ಇಂದು ಸಂತೇಮರಹಳ್ಳಿಗೆ ಪ್ರಧಾನಿ ನರೇಂದ್ರಮೋದಿ ಬಿಜೆಪಿ ಬೃಹತ್ ಸಮಾವೇಶ
ಚಾಮರಾಜನಗರ

ಇಂದು ಸಂತೇಮರಹಳ್ಳಿಗೆ ಪ್ರಧಾನಿ ನರೇಂದ್ರಮೋದಿ ಬಿಜೆಪಿ ಬೃಹತ್ ಸಮಾವೇಶ

May 1, 2018

ಚಾಮರಾಜನಗರ: ಚಾಮ ರಾಜನಗರ ಪ್ರದೇಶಕ್ಕೆ ಐದು ದಶಕದ ಬಳಿಕ ಪ್ರಧಾನಮಂತ್ರಿಯೊಬ್ಬರು ನಾಳೆ (ಮೇ 1) ಭೇಟಿ ನೀಡುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಗೆ ಮಂಗಳ ವಾರ ಬೆಳಗ್ಗೆ 11ಕ್ಕೆ ಭೇಟಿ ನೀಡಿ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿ ಯಾಗಲಿದ್ದಾರೆ. ಇದಕ್ಕಾಗಿ ಸಿದ್ಧತೆ ಪೂರ್ಣ ಗೊಂಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಮೇ 12ರಂದು ನಡೆಯಲಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಯನ್ನು ಕರೆಸುತ್ತಿದೆ. ಪ್ರಧಾನಿ ಅವರ 5 ದಿನಗಳ ರಾಜ್ಯ ಪ್ರವಾಸ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯಿಂದಲೇ ಆರಂಭ ಆಗುತ್ತಿರುವುದು ಮೈಸೂರು ವಿಭಾಗಕ್ಕೆ ಒಳಪಡುವ 5 ಜಿಲ್ಲೆಗಳ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ತರಿಸಿದೆ.

ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ 22 ವಿಧಾನಸಭಾ ಕ್ಷೇತ್ರಗಳನ್ನು ಒಳ ಗೊಂಡ ಚುನಾವಣಾ ಪ್ರಚಾರ ಸಮಾ ವೇಶಕ್ಕೆ ಸಂತೇಮರಹಳ್ಳಿ ಸಂಪೂರ್ಣ ಸಜ್ಜುಗೊಂಡಿದೆ. ಇಲ್ಲಿ ಮತ್ತೊಂದು ವಿಶೇಷ ವೆಂದರೆ ಸಂತೇಮರಹಳ್ಳಿ ಎಂಬ ಒಂದು ಹೋಬಳಿ ಕೇಂದ್ರಕ್ಕೆ ಪ್ರಧಾನಿಯೊಬ್ಬರ ಭೇಟಿ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿದೆ.

ಸಂತೇಮರಹಳ್ಳಿಯ ಕುದೇರು ರಸ್ತೆ ಯಲ್ಲಿ ಇರುವ ದೇಶವಳ್ಳಿ, ಹೆಗ್ಗವಾಡಿ ಪುರದ ನಡುವಿನ ವಿಶಾಲವಾದ 25 ಎಕರೆ ಪ್ರದೇಶದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಇದೇ ಪ್ರದೇಶದ 3 ಎಕರೆ ಪ್ರದೇಶದಲ್ಲಿ 2 ಹೆಲಿಪ್ಯಾಡ್ ನಿರ್ಮಿ ಸಲಾಗಿದೆ. ಸುಮಾರು 70 ರಿಂದ 80 ಸಾವಿರ ಜನರು ಸಮಾವೇಶದಲ್ಲಿ ಭಾಗ ವಹಿಸುವ ನಿರೀಕ್ಷೆ ಇದೆ. ಪ್ರಧಾನಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಸೇರಿದಂತೆ ರಾಜ್ಯ ನಾಯಕರು, ಚಾ.ನಗರ, ಮೈಸೂರು, ಮಂಡ್ಯ ಜಿಲ್ಲೆಯ ವಿಧಾನ ಸಭಾ ಕ್ಷೇತ್ರದ 22 ಅಭ್ಯರ್ಥಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣ ಗೊಂಡಿದೆ ಎಂದು ಸಮಾವೇಶದ ಉಸ್ತು ವಾರಿ ಹೊತ್ತಿರುವ ಎನ್.ವಿ. ಫಣ ೀಶ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಜಿಲ್ಲೆಗೆ ಮೂರನೇ ಪ್ರಧಾನಿ: ಈ ಹಿಂದೆ ಪ್ರಧಾನಿ ಆಗಿದ್ದ ಇಂದಿರಾಗಾಂಧಿ ಹಾಗೂ ರಾಜೀವ್‍ಗಾಂಧಿ ಜಿಲ್ಲೆಗೆ ಭೇಟಿ ನೀಡಿ ದ್ದರು. ಈ ವೇಳೆ ಚಾಮರಾಜನಗರ ಜಿಲ್ಲೆ ಅಸ್ತಿತ್ವದಲ್ಲಿ ಇರಲಿಲ್ಲ. ಮೈಸೂರು ಜಿಲ್ಲೆಗೆ ಒಳಪಟ್ಟಿತ್ತು. 1997ರಲ್ಲಿ ಚಾಮರಾಜನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಗೆ ಪ್ರಧಾನಮಂತ್ರಿ ಆದವರು ಭೇಟಿ ನೀಡು ತ್ತಿರುವುದು ಇದೇ ಪ್ರಥಮ. ಕಾಂಗ್ರೆಸ್‍ನ ಭದ್ರಕೋಟೆ ಆಗಿರುವ ಚಾಮರಾಜನಗರ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕೆ ಪ್ರಧಾನ ಮಂತ್ರಿಗಳು ಆಗಮಿಸುತ್ತಿರುವುದು ಬಿಜೆಪಿ ಪಕ್ಷದ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹರ್ಷ ತರಿಸಿದೆ.

ಮತ್ತಷ್ಟು ಬಿರುಸು: ಜಿಲ್ಲಾ ಕೇಂದ್ರವಾದ ಚಾಮರಾಜನಗರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಆಗಮಿಸಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿ ದ್ದರು. ಇದಾದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಗರದಲ್ಲಿ ಆಯೋ ಜಿಸಿದ್ದ ಪಕ್ಷದ ಪರಿಶಿಷ್ಟ ವರ್ಗದ ಸಮಾ ವೇಶದಲ್ಲಿ ಭಾಗವಹಿಸಿದ್ದರು. ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಆಗ ಮಿಸುತ್ತಿದ್ದಾರೆ. ಇವರ ಭೇಟಿಯಿಂದ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮತ್ತಷ್ಟು ಚುರುಕುಗೊಳ್ಳಲಿದೆ.

Translate »