ಮೈಸೂರು

ಅಮೆರಿಕ ಸಂಜಾತನ ಕನ್ನಡ ಪ್ರೇಮ `ತಿರುಗಾಟ’ದಲ್ಲಿ ಅನಾವರಣ

March 22, 2019

ಮೈಸೂರು: ಯುವ ಬರಹಗಾರ ಕಿರಣ್ ಎಸ್. ಭಟ್ ರಚಿತ `ತಿರುಗಾಟ’ ಪ್ರವಾಸ ಕಥನ ಪುಸ್ತಕ ವನ್ನು `ಸ್ಟಾರ್ ಆಫ್ ಮೈಸೂರ್’ ಹಾಗೂ `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಬಿಡುಗಡೆಗೊಳಿಸಿದರು.

ಮೈಸೂರಿನ ರ್ಯಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲ್‍ನಲ್ಲಿ ಬೆಂಗಳೂರಿನ ಚಿರಂತನ ಮೀಡಿಯಾ ಸಲ್ಯೂಷನ್ಸ್ ಪ್ರಕಾಶನ ಗುರು ವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ತಿರುಗಾಟ’ ಪ್ರವಾಸ ಕಥನ ಬಿಡುಗಡೆ ಗೊಳಿಸಿ ಮಾತನಾಡಿದರು.

ಯುವ ಬರಹಗಾರ ಕಿರಣ್ ಎಸ್.ಭಟ್ ಅತೀ ಚಿಕ್ಕ ವಯಸ್ಸಿನಲ್ಲೇ 124 ದೇಶಗಳನ್ನು ಸುತ್ತಿ, ಅಲ್ಲಿನ ಪರಿಸರ, ಪ್ರವಾಸಿತಾಣಗಳ ಬಗ್ಗೆ ಮಾಹಿತಿ, ಸಾಂಸ್ಕøತಿಕ ಚಟುವಟಿಕೆ ಗಳು ಸೇರಿದಂತೆ ಅನೇಕ ವಿಷಯಗಳ ಅಧ್ಯ ಯನ ನಡೆಸಿ, `ತಿರುಗಾಟ’ ಪ್ರವಾಸ ಕಥನ ಪುಸ್ತಕ ರಚಿಸಿದ್ದಾರೆ. ಇವರು, ಅಮೆರಿಕ ದಲ್ಲಿ ಹುಟ್ಟಿ ಬೆಳೆದಿದ್ದರೂ, ಮಾತೃಭಾಷೆ ಕನ್ನಡದಲ್ಲಿಯೇ ಪುಸ್ತಕ ಬರೆದಿರುವುದು ಎಲ್ಲರೂ ಮೆಚ್ಚುವ ವಿಷಯ ಎಂದರು.
ಅಮೆರಿಕದಲ್ಲಿ ವಾಸವಾಗಿರುವ ಮೈಸೂರು ಮೂಲದ ಡಾ.ಸುಬ್ರಹ್ಮಣ್ಯ ಭಟ್ ಹಾಗೂ ಡಾ.ಅನ್ನಪೂರ್ಣ ಭಟ್ ದಂಪತಿ ಪುತ್ರ ಕಿರಣ್ ಎಸ್.ಭಟ್ ತಮ್ಮ ಪ್ರವಾಸದ ಅನು ಭವಗಳನ್ನು 94 ಪುಟಗಳಲ್ಲಿ ಅಕ್ಷರ ರೂಪ ಕ್ಕಿಳಿಸಿದ್ದಾರೆ. ಕನ್ನಡದಲ್ಲಿ `ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎಂಬ ಮಾತಿದೆ. ಇದರಂತೆ ಕಿರಣ್ ಅತೀ ಚಿಕ್ಕ ವಯಸ್ಸಿ ನಲ್ಲೇ ಪ್ರಪಂಚ ಸುತ್ತಿ ಜ್ಞಾನ ಸಂಪಾದನೆ ಮಾಡುತ್ತಿರುವುದು ಉತ್ತಮ ಅಭ್ಯಾಸ ಎಂದು ಪ್ರಶಂಸಿಸಿದರು.
ಕಳೆದ 10-12 ವರ್ಷಗಳ ಹಿಂದೆ ನಾನೂ ಪ್ಯಾಲೆಸ್ಟೈನ್, ಇಸ್ರೇಲ್ ಗಡಿ ಪ್ರದೇಶದಲ್ಲಿ ಪ್ರವಾಸ ಮಾಡಿದ್ದೇನೆ. ಜೆರುಸಲೇಂ ಸುತ್ತ ಮುತ್ತಲಿನ ಪ್ರದೇಶಗಳ ಸ್ಥಿತಿ-ಗತಿ ಅರಿತಿ ದ್ದೇನೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರವಾಸ ಮಾಡುವಾಗ, ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಪ್ರವಾಸಿಗರು ಮೊದಲು ತಿಳಿದುಕೊಂಡಿರಬೇಕು. ಈ ಪುಸ್ತಕ ವಿವಿಧ ದೇಶ ಪ್ರವಾಸಿಗಳಿಗೆ ಸಹಕಾರಿ ಎಂದರು.

