ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಕೃಷಿ ನೀತಿ ಜಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭರವಸೆ
ಹಾಸನ

ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಕೃಷಿ ನೀತಿ ಜಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭರವಸೆ

May 1, 2018

ಬೇಲೂರು: ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತಂದರೆ ರೈತರಿಗೆ ಅತೀ ಪ್ರಮುಖವಾದ ಕೃಷಿ ನೀತಿ ಜಾರಿಗೆ ತರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಪಟ್ಟಣದಲ್ಲಿ ಜೆಡಿಎಸ್‍ನಿಂದ ಏರ್ಪಡಿಸಿದ್ದ ಕುಮಾರ ಪರ್ವ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾಂಗ್ರೆಸ್ ನಾಯಕರಂತೆ ಟೀಕೆ ಮಾಡು ವುದಕ್ಕೆ ನಾನು ಹೋಗುವುದಿಲ್ಲ. ಏನು ಹೇಳುತ್ತೇನೊ ಅದನ್ನು ಮಾಡಿಯೇ ತೋರಿಸುತ್ತೇನೆ. ತಾಲೂಕಿಗೆ ಶಾಶ್ವತ ನೀರಿನ ಯೋಜನೆಗೆ ಕಾಯಕಲ್ಪ ನೀಡುತ್ತೇನೆ. ರಾಜ್ಯದಲ್ಲಿ 65 ವರ್ಷ ತುಂಬಿದ ಹಿರಿಯರಿಗೆ ಪ್ರತಿ ತಿಂಗಳು 5 ಸಾವಿರ ರೂ. ಗೌರವಧನ, ಗರ್ಭಿಣ ಯರಿಗೆ 6 ಸಾವಿರ ರೂ. ನೀಡುತ್ತೇನೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಮೂರೂವರೇ ವರ್ಷದಲ್ಲಿ ರೈತರಿಂದ 58 ಸಾವಿರ ಕೋಟಿ ರೂ. ಸಾಲ ಮನ್ನಾ ಬೇಡಿಕೆ ಇದ್ದು, ರೈತರ ಬೆಳೆ ಎಷ್ಟು ನಷ್ಟವಾಗಿದೆ ಎಂಬುದನ್ನು ಇದರಿಂದಲೇ ಅಂದಾಜಿಸಬಹುದು. ಬೆಳೆ ನಷ್ಟ ದಿಂದ 3,800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡು, ಅವರ ಕುಟುಂಬಗಳು ಬೀದಿಗೆ ಬಂದಿದೆ. ರೈತರನ್ನು ಬದುಕಿಸಿ ಎಂದು ಜನತೆ ಕೂಗಿದರೂ ಕೇಂದ್ರದ ಮೋದಿ ಸರ್ಕಾರ ಮೀನಾಮೇಷ ಎಣ ಸುತ್ತಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ ತಿಂಗಳಲ್ಲಿ ಘೋಷಣೆ ಮಾಡಿದ ಸಾಲ ಮನ್ನಾದ ಹಣ ವನ್ನು ಇಂದಿಗೂ ತುಂಬಿಕೊಡಲು ಆಗಿಲ್ಲ. ಯಡಿ ಯೂರಪ್ಪ ಅವರು ಹೋದೆಡೆಯಲ್ಲೆಲ್ಲಾ ನಾನು ಮುಖ್ಯ ಮಂತ್ರಿ ಆಗುತ್ತೇನೆಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮಾಡಿರುವ ಸಾಲ ಮನ್ನಾದ ಹಣವನ್ನು ಯಡಿಯೂರಪ್ಪ ತುಂಬಿಕೊಡುವರೇ ಎಂದು ಪ್ರಶ್ನಿಸಿದ ಅವರು, ನನ್ನ ಅವಧಿಯಲ್ಲಿ 25 ದಿನದೊಳಗೆ ರೈತರ ಸಾಲ ಮನ್ನಾ ಹಣವನ್ನು ತುಂಬಿಕೊಟ್ಟಿದ್ದೆ. ಇದನ್ನು ಮುಖ್ಯಮಂತ್ರಿ ಮರೆತಂತಿದೆ. ಬಹುಶÀಃ ಅಧಿಕಾರದ ಮದದಲ್ಲಿ ನೆನಪಿನ ಶಕ್ತಿ ಕಳೆದುಕೊಂಡಂತಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದ ಜನತೆ ಅಧಿಕಾರ ಕೊಟ್ಟರೆ ಅಧಿಕಾರಕ್ಕೆ ಏರಿದ 24 ಗಂಟೆಯೊಳಗೆ 51 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತೇನೆ. ಇದರೊಳಗೆ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ 4 ಸಾವಿರ ಕೋಟಿ ರೂ ಒಳಗೊಂಡಿದೆ. ವೃದ್ಧಾಪ್ಯ ವೇತನ 2000 ರೂ. ನೀಡುತ್ತೇನೆಂದರು.

