ಹಣ, ಪ್ರೇಯಸಿ ವಿಚಾರಕ್ಕೆ ಗೆಳೆಯನಿಂದ ಸುಪಾರಿ
ಮೈಸೂರು

ಹಣ, ಪ್ರೇಯಸಿ ವಿಚಾರಕ್ಕೆ ಗೆಳೆಯನಿಂದ ಸುಪಾರಿ

March 22, 2019

ಮೈಸೂರು: ಮಾರ್ಚ್ 13ರಂದು ಹತ್ಯೆ ಯಾದ ಮಹದೇಶ್ವರ ಬಡಾವಣೆಯ ಯುವಕ ರಾಘ ವೇಂದ್ರನ ಹತ್ಯೆಗೆ ಹಣಕಾಸು ಹಾಗೂ ಪ್ರೇಯಸಿಯ ವಿಚಾರ ಕ್ಕಾಗಿ ಆತನ ಗೆಳೆಯನೇ ಸುಪಾರಿ ನೀಡಿದ್ದ ಎಂಬುದು ಬೆಳಕಿಗೆ ಬಂದಿದೆ. ನಿಗೂಢ ಹತ್ಯೆ ಪ್ರಕರಣ ವನ್ನು ಭೇದಿ ಸಿರುವ ವಿಜಯನಗರ ಪೊಲೀಸರು, ಸುಪಾರಿ ಹಂತಕ ರಿಂದ ರಾಘವೇಂದ್ರ ಹತ್ಯೆಯಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ವಿಜಯನಗರ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್ ಮತ್ತು ತನಿಖಾ ತಂಡದ ಪೊಲೀಸರು, ರಾಘವೇಂದ್ರನ ಹತ್ಯೆಗೆ ಸುಪಾರಿ ನೀಡಿದ ಲೋಕನಾಯಕ ನಗರದ ಶಿವಮಾದೇಗೌಡರ ಮಗ ಎಸ್.ಎಂ.ರಜತ್, ಸುಪಾರಿ ಹಂತಕರಾದ ಎಂಎಂಸಿ ಕಾಲೋನಿಯ ಲಕ್ಷ್ಮಣ್ ಅವರ ಮಗ ವೆಂಕಟೇಶ್, ಬೆಳ ವಾಡಿಯ ಅಮೃತೇಶ್ವರ ಬಡಾವಣೆಯ ಲೇಟ್ ಸುರೇಶ್ ಮಗ ಕೇಶವ ಅಲಿಯಾಸ್ ಕೇಶವ ಮೂರ್ತಿ, ಮಂಡ್ಯ ಜಿಲ್ಲೆ ಕಾರಸವಾಡಿ ಗ್ರಾಮದ ಕುಮಾರ್ ಮಗ ಕೆ.ಚಂದನ್ ಹಾಗೂ ಬನ್ನಿಮಂಟಪ ಎಂಎಂಸಿ ಕಾಲೋನಿ ನಿವಾಸಿ ಶ್ರೀನಿವಾಸ್ ಮಗ ವೆಂಕಟರಮಣನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲಾ ಕೂರ್ಗಳ್ಳಿ ಕೆರೆ ಬಳಿ ರಾಘ ವೇಂದ್ರನ ಹತ್ಯೆಗೈದು ಬನ್ನಿ ಮಂಟಪದ ಜೋಡಿ ತೆಂಗಿನ ಮರ ರಸ್ತೆಯ ಸ್ಮಶಾನದಲ್ಲಿ ಹೂತು, ತಲೆಮರೆಸಿಕೊಂಡಿದ್ದರು.

