ಮೈಸೂರು ತಾಲೂಕಿನ ಕಡಕೊಳ ಗ್ರಾಮದಿಂದ ತಡವಾಗಿ ವರದಿ ಯಾಗಿದೆ. ಗ್ರಾಮದಲ್ಲಿ ಶೆಡ್ ನಿರ್ಮಿಸಿಕೊಂಡು ಹೂ ಗಿಡಗಳನ್ನು ಮಾರಾಟ ಮಾಡುತ್ತಿದ್ದ ಉತ್ತರಪ್ರದೇಶದ ಹುನ್ನಾವ್ ಜಿಲ್ಲೆ, ಸಫೀ ಪುರ್ ತಾಲೂಕಿನ ಮೆಹಮೂದ್‍ಪುರ್ ಗ್ರಾಮದ ಭಾನು ಎಂಬು ವರ ಜೊತೆಗಿದ್ದ ಬಾಲಕ ಲಲ್ಲೂ (18) ನಾಪತ್ತೆಯಾದವನು. ತಾನು ಮಾ.24ರಂದು ಸಣ್ಣ ಗಿಡಗಳನ್ನು ಮಾರಾಟ ಮಾಡಲು ನಂಜನಗೂಡಿಗೆ ತೆರಳಿ ವಾಪಸ್ ಆದಾಗ ಶೆಡ್‍ನಲ್ಲಿದ್ದ ಲಲ್ಲೂ ನಾಪತ್ತೆಯಾಗಿದ್ದ ಎಂದು ಭಾನು ಪೊಲೀಸ ರಿಗೆ ನೀಡಿದ ದೂರಿನಲ್ಲಿ…

ಸಾಲ ಬಾಧೆ: ವ್ಯಕ್ತಿ ಆತ್ಮಹತ್ಯೆ
ಮೈಸೂರು

ಸಾಲ ಬಾಧೆ: ವ್ಯಕ್ತಿ ಆತ್ಮಹತ್ಯೆ

May 10, 2019

ಮೈಸೂರು:  ಸಾಲ ತೀರಿಸಲಾಗದೆ ಮನ ನೊಂದ ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬಂಡಿ ಪಾಳ್ಯದ ಎಪಿಎಂಸಿ ಮಾರುಕಟ್ಟೆ ಬಳಿ ನಡೆದಿದೆ. ಮಂಡ್ಯದ ಚಿಕ್ಕಬಾಗಿಲು ಗ್ರಾಮದ ನಿವಾಸಿ ಚೈತನ್ಯ(38) ಆತ್ಮಹತ್ಯೆ ಮಾಡಿ ಕೊಂಡವರು. ಇವರು ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯಲ್ಲಿ ಪಟೇಲ್ ಅಸೋಸಿಯೇಷನ್ ವಾಟರ್ ಏಜೆನ್ಸಿ ನಡೆಸುತ್ತಿದ್ದರು. ಮೀಟರ್ ಬಡ್ಡಿಯಲ್ಲಿ ಸಾಲ ಮಾಡಿದ್ದ ಇವರು ಮಾಡಿದ ಸಾಲವನ್ನು ತೀರಿಸಲಾಗದೆ ಮೇ.8ರ ತಡರಾತ್ರಿ ನೇಣಿಗೆ ಶರಣಾಗಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಚೈತನ್ಯ, ಸ್ವಂತ ಮನೆಯನ್ನು ಕಟ್ಟಿದ್ದೇನೆ ಎಂದು…

ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಕಡಿತ
ಮೈಸೂರು

ಮೈಸೂರು ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಶುಲ್ಕ ಕಡಿತ

May 10, 2019

ಮೈಸೂರು: ನೋಟು ಅಮಾನ್ಯೀಕರಣ ಹಾಗೂ ದುಬಾರಿ ಶುಲ್ಕದ ಹಿನ್ನೆಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿರುವ ಹಿನ್ನೆಲೆಯಲ್ಲಿ ಕಂಗೆಟ್ಟಿದ್ದ ಮೈಸೂರು ವಿಶ್ವವಿದ್ಯಾನಿಲಯ ಪ್ರಸಕ್ತ ಸಾಲಿನಿಂದ ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯಲು ಶೇ.50ರಷ್ಟು ಶುಲ್ಕ ಕಡಿತ ಮಾಡಲು ನಿರ್ಧರಿಸಿದೆ. ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಮುಂಚೂಣಿ ಸ್ಥಾನ ಪಡೆಯುವುದರೊಂದಿಗೆ ವಿಶ್ವದ ಗಮನ ಸೆಳೆದಿದ್ದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ವಿದೇಶಿಗರು ಮುಗಿ ಬೀಳುವ ಕಾಲವೊಂದಿತ್ತು. ಕಳೆದ ನಾಲ್ಕು ವರ್ಷದ ಹಿಂದಿನವರೆಗೂ ಹತ್ತಾರು ರಾಷ್ಟ್ರಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ಅಧ್ಯಯನ…

