Tag: Mysuru Rains

ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಪುಡಿ ಪುಡಿಯಾದ ಇಟ್ಟಿಗೆಗೂಡಿನ ಪಶು ಆಸ್ಪತ್ರೆಯ ಶೀಟುಗಳು
ಮೈಸೂರು

ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಪುಡಿ ಪುಡಿಯಾದ ಇಟ್ಟಿಗೆಗೂಡಿನ ಪಶು ಆಸ್ಪತ್ರೆಯ ಶೀಟುಗಳು

May 25, 2019

ಮೈಸೂರು: ಗುರುವಾರ ಸಂಜೆ ಬಿದ್ದ ಆಲಿಕಲ್ಲು ಸಹಿತ ಭಾರೀ ಬಿರುಗಾಳಿ ಮಳೆಗೆ ಮೈಸೂರಿನ ಇಟ್ಟಿಗೆಗೂಡಿನ ಸರ್ಕಾರಿ ಪಶು ಚಿಕಿತ್ಸಾಲಯದ ಕಲ್ನಾರ್ ಶೀಟು ಗಳು ಒಡೆದು ಪುಡಿ ಪುಡಿಯಾಗಿವೆ. ಗಾಳಿಯ ರಭಸಕ್ಕೆ ಮೇಲೆದ್ದ ಶೀಟುಗಳು ಆಸ್ಪತ್ರೆಯ ಒಳಗೆ ಬಿದ್ದು ಪುಡಿಯಾದವು. ಮಳೆಯ ನೀರಿನಿಂದ ಆಸ್ಪತ್ರೆಯೊಳಗಿನ ಕುರ್ಚಿ, ಮೇಜು, ಬೀರು ತೋಯ್ದು ಹೋಗಿವೆ. ಟೇಬಲ್ ಮೇಲಿನ ಹಾಸು ಗಾಜು ಒಡೆದಿದೆ. ಮಳೆಯಿಂದ ತೊಯ್ದು ಔಷಧಿಗಳು ಹಾಳಾಗಿವೆ. ಈ ವೇಳೆ ಆಸ್ಪತ್ರೆ ಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಪ್ರಾಣಾಪಾಯವಾಗಿಲ್ಲ. ಒಟ್ಟಾರೆ 50,000ಕ್ಕೂ ಹೆಚ್ಚಿನ…

ರಾಜ್ಯದಲ್ಲಿ 3 ದಿನ ಗುಡುಗು ಸಹಿತ ಮಳೆ
ಮೈಸೂರು

ರಾಜ್ಯದಲ್ಲಿ 3 ದಿನ ಗುಡುಗು ಸಹಿತ ಮಳೆ

April 18, 2019

ಬೆಂಗಳೂರು, ಏ.17- ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಮೂರು ದಿನಗಳು ಅಕಾಲಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುಡುಗು ಸಹಿತ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ನಾಳೆ ನಡೆಯುವ ಮೊದಲ ಹಂತದ ಲೋಕಸಭಾ ಚುನಾ ವಣಾ ಮತದಾನದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ತಮಿಳುನಾಡು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಇಂದು ಸಂಜೆ ಭಾರೀ ಮಳೆ ಸುರಿದಿದ್ದು, ರಾಜ್ಯದ ನಾನಾ ಜಿಲ್ಲೆಗಳಲ್ಲಿಯೂ…

ಮೈಸೂರಲ್ಲಿ ಜಿಟಿ-ಜಿಟಿ ಮಳೆ: ಜನಜೀವನ ಅಸ್ತವ್ಯಸ್ತ
ಮೈಸೂರು

ಮೈಸೂರಲ್ಲಿ ಜಿಟಿ-ಜಿಟಿ ಮಳೆ: ಜನಜೀವನ ಅಸ್ತವ್ಯಸ್ತ

July 8, 2018

ಮೈಸೂರು: ಇಂದು ಮುಂಜಾನೆಯಿಂದ ರಾತ್ರಿವರೆಗೂ ಎಡೆಬಿಡದೇ ಸುರಿದ ಜಿಟಿ-ಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮೋಡ ಮುಸುಕಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಆರಂಭವಾಯಿತು. ಇದರಿಂದ ಜನರ ಕಾರ್ಯಚಟುವಟಿಕೆಗೆ ತೊಂದರೆ ಉಂಟುಮಾಡಿತು. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಾದ್ಯಂತ ಭಾರೀ ಮಳೆಯಾಗಿದೆ. ಶಾಲಾ-ಕಾಲೇಜು, ಕಚೇರಿ, ಅಂಗಡಿ ಮುಂಗಟ್ಟು, ಪ್ರವಾಸಿಗರು ಮಳೆಯಿಂದ ಪರದಾಡಬೇಕಾಯಿತು. ದೇವರಾಜ ಮಾರುಕಟ್ಟೆ, ಕೆಆರ್, ಮಂಡಿ ಮಾರುಕಟ್ಟೆ, ಮಕ್ಕಾಜಿ ಚೌಕ, ಕೆ.ಆರ್.ಸರ್ಕಲ್, ಗಾಂಧಿಚೌಕ, ಡಿ.ದೇವರಾಜ ಅರಸು ರಸ್ತೆ, ಶಿವರಾಂಪೇಟೆ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಜನರಿಲ್ಲದ…