ನೀವು ಕಟ್ಟಿದ ತೆರಿಗೆ ಹಣವನ್ನು ಬಿಜೆಪಿ, ಕಾಂಗ್ರೆಸ್ಸಿನ ವರು ಲೂಟಿ ಹೊಡೆಯುತ್ತಿದ್ದಾರೆ. ನಾನು ಬಿಜೆಪಿ ಜೊತೆ ಸರ್ಕಾರ ನಡೆಸಿದ ಸಂದರ್ಭ ಯಾವುದೇ ಮುಸಲ್ಮಾನರಿಗೆ ತೊಂದರೆ ಕೊಟ್ಟಿಲ್ಲ. ನಾನು ಬಿಜೆಪಿ, ಕಾಂಗ್ರೆಸ್ ಜೊತೆ ಹೋಗಲು ಸಿದ್ಧನಿಲ್ಲ. ನಿಮ್ಮ ಮನೆ ಕಾಯುತ್ತೇನೆ. ನಿಮ್ಮ ಕುಟುಂಬದ ಸೇವೆ ಮಾಡಲು ಇದೊಂದು ಬಾರಿ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಈ ವೇಳೆ ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಲಿಂಗೇಶ್, ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಗಂಗಾಧರಬಹುಜನ್, ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯಾ ಧ್ಯಕ್ಷ ಬಿ.ಸಿ.ಮಂಜುನಾಥ್, ಜಿಪಂ ಸದಸ್ಯರಾದ ಲತಾ ದಿಲೀಪಕುಮಾರ್, ಲತಾ ಮಂಜೇಶ್ವರಿ, ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಜಿ.ಟಿ.ಇಂದಿರಾ, ಡಿಡಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಎ.ನಾಗರಾಜ್, ತಾಪಂ ಅಧ್ಯಕ್ಷ ಹರೀಶ್, ಪುರಸಭಾ ಅಧ್ಯಕ್ಷೆ ಭಾರತಿ, ಮಾಜಿ ಅಧ್ಯಕ್ಷ ದಯಾನಂದ್, ತಜಮುಲ್‍ಪಾಷ, ರಾಜ್ಯ ಯುವ ಕಾರ್ಯದರ್ಶಿ ಬೋಜೇಗೌಡ, ತಾಲೂಕು ಕಾರ್ಯದರ್ಶಿ ಮಹೇಶ್, ಫಾರೂಖ್‍ಅಹ್ಮದ್, ಯುವ ಘಟಕದ ಅಧ್ಯಕ್ಷ ಉಮೇಶ್, ಪ್ರಮುಖರಾದ ಮಹದೇವ್, ಬಲ್ಲೇನಹಳ್ಳಿ ರವಿ, ಸಿ.ಎಸ್.ಪ್ರಕಾಶ್, ಕಾಮಾಕ್ಷಿರಾಜು ಇತರರಿದ್ದರು.

Translate »