ದ್ವಿತೀಯ ಪಿಯುಸಿ: ಜಿಲ್ಲೆಗೆ 6ನೇ ಸ್ಥಾನ
ಚಾಮರಾಜನಗರ

ದ್ವಿತೀಯ ಪಿಯುಸಿ: ಜಿಲ್ಲೆಗೆ 6ನೇ ಸ್ಥಾನ

May 1, 2018

ಚಾಮರಾಜನಗರ: ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸೋಮ ವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ.75.3ರಷ್ಟು ಫಲಿತಾಂಶ ಗಳಿಸುವ ಮೂಲಕ ರಾಜ್ಯದಲ್ಲಿ 6ನೇ ಸ್ಥಾನ ಗಳಿಸಿದೆ.

ಜಿಲ್ಲೆಯ ಕಳೆದ ಬಾರಿ ಫಲಿತಾಂಶಕ್ಕಿಂತ ಈ ಬಾರಿ ಸಾಕಷ್ಟು ಸುಧಾರಿಸಿದೆ. ಕಳೆದ ವರ್ಷ ಶೇ.65.34 ರಷ್ಟು ಫಲಿತಾಂಶ ಗಳಿಸಿ 9ನೇ ಸ್ಥಾನದಲ್ಲಿ ಇದ್ದ ಜಿಲ್ಲೆ ಈ ಬಾರಿ ಶೇ.75.3 ರಷ್ಟು ಫಲಿತಾಂಶ ಪಡೆದು 6ನೇ ಸ್ಥಾನ ಗಳಿಸಿದೆ. ಈ ಮೂಲಕ 3 ಸ್ಥಾನ ಜಿಗಿತಗೊಂಡಿದೆ.

ಜಿಲ್ಲೆಯಲ್ಲಿ ಹೊಸದಾಗಿ ಒಟ್ಟು 5838 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4396 ವಿದ್ಯಾರ್ಥಿಗಳು ಉತ್ತೀರ್ಣ ರಾಗುವ ಮೂಲಕ ಶೇ.75.3ರಷ್ಟು ಫಲಿ ತಾಂಶ ಬಂದಿದೆ. ಈ ಪೈಕಿ ಹಳಬರು ಸೇರಿದಂತೆ ಪರೀಕ್ಷೆ ಬರೆದಿದ್ದ 3791 ವಿದ್ಯಾರ್ಥಿಗಳ ಪೈಕಿ 2109 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.55.63 ಫಲಿ ತಾಂಶ ದೊರೆತಿದೆ. ಪರೀಕ್ಷೆ ಬರೆದಿದ್ದ 3801 ವಿದ್ಯಾರ್ಥಿನಿಯರ ಪೈಕಿ 2737 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.72.01 ಫಲಿತಾಂಶ ಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಈ ಬಾರಿಯೂ ವಿದ್ಯಾರ್ಥಿ ನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ

ವಿ.ಆರ್.ಶ್ಯಾಮಲಾ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ನಗರ ಪ್ರದೇಶದಲ್ಲಿ 3981 ವಿದ್ಯಾರ್ಥಿ ಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2980 ವಿದ್ಯಾರ್ಥಿಳು ಉತ್ತೀರ್ಣರಾಗಿದ್ದು, ಶೇ.74.86 ಫಲಿತಾಂಶ ಬಂದಿದೆ. ಗ್ರಾಮಾಂತರ ಪ್ರದೇಶದಲ್ಲಿ 1857 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 1416 ವಿದ್ಯಾರ್ಥಿ ಗಳು ಉತ್ತೀರ್ಣರಾಗುವ ಮೂಲಕ ಶೇ.76.25 ರಷ್ಟು ಫಲಿತಾಂಶ ಬಂದಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.

ಕಲಾ ವಿಭಾಗ: ಈ ವಿಭಾಗದಿಂದ 2059 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 1436 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.69.74 ರಷ್ಟು ಫಲಿತಾಂಶ ಬಂದಿದೆ.

ವಾಣಿಜ್ಯ  ವಿಭಾಗ: ಈ ವಿಭಾಗದಿಂದ 2545 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2071 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಶೇ.81.38 ಫಲಿತಾಂಶ ದೊರೆತಿದೆ.

ವಿಜ್ಞಾನ ವಿಭಾಗ: ಈ ವಿಭಾಗದಿಂದ 1234 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 889 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ.72.04 ಫಲಿತಾಂಶ ದೊರೆತಿದೆ.

Translate »