ಸೋಮವಾರ ಮೈಸೂರಲ್ಲಿ 2.0 ಮಿಮೀ ಮಳೆ
ಮೈಸೂರು

ಸೋಮವಾರ ಮೈಸೂರಲ್ಲಿ 2.0 ಮಿಮೀ ಮಳೆ

June 13, 2018

ಮೈಸೂರು: ಸೋಮವಾರ ಮೈಸೂರಲ್ಲಿ 2.0ಮಿಮೀ ಮಳೆಯಾಗಿದೆ. ನಂಜನಗೂಡು 1.87, ಕೆ.ಆರ್.ನಗರ 4.25, ಹೆಚ್.ಡಿ.ಕೋಟೆ 33.6, ಪಿರಿಯಾಪಟ್ಟಣ 8.42 ಮಿಮೀ ಮಳೆಯಾಗಿದೆ. ಹುಣಸೂರು ತಾಲೂಕು ಆಡಳಿತದಿಂದ ಮಳೆಯಾಗಿರುವ ಬಗ್ಗೆ ಇಲ್ಲಿನ ಸಿಬ್ಬಂದಿ ವರದಿ ನೀಡುತ್ತಿಲ್ಲ ಹಾಗೂ ತಿ.ನರಸೀ ಪುರದಲ್ಲಿ ಮಳೆಯಾಗಿಲ್ಲ ಎಂದು ಜಿಲ್ಲಾಧಿ ಕಾರಿಗಳ ಕಂಟ್ರೋಲ್ ಸಿಬ್ಬಂದಿ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಕೆಆರ್ ಸ್ ಅಣೆಕಟ್ಟಿನಲ್ಲಿ 84.50 ಅಡಿ ನೀರಿದ್ದು, 21,476 ಕ್ಯೂಸೆಕ್ ಒಳ ಹರಿವಿದೆ. 317 ಕ್ಯೂಸೆಕ್ ಹೊರ ಹರಿವಿದೆ. ಕಬಿನಿ ಜಲಾಶಯದಲ್ಲಿ 2271.02 ಅಡಿ ನೀರಿದ್ದು,…

ಮೈಸೂರಲ್ಲಿ ಮಳೆ ಅವಾಂತರ: ಜಿಲ್ಲಾಧಿಕಾರಿಗಳಿಂದ ಪರಿಶೀಲನೆ
ಮೈಸೂರು

ಮೈಸೂರಲ್ಲಿ ಮಳೆ ಅವಾಂತರ: ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

June 1, 2018

ಮೈಸೂರು: ಮಳೆಯಿಂದ ಅವಾಂತರ ಉಂಟಾಗಿದ್ದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ ಅವರು ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೈಸೂರಿನ ಕನಕಗಿರಿ, ಗುಂಡೂರಾವ್‍ನಗರ, ಮುನೇಶ್ವರ ಹಾಗೂ ಶ್ರೀರಾಂಪುರ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ಮಳೆಯಿಂದ ನೀರು ನುಗ್ಗಿ ತೀವ್ರ ಸಮಸ್ಯೆಯಾಗಿದೆ. ಸ್ಥಳದಲ್ಲಿ ಚರಂಡಿ ತೆರವುಗೊಳಿಸುವುದು, ಕಿರು ಸೇತುವೆಗಳ ನಿರ್ಮಾಣ, ಡೀ ಶೆಲ್ಟಿಂಗ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳಿಗೆ ಸೂಚಿಸಿದರು. ಗಣಪತಿ ಆಶ್ರಮದ ಹಿಂಭಾಗದ ತಗ್ಗು ಪ್ರದೇಶದಲ್ಲಿ ಚರಂಡಿ ನೀರು ಸರಾಗವಾಗಿ…

