Tag: Second PUC Results

ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಶೇ.61.73ರಷ್ಟು ತೇರ್ಗಡೆ: ಬಾಲಕಿಯರದ್ದೇ ಮೇಲುಗೈ
ಮೈಸೂರು

ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಶೇ.61.73ರಷ್ಟು ತೇರ್ಗಡೆ: ಬಾಲಕಿಯರದ್ದೇ ಮೇಲುಗೈ

April 16, 2019

ಬೆಂಗಳೂರು: ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆ ಶೇಕಡಾ 61.73ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ಮೊದಲ 10 ರ್ಯಾಂಕ್‍ಗಳಲ್ಲಿ 9 ರ್ಯಾಂಕ್ ಗಳನ್ನು ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಸ್ವತಂತ್ರ ಪದವಿಪೂರ್ವ ಕಾಲೇಜು ಬಾಚಿಕೊಂಡಿದೆ. ಉಳಿದ ಒಂದು ರ್ಯಾಂಕ್ ದಾವಣಗೆರೆ ಜಿಲ್ಲಾ ಪಾಲಾ ಗಿದೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗ…

ದ್ವಿತೀಯ ಪಿಯು ಸಂಸ್ಕೃತ ಪತ್ರಿಕೆ ಅಂಕ ಮರು ಎಣಿಕೆ ಫಲಶ್ರುತಿ :ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ ಮೈಸೂರಿಗೆ ಪ್ರಥಮ, ರಾಜ್ಯಕ್ಕೆ 5ನೇ ಸ್ಥಾನ
ಮೈಸೂರು

ದ್ವಿತೀಯ ಪಿಯು ಸಂಸ್ಕೃತ ಪತ್ರಿಕೆ ಅಂಕ ಮರು ಎಣಿಕೆ ಫಲಶ್ರುತಿ :ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ ಮೈಸೂರಿಗೆ ಪ್ರಥಮ, ರಾಜ್ಯಕ್ಕೆ 5ನೇ ಸ್ಥಾನ

June 12, 2018

ಮೈಸೂರು:  ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ 589 ಅಂಕಗಳನ್ನು ದಾಖಲಿಸಿ ಮರಿಮಲ್ಲಪ್ಪ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದ ವಿಜ್ಞಾನ ವಿಭಾಗದ ಅನ್ಸಿ ಜಾಸ್ಮಿನ್ ಡಿಮೆಲೋ ಅಂಕಗಳ ಮರು ಎಣಿಕೆಯಲ್ಲಿ 2 ಅಂಕಗಳನ್ನು ಹೆಚ್ಚಳವಾಗಿ ಪಡೆದು ಮೈಸೂರು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಸಂಸ್ಕೃತ ವಿಷಯದಲ್ಲಿ 96 ಅಂಕಗಳನ್ನು ಪಡೆದಿದ್ದ ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ, ತನಗೆ 100ಕ್ಕೆ 100 ಅಂಕಗಳು ಬರಬೇಕೆಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಪುತ್ರಿಯ ಈ ವಿಶ್ವಾಸದ ಹಿನ್ನೆಲೆಯಲ್ಲಿ ಪದವಿಪೂರ್ವ…

ಜೆಎಸ್‍ಎಸ್ ಮಹಿಳಾ ಪ.ಪೂ. ಕಾಲೇಜ್
ಚಾಮರಾಜನಗರ

ಜೆಎಸ್‍ಎಸ್ ಮಹಿಳಾ ಪ.ಪೂ. ಕಾಲೇಜ್

May 4, 2018

ಗುಂಡ್ಲುಪೇಟೆ:  ಪಟ್ಟಣದ ಜೆಎಸ್‍ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶೇ.86ರಷ್ಟು ಅಂಕಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ಮತ್ತು ವಾಣಿಜ್ಯ ವಿಭಾಗದಿಂದ ಒಟ್ಟು 165 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಇದರಲ್ಲಿ ವಾಣಿಜ್ಯ ವಿಭಾ ಗದ ಪರೀಕ್ಷೆಗೆ ಹಾಜರಾಗಿದ್ದ 93 ವಿದ್ಯಾರ್ಥಿನಿಯರಲ್ಲಿ 87 ಉತ್ತೀರ್ಣರಾಗಿದ್ದು, ತಾಲೂಕಿನ ಕೊಡಸೋಗೆ ಗ್ರಾಮದ ಸಿದ್ದಶೆಟ್ಟಿ ಎಂಬುವರ ಪುತ್ರಿ ಎಸ್.ಪ್ರೀತಿ 558 ಅಂಕಗಳಿಸಿ ಕಾಲೇಜಿಗೆ ಟಾಪರ್ ಆಗಿದ್ದಾಳೆ. 17 ವಿದ್ಯಾರ್ಥಿಗಳು ಅತ್ಯುನ್ನತ, 55 ಪ್ರಥಮ, 13 ದ್ವಿತೀಯ ಹಾಗೂ ಇಬ್ಬರು ಉತ್ತೀರ್ಣರಾಗಿದ್ದಾರೆ. ಕಲಾ…

