ಜೆಡಿಎಸ್-ಕಾಂಗ್ರೆಸ್ ಗಲಾಟೆ; ಕಲ್ಲು ತೂರಾಟ
ಹಾಸನ

ಜೆಡಿಎಸ್-ಕಾಂಗ್ರೆಸ್ ಗಲಾಟೆ; ಕಲ್ಲು ತೂರಾಟ

May 1, 2018

ಹೊಳೆನರಸೀಪುರ: ತಾಲೂಕಿ ನಲ್ಲಿ ಚುನಾವಣೆ ರಣರಂಗ ದಿನ ದಿನಕ್ಕೂ ಕಾವು ಪಡೆಯುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಸಂಭ ವಿಸಿ ಜಿಪಂ ಸದಸ್ಯನ ಕಾರಿನ ಮೇಲೆ ಕಲ್ಲು ತೂರಾಟ ಘಟನೆ ನಡೆದಿದೆ.

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಚನ್ನರಾಯಪಟ್ಟಣ ತಾಲೂಕಿನ ಎ.ಕಾಳೇನಹಳ್ಳಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾ ಮಾರಿ ನಡೆದಿದ್ದು, ಕಾಂಗ್ರೆಸ್ ನಾಯಕಿ ಅನುಪಮಾ ಅವರ ಪುತ್ರ. ಜಿಪಂ ಸದಸ್ಯ ಶ್ರೇಯಸ್ ಪಟೇಲ್ ಕಾರಿನ ಮೇಲೆ ಕಲ್ಲು ತೂರಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ವಿವರ: ಕಳೆದ ರಾತ್ರಿ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಎ. ಕಾಳೇನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪುತ್ರ ಡಾ.ಸೂರಜ್, ಬೆಂಬಲಿಗರು ಮತ್ತು ಕಾಂಗ್ರೆಸ್ ಜಿಪಂ ಸದಸ್ಯ ಶ್ರೇಯಸ್ ಪಟೇಲ್, ಕಾರ್ಯ ಕರ್ತರು ಚುನಾವಣಾ ಪ್ರಚಾರ ನಡೆಸುವ ವೇಳೆ ಗಲಾಟೆ ಆರಂಭವಾಗಿ ಮಾರಾಮಾರಿ ನಡೆದಿದೆ. ಈ ವೇಳೆ ಜಿಪಂ ಕಾಂಗ್ರೆಸ್ ಸದಸ್ಯನ ಕಾರಿನ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿದ್ದು, ಕಾರಿನ ಗಾಜು ಪುಡಿ ಪುಡಿಯಾಗಿದೆ. ಜೆಡಿಎಸ್‍ನ ದರ್ಶನ್ ಮತ್ತು ವಿಕಾಸ್ ಮೇಲೆ ಹಲ್ಲೆ ನಡೆದಿದೆ ಎನ್ನ ಲಾಗಿದ್ದು, ಬಾಗೂರು ಕಾಂಗ್ರೆಸ್ ಅಭ್ಯರ್ಥಿ ಮಂಜೇಗೌಡರ ಬೆಂಬಲಿಗರು ಹಲ್ಲೆ ನಡೆಸಿ ದ್ದಾರೆಂದು ದೂರಲಾಗಿದೆ. ಕಾಂಗ್ರೆಸ್ ಕಾರ್ಯ ಕರ್ತರ ಮನೆ ಮೇಲೆ ಜೆಡಿಎಸ್ ಕಾರ್ಯ ಕರ್ತರು ಕಲ್ಲು ತೂರಿದ್ದಾರೆ ಎನ್ನಲಾ ಗಿದ್ದು, ಚನ್ನರಾಯಪಟ್ಟಣ ಗ್ರಾಮಾಂ ತರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಸುದ್ದಿ ತಿಳಿದ ನಂತರ ಹೆಚ್ಚುವರಿ ಪೋಲಿಸ್ ಪಡೆಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ಪರಿಸ್ಥಿತಿಯನ್ನು ಹತೋಟಿಗೆ ತಂದರಲ್ಲದೆ ಎ. ಕಾಳೇನಹಳ್ಳಿ ಗ್ರಾಮದಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಸುರಕ್ಷಿತವಾಗಿ ಊರಿನಿಂದ ಹೊರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸದ್ಯಕ್ಕೆ ಗ್ರಾಮ ಬೂದಿ ಮುಚ್ಚಿದ ಕೆಂಡವಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ

Translate »