ಮೈಸೂರಲ್ಲಿ ಸೋಮವಾರ 5 ಮಿಮೀ ಮಳೆ
ಮೈಸೂರು

ಮೈಸೂರಲ್ಲಿ ಸೋಮವಾರ 5 ಮಿಮೀ ಮಳೆ

May 30, 2018

ಮೈಸೂರು: ಸೋಮವಾರ ಮೈಸೂರಲ್ಲಿ 5 ಮಿಮೀ ಮಳೆಯಾಗಿದೆ. ನಂಜನಗೂಡು 10.51, ತಿ.ನರಸೀಪುರ 1.7, ಹುಣಸೂರು 7.6, ಕೆ.ಆರ್.ನಗರ 2.2, ಹೆಚ್.ಡಿ.ಕೋಟೆ 0.3, ಪಿರಿಯಾಪಟ್ಟಣ 7.13 ಮಿಮೀ ಮಳೆಯಾಗಿದೆ. ಕೆಆರ್‍ಎಸ್ ಅಣೆಕಟ್ಟಿನಲ್ಲಿ 73.80 ಅಡಿ ನೀರಿದ್ದು, 3,270 ಕ್ಯೂಸೆಕ್ ಒಳ ಹರಿವು, 292 ಹೊರ ಹರಿವಿದೆ. ಕಬಿನಿ ಜಲಾಶಯದಲ್ಲಿ 56.75 ಅಡಿ ನೀರಿದ್ದು, 2,378 ಕ್ಯೂಸೆಕ್ ಒಳ ಹರಿವು, 300 ಕ್ಯೂಸೆಕ್ ಹೊರ ಹರಿವಿದೆ ಎಂದು ಅಧಿಕಾರಿಗಳು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮಳೆಗೆ ಬಾಯ್ತೆರೆದ ಗುಂಡಿಗಳು: ವಾಹನ ಸವಾರರ ಪೇಚಾಟ
ಮೈಸೂರು

ಮಳೆಗೆ ಬಾಯ್ತೆರೆದ ಗುಂಡಿಗಳು: ವಾಹನ ಸವಾರರ ಪೇಚಾಟ

May 29, 2018

ಮೈಸೂರು: ಮೈಸೂರಿನಲ್ಲಿ ನಿರಂತರವಾಗಿ ಸುರಿ ಯುತ್ತಿರುವ ಮಳೆಯ ನಡುವೆ, ಈ ಹಿಂದೆ ತೇಪೆ ಹಾಕಿ ಮುಚ್ಚಿದ್ದ ಗುಂಡಿಗಳು ಬಾಯ್ತೆರೆದು, ವಾಹನ ಸಂಚಾರಕ್ಕೆ ಅಪಾಯ ಕಾರಿಯಾಗಿ ಪರಿಣಮಿಸುತ್ತಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಸೂರಿನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಗರಿಗೆದರಿತ್ತು. ಕೆಲ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಿದರೆ ಮತ್ತಷ್ಟು ರಸ್ತೆಗಳಲ್ಲಿ ಗುಂಡಿಗಳನ್ನು ಮಾತ್ರ ಮುಚ್ಚಿ ತೇಪೆ ಹಾಕಲಾಗಿತ್ತು. ಈ ರೀತಿಯ ತರಾ ತುರಿ ಕಾಮಗಾರಿಯೂ ಸಂಪೂರ್ಣ ವಾಗದ ಕಾರಣ ಹಲವಾರು ಗುಂಡಿಗಳಿಗೆ ಡಾಂಬರು ಬದಲಾಗಿ ಮಣ್ಣು ಮುಚ್ಚ ಲಾಗಿದೆ. ವಾರದಿಂದ ನಿರಂತರವಾಗಿ…

ಮೈಸೂರಿನಲ್ಲಿ ನಿಲ್ಲದ ವರ್ಷಧಾರೆ ಹಲವೆಡೆ ಧರೆಗುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ
ಮೈಸೂರು

ಮೈಸೂರಿನಲ್ಲಿ ನಿಲ್ಲದ ವರ್ಷಧಾರೆ ಹಲವೆಡೆ ಧರೆಗುರುಳಿದ ಮರಗಳು, ಸಂಚಾರ ಅಸ್ತವ್ಯಸ್ತ

May 26, 2018

ಮೈಸೂರು: ಕೆಲವು ದಿನಗಳಿಂದ ಮೈಸೂರಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಶುಕ್ರವಾರವೂ ಸುರಿದ ಮಳೆಗೆ ನಗರದ ವಿವಿಧೆಡೆಗಳಲ್ಲಿ ಮರಗಳು ಧರೆಗುರುಳಿ, ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿತ್ತು. ಶುಕ್ರವಾರ ಸಂಜೆ 4 ಗಂಟೆ ವೇಳೆಗೆ ಆರಂಭವಾದ ಮಳೆ 1 ಗಂಟೆ ಕಾಲ ಜೋರಾಗಿ ಸುರಿಯಿತು. ಬಳಿಕ ಜಿಟಿಜಿಟಿಯಾಗಿ ತಡರಾತ್ರಿವರೆಗೂ ಸುರಿಯಿತು. ಇದರಿಂದ ಒಂಟಿಕೊಪ್ಪಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ತಮಿಳುನಾಡು ನೋಂದಣ ಯ (ಟಿಎನ್74 ಎಡಿ3481) ಕಾರಿನ ಮೇಲೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ…

Translate »