ಮೈಸೂರು: ಸ್ಕೂಟರ್ ಸಮೇತ 6 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸೇರಿದಂತೆ 25 ಲಕ್ಷ ರೂ.ಗಳನ್ನು ದುಷ್ಕರ್ಮಿಗಳು ದೋಚಿದ ಘಟನೆ ಶನಿವಾರ ರಾತ್ರಿ ಮೈಸೂರಿನ ವಿಜಯನಗರದಲ್ಲಿ ನಡೆದಿದೆ. ಮೈಸೂರಿನ ಶಿವರಾಂಪೇಟೆಯಲ್ಲಿ ವಿದೇಶಿ ಕರೆನ್ಸಿ ಬದಲಾವಣೆ ಮಾಡುವ ಮಳಿಗೆಯೊಂದನ್ನು ನಡೆಸುತ್ತಿರುವ ವಿಜಯನಗರದ ನಿವಾಸಿ ಅರುಣ್ ಕುಮಾರ್ ಎಂಬುವರೇ ಕಳ್ಳರ ಕೃತ್ಯಕ್ಕೆ ಒಳಗಾಗಿ 25 ಲಕ್ಷ ರೂ. ಗಳನ್ನು ಕಳೆದುಕೊಂಡವರಾಗಿದ್ದಾರೆ ಅರುಣ್ ಕುಮಾರ್ ಅವರು ಶನಿವಾರ ತಮ್ಮ ಸ್ಕೂಟರ್‍ನ ಡಿಕ್ಕಿಯಲ್ಲಿ 19 ಲಕ್ಷ ರೂ. ಭಾರತೀಯ ಹಣ ಹಾಗೂ…
ಇಬ್ಬರು ಖತರ್ನಾಕ್ ಕಳ್ಳರಿಂದ 50ಕ್ಕೂ ಹೆಚ್ಚು ಬೈಕ್ ವಶ: ನಕಲಿ ಕೀ ಬಳಸಿ ಪಾರ್ಕಿಂಗ್ ಲಾಟ್‍ನಿಂದ ವಾಹನ ಎಗರಿಸುತ್ತಿದ್ದರು
August 9, 2018ಮೈಸೂರು: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಂದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆಸಿರುವ ಪೊಲೀಸರಿಗೆ ಬೇರೆ ಬೇರೆ ಕಡೆಯಲ್ಲಿ ಕಳವಾಗಿದ್ದ ಇನ್ನೂ ಹಲವು ಬೈಕುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕುಗಳನ್ನು ನಕಲಿ ಕೀ ಬಳಸಿ ಎಗರಿಸುವ ಚಾಲಾಕಿ ಖದೀಮರು ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿಯ ಆಧಾರದಲ್ಲಿ ಪೊಲೀಸರು…
ಮೈಸೂರಲ್ಲಿ ಫೈರಿಂಗ್: ಟ್ಯಾಕ್ಸಿ ಚಾಲಕನಿಂದ ದೂರು
July 15, 2018ಮೈಸೂರು: ಕ್ಷುಲ್ಲಕ ಕಾರಣಕ್ಕೆ ಸಂಘಟನೆ ಯೊಂದರ ಜಿಲ್ಲಾಧ್ಯಕ್ಷ, ನಾಲ್ಕು ಸುತ್ತು ಗುಂಡು ಹಾರಿಸಿರುವ ಘಟನೆ ಶುಕ್ರವಾರ ರಾತ್ರಿ ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ನಡೆದಿದೆ. ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್‍ಗೌಡ, ಖಾಸಗಿ ಟ್ರಾವೆಲ್ ಏಜೆನ್ಸಿ ಯೊಂದರ ಕಾರು ಚಾಲಕ ರಘು ವಿಚಾರದಲ್ಲಿ ಗುಂಡು ಹಾರಿಸಿದ್ದಾರೆ. ಘಟನೆ ಸಂಬಂಧ ವಿಜಯನಗರ ಠಾಣೆ ಯಲ್ಲಿ ಭಾರತ ದಂಡ ಸಂಹಿತೆ 307, 323, 504 ಶಸ್ತ್ರಾಸ್ತ್ರ ಕಾಯ್ದೆ 25ರಡಿ ಎಫ್‍ಐಆರ್ ದಾಖಲಿಸಿ, ಸತೀಶ್ ಗೌಡನನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರು…
ಎರಡನೇ ಮದುವೆಯಾಗುತ್ತಿದ್ದ ಹೆಡ್ ಕಾನ್‍ಸ್ಟೇಬಲ್ ಪೊಲೀಸ್ ಠಾಣೆಗೆಳೆದೊಯ್ದ ಪತ್ನಿ!