ತೊಂಡವಾಡಿ ಪಿಯು ವಿದ್ಯಾರ್ಥಿ ಸಾಧನೆ
ಚಾಮರಾಜನಗರ

ತೊಂಡವಾಡಿ ಪಿಯು ವಿದ್ಯಾರ್ಥಿ ಸಾಧನೆ

May 4, 2018

ತೊಂಡವಾಡಿ: ತರಕಾರಿ ಮಾರುತ್ತಾ ಕಡು ಬಡತನದಲ್ಲೂ ಗ್ರಾಮೀಣ ಪ್ರತಿಭೆಯೊಂದು ಕಳೆದ ದ್ವಿತೀಯ ಪಿಯುಸಿಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಗ್ರಾಮದ ತರಕಾರಿ ವ್ಯಾಪಾರಿ ಬಸವರಾಜ್ ಎಂಬುವರ ಮಗ ಕೆಂಪರಾಜು ಬಿ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ ದಲ್ಲಿ 542 ಅಂಕ ಗಳಿಸಿದ್ದಾನೆ. ಕೆಂಪ ರಾಜು ಸಾಧನೆಗೆ ಶಿಕ್ಷಕರು, ಗ್ರಾಮಸ್ಥರು, ಕುಟುಂಬಸ್ಥರು ಅಭಿನಂದಿಸಿದ್ದಾರೆ.

ವಿದ್ಯಾರ್ಥಿನಿ ಆತ್ಮಹತ್ಯೆ
ಹಾಸನ

ವಿದ್ಯಾರ್ಥಿನಿ ಆತ್ಮಹತ್ಯೆ

May 3, 2018

ಅರಸೀಕೆರೆ: ಪಿಯು ಪರೀಕ್ಷೆ ಯಲ್ಲಿ ಅನುತ್ತೀರ್ಣ ಆದ ಹಿನ್ನೆಲೆ ವಿದ್ಯಾರ್ಥಿನಿಯೋರ್ವಳು ಅತ್ಮಹತ್ಯೆಗೆ ಶರಣರಾದ ಘಟನೆ ಸಮಿಪದ ಕೋರನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟರಾಜು ಪುತ್ರಿ ರೋಜ ಅತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಪಟ್ಟಣದ ಪ್ರತಿಭಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ ಈಕೆ ಆನ್‍ಲೈನ್‍ನಲ್ಲಿ ಫಲಿಂತಾಂಶ ವೀಕ್ಷಿಸಿ ಅನುತ್ರ್ತೀಣವಾದ ಹಿನ್ನೆಲೆ ಮನನೊಂದು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಹಾಸನ ಜಿಲ್ಲೆಗೆ 8ನೇ ಸ್ಥಾನ
ಹಾಸನ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಹಾಸನ ಜಿಲ್ಲೆಗೆ 8ನೇ ಸ್ಥಾನ

May 1, 2018

ಹಾಸನ: 2018ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ 13,682 ವಿದ್ಯಾರ್ಥಿಗಳಲ್ಲಿ 10,107 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಶೇಕಡಾವಾರು ಫಲಿತಾಂಶವು ಪ್ರತಿಶತ ಶೇ.73.87 ರೊಂದಿಗೆ ರಾಜ್ಯ ದಲ್ಲಿ ಜಿಲ್ಲೆಯು 8ನೇ ಸ್ಥಾನದಲ್ಲಿದೆ. 2017ನೇ ಸಾಲಿನಲ್ಲಿ ಶೇ.59.88 ಫಲಿತಾಂಶದೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ.73.87 ಫಲಿ ತಾಂಶದೊಂದಿಗೆ 8ನೇ ಸ್ಥಾನಕ್ಕೇರಿದೆ. ಸಂಯೋಜನೆವಾರು ಫಲಿತಾಂಶದಲ್ಲಿ ಕಲಾ ವಿಭಾಗ 3,406 ವಿದ್ಯಾರ್ಥಿಗಳಲ್ಲಿ 2,263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.66.44 ಫಲಿತಾಂಶ ಬಂದಿದೆ. ವಾಣ ಜ್ಯ ವಿಭಾಗದಲ್ಲಿ 5,650…

