ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ ಸಿಎಂ ಆಪ್ತ
ಚಾಮರಾಜನಗರ

ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿದ ಸಿಎಂ ಆಪ್ತ

May 1, 2018

ಚಾಮರಾಜನಗರ: ದೇವರಾಜ ಅರಸು ಟ್ರಕ್ ಟರ್ಮಿನಲ್ ಮಾಜಿ ಅಧ್ಯಕ್ಷ ಹಾಗೂ ಉಪ್ಪಾರ ಸಮಾ ಜದ ಮುಖಂಡ ಕೂಡ್ಲೂರು ಹನುಮಂತ ಶೆಟ್ಟಿ ಕಾಂಗ್ರೆಸ್ ತೊರೆದು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖ ದಲ್ಲಿ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಸ್ವತಃ ಹನುಮಂತಶೆಟ್ಟಿ ಈ ವಿಷಯ ತಿಳಿಸಿದರು. ನಾನು ಕಳೆದ 28 ವರ್ಷಗಳಿಂದ ಸಿದ್ದರಾಮಯ್ಯ ಅವರ ಜೊತೆ ರಾಜಕೀಯದಲ್ಲಿ ಇದ್ದವನು. 2013ರಲ್ಲಿ ನಡೆದ ಉಪ್ಪಾರ ಸಮಾವೇಶದ ವೇಳೆ 13 ಬೇಡಿಕೆಗಳನ್ನು ಮುಂದಿಟ್ಟು ಕಾಂಗ್ರೆಸ್ ಬೆಂಬಲಿಸುವ ನಿರ್ಣಯ ಮಾಡಲಾಗಿತ್ತು. ಇದೇ ವರ್ಷದಲ್ಲಿ ನಡೆದ ಚುನಾವಣೆಯಲ್ಲಿ ಸಿ.ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದರು. ಆದರೆ 13 ಬೇಡಿಕೆಗಳಲ್ಲಿ ಉಪ್ಪಾರ ಅಭಿ ವೃದ್ಧಿ ನಿಗಮ ಸ್ಥಾಪನೆ ಮತ್ತು ಭಗೀರಥ ಜಯಂತಿಯನ್ನು ಸರ್ಕಾರದ ಕಾರ್ಯಕ್ರಮ ಗಳಾಗಿ ನಡೆಸುವುದನ್ನು ಬಿಟ್ಟರೆ ಉಳಿದ 11 ಬೇಡಿಕೆಗಳು ಈಡೇರಿಲ್ಲ ಎಂದು ಆಪಾ ದಿಸಿದರು. ಪುಟ್ಟರಂಗಶೆಟ್ಟಿ ಉಪ್ಪಾರರಲ್ಲಿ ನಾನೊಬ್ಬನೇ ಬೆಳೆಯಬೇಕು. ಮತ್ಯಾರು

ಬೆಳೆಯಬಾರದು. ಆ ವಾತಾವರಣ ನಿರ್ಮಿ ಸಲು ಆತ ಪ್ರಯತ್ನಿಸಿದ್ದಾನೆ ಎಂದು ದೂರಿ ದರು. ಹೀಗಾಗಿ ಆತನ ಜೊತೆ ಇರಬಾರದು ಎಂದು ತೀರ್ಮಾನಿಸಿ ಕಾಂಗ್ರೆಸ್ ಪಕ್ಷ ತೊರೆದಿದ್ದೇನೆ. ನಾಳೆ (ಮೇ 1) ಸಂತೇ ಮರಹಳ್ಳಿಯಲ್ಲಿ ನಡೆಯಲಿರುವ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿಗೆ ಸೇರುತ್ತಿದ್ದೇನೆ ಎಂದರು. ಗ್ರಾಮದ ಮುಖಂಡರಾದ ಜಗ ದೀಶ್, ನಾಗರಾಜು, ಶಿವು, ಶಂಕರ್, ಚಿಕ್ಕಸ್ವಾಮಿ, ಸಂಪತ್‍ಕುಮಾರ್ ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದರು.

Translate »