ಸೋಮವಾರ ಮೈಸೂರಲ್ಲಿ 2.0 ಮಿಮೀ ಮಳೆ
ಮೈಸೂರು

ಸೋಮವಾರ ಮೈಸೂರಲ್ಲಿ 2.0 ಮಿಮೀ ಮಳೆ

June 13, 2018

ಮೈಸೂರು: ಸೋಮವಾರ ಮೈಸೂರಲ್ಲಿ 2.0ಮಿಮೀ ಮಳೆಯಾಗಿದೆ. ನಂಜನಗೂಡು 1.87, ಕೆ.ಆರ್.ನಗರ 4.25, ಹೆಚ್.ಡಿ.ಕೋಟೆ 33.6, ಪಿರಿಯಾಪಟ್ಟಣ 8.42 ಮಿಮೀ ಮಳೆಯಾಗಿದೆ. ಹುಣಸೂರು ತಾಲೂಕು ಆಡಳಿತದಿಂದ ಮಳೆಯಾಗಿರುವ ಬಗ್ಗೆ ಇಲ್ಲಿನ ಸಿಬ್ಬಂದಿ ವರದಿ ನೀಡುತ್ತಿಲ್ಲ ಹಾಗೂ ತಿ.ನರಸೀ ಪುರದಲ್ಲಿ ಮಳೆಯಾಗಿಲ್ಲ ಎಂದು ಜಿಲ್ಲಾಧಿ ಕಾರಿಗಳ ಕಂಟ್ರೋಲ್ ಸಿಬ್ಬಂದಿ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಕೆಆರ್ ಸ್ ಅಣೆಕಟ್ಟಿನಲ್ಲಿ 84.50 ಅಡಿ ನೀರಿದ್ದು, 21,476 ಕ್ಯೂಸೆಕ್ ಒಳ ಹರಿವಿದೆ. 317 ಕ್ಯೂಸೆಕ್ ಹೊರ ಹರಿವಿದೆ. ಕಬಿನಿ ಜಲಾಶಯದಲ್ಲಿ 2271.02 ಅಡಿ ನೀರಿದ್ದು, 17,921 ಕ್ಯೂಸೆಕ್ ಒಳ ಹರಿವಿದೆ. 100 ಕ್ಯೂಸೆಕ್ ಹೊರ ಹರಿವಿದೆ. ಹಾರಂಗಿ ಜಲಾಶಯದಲ್ಲಿ 2815.28 ಅಡಿ ನೀರಿದ್ದು, 7,260 ಕ್ಯೂಸೆಕ್ ಒಳ ಹರಿವಿದೆ. 30 ಕ್ಯೂಸೆಕ್ ಹೊರ ಹರಿವಿದೆ. ನುಗು ಜಲಾಶಯದಲ್ಲಿ 72.50 ಅಡಿ ನೀರಿದ್ದು, 1,250 ಕ್ಯೂಸೆಕ್ ಒಳ ಹರಿವಿದೆ. ತಾರಕ ಜಲಾಶಯದಲ್ಲಿ 24.01 ಅಡಿ ನೀರಿದ್ದು, 2,262 ಕ್ಯೂಸೆಕ್ ಹೊರ ಹರಿವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ, ಸರಗೂರು, ಕಂಡಲಿಕೆ ಹೋಬಳಿ ಸುತ್ತಮುತ್ತಲಿನಲ್ಲಿ ಮಂಗಳವಾರÀ ದಿನವಿಡೀ ಸುರಿದ ಮಳೆಯಿಂದಾಗಿ ಇಲ್ಲಿನ ಜನ ಜೀವನ ಅಸ್ತ ವ್ಯಸ್ತಗೊಂಡಿತು. ಇದರಿಂದಾಗಿ ತಾಲೂಕು ಆಡಳಿತ ಈ ಮೂರು ಹೋಬಳಿ ವ್ಯಾಪ್ತಿಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ತಾಲೂಕು ಬಿಇಓ ಸಿಬ್ಬಂದಿ ಪತ್ರಿಕೆಗೆ ಮಾಹಿತಿ ನೀಡಿದರು.

Translate »