ಜೆಎಸ್‍ಎಸ್ ಮಹಿಳಾ ಪ.ಪೂ. ಕಾಲೇಜ್
ಚಾಮರಾಜನಗರ

ಜೆಎಸ್‍ಎಸ್ ಮಹಿಳಾ ಪ.ಪೂ. ಕಾಲೇಜ್

May 4, 2018

ಗುಂಡ್ಲುಪೇಟೆ:  ಪಟ್ಟಣದ ಜೆಎಸ್‍ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶೇ.86ರಷ್ಟು ಅಂಕಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಕಲಾ ಮತ್ತು ವಾಣಿಜ್ಯ ವಿಭಾಗದಿಂದ ಒಟ್ಟು 165 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಇದರಲ್ಲಿ ವಾಣಿಜ್ಯ ವಿಭಾ ಗದ ಪರೀಕ್ಷೆಗೆ ಹಾಜರಾಗಿದ್ದ 93 ವಿದ್ಯಾರ್ಥಿನಿಯರಲ್ಲಿ 87 ಉತ್ತೀರ್ಣರಾಗಿದ್ದು, ತಾಲೂಕಿನ ಕೊಡಸೋಗೆ ಗ್ರಾಮದ ಸಿದ್ದಶೆಟ್ಟಿ ಎಂಬುವರ ಪುತ್ರಿ ಎಸ್.ಪ್ರೀತಿ 558 ಅಂಕಗಳಿಸಿ ಕಾಲೇಜಿಗೆ ಟಾಪರ್ ಆಗಿದ್ದಾಳೆ. 17 ವಿದ್ಯಾರ್ಥಿಗಳು ಅತ್ಯುನ್ನತ, 55 ಪ್ರಥಮ, 13 ದ್ವಿತೀಯ ಹಾಗೂ ಇಬ್ಬರು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 72ರಲ್ಲಿ 55 ವಿದ್ಯಾರ್ಥಿನಿಯರು ಉತ್ತೀರ್ಣ ರಾಗಿದ್ದು, ಅದರಲ್ಲಿ 30 ಪ್ರಥಮ, 19 ದ್ವಿತೀಯ ಹಾಗೂ 6 ತೃತೀಯ ಸ್ಥಾನ ಗಳಿಸಿದ್ದಾರೆ. ಹೆಚ್ಚಿನ ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿನಿಯರನ್ನು ಪ್ರಾಂಶು ಪಾಲ ಎಚ್.ಪಿ.ಬಸವರಾಜಪ್ಪ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

Translate »