ಜೆ.ಕೆ.ಮೈದಾನದಲ್ಲಿ ರೈತ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

ಜೆ.ಕೆ.ಮೈದಾನದಲ್ಲಿ ರೈತ ದಸರಾ ವಸ್ತು ಪ್ರದರ್ಶನಕ್ಕೆ ಚಾಲನೆ

October 2, 2019

ಮೈಸೂರು: ರೈತರಿಗೆ ಕೃಷಿಗೆ ಅಗತ್ಯವಾದ ಭರಪೂರ ಮಾಹಿತಿ ನೀಡುವ ಮಳಿಗೆಗಳು ಈ ಬಾರಿಯ ರೈತ ದಸರಾದ ವಿಶೇಷವಾಗಿದೆ. ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಮಳಿಗೆಗಳಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಮಾಹಿತಿ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ರೈತ ದಸರಾ ಉಪಸಮಿತಿ ವತಿಯಿಂದ ಆಯೋಜಿಸಿರುವ ವಸ್ತು ಪ್ರದರ್ಶನದಲ್ಲಿ 30ಕ್ಕೂ ಹೆಚ್ಚು ಮಳಿಗೆ ಗಳಿದ್ದು, ಅವುಗಳ ಪೈಕಿ ಹೆಚ್ಚು ಆಕರ್ಷಣೆ ಎಂದರೆ ಬಂಡೂರು ಕುರಿ ತಳಿಗಳು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಕುರಿಗಳ ಹಿಂಡು ವಸ್ತು ಪ್ರದರ್ಶನದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ದಟ್ಟ ಕೂದಲು, ಉದ್ದನೆಯ ಮತ್ತು ಅಗಲ ಶರೀರ, ಕುಳ್ಳನೆ ದೇಹ ಹೊಂದಿರುವ ಬಿಳಿ ಬಣ್ಣದ ಈ ಬಂಡೂರು ಕುರಿಗಳ ಬೆಲೆಯೂ ದುಬಾರಿ. ಕನಿಷ್ಟ 34ರಿಂದ 40 ಕೆಜಿಯಷ್ಟು ಮಾಂಸ ದೊರೆಯುತ್ತದೆ ಎಂಬುದು ಕುರಿಗಳ ಮಾಲೀಕರು ವಿವರಿಸು ತ್ತಾರೆ. ಬಂಡೂರು ಕುರಿಯ ದುಬಾರಿ ಬೆಲೆಗೆ ಕಾರಣ ರುಚಿಯಾದ ಮಾಂಸ. ಸಾಮಾನ್ಯವಾಗಿ ಎಲ್ಲ ಕುರಿಗಳಲ್ಲಿ ಕೊಬ್ಬು ಮಾಂಸದಿಂದ ಪ್ರತ್ಯೇಕವಾಗಿರುತ್ತದೆ. ಆದರೆ, ಬಂಡೂರು ಕುರಿಯಲ್ಲಿ ಮಾಂಸದ ನಡುವಿನಲ್ಲಿಯೇ ತೆಳುವಾದ ಕೊಬ್ಬಿನ ಎಳೆ ಇರುತ್ತದೆ. ಇದೇ ಮಾಂಸದ ರುಚಿಗೆ ಮುಖ್ಯ ಕಾರಣ ಎನ್ನುತ್ತಾರೆ ರೈತರು. ಕರ್ನಾಟಕದ ತಳಿ ಆಗಿರುವ ಇದು ರಾಜ್ಯದ ಯಾವುದೇ ಭಾಗಕ್ಕೆ ಸುಲಭವಾಗಿ ಒಗ್ಗಿಕೊಳ್ಳುತ್ತವೆ. ಸಾಕುವುದು ಬಹು ಸುಲಭ. ಹೆಚ್ಚು ಲಾಭದಾಯಕವೂ ಹೌದು ಎನ್ನುತ್ತಾರೆ ಅದರ ಮಾಲೀಕರು. ಉಳಿದಂತೆ ಕಾವೇರಿ, ಗಿರಿರಾಜ, ಟರ್ಕಿ ಕೋಳಿಗಳು, ವಿವಿಧ ತಳಿಯ ಟಗರು, ಹಸುಗಳು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

ಷಿ ಯಂತ್ರ, ಪರಿಕರಗಳ ಪ್ರದರ್ಶನ: ಕೃಷಿಗೆ ಪೂರಕವಾದ ಯಾಂತ್ರೀಕೃತ ಉಪಕರಣಗಳು, ಟ್ರಾಕ್ಟರ್, ರೋಟೋವೇಟರ್, ಸ್ಪ್ರೇಯರ್, ಪೆಟ್ರೋಲ್ ಇಂಜಿನ್ ಗರಗಸ, ಭಿತ್ತನೆ ಬೀಜ, ಸಾವಯವ ಗೊಬ್ಬರ, ರಸಗೊಬ್ಬರ ಸೇರಿದಂತೆ ರೈತರಿಗೆ ಅಗತ್ಯವಾದ ಎಲ್ಲಾ ಪರಿಕರಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಲ್ಲಿ ಲಭ್ಯವಿದೆ.

Translate »