ಭೀಮನಬೀಡುನಲ್ಲಿ ನಿರಂಜನ್‍ಕುಮಾರ್ ಮತ ಯಾಚನೆ
ಚಾಮರಾಜನಗರ

ಭೀಮನಬೀಡುನಲ್ಲಿ ನಿರಂಜನ್‍ಕುಮಾರ್ ಮತ ಯಾಚನೆ

May 1, 2018

ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಸ್. ನಿರಂಜನ್ ಕುಮಾರ್ ಮನೆ ಮನೆಗೆ ತೆರಳಿ ಮತ ಯಾಚಿಸಿದರು.

ನಂತರ ಮಾತನಾಡಿ, ಪ್ರತಿ ವರ್ಷವೂ ಮಳೆಯ ಪ್ರಮಾಣ ಇಳಿಮುಖವಾಗು ತ್ತಿದ್ದು, ರೈತಾಪಿ ವರ್ಗದವರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಜೀವನೋ ಪಾಯಕ್ಕಾಗಿ ಹೈನುಗಾರಿಕೆಯನ್ನು ಅವ ಲಂಬಿಸಿದ್ದರೂ ನಿರ್ವಹಣೆ ಸಾಧ್ಯವಾ ಗುತ್ತಿಲ್ಲ. ಕೃಷಿ ಚಟುವಟಿಕೆಗೆಳು ಕಡಿಮೆ ಯಾದ್ದರಿಂದ ಕಾರ್ಮಿಕರು ನೆರೆರಾಜ್ಯ ಗಳಿಗೆ ವಲಸೆ ತೆರಳುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ ಸಮಸ್ಯೆ ಬಗೆಹರಿಸಿಲ್ಲ. ಇದರಿಂದ ಮಹಿಳೆಯರು ತಮ್ಮ ದೈನಂದಿನ ಕಾರ್ಯಗಳೊಂದಿಗೆ ದೂರದ ಜಮೀನುಗಳಿಂದ ಕುಡಿಯುವ ನೀರು ತರಬೇಕಾಗಿದೆ ಎಂದರು.

ಆದ್ದರಿಂದ ಮುಂಬರುವ ಬಿಜೆಪಿ ಸರ್ಕಾರದಲ್ಲಿ ತಾಲೂಕಿನ ಎಲ್ಲಾ ಕೆರೆ ಗಳಿಗೂ ನದಿ ಮೂಲದಿಂದ ನೀರು ತುಂಬಿ ಸುವ ಯೋಜನೆ ಕಾರ್ಯಗತಗೊಳಿಸ ಲಾಗುವುದು. ಆದ್ದರಿಂದ ಈ ಬಾರಿ ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಸ್.ಗೋವಿಂದರಾಜನ್, ಮುಖಂಡ ರಾದ ಎಸ್.ಪಿ.ಸುರೇಶ್, ಸಿ.ಮಹಾದೇವ ಪ್ರಸಾದ್, ಎಸ್.ಸಿ.ಮಂಜುನಾಥ್, ಸತೀಶ್, ಮಲ್ಲಿಕಾರ್ಜುನ್, ಎನ್. ಮಲ್ಲೇಶ್, ಸಿ.ಹುಚ್ಚೇಗೌಡ ಸೇರಿದಂತೆ ಕಾರ್ಯಕರ್ತರು ಮತ್ತು ವಿವಿಧ ಘಟಕ ಗಳ ಮುಖಂಡರು ಹಾಜರಿದ್ದರು.

Translate »