ಮೃಗಾಲಯ ವೀಕ್ಷಣೆಯ ಕಾಂಬೋ ಟಿಕೆಟ್‍ಗೆ ಡಿಮ್ಯಾಂಡ್
ಮೈಸೂರು

ಮೃಗಾಲಯ ವೀಕ್ಷಣೆಯ ಕಾಂಬೋ ಟಿಕೆಟ್‍ಗೆ ಡಿಮ್ಯಾಂಡ್

May 10, 2019

ಮೈಸೂರು: ಮೈಸೂರು ಮೃಗಾಲಯ ವೀಕ್ಷಿಸಿ ಕಾರಂಜಿ ಕೆರೆಗೆ ಭೇಟಿ ನೀಡುವ ಪ್ರವಾಸಿಗರ ಅನು ಕೂಲಕ್ಕಾಗಿ ಜಾರಿಗೆ ತಂದಿರುವ ಕಾಂಬೋ ಟಿಕೆಟ್‍ಗೆ ಬೇಡಿಕೆ ಹೆಚ್ಚಾಗುತ್ತಿದ್ದು, ದಿನಕ್ಕೆ ಸರಾಸರಿ 35 ಮಂದಿ ಪ್ರವಾಸಿಗರು ಕನೆ ಕ್ಟಿಂಗ್ ಪಾಥ್ ಮೂಲಕ ಮೃಗಾಲಯದಿಂದ ಕಾರಂಜಿಕೆರೆ ವೀಕ್ಷಣೆಗೆ ತೆರಳುತ್ತಿದ್ದಾರೆ. ಮೃಗಾಲಯದ ವ್ಯಾಪ್ತಿಗೆ ಕಾರಂಜಿಕೆರೆ ಬಂದರೂ ಎರಡೂ ಕಡೆಗೂ ಪ್ರತ್ಯೇಕ ಪ್ರವೇಶ ಟಿಕೆಟ್ ಪಡೆಯಬೇಕಾಗಿತ್ತು. ಈ ಹಿನ್ನೆಲೆ ಯಲ್ಲಿ ದಸರೆಯ ವೇಳೆ ಎರಡೂ ಸ್ಥಳಗಳಿಗೂ ಒಂದೇ ಟಿಕೆಟ್ ಪಡೆದು ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗಿತ್ತು. ಅಲ್ಲದೆ…

ಮೇ 13ರಂದು ಚೆಸ್ ಪಂದ್ಯಾವಳಿ
ಮೈಸೂರು

ಮೇ 13ರಂದು ಚೆಸ್ ಪಂದ್ಯಾವಳಿ

May 10, 2019

ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ರೋಟರಿ ವೆಸ್ಟ್ ಶಾಲೆಯ ಸಭಾಂಗಣದಲ್ಲಿ ಮೇ 13ರಂದು ರ್ಯಾಪಿಡ್ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ರೋಟರಿ ವಾಣಿವಿಲಾಸ ಕ್ಲಬ್ ಅಧ್ಯಕ್ಷೆ ಹೆಚ್.ಎಲ್. ಯಮುನಾ ತಿಳಿಸಿದ್ದಾರೆ. ಲರ್ನಸ್ ಚೆಸ್ ಕ್ಲಬ್, ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ಹಾಗೂ ರೋಟರಿ ವಾಣಿವಿಲಾಸ ಕ್ಲಬ್ ಸಂಯು ಕ್ತಾಶ್ರಯದಲ್ಲಿ ಚೆಸ್ ಪಂದ್ಯಾವಳಿ ನಡೆಸ ಲಾಗುತ್ತಿದೆ. 7, 9, 11, 13 ಹಾಗೂ 15 ವರ್ಷದೊಳಗಿನ ಪ್ರತ್ಯೇಕ ವಿಭಾಗದಲ್ಲಿ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ. ಮೇ 13ರಂದು ಬೆಳಿಗ್ಗೆ 10ಕ್ಕೆ…

