ಭಕ್ತ ಸಾಗರದ ನಡುವೆ ಶ್ರೀಕಂಠೇಶ್ವರ ಸ್ವಾಮಿ ತೆಪ್ಪೋತ್ಸವ
ಮೈಸೂರು

ಭಕ್ತ ಸಾಗರದ ನಡುವೆ ಶ್ರೀಕಂಠೇಶ್ವರ ಸ್ವಾಮಿ ತೆಪ್ಪೋತ್ಸವ

March 22, 2019

ನಂಜನಗೂಡು: ಪಂಚ ಮಹಾರಥೋತ್ಸವದ ಅಂಗವಾಗಿ ಗುರುವಾರ ಕಪಿಲಾ ನದಿಯಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಯವರ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು.

ಗುರುವಾರ ಸಂಜೆ 7.30ಕ್ಕೆ ದೇಗುಲದ ಪ್ರಧಾನ ಅರ್ಚಕ ಶ್ರೀನಾಗಚಂದ್ರ ದೀಕ್ಷಿತ್ ಅವರು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಹೂವಿನ ಅಲಂಕಾರ, ಶ್ರೀಕಂಠಮುಡಿ ಧಾರಣೆ ಯಿಂದಾಗಿ ವಿಶೇಷವಾಗಿ ಕಂಗೊಳಿಸು ತ್ತಿದ್ದ ಉತ್ಸವ ಮೂರ್ತಿಯನ್ನು ನೋಡಿದ ಸಹಸ್ರಾರು ಭಕ್ತರು ಭಾವಪರವಶರಾದರು. ನಂತರ ವಿದ್ಯುದ್ದೀಪ ಅಲಂಕೃತ ತೇಲುವ ದೇವಾಲಯಲ್ಲಿ ಆಸೀನರಾದ ಶ್ರೀ ಕಂಠೇ ಶ್ವರಸ್ವಾಮಿಯನ್ನು ನದಿಯಲ್ಲಿ 3 ಸುತ್ತು ಪ್ರದಕ್ಷಿಣೆ ಮಾಡಲಾಯಿತು. ಕಪಿಲಾ ನದಿ ಸ್ನಾನಘಟ್ಟ ಸುತ್ತಲ ಸೋಪಾನಕಟ್ಟೆ ಮೇಲೆ ಕುಳಿತ ಭಕ್ತರು ತೆಪ್ಪೋತ್ಸವ ವೀಕ್ಷಿಸಿ ಹರ್ಷ ಪಟ್ಟರು. ಇದೇ ವೇಳೆ ಹೆಜ್ಜಿಗೆ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು

ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ, ಗಂಗಯ್ಯ, ವ್ಯವಸ್ಥಾಪಕ ಸಮಿತಿ ಸದಸ್ಯರಾದ ಶ್ರೀಧರ್, ಮಂಜಳಾ, ಮಧು ಸೇರಿದಂತೆ ಪಟ್ಟಣದ ಗಣ್ಯರು ಹಾಜರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Translate »