ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಶೇ.61.73ರಷ್ಟು ತೇರ್ಗಡೆ: ಬಾಲಕಿಯರದ್ದೇ ಮೇಲುಗೈ
ಮೈಸೂರು

ದ್ವಿತೀಯ ಪಿಯು ಫಲಿತಾಂಶ ಪ್ರಕಟ: ಶೇ.61.73ರಷ್ಟು ತೇರ್ಗಡೆ: ಬಾಲಕಿಯರದ್ದೇ ಮೇಲುಗೈ

April 16, 2019

ಬೆಂಗಳೂರು: ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಒಟ್ಟಾರೆ ಶೇಕಡಾ 61.73ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ಮೊದಲ 10 ರ್ಯಾಂಕ್‍ಗಳಲ್ಲಿ 9 ರ್ಯಾಂಕ್ ಗಳನ್ನು ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಸ್ವತಂತ್ರ ಪದವಿಪೂರ್ವ ಕಾಲೇಜು ಬಾಚಿಕೊಂಡಿದೆ. ಉಳಿದ ಒಂದು ರ್ಯಾಂಕ್ ದಾವಣಗೆರೆ ಜಿಲ್ಲಾ ಪಾಲಾ ಗಿದೆ. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗ ದಲ್ಲಿ ಅನುಕ್ರಮವಾಗಿ ಬೆಂಗಳೂರಿನ ಕುಮಾರನ್ ಸಂಯುಕ್ತ ಕಾಲೇಜಿನ ರಜತ್ ಕಶ್ಯಪ್.ಎಸ್ (594), ದಕ್ಷಿಣ ಕನ್ನಡ ಜಿಲ್ಲೆ, ಮೂಡುಬಿದಿರೆಯ ಆಳ್ವಾಸ್ ಮಹಿಳಾ ಪಿಯು ಕಾಲೇಜಿನ ಆಲ್ವಿತಾ ಆನ್ಸಿಲ್ಲಾ ಡಿಸೋಜ (596) ಹಾಗೂ ಬಳ್ಳಾರಿ ಜಿಲ್ಲೆ ಕೊಟ್ಟೂ ರಿನ ಇಂದು ಸ್ವತಂತ್ರ ಪದವಿಪೂರ್ವ ಕಾಲೇಜಿನ ಕುಸುಮ ಉಜ್ಜೈನಿ (594) ಪ್ರಥಮ ರ್ಯಾಂಕ್ ಪಡೆದಿ ದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದ್ದರೆ,

ದಕ್ಷಿಣ ಕನ್ನಡ ದ್ವಿತೀಯ, ಚಿತ್ರದುರ್ಗ ಕೊನೇ ಸ್ಥಾನದಲ್ಲಿದೆ. ಕೊಡಗು ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಬಾರಿ ಪರೀಕ್ಷೆಗೆ 6,71,653 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ 4,14,587 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,53,865 ವಿದ್ಯಾರ್ಥಿಗಳು ಹಾಜರಾಗಿದ್ದು, 1,68,531 ಮಂದಿ ತೇರ್ಗಡೆಯಾಗಿ, ಶೇ.66.39ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 2,17,766 ವಿದ್ಯಾರ್ಥಿ ಗಳು ಹಾಜರಾಗಿ 1,14,983 ಮಂದಿ ತೇರ್ಗಡೆಯಾಗಿದ್ದು, ಶೇ.66.58ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆಗೆ ಹಾಜರಾದ 3,33,983 ವಿದ್ಯಾರ್ಥಿನಿಯರ ಪೈಕಿ 2,27,897 ಮಂದಿ ತೇರ್ಗಡೆಯಾಗಿ ಶೇ.68.24ರಷ್ಟು ಫಲಿತಾಂಶ ಗಳಿಸಿದ್ದಾರೆ. ಬಾಲಕರು 3,37,668 ಮಂದಿ ಹಾಜರಾಗಿ, 1,86,691 ಮಂದಿ ಪಾಸಾಗಿದ್ದು, ಶೇ.55.29ರಷ್ಟು ಫಲಿತಾಂಶ ಬಂದಿದೆ.ನಗರ ಪ್ರದೇಶದಲ್ಲಿ 5,22,391 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 3,20,657 ಮಂದಿ ತೇರ್ಗಡೆಯಾಗಿ, ಶೇ.61.38ರಷ್ಟು ಮಂದಿ ಪಾಸಾಗಿದ್ದಾರೆ.