July 10, 2018ಮೈಸೂರು: ದೇವಸ್ಥಾನವೊಂದರಲ್ಲಿ ಎರಡನೇ ಮದುವೆಯಾಗುತ್ತಿದ್ದ ಹೆಡ್‍ಕಾನ್‍ಸ್ಟೇಬಲ್ ಓರ್ವ ರೆಡ್‍ಹ್ಯಾಂಡಾಗಿ ಪತ್ನಿಗೆ ಸಿಕ್ಕಿ ಬಿದ್ದಿರುವ ಪ್ರಸಂಗ ಮೈಸೂರಿನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಮೈಸೂರಿನ ಸಿಎಆರ್‍ನಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜಾಚಾರಿ ಅವರೇ ಪತ್ನಿ, ಇಬ್ಬರು ಮಕ್ಕಳಿದ್ದರೂ ಮತ್ತೊಂದು ಮದುವೆಯಾಗುತ್ತಿದ್ದವರು. ಭಾನುವಾರ ಬೆಳಿಗ್ಗೆ ವಿಜಯನಗರ 2ನೇ ಹಂತದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿತ್ತು. ಪಂಚೆ, ಬಿಳಿ ಷರ್ಟ್, ಪೇಟ ತೊಟ್ಟು ಹಸೆಮಣೆ ಮೇಲೆ ಕುಳಿತಿದ್ದ ರಾಜಾಚಾರಿ, ಇನ್ನೇನು ವಧುವಿಗೆ ತಾಳಿ ಕಟ್ಟುವುದರಲ್ಲಿದ್ದರು.ಹೇಗೋ ಮಾಹಿತಿ ತಿಳಿದ ಅವರ ಪತ್ನಿ ಸವಿತಾ,…
ಹಸುಗಳ ಕಳವಿಗೆ ಯತ್ನ: ಇಬ್ಬರ ಬಂಧನ
June 16, 2018ಮೈಸೂರು: ಹಸುಗಳನ್ನು ಕಳವು ಮಾಡಲೆತ್ನಿಸಿ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಇಬ್ಬರು ಖದೀಮರನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಪುನೀತ್(20) ಹಾಗೂ ಹೇಮಂತ್(22) ಬಂಧಿತರಾಗಿದ್ದು, ಪರಾರಿಯಾಗಿರುವ ಮತ್ತೋರ್ವ ಆರೋಪಿ ನವೀನ್‍ಗೆ ಶೋಧ ನಡೆಸಲಾಗುತ್ತಿದೆ. ವಿಜಯನಗರ 3ನೇ ಹಂತದ ನಿವಾಸಿ ಜನಾರ್ಧನ್ ಅವರು ತಮ್ಮ ಮನೆಯ ಸಮೀಪ ಚೌಡೇಶ್ವರಿ ದೇವಾಲಯದ ಹಿಂಭಾಗದಲ್ಲಿ 2 ಹಸುಗಳನ್ನು ಕಟ್ಟ್ಟಿಹಾಕಿದ್ದರು. ಬುಧವಾರ ರಾತ್ರಿ ಟಾಟಾ ಏಸ್ ಗೂಡ್ಸ್ ವಾಹನ(ಕೆಎ-10, 8978)ದಲ್ಲಿ ಬಂದಿದ್ದ ಈ ಮೂವರು ಆರೋಪಿಗಳು,…