ಮೈಸೂರಲ್ಲಿ ಜಿಟಿ-ಜಿಟಿ ಮಳೆ: ಜನಜೀವನ ಅಸ್ತವ್ಯಸ್ತ
ಮೈಸೂರು

ಮೈಸೂರಲ್ಲಿ ಜಿಟಿ-ಜಿಟಿ ಮಳೆ: ಜನಜೀವನ ಅಸ್ತವ್ಯಸ್ತ

July 8, 2018

ಮೈಸೂರು: ಇಂದು ಮುಂಜಾನೆಯಿಂದ ರಾತ್ರಿವರೆಗೂ ಎಡೆಬಿಡದೇ ಸುರಿದ ಜಿಟಿ-ಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಮೋಡ ಮುಸುಕಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಆರಂಭವಾಯಿತು. ಇದರಿಂದ ಜನರ ಕಾರ್ಯಚಟುವಟಿಕೆಗೆ ತೊಂದರೆ ಉಂಟುಮಾಡಿತು. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಾದ್ಯಂತ ಭಾರೀ ಮಳೆಯಾಗಿದೆ. ಶಾಲಾ-ಕಾಲೇಜು, ಕಚೇರಿ, ಅಂಗಡಿ ಮುಂಗಟ್ಟು, ಪ್ರವಾಸಿಗರು ಮಳೆಯಿಂದ ಪರದಾಡಬೇಕಾಯಿತು. ದೇವರಾಜ ಮಾರುಕಟ್ಟೆ, ಕೆಆರ್, ಮಂಡಿ ಮಾರುಕಟ್ಟೆ, ಮಕ್ಕಾಜಿ ಚೌಕ, ಕೆ.ಆರ್.ಸರ್ಕಲ್, ಗಾಂಧಿಚೌಕ, ಡಿ.ದೇವರಾಜ ಅರಸು ರಸ್ತೆ, ಶಿವರಾಂಪೇಟೆ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಜನರಿಲ್ಲದ ಕಾರಣ ವ್ಯಾಪಾರ-ವಹಿವಾಟು ಇಳಿಮುಖವಾಗಿತ್ತು. ಮೈಸೂರಲ್ಲಿ ಪ್ರವಾಸಿಗರ ಭೇಟಿ ಇಂದು ಕಡಿಮೆ ಪ್ರಮಾಣದಲ್ಲಿತ್ತು. ಮಳೆಯ ಪರಿಣಾಮ ದ್ವಿಚಕ್ರ ವಾಹನ ಸವಾರರ ಸಂಚಾರವೂ ರಸ್ತೆಗಳಲ್ಲಿ ವಿರಳವಾಗಿತ್ತು. ಇಂದಿನಿಂದ 6 ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

Translate »