ಮೈಸೂರು: ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಫೋರೆನ್ಸಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಕೆ. ಶಿವಕುಮಾರ್ ಅವರು ತೀವ್ರ ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾದರು.
ಮೃತರು ಪತ್ನಿ, ಪುತ್ರ, ಪುತ್ರಿ, ಅಪಾರ ವೈದ್ಯಕೀಯ ಶಿಷ್ಯವೃಂದ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯ ಕ್ರಿಯೆ ಮೈಸೂರಿನ ವಿಜಯನಗರ ನಾಲ್ಕನೇ ಹಂತದಲ್ಲಿರುವ ಮುಕ್ತಿಧಾಮದಲ್ಲಿ ಇಂದು ಮಧ್ಯಾಹ್ನ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರಿನ ವಿಜಯನಗರ 4ನೇ ಹಂತದ ಮರಿಮಲ್ಲಪ್ಪ ವಿದ್ಯಾಸಂಸ್ಥೆ ಬಳಿ ವಾಸವಾಗಿದ್ದ ಡಾ. ಶಿವಕುಮಾರ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಫೋರೆನ್ಸಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಕರಣವೊಂದರ ಸಾಕ್ಷ್ಯ ನುಡಿಯಲೆಂದು ಸೋಮವಾರ ಬೆಳಿಗ್ಗೆ ಹಾಸನ ನ್ಯಾಯಾಲಯಕ್ಕೆ ತೆರಳಿದ್ದ ಅವರು, ವಿಚಾರಣೆ ಮುಗಿಸಿ ಹೊರ ಬರುತ್ತಿ ದ್ದಂತೆಯೇ ಮಧ್ಯಾಹ್ನ 1 ಗಂಟೆ ವೇಳೆಗೆ ಎದೆ ನೋವು ಕಾಣ ಸಿಕೊಂಡ ಕಾರಣ ಅಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ತೋರಿಸಿ ಕೊಂಡರು. ವೈದ್ಯರ ಸಲಹೆ ಮೇರೆಗೆ ಹಾಸನದ ಖಾಸಗಿ ಆಸ್ಪತ್ರೆಗೆ ತೆರಳಿದಾಗ ಪರೀಕ್ಷಿಸಿದ ವೈದ್ಯರು, ಹೃದಯದ ಮೂರೂ ರಕ್ತನಾಳ ಗಳು ಬಂದ್ ಆಗಿರುವುದರಿಂದ ತಕ್ಷಣವೇ ಆಂಜಿಯೋ ಪ್ಲಾಸ್ಟಿ ಮಾಡಬೇಕು, ನಾವೇ ಮಾಡುತ್ತೇವೆ ಎಂದು ಹೇಳಿದರೂ ಡಾ. ಶಿವಕುಮಾರ್ ನಾನು ಮೈಸೂರಿಗೆ ಹೋಗಿ ಆಂಜಿಯೋ ಪ್ಲಾಸ್ಟಿ ಮಾಡಿಸಿಕೊಳ್ಳುತ್ತೇನೆ ಎಂದರು. ತಕ್ಷಣ ಐಸಿಯು ಆಂಬುಲೆನ್ಸ್ ನಲ್ಲಿ ವೈದ್ಯರು, ನರ್ಸ್‍ಗಳ ಸಮೇತ ಹಾಸನದ ಖಾಸಗಿ ಆಸ್ಪತ್ರೆ ವೈದ್ಯರು ಕಳುಹಿಸಿಕೊಟ್ಟ ರಾದರೂ, ಮಾರ್ಗ ಮಧ್ಯೆ ಹೊಳೆನರಸೀ ಪುರ ಬಳಿ ಡಾ. ಶಿವಕುಮಾರ್‍ಗೆ ಎದೆ ನೋವು ತೀವ್ರಗೊಂಡು ಕುಸಿದಂತೆ ಕಂಡರು. ವೈದ್ಯರು ಮತ್ತು ನರ್ಸ್‍ಗಳು ವೆಂಟಿ ಲೇಟರ್ ಸಪೋರ್ಟ್‍ನಿಂದ ಹೇಗೋ ನಿರ್ವಹಿಸಿಕೊಂಡು ರಾತ್ರಿ 9 ಗಂಟೆಗೆ ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆ ತಲುಪಿದರು. ಡಾ. ಶಿವಕುಮಾರ್ ಅವ ರನ್ನು ಪರೀಕ್ಷಿಸಿದ ವೈದ್ಯರು, ಕೊನೆಯು ಸಿರೆಳೆದಿರುವುದನ್ನು ದೃಢಪಡಿಸಿದರು ಎಂದು ಮೂಲಗಳು ತಿಳಿಸಿವೆ.