ಮೈಸೂರಲ್ಲಿ ನಾಳೆ ಪೊಲೀಸ್ ಪಾರಿತೋಷಕ ಪ್ರದಾನ ಸಮಾರಂಭ
ಮೈಸೂರು

ಮೈಸೂರಲ್ಲಿ ನಾಳೆ ಪೊಲೀಸ್ ಪಾರಿತೋಷಕ ಪ್ರದಾನ ಸಮಾರಂಭ

June 13, 2018

ಸಂಸದ ಪ್ರತಾಪ್ ಸಿಂಹ, ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಎಸ್ಪಿ ಅಮಿತ್ ಸಿಂಗ್ ಉಪಸ್ಥಿತಿ

ಮೈಸೂರು:  ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನ ಆಲೀವ್ ಗಾರ್ಡನ್‍ನ ಸಮಾವೇಶ ಸಭಾಂಗಣದಲ್ಲಿ ಜೂನ್ 14ರಂದು ಸಂಜೆ 4.30 ಗಂಟೆಗೆ 45ನೇ ವಾರ್ಷಿಕ ‘ನೈಟ್ಸ್ ಇನ್ ಖಾಕಿ’ ಪೊಲೀಸ್ ಪಾರಿತೋಷಕ ಪ್ರಧಾನ-2018 ಕಾರ್ಯಕ್ರಮ ನಡೆಯಲಿದೆ.
ಮೈಸೂರು ರೌಂಡ್ ಟೇಬಲ್-21 (ಒಖಖಿ-21) ಮತ್ತು ಮೈಸೂರು ಲೇಡೀಸ್ ಸರ್ಕಲ್-9 (ಒಐಅ-9) ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳು ವರು. ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಹಾಗೂ ಜಿಲ್ಲಾ ಎಸ್ಟಿ ಅಮಿತ್ ಸಿಂಗ್ ಅತಿಥಿ ಗಳಾಗಿ ಭಾಗವಹಿಸುವರು.
ಉತ್ತಮ ಸೇವೆ ಹಾಗೂ ಸಾಧನೆಗೈದಿ ರುವ ಮೈಸೂರು ನಗರ ಹಾಗೂ ಜಿಲ್ಲಾ ಪೊಲೀಸ್ ಘಟಕಗಳಿಂದ ಆಯ್ದ 8 ಮಂದಿ ಪೊಲೀಸ್ ಸಿಬ್ಬಂದಿಗೆ ಪಾರಿತೋಷಕ ನೀಡಿ ಆತ್ಮೀಯವಾಗಿ ಅಭಿನಂದಿಸಲಾ ಗುವುದು. ಪುರಸ್ಕಾರಕ್ಕೆ ಭಾಜನರಾದ ವರು ಈ ಕೆಳಕಂಡಂತಿದ್ದಾರೆ.

1. ಆರ್.ಎಂ.ಸೋಮಶೇಖರ್: ಮೈಸೂರಿನ ವಿವಿ ಪುರಂ ಠಾಣೆ ಹೆಡ್ ಕಾನ್‍ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸು ತ್ತಿರುವ ಆರ್.ಎಂ.ಸೋಮಶೇಖರ್ ಪಾಂಡವಪುರ ತಾಲೂಕಿನ ರಾಗಿಮುದ್ದನ ಹಳ್ಳಿ ಗ್ರಾಮದವರು. ವಿಜಯನಗರ, ಅಶೋಕಪುರಂ ಠಾಣೆಗಳಲ್ಲಿ ಅಪರಾಧ ವಿಭಾಗದಲ್ಲಿ ಕೆಲಸ ನಿರ್ವಹಿಸಿರುವ ಇವರು, ಡಕಾ ಯಿತಿ, ಸುಲಿಗೆ ಹಾಗೂ ಕಳ್ಳತನಗಳಂತಹ ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸೋಮಶೇಖರ್, ವಿವಿಧ ಪ್ರಕರಣ ಗಳ ಅಪರಾಧಿಗಳನ್ನು ಬಂದಿಸಿ ಚಿನ್ನಾಭರಣ, ಮೊಬೈಲ್ ಫೋನ್, ಲ್ಯಾಪ್ ಟಾಪ್‍ಗಳು, ಕಂಪ್ಯೂಟರ್ಸ್ ಸೇರಿದಂತೆ ಸುಮಾರು 88 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2. ಕೆ.ಸಿ.ಗಂಗಾಧರ್: ಎನ್‍ಆರ್ ಠಾಣೆ ಕಾನ್‍ಸ್ಟೇಬಲ್ ಕೆ.ಸಿ.ಗಂಗಾಧರ್, ಪಿರಿಯಾ ಪಟ್ಟಣ ತಾಲೂಕು ಕಂಪಲಾಪುರದವರು. ಠಾಣಾ ವ್ಯಾಪ್ತಿಯ ವಿವಿಧ ಸಮುದಾ ಯದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಕೋಮು ಸೌಹಾದರ್À ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಂತಿ ಸಭೆಗಳನ್ನು ನಡೆಸುವುದು, ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸುವುದರ ಜೊತೆಗೆ ಗಂಗಾಧರ್ ಅವರು 2016ರಲ್ಲಿ ಕಾಣೆಯಾಗಿದ್ದ 68 ಮಂದಿ ಪೈಕಿ 65 ಮಂದಿಯನ್ನು ಪತ್ತೆ ಹಚ್ಚಿದ್ದಾರೆ.