ಗ್ರಾಮೀಣ ಭಾಗದಲ್ಲಿ 1,49,262 ವಿದ್ಯಾರ್ಥಿಗಳು ಹಾಜರಾಗಿ 93,860 ಮಂದಿ ಪಾಸಾಗಿದ್ದು, ಶೇ.62.88ರಷ್ಟು ತೇರ್ಗಡೆ ಹೊಂದಿ, ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ.1.50ರಷ್ಟು ಹೆಚ್ಚಿದೆ.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಶೇ.60.80ರಷ್ಟು, ಅನುದಾನಿತ ಕಾಲೇಜಿನಲ್ಲಿ ಶೇ.65.37ರಷ್ಟು, ಅನುದಾನ ರಹಿತ ಕಾಲೇಜಿನಲ್ಲಿ ಶೇ.73.64ರಷ್ಟು, ವಿಭಜಿತ ಕಾಲೇಜಿನಲ್ಲಿ ಶೇ.72.46ರಷ್ಟು, ಕಾಪೆರ್Çೀರೇಷನ್ ಕಾಲೇಜಿನಲ್ಲಿ ಶೇ.62.60ರಷ್ಟು ಫಲಿತಾಂಶ ಬಂದಿದೆ. ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದವರ ಸಂಖ್ಯೆ-54823, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರ ಸಂಖ್ಯೆ-227301, ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾದವರ ಸಂಖ್ಯೆ- 80357, ತೃತೀಯ ದರ್ಜೆಯಲ್ಲಿ ಉತ್ತೀರ್ಣರಾದವರ ಸಂಖ್ಯೆ 52106 ಆಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 17ರಿಂದ 29ರವರೆಗೆ ಅವಕಾಶವಿದ್ದು, ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಡೌನ್‍ಲೋಡ್‍ಗೆ ಈ ತಿಂಗಳ 27ರಿಂದ ಮೇ 6 ರವರೆಗೆ, ಮರು ಮೌಲ್ಯಮಾಪನ ಹಾಗೂ ಅರ್ಜಿ ಸಲ್ಲಿಕೆಗೆ ಈ ತಿಂಗಳ 29ರಿಂದ ಮೇ 8ರವರೆಗೆ, ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಹಾಗೂ ಮರು ಮೌಲ್ಯಮಾಪನ ಶುಲ್ಕ 1670 ರೂ.ಗಳಾಗಿದೆ.