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ
ಮೈಸೂರು

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

May 10, 2019

ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಅಗ್ರಹಾರದಲ್ಲಿ ಬುಧ ವಾರ ಸಂಜೆ ಸಂಭವಿಸಿದೆ. ಅಗ್ರಹಾರದ ರಾಮಾನುಜ ರಸ್ತೆ ನಿವಾಸಿ ಕುಮಾರ್ ಅವರ ಮಗ ರಘು(38) ನೇಣಿಗೆ ಶರಣಾದವರು. ಅಂಗವಿಕಲರಾದ ರಘು, ಮೈಸೂರಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಲಿಫ್ಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆ ಸುಮಾರು 5.45 ಗಂಟೆ ವೇಳೆಗೆ ಮನೆಯ 2ನೇ ಮಹಡಿ ಕೊಠಡಿಯಲ್ಲಿ ರಘು ನೇಣು ಹಾಕಿಕೊಂಡಿ ದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸಹೋದರ ಮಂಜುನಾಥ ಹಾಗೂ…

ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಸಾವು
ಮೈಸೂರು

ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಸಾವು

May 10, 2019

ಮೈಸೂರು: ಸೋಮ ವಾರ ಸಂಜೆ ಮೈಸೂರು ತಾಲೂಕು ಕೂರ್ಗಳ್ಳಿ ಬಳಿ ಸಂಭವಿಸಿದ್ದ ಅಪಘಾತ ದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾನೆ. ಕೆ.ಆರ್. ಪೇಟೆ ತಾಲೂಕಿನ ಆಲಂಬಳ್ಳಿ ಕಾವಲ್ ನಿವಾಸಿ ಲೇಟ್ ಕರೀಗೌಡರ ಮಗ ಲೋಕೇಶ್ (48) ಸಾವನ್ನಪ್ಪಿದವರು. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಬೈಕ್‍ನಲ್ಲಿ ಹೂಟ ಗಳ್ಳಿಯಿಂದ ಕೂರ್ಗಳ್ಳಿ ಕಡೆಗೆ ಹೋಗು ತ್ತಿದ್ದಾಗ ಎದುರಿನಿಂದ ಗಾರ್ಮೆಂಟ್ಸ್ ಕೆಲಸಗಾರರನ್ನು ಕರೆ ತರುತ್ತಿದ್ದ ವಾಹನ ಸೋಮವಾರ ಸಂಜೆ ಡಿಕ್ಕಿ ಹೊಡೆದು ಉರುಳಿ ಬಿದ್ದಿತ್ತು. ಘಟನೆಯಲ್ಲಿ ಲೋಕೇಶ್…

ದೇವಸ್ಥಾನದ ಬಾಗಿಲು ಮುರಿದು ಹುಂಡಿ ಹಣ ಕಳವು
ಮೈಸೂರು

ದೇವಸ್ಥಾನದ ಬಾಗಿಲು ಮುರಿದು ಹುಂಡಿ ಹಣ ಕಳವು

May 10, 2019

ಮೈಸೂರು: ದೇವಸ್ಥಾನದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಹಣ ದೋಚಿರುವ ಘಟನೆ ಮೈಸೂರಿನ ಟಿ.ಕೆ.ಬಡಾವಣೆ 4ನೇ ಹಂತದಲ್ಲಿ ನಡೆದಿದೆ. ಬಡಾವಣೆಯ ಶ್ರೀ ಮಹಾಗಣ ಸುಬ್ರಹ್ಮಣ್ಯಸ್ವಾಮಿ ದುರ್ಗಾ ದೇವಿ ದೇವಸ್ಥಾನದ ಬಾಗಿಲನ್ನು ಕಬ್ಬಿಣದ ರಾಡಿನಿಂದ ಮೀಟಿ ಒಳನುಗ್ಗಿರುವ ಕಳ್ಳರು, ಅಲ್ಲಿದ್ದ ಸ್ಟೀಲ್ ಹುಂಡಿ ಬೀಗ ಒಡೆದು ಹಣದೊಂದಿಗೆ ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಪೂಜೆ ಮಾಡಲೆಂದು ಬಂದಾಗ ಅರ್ಚಕರಿಗೆ ಹುಂಡಿ ಹಣ ಕಳವಾಗಿರುವುದು ತಿಳಿಯಿತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸರಸ್ವತಿಪುರಂ ಠಾಣೆ ಪೊಲೀಸರು, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ….

1 319 320 321 322 323 330
Translate »