ರಾಘವೇಂದ್ರ ತನ್ನಿಂದ ಸಾಲ ಪಡೆದು ಹೆಚ್ಚಿನ ಬಡ್ಡಿ ದರಕ್ಕೆ ಬೇರೆಯವರಿಗೆ ಹಣ ನೀಡುತ್ತಿದ್ದಾನೆ ಎಂಬ ಭಾವನೆ ರಜತ್‍ನಲ್ಲಿತ್ತು. ಅಲ್ಲದೆ ತಾನು ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ರಾಘವೇಂದ್ರ ಸಂಪರ್ಕದಲ್ಲಿದ್ದಾ ನೆಂದು ದ್ವೇಷ ಬೆಳೆಸಿಕೊಂಡಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಹಲವು ಬಾರಿ ಜಗಳವೂ ಆಗಿತ್ತು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಹತ್ಯೆಗೆ ಸ್ಕೆಚ್: ತನ್ನಿಂದಲೇ ಹಣವನ್ನು ಸಾಲ ಪಡೆದು, ತನ್ನ ಪ್ರೇಯಸಿ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಿದ್ದ ರಾಘ ವೇಂದ್ರನನ್ನು ಮುಗಿಸಬೇಕೆಂದು ತೀರ್ಮಾನಿಸಿದ ರಜತ್, ಎಂಸಿಸಿ ಕಾಲೋನಿಯ ವೆಂಕಟೇಶ್, ಆತನ ಸ್ನೇಹಿತ ರಾದ ಬೆಳವಾಡಿಯ ಕೇಶವ್, ಚಂದನ್‍ರೊಂದಿಗೆ ಸೇರಿ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ. ಹೇಗೆ ಕೊಲೆ ಮಾಡಬೇಕು? ನಂತರ ಸಾಕ್ಷ್ಯವನ್ನು ಹೇಗೆ ನಾಶ ಗೊಳಿಸಬೇಕೆಂದು ಮೂರ್ನಾಲ್ಕು ದಿನ ಸಹಚರರೊಂದಿಗೆ ಚರ್ಚಿಸಿ ಸಂಚು ರೂಪಿಸಿದ್ದ. ನಂತರ ರಾಘವೇಂದ್ರನ ಹತ್ಯೆಗೆ ನಾಲ್ವರಿಗೆ ಸುಪಾರಿ ನೀಡಿದ.

ಮಾರ್ಚ್ 13 ಆಪರೇಷನ್: ಸುಪಾರಿ ಹಂತಕರು ಮಾರ್ಚ್ 13ರಂದು ರಾಘವೇಂದ್ರನ ಹತ್ಯೆಗೆ ನಿರ್ಧರಿಸಿ, ಹಗ್ಗ, ಶೇವಿಂಗ್ ಬ್ಲೇಡ್ ಖರೀದಿಸಿದರು. ಮಾರುತಿ ಎಸ್ಟೀಮ್ ಕಾರಿನ ಗಾಜು ಗಳಿಗೆ ಕಪ್ಟು ಸ್ಟಿಕ್ಕರ್ ಅಂಟಿಸಿ ಕೊಂಡರು. ಅಲ್ಲದೆ ಮತ್ತೊಂದು ಮಾರುತಿ ಸ್ವಿಫ್ಟ್ ಕಾರನ್ನು ಬಾಡಿಗೆಗೆ ಪಡೆದು ದುಷ್ಕøತ್ಯಕ್ಕೆ ಸಿದ್ಧರಾದರು. ಅದೇ ದಿನ ರಾಘವೇಂದ್ರನಿಗೆ ಫೋನ್ ಮಾಡಿ ‘ರಾತ್ರಿ ಒಂದು ಡೀಲ್ ಇದೆ. ಮಾಡಿದರೆ 5 ಸಾವಿರ ಕೊಡು ತ್ತೇನೆ ಎಂದು ನಂಬಿಸಿ, ಅಂದು ರಾತ್ರಿ 8.45ಕ್ಕೆ ಮಾರುತಿ ಎಸ್ಟೀಮ್‍ನಲ್ಲಿ ನಾಲ್ಕೂ ಮಂದಿ ಬಂದು ರಾಘವೇಂದ್ರ ನನ್ನು ತ್ರಿನೇತ್ರ ಸರ್ಕಲ್ ನಿಂದ ಕರೆದೊಯ್ದರು. ಬಾಡಿಗೆಗೆ ಪಡೆದಿದ್ದ ಸ್ವಿಫ್ಟ್ ಕಾರಿನಲ್ಲಿ ರಜತ್ ಹಿಂಬಾಲಿಸಿದ. ಕೂರ್ಗಳ್ಳಿ ಕೆರೆ ಬಳಿ ನಿರ್ಜನ ಪ್ರದೇಶಕ್ಕೆ ರಾಘವೇಂದ್ರನನ್ನು ಕರೆ ದೊಯ್ದು ರಾತ್ರಿ 10.45ರ ವೇಳೆಯಲ್ಲಿ ಹಗ್ಗದಿಂದ ಕುತ್ತಿಗೆ ಬಿಗಿದು, ಉಸಿರುಗಟ್ಟಿಸಿ ಹತ್ಯೆಗೈದರು. ಬಳಿಕ ಮೃತದೇಹ ವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು, ಹೈವೆ ಸರ್ಕಲ್ ಬಳಿಯ ಜೋಡಿ ತೆಂಗಿನಮರ ರಸ್ತೆಯ ಸ್ಮಶಾನಕ್ಕೆ ತಂದು ಮತ್ತೆ ಅಮಾನುಷವಾಗಿ ಬ್ಲೇಡಿನಿಂದ ರಾಘವೇಂದ್ರನ ಕತ್ತನ್ನು ಕೊಯ್ದು, ಹಳ್ಳದಲ್ಲಿ ಬಚ್ಚಿಟ್ಟರು.