ಅಮೆರಿಕದ ಖ್ಯಾತ ಲೇಖಕನೊಬ್ಬ ಪ್ರಪಂ ಚದ ಎಲ್ಲಾ ದೇಶಗಳನ್ನು ಸುತ್ತಿ, ಭೌಗೋ ಳಿಕ, ಸಾಂಸ್ಕøತಿಕ ಹಾಗೂ ಉಡುಗೆ-ತೊಡುಗೆ, ಆಹಾರ ಪದ್ಧತಿ, ಇತಿಹಾಸ, ರಾಜಕೀಯ ಸನ್ನಿವೇಶಗಳ ಕುರಿತು ಪ್ರವಾಸ ಕಥನ ರೂಪದಲ್ಲಿ ಬರೆದಿದ್ದಾರೆ. ಯುವ ಲೇಖಕ ಕಿರಣ್ ಕೂಡ ಅದೇ ಹಾದಿಯಲ್ಲಿ ಸಾಗಿ, ಜ್ಞಾನ ಸಂಪಾದನೆಗೆ ದೇಶ ಸುತ್ತುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಪೋಷಕರಾದ ಡಾ.ಸುಬ್ರಹ್ಮಣ್ಯ ಭಟ್ ಹಾಗೂ ಡಾ.ಅನ್ನ ಪೂರ್ಣ ಭಟ್ ಸಹಕಾರ ನೀಡುತ್ತಿರು ವುದು ಪ್ರಶಂಸಾರ್ಹ ಎಂದರು.

ಮೈಸೂರು ಜಿಲ್ಲಾ ರೋಟರಿ ಮಾಜಿ ಗವರ್ನರ್ ಜಿ.ಕೆ.ಬಾಲಕೃಷ್ಣ ಮಾತನಾಡಿ, ಲೇಖಕ ಕಿರಣ್ ಎಸ್.ಭಟ್ ನ್ಯೂಯಾರ್ಕ್ ವಿವಿಯಲ್ಲಿ ಪದವಿ ಮುಗಿಸಿದ ನಂತರ ದೇಶ ಪರ್ಯಟನೆ ಆರಂಭಿಸಿದರು. ಸ್ಪ್ಯಾನಿಷ್, ಪೋರ್ಚುಗೀಸ್ ಮತ್ತು ಇಂಗ್ಲಿಷ್ ಭಾಷೆ ಗಳಲ್ಲಿ ಇವರ ಸಾಹಿತ್ಯ ಕೃಷಿ ನಡೆದಿದೆ. ಅಜ್ಜಿ ಶಂಕರಿ ಮೂಟೇರಿ ಅವರ ನೆರಳಿನಲ್ಲಿ ಮಾತೃಭಾಷೆ ಕನ್ನಡ ಕಲಿತು, ಕನ್ನಡ ಸಾರ ಸ್ವತ ಲೋಕಕ್ಕೆ ಪ್ರವೇಶ ಪಡೆದಿರುವುದು ಸಂತಸದ ವಿಷಯ ಎಂದರು.
`ತಿರುಗಾಟ’ದಲ್ಲಿ ವಿವಿಧ ದೇಶಗಳ ಭಾಷೆ, ಸಂಸ್ಕøತಿ, ಆಹಾರ, ವಸ್ತ್ರ, ಧರ್ಮ, ನಂಬಿಕೆ ಗಳು, ಜನಜೀವನ, ಕಲೆ, ಸಾಹಿತ್ಯ, ರಾಜ ಕೀಯ ಹಾಗೂ ಅಲ್ಲಿನ ಆರ್ಥಿಕತೆ ಬಗ್ಗೆ ದಾಖಲಿಸಿದ್ದಾರೆ. ಪ್ರಸ್ತುತ ಕೈರೋ ದೇಶ ವಾಸಿಯಾಗಿರುವ ಕಿರಣ್, ಮತ್ತೆಲ್ಲಿಗೆ ಪ್ರಯಾಣ ಬೆಳೆಸುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು. ಕನ್ನಡ ಭಾಷೆಯಲ್ಲಿ 8 ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳಿ ದ್ದಾರೆ. ಆದರೆ `ಮಂಕು ತಿಮ್ಮನ ಕಗ್ಗ’ ಬರೆದ ಡಿವಿಜಿ ಅವರಿಗೆ ಜ್ಞಾನಪೀಠ ದೊರಕಲಿಲ್ಲ. `ಶಾಂತಿ ಸಂದೇಶ’ ಸಾರಿದ ಮಹಾತ್ಮ ಗಾಂಧೀಜಿಯವರಿಗೆ ನೊಬೆಲ್ ಪ್ರಶಸ್ತಿ ದೊರಕಲಿಲ್ಲ. ಆದರೆ, ಅವರ ಹೆಸರು ಮಾತ್ರ ದೇಶ, ಭಾಷೆ ಸೇರಿದಂತೆ ಎಲ್ಲಾ ಗಡಿಗಳನ್ನು ದಾಟಿದೆ ಎಂದರು. ಶಂಕರಿ ಮೂಟೇರಿ, ಡಾ.ಸುಬ್ರಹ್ಮಣ್ಯ ಭಟ್, ಡಾ.ಅನ್ನಪೂರ್ಣ ಭಟ್ ವೇದಿಕೆಯಲ್ಲಿದ್ದರು. ಶ್ರೀಲತಾ ಸೀತಾ ರಾಮನ್ ಪ್ರಾರ್ಥಿಸಿದರೆ, ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಡಾ.ಅನ್ನಪೂರ್ಣ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Translate »