3. ನಸ್ರೀನ್ ತಾಜ್: ದೇವರಾಜ ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಮಹಿಳಾ ಹೆಡ್ ಕಾನ್‍ಸ್ಟೇಬಲ್ ಆಗಿರುವ ಮೈಸೂರಿನ ನಸ್ರೀನ್ ತಾಜ್, ಮಹಿಳಾ ಪೊಲೀಸ್ ಠಾಣೆ, ಲಷ್ಕರ್, ನಜರ್‍ಬಾದ್ ಮತ್ತು ಉದಯಗಿರಿ ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಂಪ್ಯೂಟರ್ ಆಪರೇಟರ್ ಆಗಿಯೂ ಕರ್ತವ್ಯ ನಿರ್ವಹಿಸಿರುವ ಇವರು ಗಣ್ಯರ ಭದ್ರತೆಯನ್ನು ಯಶಸ್ವಿ ಯಾಗಿ ನಿರ್ವಹಿಸಿದ್ದಾರೆ.
ಐಟಿ ನಿರ್ವಹಣೆ, ವರದಿ ತಯಾರಿಸಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯು ವುದು, ದಾಖಲೆ ನಿರ್ವಹಣೆ ಮಾಡುವಲ್ಲಿ ನಸ್ರೀನ ತಾಜ್ ಎತ್ತಿದ ಕೈ.

4. ಎಸ್.ಆರ್.ರವೀಶ್: ಕೆ.ಆರ್.ಸಂಚಾರ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿರುವ ಎಸ್.ಆರ್.ರವೀಶ್ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಗ್ರಾಮದವರು. ದಸರಾ ಮಹೋ ತ್ಸವದ ಸಂದರ್ಭ ಸಂಚಾರ ದಟ್ಟಣೆ ನಿರ್ವ ಹಿಸುವಲ್ಲಿ ಬೇಷ್ ಎನಿಸಿಕೊಂಡಿರುವ ಅವರು, ಕಂಪ್ಯೂಟರ್‍ಗೆ ಎಫ್‍ಟಿವಿಆರ್ ಅಪ್‍ಲೋಡ್ ಮಾಡುವಲ್ಲಿ ಪೂರ್ಣ ಜ್ಞಾನ ಹೊಂದಿದ್ದಾರೆ. ಸಂಚಾರ ನಿಯಮ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಶಾಲಾ-ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸು ವಲ್ಲಿಯೂ ರವೀಶ್ ಹಿರಿಯ ಅಧಿಕಾರಿ ಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.

5. ಪ್ರಭುಲಿಂಗಾರಾಧ್ಯ: ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಭುಲಿಂಗಾರಾಧ್ಯ ಅವರು, ಮಂಡ್ಯ ಪೂರ್ವ, ಕೊಪ್ಪ, ಪಾಂಡವಪುರ, ಹುಣ ಸೂರು ಪಟ್ಟಣ, ಚಾಮರಾಜನಗರ, ಸಾಲಿ ಗ್ರಾಮ, ಮೈಸೂರು ದಕ್ಷಿಣ ಗ್ರಾಮಾಂತರ ಹಾಗೂ ತಿ.ನರಸೀಪುರ ಪೊಲೀಸ್ ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
2008ರಲ್ಲಿ ನಂಜನಗೂಡು ಸರ್ಕಲ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ 12 ಅಂಗನವಾಡಿ ಕೇಂದ್ರಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ, ಖದೀಮರಿಂದ ಅಡುಗೆ ಅನಿಲ ಸಿಲಿಂಡರ್ ಗಳು ಹಾಗೂ ಇತರ ವಸ್ತುಗಳನ್ನು ವಶ ಪಡಿಸಿಕೊಳ್ಳುವಲ್ಲಿ ಅವರು ಶ್ರಮಿಸಿದ್ದರು.

