ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷರಾಗಿ ಬಿ.ಎಂ.ರಘು ಅಧಿಕಾರ ಸ್ವೀಕಾರ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷರಾಗಿ ಬಿ.ಎಂ.ರಘು ಅಧಿಕಾರ ಸ್ವೀಕಾರ

February 23, 2020

ಮೈಸೂರು, ಫೆ.22(ಎಂಕೆ)- ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ (ನಗರ ಮಂಡಲ)ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ನಡೆ ಯಿತು. ಮುಂದಿನ 3 ವರ್ಷಗಳ ಅವಧಿಗೆ ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಂ. ರಘು ಅವರಿಗೆ ನಿರ್ಗಮಿತ ಅಧ್ಯಕ್ಷ ರೇವಣ್ಣ ಅಧಿಕಾರ ಹತ್ತಾಂತರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಮಾತ ನಾಡಿ, ಬಿಜೆಪಿಯಂತಹ ವಿಶೇಷ ಪಕ್ಷದಲ್ಲಿ ನಾವಿಂದು ಕೆಲಸ ಮಾಡುತ್ತಿದ್ದೇವೆ. ಸಾಮಾನ್ಯ ಕಾರ್ಯಕರ್ತ ಉನ್ನತ ಸ್ಥಾನಕ್ಕೆ ಬೆಳೆಯಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ರಘು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇ ಶ್ವರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲ ದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿಯನ್ನು ಮುಂದಿನ 3 ವರ್ಷಗಳವರೆಗೆ ಬಿ.ಎಂ. ರಘು ಅವರಿಗೆ ವಹಿಸಲಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ. ಮಹೇಂದ್ರ, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಗೆಜ್ಜ ಗಳ್ಳಿ ಮಹೇಶ್, ಸಂಘಟನಾ ಕಾರ್ಯ ದರ್ಶಿ ಸುರೇಶ್‍ಬಾಬು, ಪಾಲಿಕೆ ಸದಸ್ಯ ರಾದ ಎಂ.ಸಿ.ರಮೇಶ್, ಲಕ್ಷ್ಮಿ ಕಿರಣ್, ಮುಖಂಡರಾದ ಗೋಪಾಲ್, ಮಂಗಳ ಸೋಮಶೇಖರ್ ಮತ್ತಿತ ರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Translate »