ಜಿಲ್ಲಾವಾರು ಫಲಿತಾಂಶದಲ್ಲಿ ಕ್ರಮವಾಗಿ 31 ಸ್ಥಾನ ಪಡೆದ ವಿವರ- (1) ಉಡುಪಿ ಶೇ.92.20, (2) ದಕ್ಷಿಣ ಕನ್ನಡ ಶೇ.90.91, (3) ಕೊಡಗು ಶೇ.83.31, (4) ಉ.ಕನ್ನಡ ಶೇ.79.59, (5) ಚಿಕ್ಕಮಗಳೂರು ಶೇ.76.42, (6) ಹಾಸನ ಶೇ.75.19, (7) ಬಾಗಲಕೋಟೆ ಶೇ.74.26, (8) ಬೆಂಗಳೂರು ದಕ್ಷಿಣ ಶೇ.74.25, (9) ಶಿವಮೊಗ್ಗ ಶೇ.73.54, (10) ಬೆಂಗಳೂರು ಗ್ರಾ. ಶೇ.72.91, (11) ಬೆಂಗಳೂರು ಉತ್ತರ ಶೇ.72.68, (12) ಚಾಮರಾಜನಗರ ಶೇ.72.67, (13) ಚಿಕ್ಕಬಳ್ಳಾಪುರ ಶೇ.70.11, (14) ವಿಜಯಪುರ ಶೇ.68.55, (15) ಮೈಸೂರು ಶೇ.68.55, (16) ಹಾವೇರಿ ಶೇ.68.40, (17) ತುಮಕೂರು ಶೇ.65.81, (18) ಕೋಲಾರ ಶೇ.65.19, (19) ಬಳ್ಳಾರಿ ಶೇ.64.87, (20) ಕೊಪ್ಪಳ ಶೇ.63.15, (21) ಮಂಡ್ಯ ಶೇ.63.08, (22) ದಾವಣಗೆರೆ ಶೇ.62.53, (23) ಧಾರವಾಡ ಶೇ.62.49, (24) ರಾಮನಗರ ಶೇ.62.08, (25) ಚಿಕ್ಕೋಡಿ ಶೇ.60.86, (26) ಗದಗ ಶೇ.57.76, (27) ರಾಯಚೂರು ಶೇ.56.73, (28) ಬೆಳಗಾವಿ ಶೇ.56.18, (29) ಕಲಬುರಗಿ ಶೇ.56.09, (30) ಬೀದರ್ ಶೇ.55.78, (31) ಯಾದಗಿರಿ ಶೇ.53.02, (32) ಚಿತ್ರದುರ್ಗ ಶೇ.51.42.

ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್ಯಾಂಕ್, ರಜತ್ ಕಶ್ಯಪ್.ಎಸ್, ಕುಮಾರನ್ ಸಂಯುಕ್ತ ಕಾಲೇಜು-ಬೆಂಗಳೂರು, ಪಡೆದ ಅಂಕಗಳು- 594, ದ್ವಿತೀಯ ರ್ಯಾಂಕ್, ದಿವ್ಯಾ.ಕೆ, ವಿದ್ಯಾಮಂದಿರ ಸ್ವತಂತ್ರ ಪದವಿಪೂರ್ವ ಕಾಲೇಜು, ಮಲ್ಲೇಶ್ವರಂ, ಬೆಂಗಳೂರು, ಪಡೆದ ಅಂಕಗಳು -593, ತೃತೀಯ ರ್ಯಾಂಕ್, ಪ್ರಿಯಾ ನಾಯಕ್, ಪಡೆದ ಅಂಕಗಳು-593, ಆರ್.ವಿ.ಪದವಿಪೂರ್ವ ಕಾಲೇಜು, ಬೆಂಗಳೂರು, ಕಲಾವಿಭಾಗ, ಪ್ರಥಮ ರ್ಯಾಂಕ್, ಕುಸುಮ ಉಜ್ಜೈನಿ, ಇಂದು ಸ್ವತಂತ್ರ ಪದವಿಪೂರ್ವ ಕಾಲೇಜು, ಕೊಟ್ಟೂರು ಬಳ್ಳಾರಿ ಜಿಲ್ಲೆ, ಪಡೆದ ಅಂಕಗಳು-594.

ದ್ವಿತೀಯ ರ್ಯಾಂಕ್, ಹೊಸಮನಿ ಚಂದ್ರಪ್ಪ, ಪಡೆದ ಅಂಕಗಳು-591, ಇಂದು ಸ್ವತಂತ್ರ ಪದವಿಪೂರ್ವ ಕಾಲೇಜು, ಕೊಟ್ಟೂರು ಬಳ್ಳಾರಿ ಜಿಲ್ಲೆ. ತೃತೀಯ ರ್ಯಾಂಕ್, ನಾಗರಾಜು, ಪಡೆದ ಅಂಕಗಳು-591, ಇಂದು ಸ್ವತಂತ್ರ ಪದವಿಪೂರ್ವ ಕಾಲೇಜು, ಕೊಟ್ಟೂರು ಬಳ್ಳಾರಿ ಜಿಲ್ಲೆ. ವಾಣಿಜ್ಯ ವಿಭಾಗ, ಪ್ರಥಮ ರ್ಯಾಂಕ್, ಆಲ್ವಿತಾ ಆನ್ಸಿಲ್ಲಾ ಡಿಸೋಜ, ಪಡೆದ ಅಂಕಗಳು-596, ಆಳ್ವಾಸ್ ಮಹಿಳಾ ಪಿಯು ಕಾಲೇಜು, ಮೂಡಬಿದರೆ, ದಕ್ಷಿಣ ಕನ್ನಡ ಜಿಲ್ಲೆ. ದ್ವಿತೀಯ ರ್ಯಾಂಕ್, ಶ್ರೀಕೃಷ್ಣ ಶರ್ಮ.ಕೆ, ಪಡೆದ ಅಂಕಗಳು-596, ಸತ್ಯಸಾಯಿ ಲೋಕಸೇವಾ ಪಿಯು ಕಾಲೇಜು, ದಕ್ಷಿಣಕನ್ನಡ. ತೃತೀಯ, ಶ್ರೇಯ ಶೆಣೈ, ಪಡೆದ ಅಂಕಗಳು-595, ಕೆನರಾ ಪಿಯು ಕಾಲೇಜು, ಕೊಡೈಬೇಲ್, ಮಂಗಳೂರು.

