Tag: Raitha Dasara

ಮೈಸೂರು ನಗರದಲ್ಲಿ ಗ್ರಾಮೀಣ ಸೊಗಡು ಬಿಂಬಿಸಿದ: ರೈತ ದಸರಾ ಮೆರವಣಿಗೆ
ಮೈಸೂರು

ಮೈಸೂರು ನಗರದಲ್ಲಿ ಗ್ರಾಮೀಣ ಸೊಗಡು ಬಿಂಬಿಸಿದ: ರೈತ ದಸರಾ ಮೆರವಣಿಗೆ

October 2, 2019

ಮೈಸೂರು: ಆಕರ್ಷಕ ಮೆರವಣಿಗೆಯೊಂದಿಗೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಮೂರು ದಿನಗಳ ರೈತದಸರಾ ಕಾರ್ಯ ಕ್ರಮಗಳಿಗೆ ಚಾಲನೆ ದೊರೆಯಿತು. ಮೆರ ವಣಿಗೆಯಲ್ಲಿ ತಳಿರು ತೋರಣಗಳಿಂದ, ಹಸಿರಿನಿಂದ ಕೂಡಿದ ಅಲಂಕೃತ ಎತ್ತಿನ ಗಾಡಿಗಳು ಭಾಗವಹಿಸಿದ್ದವು. ಹಸಿರು ರುಮಾಲು ಧರಿಸಿದ್ದ ರೈತರು, ರೈತ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಗ್ರಾಮೀಣ ಮೆರಗು ನೀಡಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೀನುಗಾರಿಕೆ, ಮುಜ ರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೆರವಣಿಗೆಗೆ ಚಾಲನೆ…

ಜೆ.ಕೆ.ಮೈದಾನದಲ್ಲಿ ರೈತ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

ಜೆ.ಕೆ.ಮೈದಾನದಲ್ಲಿ ರೈತ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ

October 2, 2019

ಮೈಸೂರು: ರೈತರಿಗೆ ಕೃಷಿಗೆ ಅಗತ್ಯವಾದ ಭರಪೂರ ಮಾಹಿತಿ ನೀಡುವ ಮಳಿಗೆಗಳು ಈ ಬಾರಿಯ ರೈತ ದಸರಾದ ವಿಶೇಷವಾಗಿದೆ. ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಮಾಹಿತಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ರೈತ ದಸರಾ ಉಪಸಮಿತಿ ವತಿಯಿಂದ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ 30ಕ್ಕೂ ಹೆಚ್ಚು ಮಳಿಗೆ ಗಳಿದ್ದು, ಅವುಗಳ ಪೈಕಿ ಹೆಚ್ಚು ಆಕರ್ಷಣೆ ಎಂದರೆ ಬಂಡೂರು ಕುರಿ ತಳಿಗಳು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಕುರಿಗಳ ಹಿಂಡು…

ಇಂದು ಚಾಮರಾಜನಗರದಲ್ಲಿ ರೈತ ದಸರಾ ಕಾರ್ಯಕ್ರಮ
ಚಾಮರಾಜನಗರ

ಇಂದು ಚಾಮರಾಜನಗರದಲ್ಲಿ ರೈತ ದಸರಾ ಕಾರ್ಯಕ್ರಮ

October 15, 2018

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವ 2018ರ ಅಂಗವಾಗಿ ಅಕ್ಟೋಬರ್ 15ರಂದು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ರೈತ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಒಂದೇ ರೈತ ಕುಟುಂಬದ ಸದಸ್ಯರಿಂದ ತಾಳವಾದ್ಯ ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ರೈತಗೀತೆ, 10.15 ರಿಂದ ಉದ್ಘಾಟನೆ ನೆರವೇರಲಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತಾಂತ್ರಿಕ ಗೋಷ್ಠಿಗಳಿವೆ. ವಿಶೇಷ ಆಕರ್ಷಣೆಯಾಗಿ ಕಾಡು ಕೃಷಿ ಆವಿಷ್ಕಾರಕ ಡಾ. ಖಾದರ್…

ಬಹುಮಾನಗಳನ್ನು ಬಾಚಿದ ಹುಣಸೂರು ತಾಲೂಕಿನ ರೈತರು
ಮೈಸೂರು, ಮೈಸೂರು ದಸರಾ

ಬಹುಮಾನಗಳನ್ನು ಬಾಚಿದ ಹುಣಸೂರು ತಾಲೂಕಿನ ರೈತರು

October 14, 2018

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಉಪ ಸಮಿತಿ ಮೈಸೂರಿನ ಜೆ.ಕೆ.ಮೈದಾನದಲ್ಲಿ ಶನಿವಾರ ರೈತರಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಹುಣಸೂರು ತಾಲೂಕಿನ ರೈತರು ಹೆಚ್ಚಿನ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷರೂ ಆದ ಜಂಟಿ ಕೃಷಿ ನಿರ್ದೇಶಕ ಮಹಂತೇಶಪ್ಪ ನೇತೃತ್ವದಲ್ಲಿ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ರೈತ ಪುರುಷರು, ಮಹಿಳೆಯರು ಗೆಲ್ಲಲೇಬೇಕೆಂಬ ಹಠದಲ್ಲಿ ಓಡಿದರು, ಬಿದ್ದು ಮತ್ತೆ ಎದ್ದು ಓಡಿದರು. 50 ಕೆ.ಜಿ ಗೊಬ್ಬರದ ಮೂಟೆ ಹೊತ್ತು ಓಡುವಾಗ ಸ್ಪರ್ಧಿಯೊಬ್ಬರು…

ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ
ಮೈಸೂರು, ಮೈಸೂರು ದಸರಾ

ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ

October 13, 2018

ಮೈಸೂರು:  ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಶುಕ್ರವಾರ ರೈತ ದಸರಾ ಮೆರವಣಿಗೆ ಮೈಸೂರಿನಲ್ಲಿ ಅದ್ಧೂರಿಯಿಂದ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ರೈತರು ಸಂಭ್ರಮ ದಿಂದ ಪಾಲ್ಗೊಂಡಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಬಳಿಕ ನಗಾರಿ ಬಾರಿಸುವ ಮೂಲಕ ಅದ್ಧೂರಿ ರೈತ ದಸರಾ ಮೆರವಣಿಗೆಯನ್ನು…

Translate »