ಮೋಹ, ಲೋಭ ಪಾಪಗಳ ತಾಯಿ-ತಂದೆ
ಹಾಸನ

ಮೋಹ, ಲೋಭ ಪಾಪಗಳ ತಾಯಿ-ತಂದೆ

May 1, 2018

ಹಾಸನ: ಮೋಹ ಮತ್ತು ಲೋಭವೇ ಎಲ್ಲಾ ಪಾಪಗಳ ತಾಯಿತಂದೆ ಎಂದು ಚಿತ್ರದುರ್ಗದ ಚಿಕ್ಕಕಬ್ಬಿಗೆರೆಯ ಶ್ರೀ ಗುರುಕುಲ ವೇದವಿದ್ಯಾಪೀಠದ ಶ್ರೀ ಲೋಕೇಶ್ವರ ಶಿವಯೋಗಿ ಸ್ವಾಮೀಜಿ ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ವತಿಯಿಂದ ಭಾನುವಾರ ಸಂಜೆ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 57ನೇ ಹುಣ ್ಣಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮೋಹ ಮತ್ತು ಲೋಭದಿಂದ ದೂರವಿರಲು ಧಾರ್ಮಿಕ ಭಾವನೆ ಅಗತ್ಯ ಎಂದರು.

ಉದಾರತ್ವವೇ ಮನುಷ್ಯನ ಶ್ರೇಷ್ಠ ಗುಣ. ಅಂತಹ ಶ್ರೇಷ್ಠ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಜ್ಜನರ ಸಂಗ ಮತ್ತು ಧಾರ್ಮಿಕ ಭಾವನೆ ಬೆಳೆಸಿಕೊಳ್ಳುವುದು ಅತ್ಯಗತ್ಯ. ಉತ್ತಮ ವಿಚಾರಗಳು ಕಿವಿಯ ಮೇಲೆ ಸತತವಾಗಿ ಬೀಳುವಂತಹ ಪರಿಸರದಲ್ಲಿ ಮಕ್ಕಳನ್ನು ಬೆಳೆಸಬೇಕು. ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.

ದಾನ ಮಾಡುವುದರಿಂದ ಉದಾರ ಗುಣ ಬೆಳೆಸಿಕೊಳ್ಳಬಹುದು. ನಮ್ಮ ಬದುಕು ಮತ್ತು ಭವಿಷ್ಯಕ್ಕೆ ಅಗತ್ಯವಾದುದಷ್ಟನ್ನು ಮಾತ್ರ ಉಳಿಸಿಕೊಂಡು ಉಳಿದುದನ್ನು ಸತ್ಪಾತ್ರರಿಗೆ, ದುರ್ಬಲರಿಗೆ ದಾನ ಮಾಡಬೇಕು. ತ್ಯಾಗದಲ್ಲಿರುವ ಸುಖ ಬೇರಾವು ದರಲ್ಲೂ ಇಲ್ಲ. ತ್ಯಾಗ ಜೀವಿಗಳು ಮಾತ್ರ ಸಮಾಜಕ್ಕೆ ಮಾರ್ಗದರ್ಶನ ನೀಡಬಲ್ಲರು ಎಂದರು.

ಸಮಾರಂಭ ಉದ್ಘಾಟಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಶ್ರೀ ಶಂಭು ನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಉದಾರ ಎಂಬುದು ಬದುಕಿನ ಪ್ರತಿ ಹಂತದಲ್ಲೂ ಪಾಲಿಸಬೇ ಕಾದ ಗುಣ. ಉದಾರ ಗುಣವಿಲ್ಲದಿದ್ದರೆ ಪ್ರಕೃತಿ, ಸಮಾಜ ಯಾವುದೂ ಉಳಿಯುವುದಿಲ್ಲ. ತಪ್ಪು ತಿದ್ದಿಕೊಂಡು ಸರಿಯಾದ ದಾರಿಯಲ್ಲಿ ನಡೆಯಲು ಪ್ರತಿಯೊಬ್ಬ ರಿಗೂ ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಾಗಲಕೋಟೆ ಜಿಲ್ಲೆ ಅನವಾಲ ಪೂರ್ಣಾನಂದ ಆಶ್ರಮದ ಶ್ರೀ ಕೈಲಾಸಪತಿ ಸ್ವಾಮೀಜಿ ಮತ್ತು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಉಪಸ್ಥಿತರಿದ್ದರು.

Translate »