ಮೈಸೂರು 17ರಿಂದ 15ನೇ ಸ್ಥಾನಕ್ಕೇರಿಕೆ
ಮೈಸೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆ ಶೇ.68.55ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 15ನೇ ಸ್ಥಾನ ಪಡೆದುಕೊಂಡಿದೆ. ಅಲ್ಪ ಸುಧಾರಣೆ ಕಂಡಿದೆಯಾದರೂ ನಿರೀಕ್ಷೆ ಹುಸಿಯಾಗಿದೆ. ಮೈಸೂರು ಜಿಲ್ಲೆ ಮೊದಲ ಹತ್ತರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ.0.85ರಷ್ಟು ಫಲಿತಾಂಶದಲ್ಲಿ ಹೆಚ್ಚಳವಾಗಿದೆ. ಹಾಗಾಗಿ 17ನೇ ಸ್ಥಾನ ದಿಂದ 15ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಜಿಲ್ಲೆಯಲ್ಲಿ ಪರೀಕ್ಷೆ ಬರೆದ 28,595 ಹೊಸಬರಲ್ಲಿ ಶೇ.68.55ರಷ್ಟು (19,601) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಹೊಸದಾಗಿ ಪರೀಕ್ಷೆ ಬರೆದು ತೇರ್ಗಡೆಯಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿ ಶೇಕಡವಾರು ಫಲಿತಾಂಶ ನಿರ್ಧರಿಸಲಾಗುತ್ತದೆ. ಉಳಿದಂತೆ 1,413 ಖಾಸಗಿ ಅಭ್ಯರ್ಥಿಗಳಲ್ಲಿ ಶೇ.26.33ರ(372) ತೇರ್ಗಡೆಯಾಗಿದ್ದಾರೆ. 4,497 ಪುನರಾವರ್ತಿತರಲ್ಲಿ ಶೇ.28.62ರಷ್ಟು (1,287) ಅಭ್ಯರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ ಪರೀಕ್ಷೆ ಬರೆದ 34,505 ವಿದ್ಯಾರ್ಥಿಗಳಲ್ಲಿ 21,260 ತೇರ್ಗಡೆಯಾಗಿದ್ದು, ಜಿಲ್ಲೆಗೆ ಶೇ.61.61ರಷ್ಟು ಫಲಿತಾಂಶ ಪ್ರಾಪ್ತಿಯಾಗಿದೆ.

ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 17,741ರಲ್ಲಿ ಬಾಲಕಿಯರಲ್ಲಿ ಶೇ.69.57ರ ಅನುಪಾತದಲ್ಲಿ 12,342 ಪಾಸಾಗಿದ್ದಾರೆ. ಬಾಲಕರು ಶೇ.53.2ರಷ್ಟು ತೇರ್ಗಡೆಯಾಗಿದ್ದು, ಪರೀಕ್ಷೆ ಬರೆದ 16,764ರಲ್ಲಿ ಬಾಲಕರÀಲ್ಲಿ 8,918 ಮಂದಿ ಪಾಸಾಗಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿ ಹೆಚ್ಚು: ಪಿಯುಸಿ ಪರೀಕ್ಷೆಯಲ್ಲಿ ಶೇ.65.83ರಷ್ಟು ಫಲಿತಾಂಶ ಆಂಗ್ಲ ಮಾಧ್ಯಮದ ಕಾಲೇಜಿಗೆ ಲಭಿಸಿದೆ. ಪರೀಕ್ಷೆಗೆ ಹಾಜರಾಗಿದ್ದ 19,489 ವಿದ್ಯಾರ್ಥಿಗಳಲ್ಲಿ 12,829 ಮಂದಿ ತೇರ್ಗಡೆಯಾಗಿದ್ದಾರೆ. ಕನ್ನಡ ಮಾಧ್ಯಮದ 15,016 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಶೇ.56.15ರಷ್ಟು (8,431) ಪಾಸಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆಯಾಗಿದೆ. 12,881 ವಾಣಿಜ್ಯ ವಿದ್ಯಾರ್ಥಿ ಗಳಲ್ಲಿ 8,696 ಮಂದಿ ತೇರ್ಗಡೆಯಾಗಿ ಶೇ.67.51ರಷ್ಟು ಫಲಿತಾಂಶ ಬಂದಿದೆ. ನಂತರ ಸ್ಥಾನದಲ್ಲಿರುವ ವಿಜ್ಞಾನ ವಿದ್ಯಾರ್ಥಿಗಳು ಶೇ.64.8ರಷ್ಟು ತೇರ್ಗಡೆಯಾಗಿ 12,061 ವಿಜ್ಞಾನ ವಿದ್ಯಾರ್ಥಿಗಳಲ್ಲಿ 7,816 ಮಂದಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ ಫಲಿತಾಂಶ ಕೇವಲ ಶೇ.49.65ರಷ್ಟಿದೆ. 9,563 ಕಲಾ ವಿದ್ಯಾರ್ಥಿಗಳಲ್ಲಿ 4748 ಮಂದಿ ಪಾಸಾಗಿದ್ದು, ಅರ್ಧದಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. 5,053 ವಿದ್ಯಾರ್ಥಿಗಳಲ್ಲಿ 2,752 ಮಂದಿ ಪಾಸಾಗಿದ್ದು, ಶೇ.54.46ರಷ್ಟು ಫsಲಿತಾಂಶ ಗ್ರಾಮೀಣ ಕಾಲೇಜುಗಳಿಗೆ ಲಭ್ಯವಾಗಿದೆ. ನಗರ ಪ್ರದೇಶದ ವಿದ್ಯಾರ್ಥಿಗಳ ಫಲಿತಾಂಶ ಶೇ.62.84ರಷ್ಟಿದೆ. 29,452 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 18,508 ಉತ್ತೀರ್ಣರಾಗಿದ್ದಾರೆ. ಸಾಮಾನ್ಯ ವರ್ಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಇವರ ಫಲಿತಾಂಶ ಶೇ.70ರಷ್ಟಿದೆ. ಶೇ.54.03- ಎಸ್‍ಸಿ, ಶೇ.59.05- ಎಸ್‍ಟಿ, ಶೇ.61.54-ಒಬಿಸಿ ಪ್ರವರ್ಗ 1, ಶೇ.61.55- ಪ್ರವರ್ಗ 2ಎ, ಶೇ.57.78-ಪ್ರವರ್ಗ 2ಬಿ, ಶೇ.66.24- ಪ್ರವರ್ಗ 3ಎ, ಶೇ.66.27- ಪ್ರವರ್ಗ 3ಬಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕೆ.ಅನನ್ಯ ಮೈಸೂರಿಗೆ ಪ್ರಥಮ
ಮೈಸೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಟಾಪ್‍ಟೆನ್‍ನಲ್ಲಿ ಮೈಸೂ ರಿಗೆ ಸ್ಥಾನವಿಲ್ಲ. ಆ ಮೂಲಕ ಮೈಸೂರಿನ ವಿದ್ಯಾರ್ಥಿಗಳು ಈ ಬಾರಿ ನಿರಾಸೆ ಮೂಡಿಸಿದ್ದಾರೆ. ಮೈಸೂರಿನ ಸದ್ವಿದ್ಯಾ ಅರೆ ವಸತಿ ಕಾಲೇಜಿನ ವಿದ್ಯಾರ್ಥಿನಿ ಕೆ.ಅನನ್ಯ 590 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮರಾಗಿದ್ದಾರೆ.