ಸಾಕ್ಷ್ಯ ನಾಶ: ಸಾಕ್ಷ್ಯ ಸಿಗಬಾರದೆಂದು ರಾಘವೇಂದ್ರನ ರಕ್ತಸಿಕ್ತ ಬಟ್ಟೆ, ಕೃತ್ಯಕ್ಕೆ ಬಳಸಿದ್ದ ಬ್ಲೇಡ್ ಅನ್ನು ಲಕ್ಷ್ಮೀ ಪುರ-ಪಾಲಹಳ್ಳಿ ಮಾರ್ಗಮಧ್ಯೆ ಪೆಟ್ರೋಲ್ ಹಾಕಿ ಸುಟ್ಟ ಆರೋಪಿಗಳು, ಕೊಲೆಗೆ ಬಳಸಿದ್ದ ಹಗ್ಗ ಹಾಗೂ ರಾಡ್ ಅನ್ನು ರಸ್ತೆ ಪಕ್ಕದ ಪೊದೆಯಲ್ಲಿ ಬಿಸಾಡಿದರು. ರಾಘವೇಂದ್ರನ ಮತ್ತಷ್ಟು ಬಟ್ಟೆಯನ್ನು ಕಪಿಲಾ ನದಿಗೂ, ಆತನ ಮೊಬೈಲ್ ಫೋನ್‍ನನ್ನು ಕಾವೇರಿ ನದಿಗೂ ಎಸೆದು, ಎಸ್ಟೀಮ್ ಕಾರನ್ನು ವಾಟರ್ ಸರ್ವೀಸ್‍ಗೆ ಬಿಟ್ಟರು. ಮರುದಿನ ವೆಂಕಟೇಶ್ ಮತ್ತು ವೆಂಕಟರಮಣ ಒಂದು ಜೆಸಿಬಿ ಮೂಲಕ ಸ್ಮಶಾನದ ಹಳ್ಳಕ್ಕೆ ಬಿಸಾಡಿದ್ದ ರಾಘವೇಂದ್ರನ ಮೃತದೇಹದ ಮೇಲೆ ಮಣ್ಣು ಸುರಿಸಿ, ಮಟ್ಟ ಮಾಡಿಸಿ ಯಾರಿಗೂ ತಿಳಿಯದಂತೆ ಪರಾರಿಯಾ ದರೆಂದು ತನಿಖೆಯಿಂದ ತಿಳಿದು ಬಂದಿದೆ.

ಮಾ.16ರಂದು ಬಂಧನ: ಹೊರ ರಾಜ್ಯಕ್ಕೆ ಹೋಗಿ ತಲೆಮರೆಸಿಕೊಳ್ಳಲೆತ್ನಿಸಿದ್ದ ಕೇಶವ, ಚಂದನ್ ಮತ್ತು ವೆಂಕಟೇಶ್‍ನನ್ನು ಮಾಹಿತಿ ಆಧರಿಸಿ ವಿಜಯನಗರ 4ನೇ ಹಂತದಲ್ಲಿ ಮಾರ್ಚ್ 16ರಂದು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದರು. ಮರುದಿನ(ಮಾ.17) ಸ್ಮಶಾನದಲ್ಲಿ ಹೂತಿದ್ದ ರಾಘವೇಂದ್ರನ ಮೃತದೇಹ ಹೊರ ತೆಗೆಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದರು. ನಂತದ ಉಳಿದಿ ಬ್ಬರು ಹಂತಕರನ್ನೂ ಸೆರೆ ಹಿಡಿದಿದ್ದಾರೆ. ವಿಜಯನಗರ ಠಾಣೆ ಇನ್‍ಸ್ಟೆಕ್ಟರ್ ಬಿ.ಜಿ.ಕುಮಾರ್ ಅವರೊಂದಿಗೆ ಸಿಬ್ಬಂದಿ ಮಹದೇವ, ಶಂಕರ್, ಈಶ್ವರ್, ಸೋಮಾರಾಧ್ಯ, ಶ್ರೀನಿವಾಸಮೂರ್ತಿ, ಕಾಂತರಾಜು, ಶಿವಮೂರ್ತಿ, ಹರೀಶ್, ಮಹದೇವ ಪ್ರಸಾದ್, ರಂಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ನಿಗೂಢ ಹತ್ಯೆ ಪ್ರಕರಣ ಬೇಧಿಸಿದ ತನಿಖಾ ತಂಡದ ಕಾರ್ಯವನ್ನು ನಗರ ಪೊಲೀಸ್ ಕಮೀಷ್ನರ್ ಕೆ.ಟಿ.ಬಾಲಕೃಷ್ಣ ಅವರು ಪ್ರಸಂಶಿಸಿದ್ದಾರೆ.

Translate »