ರೈತನ ಮಗ ಮೋಹನ್ ರಾಜ್ಯಕ್ಕೇ ದ್ವಿತೀಯ
ಹಾಸನ

ರೈತನ ಮಗ ಮೋಹನ್ ರಾಜ್ಯಕ್ಕೇ ದ್ವಿತೀಯ

May 1, 2018

ಹಾಸನ: ತಾಲೂಕಿನ ಶಾಂತಿ ಗ್ರಾಮದ ರೈತನ ಮಗ ಮಾಸ್ಟರ್ ಪಿಯು ಕಾಲೇಜಿನ ವಿದ್ಯಾರ್ಥಿ ಮೋಹನ್ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 595 ಅಂಕ ಪಡೆಯವ ಮೂಲಕ ರಾಜ್ಯದಲ್ಲಿ 2ನೇ ಪಡೆದಿದ್ದಾನೆ. ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸಿರುವ ಮೋಹನ್ ಶಾಂತಿಗ್ರಾಮದ ರೈತ ಲಕ್ಷ್ಮೇಗೌಡ, ಲಕ್ಷ್ಮಿ ದಂಪತಿ ಪುತ್ರ. ಕುಟುಂಬ ಶಾಂತಿಗ್ರಾಮದಲ್ಲಿ ಇದ್ದರೂ ಮೋಹನ್ ಹಾಸನದ ತನ್ನ ಅಜ್ಜಿ ಮನೆ ಯಲ್ಲಿ ಇದ್ದುಕೊಂಡು ಶಿಕ್ಷಣಕ್ಕೆ ಗಮನ ನೀಡಿ ಇಂದು ಶಿಕ್ಷಣ ಸಂಸ್ಥೆ, ಕುಟುಂಬ ಕ್ಕಷ್ಟೆಯಲ್ಲದೆ, ಜಿಲ್ಲೆಗೆ ಕೀರ್ತಿ…

ದ್ವಿತೀಯ ಪಿಯುಸಿ: ಜಿಲ್ಲೆಗೆ 6ನೇ ಸ್ಥಾನ
ಚಾಮರಾಜನಗರ

ದ್ವಿತೀಯ ಪಿಯುಸಿ: ಜಿಲ್ಲೆಗೆ 6ನೇ ಸ್ಥಾನ

May 1, 2018

ಚಾಮರಾಜನಗರ: ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸೋಮ ವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ.75.3ರಷ್ಟು ಫಲಿತಾಂಶ ಗಳಿಸುವ ಮೂಲಕ ರಾಜ್ಯದಲ್ಲಿ 6ನೇ ಸ್ಥಾನ ಗಳಿಸಿದೆ. ಜಿಲ್ಲೆಯ ಕಳೆದ ಬಾರಿ ಫಲಿತಾಂಶಕ್ಕಿಂತ ಈ ಬಾರಿ ಸಾಕಷ್ಟು ಸುಧಾರಿಸಿದೆ. ಕಳೆದ ವರ್ಷ ಶೇ.65.34 ರಷ್ಟು ಫಲಿತಾಂಶ ಗಳಿಸಿ 9ನೇ ಸ್ಥಾನದಲ್ಲಿ ಇದ್ದ ಜಿಲ್ಲೆ ಈ ಬಾರಿ ಶೇ.75.3 ರಷ್ಟು ಫಲಿತಾಂಶ ಪಡೆದು 6ನೇ ಸ್ಥಾನ ಗಳಿಸಿದೆ. ಈ ಮೂಲಕ 3 ಸ್ಥಾನ ಜಿಗಿತಗೊಂಡಿದೆ. ಜಿಲ್ಲೆಯಲ್ಲಿ ಹೊಸದಾಗಿ ಒಟ್ಟು…

ಪಿಯುಸಿ ಫಲಿತಾಂಶ; ಕೊಡಗಿಗೆ ರಾಜ್ಯದಲ್ಲಿ ಮೂರನೇ ಸ್ಥಾನ
ಕೊಡಗು

ಪಿಯುಸಿ ಫಲಿತಾಂಶ; ಕೊಡಗಿಗೆ ರಾಜ್ಯದಲ್ಲಿ ಮೂರನೇ ಸ್ಥಾನ

May 1, 2018

ಮಡಿಕೇರಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ. ಕೊಡಗು ಜಿಲ್ಲೆಗೆ ಈ ಬಾರಿ ಶೇ. 83.94 ರಷ್ಟು ಫಲಿತಾಂಶ ಲಭಿಸಿದ್ದು, ದ್ವಿತೀಯ ಬಾರಿಗೆ ಕೊಡಗು ಜಿಲ್ಲೆ ಮೂರನೇ ಸ್ಥಾನ ಕಾಯ್ದುಕೊಂಡಿದೆ. 2016-17ರಲ್ಲಿ ಶೇಕಡವಾರು 75.83 ಫಲಿತಾಂಶ ಲಭಿಸಿದ್ದು, 2017-18ರಲ್ಲಿ ಶೇ. 83.94 ರಷ್ಟು ಫಲಿತಾಂಶ ಪಡೆಯುವ ಮೂಲಕ ಸಾಧನೆಗೈದಿದೆ. ಮಡಿಕೇರಿಯ ಸಂತ ಮೈಕಲರ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಾಣ ಜ್ಯ ವಿಭಾಗದ ಸಿ.ಗಗನ್ 587 ಅಂಕ ಪಡೆದು ವಾಣ…

Translate »