ಕೆ.ಅನನ್ಯ ವಿಜ್ಞಾನ ವಿಷಯ ವಿದ್ಯಾರ್ಥಿ ನಿಯಾಗಿದ್ದು, 600ಕ್ಕೆ 590 ಅಂಕಗಳಿಸಿ ದ್ದಾರೆ. ಗೋಕುಲಂ ನಿವಾಸಿ ಡಾ.ಕೆ.ವಿ. ನರಸಿಂಹರಾವ್ ಮತ್ತು ಆದಿಶಕ್ತಿ ದಂಪತಿ ಪುತ್ರಿಯಾಗಿರುವ ಅನನ್ಯ ಇಂಗ್ಲಿಷ್ ನಲ್ಲಿ 95, ಸಂಸ್ಕøತ 99, ಭೌತಶಾಸ್ತ್ರ 98, ರಸಾಯನಶಾಸ್ತ್ರ 99, ಗಣಿತ 100 ಮತ್ತು ಜೀವಶಾಸ್ತ್ರ 99 ಅಂಕಗಳನ್ನು ಪಡೆದಿದ್ದಾರೆ.
ಮನೆ ಪಾಠಕ್ಕೂ ಹೋಗದೇ ಕಾಲೇಜಿನಲ್ಲಿ ಶಿಕ್ಷಕರು ಹೇಳಿಕೊಡುತ್ತಿದ್ದ ಪಾಠ ಮತ್ತು ಪಠ್ಯ ಪುಸ್ತಕ ಹೆಚ್ಚು ಓದುತ್ತಿದ್ದೆ. ಆಯುರ್ವೇದ ವೈದ್ಯೆಯಾಗುವ ಕನಸು ಎಂದು ತನ್ನ ಭವಿಷ್ಯದ ಬಯಕೆ ವ್ಯಕ್ತಪಡಿಸಿದ್ದಾರೆ.

ದ್ವಿತೀಯ: ಮರಿಮಲ್ಲಪ್ಪ ಕಾಲೇಜಿನ ಕೆ.ಎಸ್.ಹರ್ಷಿತ ವಿಜ್ಞಾನದಲ್ಲಿ 589 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನಗಳಿಸಿದ್ದಾರೆ. ಇಂಗ್ಲಿಷ್‍ನಲ್ಲಿ 95, ಕನ್ನಡÀ 95, ಭೌತಶಾಸ್ತ್ರ 99, ರಸಾಯನಶಾಸ್ತ್ರ 100, ಗಣಿತ 100 ಹಾಗೂ ಜೀವಶಾಸ್ತ್ರ 100 ಅಂಕ ಗಳಿಸಿದ್ದಾರೆ.
ತೃತೀಯ: ಮೈಸೂರಿನ ವಿಜಯ ವಿಠಲ ಕಾಲೇಜಿನ ವಿದ್ಯಾರ್ಥಿ ಜಿ.ಅಜಿತ್‍ಕುಮಾರ್ ವಿಜ್ಞಾನದಲ್ಲಿ 588 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಸಿವಿಲ್ ಇಂಜಿನಿಯರ್ ಗಜಾನನರಾವ್, ತಾಯಿ ಸುಮಾ ಜಿ.ರಾವ್ ದಂಪತಿ ಪುತ್ರ ಜಿ.ಅಜಿತ್ ಕನ್ನಡದÀಲ್ಲಿ 94, ಇಂಗ್ಲಿಷ್ 94, ಭೌತಶಾಸ್ತ್ರ 88, ರಸಾಯನಶಾಸ್ತ್ರ 89, ಗಣಿತ 99 ಹಾಗೂ ಕಂಪ್ಯೂಟರ್ ಸೈನ್ಸ್ 97 ಅಂಕ ಪಡೆದು ಗಮನ ಸೆಳೆದಿದ್ದಾರೆ.

