ಇಂದಿನಿಂದ ಯುವ ದಸರಾ ಆರಂಭ
ಮೈಸೂರು

ಇಂದಿನಿಂದ ಯುವ ದಸರಾ ಆರಂಭ

October 1, 2019

ಮೈಸೂರು,ಸೆ.30(ಎಂಟಿವೈ)-ದಸರಾ ಮಹೋತ್ಸವದ ಯುವ ಜನರ ಆಕರ್ಷಣೀಯ ಕೇಂದ್ರ ಬಿಂದು `ಯುವ ದಸರಾ-2019’ ನಾಳೆ(ಅ.1)ಯಿಂದ ಅ.6ರವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಹೆಸ ರಾಂತ ಕಲಾವಿದರಿಂದ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮ ಹುಚ್ಚೆದ್ದು ಕುಣಿಸಲಿದೆ.

ಸ್ಥಳೀಯ, ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದ ಕಲಾವಿದರಿಗೂ ಯುವ ದಸರಾ ಕಾರ್ಯಕ್ರಮದಲ್ಲಿ ವೇದಿಕೆ ನೀಡಲಾಗಿದ್ದು, ಬಾಲಿವುಡ್ ಹಾಗೂ ಸ್ಯಾಂಡಲ್‍ವುಡ್ ಜನಪ್ರಿಯ ಗೀತೆಗಳ ಗಾಯನ ನಡೆಯಲಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ವರ್ಣರಂಜಿತ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಲಾಗಿದ್ದು, ಮನಮೋಹಕ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. 15 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 35 ಸಾವಿರ ಮಂದಿ ಮೈದಾನದಲ್ಲಿ ನಿಂತು ಕಾರ್ಯಕ್ರಮ ವೀಕ್ಷಣೆಗೂ ವ್ಯವಸ್ಥೆ ಮಾಡ ಲಾಗಿದೆ. ವಾಟರ್ ಫ್ರೂಪ್ ಶಾಮಿಯಾನ ಹಾಕಲಾಗಿದೆ. ಹೆಸರಾಂತ ಸಂಗೀತ ದಿಗ್ಗಜರ ಹಾಡಿಗಾಗಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ವಿವಿಐಪಿ, ವಿಐಪಿ, ಆಹ್ವಾನಿತರು, ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಯುವ ದಸರಾ ಕಾರ್ಯಕ್ರಮವನ್ನು ಯುವ ಜನರು ನಿಂತುಕೊಂಡೇ
ನೋಡಲು ಬಯಸಲಿದ್ದು, ಸಂಗೀತದ ಮಾಧುರ್ಯಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುವುದ ರಿಂದ ಎರಡು ಬೃಹತ್ ಪರದೆಯನ್ನು ಹಾಕಲಾಗಿದೆ. ಒಟ್ಟಾರೆ ನಾಳೆಯಿಂದ ಆರು ದಿನ ಮಹಾರಾಜ ಕಾಲೇಜು ಮೈದಾನ ಯುವಕ-ಯುವತಿಯರ ಆಕರ್ಷಣೀಯ ಕೇಂದ್ರಬಿಂದುವಾಗ ಲಿದ್ದು, ವರ್ಣರಂಜಿತವಾಗಿ ಕಂಗೊಳಿಸಲಿದೆ.

ಪಿ.ವಿ.ಸಿಂಧೂ ಅವರಿಂದ ಚಾಲನೆ:ಮೈಸೂರಿನ ವಾರ್ತಾಭವನದಲ್ಲಿ ಸೋಮವಾರ ಯುವ ದಸರಾ ಉಪಸಮಿತಿ ವಿಶೇಷಾಧಿಕಾರಿ ಸಿ.ಬಿ.ರಿಷ್ಯಂತ್ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾ ಮಹಾರಾಜ ಕಾಲೇಜು ಮೈದಾನದಲ್ಲಿ ಅ.1ರಿಂದ 6ರವರೆಗೆ ಆರು ದಿನಗಳ ಕಾಲ ನಡೆಯಲಿದೆ. ಮಂಗಳವಾರ ಸಂಜೆ 6.45ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಚಾಲನೆ ನೀಡಲಿದ್ದಾರೆ ಎಂದರು. ಈ ಬಾರಿ ಮತ್ತೊಂದು ವಿಶೇಷವಾ ಗಿದ್ದು, ಮೊದಲ ದಿನದ ಕಾರ್ಯಕ್ರಮದಲ್ಲಿ ರಾನು ಮಂಡಾಲ್ ಅವರನ್ನು ಸನ್ಮಾನಿಸಲಾ ಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದ ರಾನು ಮಂಡಾಲ್ ಅವರಿಗೆ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್ ರೇಶ್ಮಿಯ ಅವರು ತಮ್ಮ ಸಿನಿಮಾದಲ್ಲಿ ಹಾಡಲು ಅವಕಾಶ ಕೊಟ್ಟು ಅವರ ಜೀವನವನ್ನೇ ಬದಲಾಯಿಸಿದ್ದರು. ನಾಡಹಬ್ಬದಲ್ಲಿ ಅವರನ್ನು ಆಹ್ವಾನಿಸಲಾಗಿದ್ದು, ಸನ್ಮಾನಿಸಲಾಗುತ್ತಿದೆ.

ಖ್ಯಾತ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ: ಅ.1ರಂದು ಬಾಲಿವುಡ್ ಗಾಯಕರಾದ ಗುರು ರಾಂಧÀವ ತಂಡ, ಅ.2ರಂದು ಬಾಲಿವುಡ್ ಗಾಯಕರಾದ ಮೋಹಿತ್ ಚೌವಾನ್, ಅ.3ರಂದು ಬಾಲಿವುಡ್ ಗಾಯಕರಾದ ಮೊನಾಲಿ ಠಾಕೂರ್ ಮತ್ತು ತಂಡ, ಅ.4ರಂದು ಸ್ಯಾಂಡಲ್ ವುಡ್ ಗಾಯಕರಾದ ಸಂಚಿತ್ ಹೆಗ್ಡೆ, ಚಂದನ್ ಶೆಟ್ಟಿ, ಮೀಡಿಯಾ ಸ್ಟೇಷನ್ ತಂಡದವರು ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ. ಅ.5ರಂದು ಸ್ಯಾಂಡಲ್‍ವುಡ್ ನೈಟ್ಸ್‍ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಡಾಲಿ ಧÀನಂಜಯ್, ಶರಣ್, ಸಾಧು ಕೋಕಿಲಾ, ಸೃಜನ್ ಲೋಕೇಶ್, ನಟಿ ಹರ್ಷಿಕಾ ಪೂಣಚ್ಚ, ಅ.6ರಂದು ಬಾಲಿವುಡ್ ಗಾಯಕ ಪ್ರೀತಮ್ ಚಕ್ರವರ್ತಿ ತಂಡದವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಅಂದು ಚಲನಚಿತ್ರ ನಟ ರಮೇಶ್ ಅರವಿಂದ್, ನಟಿ ರಾಧಿಕಾ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಯುವ ಸಂಭÀ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾದ ಕಾಲೇಜು ತಂಡಗಳ ನೃತ್ಯ ಪ್ರದರ್ಶನ ಸಂಜೆ 6ರಿಂದ 6.30ರವರೆಗೆ ನಡೆಯಲಿದೆ. ಸಂಜೆ 6.30ರಿಂದ 7.30ರವರೆಗೆ ಸ್ಥಳೀಯ ಕಲಾವಿದರ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 7ರಿಂದ 8ರವರೆಗೆ ಖ್ಯಾತ ಕಲಾವಿದರ ತಂಡಗಳಾದ ಇಲಿಮಿನೇಟಿ ಯುವಿ ಆಕ್ಟ್, ಮಂಗಳೂರಿನ ಬಾಯ್ ಝೋನ್ ಡ್ಯಾನ್ಸ್ ಗ್ರೂಪ್, ಕಿಂಗ್ಸ್ ಯುನೈಟೆಡ್, ಎಸ್.ಬಿ.ಟಾಕೀಸ್ ಸೇರಿ ಅನೇಕ ತಂಡಗಳು ಕಾರ್ಯಕ್ರಮ ನೀಡಲಿವೆ.

ಬಿಗಿ ಪೊಲೀಸ್ ಬಂದೋಬಸ್ತ್: ಅರಮನೆ ಬಿಟ್ಟರೆ ಹೆಚ್ಚಿನ ಸಂಖ್ಯೆ ಸೇರುವ ವೇದಿಕೆ ಎಂದು ಕರೆಯಿಸಿಕೊಂಡಿರುವ ಯುವ ಸಂಭ್ರಮದ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಣ್ಯರು ಹಾದು ಬರುವ ಮಾರ್ಗದಲ್ಲಿ ಸಂಪೂರ್ಣ ಕಮಾಂಡೋ ಪಡೆ ನಿಯೋಜಿಸಲಾಗಿದೆ. ಈಗಾಗಲೇ ಯಾರು ಯಾವ ಮಾರ್ಗದಲ್ಲಿ ಹೋಗಬೇಕು ಅನ್ನುವುದಕ್ಕಾಗಿ ಬ್ಯಾರಿಕೇಡ್‍ಗಳನ್ನು ಹಾಕಿ ನಾಮಫಲಕ ಹಾಕಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಯುವ ದಸರಾ ಉಪಸಮಿತಿ ಅಧ್ಯಕ್ಷ ಗೋಕುಲ್ ಗೋವರ್ಧನ್, ಉಪಾಧ್ಯಕ್ಷರಾದ ಎಲ್.ಆರ್. ಮಹದೇವಸ್ವಾಮಿ, ಶಿವು, ಕಾರ್ಯಾಧ್ಯಕ್ಷ ಡಿ.ಬಿ.ಲಿಂಗಣ್ಣಯ್ಯ, ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್ ಜಿಗಿನಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Translate »