ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ
ಮೈಸೂರು

ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ

April 16, 2019

ಮೈಸೂರು: ಏ.18 ರಂದು ನಡೆಯಲಿರುವ ಮೊದಲ ಹಂತದ ಲೋಕಸಭಾ ಚುನಾವಣಾ ಬಹಿರಂಗ ಪ್ರಚಾರ ನಾಳೆ(ಏ16) ಸಂಜೆ 6ಕ್ಕೆ ಅಂತ್ಯಗೊಳ್ಳಲಿದೆ ಎಂದು ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಗಳೂ ಆದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.

ಮೈಸೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅವರು, ಆ 48 ಗಂಟೆ ಅವಧಿ ಯಲ್ಲಿ ಚುನಾವಣಾ ಫಲಿ ತಾಂಶದ ಮೇಲೆ ಪರಿಣಾಮ ಬೀರುವ ಎಲ್ಲಾ ರೀತಿಯ ಬಹಿ ರಂಗ ಪ್ರಚಾರ, ಟೆಲಿವಿಷನ್, ರೇಡಿಯೋ ಹಾಗೂ ಕೇಬಲ್ ನೆಟ್‍ವರ್ಕ್ ನಂತರ ಮಾಧ್ಯಮದಲ್ಲಿ ಚುನಾವಣೆ ಕುರಿತ ಚರ್ಚೆ, ಪ್ರಚಾರ, ಸಂದರ್ಶನ, ಜಾಹೀರಾತು ಮತ್ತು ಅಭಿಪ್ರಾಯಗಳನ್ನು ಪ್ರಸಾರ ಮಾಡಬಾರದು ಎಂದು ತಿಳಿಸಿದ್ದಾರೆ.

ಏಪ್ರಿಲ್ 17 ಮತ್ತು 18 ರಂದು ಪತ್ರಿಕಾ ಮಾಧ್ಯಮದಲ್ಲಿ ಪ್ರಕಟವಾಗುವ ರಾಜಕೀಯ ಜಾಹೀರಾತುಗಳಿಗೆ ಎಂಸಿಎಂಸಿ ತಂಡದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಏಪ್ರಿಲ್ 16ರ ಸಂಜೆ 6 ರಿಂದ ಮೈಸೂರು ಜಿಲ್ಲೆಯಾದ್ಯಂತ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ 5 ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವಂತಿಲ್ಲ ಎಂದೂ ತಿಳಿಸಿದರು. ಆದರೆ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಹಾಗೂ ಅಭ್ಯರ್ಥಿಗಳು ಏಪ್ರಿಲ್ 16ರ ಸಂಜೆ 6 ಗಂಟೆ ನಂತರ ಮನೆ ಮನೆಗೆ ತೆರಳಿ ಮತಯಾಚನೆ ಮಾಡ ಬಹುದು, ಮತದಾರರಲ್ಲದ ಹಾಗೂ ಚುನಾವಣಾ ಪ್ರಚಾರಕ್ಕೆಂದು ಹೊರಗಿನಿಂದ ಬಂದಿರುವವರು ಏಪ್ರಿಲ್ 16ರ ನಂತರ ಕ್ಷೇತ್ರ ಬಿಟ್ಟು ಹೋಗಬೇಕೆಂದೂ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 18ರಂದು ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದಲ್ಲಿ 9,50,087 ಮಹಿಳೆಯರು, 9,44,819 ಪುರುಷರು ಸೇರಿ ಒಟ್ಟು 18,95,056 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕ್ಷೇತ್ರದಾದ್ಯಂತ ಒಟ್ಟು 2,187 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2,406 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 2,406 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 4,812 ಮತದಾನ ಅಧಿಕಾರಿಗಳನ್ನು ಚುನಾವಣಾ ಪ್ರಕ್ರಿಯೆಗೆ ನೇಮಕ ಮಾಡಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮಸ್ಟರಿಂಗ್ ಕೇಂದ್ರಗಳಿಂದ ಕರೆದೊಯ್ಯಲು ಏಪ್ರಿಲ್ 17ರಂದು ಬೆಳಿಗ್ಗೆ ಕೆಎಸ್‍ಆರ್‍ಟಿಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.

8 ಮಸ್ಟರಿಂಗ್ ಕೇಂದ್ರಗಳು: ಮತದಾನ ಸಲಕರಣೆ ಗಳೊಂದಿಗೆ ಸಿಬ್ಬಂದಿ ಹೊರಡಲು ಕ್ಷೇತ್ರದಾದ್ಯಂತ 8 ಮಸ್ಟರಿಂಗ್ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ.

ಮಡಿಕೇರಿಯ ಸೆಂಟ್ ಜೋಸೆಫ್ ಕಾನ್ವೆಂಟ್, ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು, ಪಿರಿಯಾಪಟ್ಟಣದ ಪುಷ್ಪಾ ಕಾನ್ವೆಂಟ್, ಹುಣಸೂರಿನ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಜೆಎಲ್‍ಬಿ ರಸ್ತೆಯ ಮಹಾರಾಜ ಮಹಿಳಾ ಕಲಾ ಕಾಲೇಜು (ಚಾಮುಂಡೇಶ್ವರಿ ಕ್ಷೇತ್ರ), ಮಹಾರಾಜ ಕಾಲೇಜು ಶತಮಾನೋತ್ಸವ ಭವನ(ಕೆಆರ್ ಕ್ಷೇತ್ರ), ಡಿಸಿ ಆಫೀಸ್ ಹಿಂಭಾಗದ ಬೇಡನ್ ಪೊವೆಲ್ ಪಬ್ಲಿಕ್ ಶಾಲೆ (ಚಾಮ ರಾಜ ಕ್ಷೇತ್ರ) ಹಾಗೂ ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು (ಎನ್‍ಆರ್ ಕ್ಷೇತ್ರ)ಗಳಲ್ಲಿ ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಮತಗಟ್ಟೆಗೆ ಅಧಿಕಾರಿಗಳು, ಸಿಬ್ಬಂದಿಗಳನ್ನು ಕರೆದೊಯ್ಯಲು 405 ಕೆಎಸ್‍ಆರ್‍ಟಿಸಿ ಬಸ್ಸುಗಳು, 114 ಜೀಪುಗಳು ಹಾಗೂ 95 ಮಿನಿ ಬಸ್‍ಗಳನ್ನು ಬಳಸಲಾಗುತ್ತಿದೆ.

2,187 ಮತಗಟ್ಟೆಗಳಿಗೆ 5,084 ಬ್ಯಾಲೆಟ್ ಯೂನಿಟ್, 2,671 ಕಂಟ್ರೋಲ್ ಯೂನಿಟ್ ಹಾಗೂ 2,717 ವಿವಿ ಪ್ಯಾಟ್‍ಗಳನ್ನು ಬಳಸುತ್ತಿದ್ದು, ಬಿಇಎಲ್ ಸಂಸ್ಥೆಯ ಇಂಜಿ ನಿಯರ್‍ಗಳಿಂದ ಯಂತ್ರಗಳನ್ನು ಪರಿಶೀಲಿಸಿದ್ದಾರೆ.

Translate »