6. ಎಂ.ಮಹೇಶ್: ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ರೈಟರ್ ಆಗಿ ರುವ ಹೆಡ್‍ಕಾನ್‍ಸ್ಟೇಬಲ್ ಎಂ.ಮಹೇಶ್, ಕಂಪ್ಯೂಟರ್ ನಿರ್ವಹಣೆ ಮಾಡುತ್ತಿದ್ದಾರೆ. 1997ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಅವರು, ಮಹದೇಶ್ವರ ಬೆಟ್ಟ, ಹೆಚ್.ಡಿ. ಕೋಟೆ, ತಲಕಾಡು ಹಾಗೂ ಜಯಪುರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

2016ರಲ್ಲಿ ಹೆಡ್‍ಕಾನ್‍ಸ್ಟೇಬಲ್ ಆಗಿ ಪದೋನ್ನತಿ ಪಡೆದು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಗೆ ವರ್ಗಾವಣೆ ಗೊಂಡಿರುವ ಮಹೇಶ್ ತಿ.ನರಸೀಪುರ ಠಾಣೆಯಲ್ಲಿದ್ದಾಗ 2004ರಿಂದ 2006ರ ಅವಧಿಯಲ್ಲಿ ಸೆಷನ್ಸ್ ಕೋರ್ಟ್‍ಗೆ ನಿಯೋಜನೆಗೊಂಡು ಸರಿಯಾದ ಮಾಹಿತಿ ರವಾನೆ ಮಾಡಿದ್ದರಿಂದ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಯಾಗಲು ಕಾರಣರಾಗಿದ್ದರು.

7. ಅಶ್ವಿನಿ: 2008ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ಪ್ರಸ್ತುತ ಹುಣಸೂರಿನ ಗ್ರಾಮಾಂತರ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿ ರುವ ಅಶ್ವಿನಿ, ಬಿಳಿಕೆರೆ ಠಾಣೆಯಲ್ಲಿ ತನಿಖಾಧಿಕಾರಿಗಳಿಗೆ ಸಹಾಯಕಿ ಯಾಗಿ ಕೆಲಸ ನಿರ್ವಹಿಸಿದ್ದರು.
ಕಂಪ್ಯೂಟರ್ ನಿರ್ವಹಣೆ ಮಾಡುತ್ತಿ ರುವ ಅವರು, ಮಹಿಳೆಯರ ಮೇಲಿನ ಕಿರುಕುಳ, ಲೈಂಗಿಕ ದೌರ್ಜನ್ಯಗಳಂತಹ ಪ್ರಕರಣ ನಡೆದಾಗ ನೊಂದವರಿಗೆ ಆಶ್ರಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

8. ರಾಜಕುಮಾರ್: 27 ವರ್ಷ ಗಳಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಯಲ್ಲಿ ಸಶಸ್ತ್ರ ಮುಖ್ಯ ಪೇದೆ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ ಕುಮಾರ್ ಈಗ ಪೊಲೀಸ್ ಶಸ್ತ್ರಾಗಾರ ದಲ್ಲಿ ಕೆಲಸ ಮಾಡುತ್ತಿದ್ದಾರೆ.

2000ನೇ ಇಸವಿಯಲ್ಲಿ ಬುನಾದಿ ತರಬೇತಿ ಪಡೆದು ಎಪಿಸಿಯಾಗಿ ಕೆಲಸಕ್ಕೆ ಸೇರಿ ನಂತರ 2011ರಲ್ಲಿ ಎಹೆಚ್‍ಸಿಯಾಗಿ ಬಡ್ತಿ ಪಡೆದಿದ್ದು, ಶಸ್ತ್ರಾಸ್ತ್ರಗಳ ನಿರ್ವಹಣೆಯಲ್ಲಿ ಉತ್ತಮ ರೆನಿಸಿದ್ದಾರೆ. ನಾಗರಿಕರು, ವಲಯ ಅರಣ್ಯಾದಿಕಾರಿಗಳು, ಅರಣ್ಯರಕ್ಷಕರಿಗೆ ರೈಫಲ್ ತರಬೇತಿ ನೀಡುವ ಪ್ರಕ್ರಿಯೆಯಲ್ಲಿ ರಾಜಕುಮಾರ್ ತೊಡಗಿಸಿಕೊಂಡು, ನೆರವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »