ರೈತನ ಮಗ ಮೋಹನ್ ರಾಜ್ಯಕ್ಕೇ ದ್ವಿತೀಯ
ಹಾಸನ

ರೈತನ ಮಗ ಮೋಹನ್ ರಾಜ್ಯಕ್ಕೇ ದ್ವಿತೀಯ

May 1, 2018

ಹಾಸನ: ತಾಲೂಕಿನ ಶಾಂತಿ ಗ್ರಾಮದ ರೈತನ ಮಗ ಮಾಸ್ಟರ್ ಪಿಯು ಕಾಲೇಜಿನ ವಿದ್ಯಾರ್ಥಿ ಮೋಹನ್ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 595 ಅಂಕ ಪಡೆಯವ ಮೂಲಕ ರಾಜ್ಯದಲ್ಲಿ 2ನೇ ಪಡೆದಿದ್ದಾನೆ.

ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸಿರುವ ಮೋಹನ್ ಶಾಂತಿಗ್ರಾಮದ ರೈತ ಲಕ್ಷ್ಮೇಗೌಡ, ಲಕ್ಷ್ಮಿ ದಂಪತಿ ಪುತ್ರ. ಕುಟುಂಬ ಶಾಂತಿಗ್ರಾಮದಲ್ಲಿ ಇದ್ದರೂ ಮೋಹನ್ ಹಾಸನದ ತನ್ನ ಅಜ್ಜಿ ಮನೆ ಯಲ್ಲಿ ಇದ್ದುಕೊಂಡು ಶಿಕ್ಷಣಕ್ಕೆ ಗಮನ ನೀಡಿ ಇಂದು ಶಿಕ್ಷಣ ಸಂಸ್ಥೆ, ಕುಟುಂಬ ಕ್ಕಷ್ಟೆಯಲ್ಲದೆ, ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಒಟ್ಟು 600 ಅಂಕಗಳಿಗೆ 595 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿರುವ ಮೋಹನ್ ಭೌತಶಾಸ್ತ್ರ-100, ರಸಾ ಯನ-100, ಗಣ ತ-100, ಜೀವಶಾಸ್ತ್ರ-100, ಇಂಗ್ಲಿಷ್-98 ಹಾಗೂ ಕನ್ನಡ ದಲ್ಲಿ-97 ಅಂಕ ಪಡೆದಿದ್ದಾನೆ.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಮೋಹನ್, ಒಟ್ಟು 592ರಿಂದ 593 ಅಂಕ ಬರಬಹುದು ಎಂಬ ನಿರೀಕ್ಷೆ ನನ್ನಲ್ಲಿತ್ತು. ಆದರೆ ನಿರೀಕ್ಷೆಗೂ ಮೀರಿ ಇಷ್ಟೊಂದು ಹೆಚ್ಚಿನ ಅಂಕ ಬಂದಿರುವುದು ನನಗೆ ಸಂತೋಷ ತಂದಿದೆ. ಇದಕ್ಕೆ ನಮ್ಮ ಮಾಸ್ಟರ್ ಕಾಲೇಜಿನ ಉಪನ್ಯಾಸ ಕರು ಮತ್ತು ನಮ್ಮ ಕುಟುಂಬ ಸಹಕಾರ ನೀಡಿವೆ. ಸಂಜೆ 5ರಿಂದ ರಾತ್ರಿ 11 ಹಾಗೂ ಬೆಳಗ್ಗೆ 4.30ರಿಂದ 7.30ರವರೆಗೂ ಓದುತ್ತಿದ್ದೆ. ಫಲಿತಾಂಶ ನನಗೆ ತೃಪ್ತಿ ತಂದಿದೆ. ಕಠಿಣ ಪರಿಶ್ರಮದಿಂದ ಇಷ್ಟೊಂದು ಅಂಕಗಳನ್ನು ಗಳಿಸಲು ಸಾಧ್ಯವಾಗಿದೆ. ಮುಂದೆ ಮೆಡಿಕಲ್‍ಗೆ ಸೇರಬೇಕೆಂಬ ಕನಸಿದೆ ಎಂದು ಹೇಳಿದರು.

ರೈತನಾದ ತಂದೆ ಲಕ್ಷ್ಮೇಗೌಡ ಮಾತನಾಡಿ, ನನ್ನ ಮಗ ಮೋಹನ್ ಎಲ್‍ಕೆಜಿಯಿಂದಲೂ ಪ್ರಥಮ ಸ್ಥಾನ ದಲ್ಲಿಯೇ ಅಂಕಗಳಿಸುತ್ತಾ ಬಂದಿದ್ದಾನೆ. ಕೇವಲ ಓದುವುದಕ್ಕೆ ಮಾತ್ರ ಸೀಮಿತ ವಾಗದೇ ಕುಟುಂಬದ ಕೆಲಸದಲ್ಲೂ ಭಾಗಿ ಯಾಗುತ್ತಿದ್ದನು ಎಂದು ಮೆಚ್ಚುಗೆ ವ್ಯಕ್ತಪಡಿ ಸಿದರು. ಇದೇ ವೇಳೆ ಮೋಹನ್ ತಂದೆ- ತಾಯಿ ಸೇರಿದಂತೆ ಕಾಲೇಜಿನ ಮುಖ್ಯಸ್ಥರು, ಉಪನ್ಯಾಸಕರು ಅಭಿನಂದಿಸಿದ್ದಾರೆ.

Translate »