ವಾಣಿಜ್ಯ ವಿಭಾಗ: ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿನಿ ಕೆ.ಸ್ನೇಹ, 600ಕ್ಕೆ 593 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ದ್ದಾರೆ. ಸಂಸ್ಕøತ, ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ನೂರಕ್ಕೆ ನೂರು, ಇಂಗ್ಲಿಷ್‍ನಲ್ಲಿ 95, ಅಕೌಂಟ್ಸ್‍ನಲ್ಲಿ 99 ಮತ್ತು ಬಿಸಿನೆಸ್‍ನಲ್ಲಿ 99 ಅಂಕ ಪಡೆದಿದ್ದಾರೆ. ಈಕೆ ಕೆ.ಸ್ನೇಹ ಕಸ್ತೂರಿರಂಗನ್ ಮತ್ತು ಸುಧಾಮಣಿ ದಂಪತಿಯ ಪುತ್ರಿ. ರಾತ್ರಿ 11 ಗಂಟೆ ನಂತರ ಓದುತ್ತಿರಲಿಲ್ಲ. ಬೆಳಿಗ್ಗಿನ ಜಾವ ಹೆಚ್ಚು ಅಭ್ಯಾಸ ಮಾಡುತ್ತಿದ್ದೆ. ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ್ದೇನೆ. ಬಿಕಾಂನೊಂದಿಗೆ ಸಿಎ ಅಭ್ಯಾಸ ಮಾಡಬೇಕೆಂಬ ಆಸೆ ಇದೆ ಎಂದು ಸ್ನೇಹ ತಿಳಿಸಿದ್ದಾರೆ.

ಅತ್ಯುನ್ನತ ಶ್ರೇಣಿ: ಮರಿಮಲ್ಲಪ್ಪ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಪಿ.ಎಂ. ಪಲ್ಲವಿ ಜಾವಡೇಕರ್ 577 ಅಂಕ ಗಳಿಸಿದ್ದಾರೆ. ಇಂಗ್ಲೀಷ್ 92, ಕನ್ನಡ 95, ಇತಿಹಾಸ 100, ಅರ್ಥಶಾಸ್ತ್ರ 98, ಭೂಗೋಳಶಾಸ್ತ್ರ 100, ರಾಜ್ಯಶಾಸ್ತ್ರ 92 ಅಂಕ ಪಡೆದಿದ್ದಾರೆ.
576 ಅಂಕ: ಸದ್ವಿದ್ಯಾ ಅರೆ ವಸತಿ ಕಾಲೇಜಿನ ವಿದ್ಯಾರ್ಥಿ ಹೆಚ್.ಆರ್.ನಂದನ್ 576 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕನ್ನಡದಲ್ಲಿ 93, ಇಂಗ್ಲೀಷ್ 92, ಭೌತಶಾಸ್ತ್ರ 91, ರಸಾಯನಶಾಸ್ತ್ರ 100, ಗಣಿತದಲ್ಲಿ 100 ಮತ್ತು ಕಂಪ್ಯೂಟರ್ ಸೈನ್ಸ್‍ನಲ್ಲಿ 100 ಅಂಕ ಪಡೆದಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿನಿ ಜೆ.ಎ.ಸಾರಿಕಾ 572 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಹಿಂದಿಯಲ್ಲಿ 95, ಇಂಗ್ಲೀಷ್‍ನÀಲ್ಲಿ 87, ಭೌತಶಾಸ್ತ್ರದಲ್ಲಿ 97, ರಸಾಯನಶಾಸ್ತ್ರ 100, ಗಣಿತ 98 ಹಾಗೂ ಜೀವಶಾಸ್ತ್ರದಲ್ಲಿ 95 ಅಂಕ ಗಳಿಸಿದ್ದಾರೆ.

Translate »