ಚಾಮರಾಜನಗರ

ತನಿಖಾಧಿಕಾರಿ ಶಿವಯೋಗಿ ಕಳಸದ್ ಆಸ್ಪತ್ರೆಗೆ ಭೇಟಿ, ಮಾಹಿತಿ ಸಂಗ್ರಹ
ಚಾಮರಾಜನಗರ

ತನಿಖಾಧಿಕಾರಿ ಶಿವಯೋಗಿ ಕಳಸದ್ ಆಸ್ಪತ್ರೆಗೆ ಭೇಟಿ, ಮಾಹಿತಿ ಸಂಗ್ರಹ

May 5, 2021

ಚಾಮರಾಜನಗರ, ಮೇ 4 (ಎಸ್‍ಎಸ್)- ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಯಲ್ಲಿ ಸಂಭವಿಸಿದ ಕೋವಿಡ್ ಸೋಂಕಿ ತರ ಸಾವು ಪ್ರಕರಣದ ಸಂಬಂಧ ತನಿಖೆ ನಡೆಸಿ ವರದಿ ನೀಡಲು ವಿಚಾರಣಾಧಿಕಾರಿ ಯಾಗಿ ನೇಮಕವಾಗಿರುವ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅವರು ಇಂದು ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಅಧಿ ಕಾರಿಗಳಿಂದ ಮಾಹಿತಿ ಪಡೆದರು. ಬೆಳಗ್ಗೆ 9.45ರ ಸಮಯದಲ್ಲಿ ಆಸ್ಪತ್ರೆಗೆ ಆಗಮಿಸಿದ ತನಿಖಾಧಿಕಾರಿಗಳು, ಮೊದಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವೈದ್ಯಾ ಧಿಕಾರಿಗಳೊಂದಿಗೆ…

24 ಗಂಟೆಯಲ್ಲಿ 24 ಮಂದಿ ಬಲಿ
ಚಾಮರಾಜನಗರ

24 ಗಂಟೆಯಲ್ಲಿ 24 ಮಂದಿ ಬಲಿ

May 4, 2021

ಚಾಮರಾಜನಗರ, ಮೇ 3(ಎಸ್‍ಎಸ್)- ಚಾಮರಾಜನಗರ ಜಿಲ್ಲೆಯಲ್ಲಿ 24 ಗಂಟೆ ಅವಧಿಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಸಾವಿಗೀಡಾಗಿದ್ದಾರೆ. ಭಾನುವಾರ ಬೆಳಗ್ಗೆ 7 ಗಂಟೆ ಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 23 ಮಂದಿ ಹಾಗೂ ಹನೂರು ತಾಲೂಕು ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಆದರೆ, ಇವರೆಲ್ಲರೂ ಆಕ್ಸಿಜನ್ ಕೊರತೆಯಿಂದ ಸಾವಿಗೀಡಾಗಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ. ಕಳೆದ ರಾತ್ರಿಯೇ ಸಾವುಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ. ರಾತ್ರಿ 11 ಗಂಟೆ ನಂತರ ಕೋವಿಡ್…

ಕೊರೊನಾ ಹರಡುವಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ
ಚಾಮರಾಜನಗರ

ಕೊರೊನಾ ಹರಡುವಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ

May 4, 2021

ಹನೂರು, ಮೇ 3-ಕೊರೊನಾ ಸೋಂಕಿನ ಕೊಂಡಿಯನ್ನು ಕಳಚುವ ದಿಸೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ವಹಿಸಿ ಎಂದು ಶಾಸಕ ಆರ್.ನರೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಕೊವಿಡ್-19 ತಡೆಗಟ್ಟುವ ಸಂಬಂಧ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಸೋಂಕಿನ ಕೊಂಡಿಯನ್ನು ಕಳಚದೇ ಹೊರತು ಸೋಂಕನ್ನು ತಹಬದಿಗೆ ತರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಗಳ ಮನೆ ಸುತ್ತ ಯಾರೂ ಹೊರ ಬಾರದಂತೆ ಟೇಪ್ ಅಳವಡಿಸುವುದು ಹಾಗೂ ಕಂಟೈನ್‍ಮೆಂಟ್ ಜೋನ್ ಎಂದು ಅರಿವು ಮೂಡಿಸುವ ಫಲಕಗಳನ್ನು…

ಉದ್ಯೋಗ ಖಾತ್ರಿ ಕೂಲಿ ಹೆಚ್ಚಳಕ್ಕೆ ಶಾಸಕ ಎನ್.ಮಹೇಶ್ ಒತ್ತಾಯ
ಚಾಮರಾಜನಗರ

ಉದ್ಯೋಗ ಖಾತ್ರಿ ಕೂಲಿ ಹೆಚ್ಚಳಕ್ಕೆ ಶಾಸಕ ಎನ್.ಮಹೇಶ್ ಒತ್ತಾಯ

May 4, 2021

ಕೊಳ್ಳೇಗಾಲ,ಮೇ3-ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ 3145ಮಂದಿಯಿಂದ ಉದ್ಯೋಗ ಖಾತ್ರಿ ಕೆಲಸ ನಡೆಯುತ್ತಿದ್ದು ಸರ್ಕಾರ ಕೋವಿಡ್ ಹಿನ್ನೆಲೆ ಕಾರ್ಮಿಕರಿಗೆ ನೀಡುವ 289 ಕೂಲಿ ಬದಲಿಗೆ 500 ನೀಡಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು. ಖಾತ್ರಿ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕೊಳ್ಳೇಗಾಲ ತಾಲೂಕಿನ 7 ಗ್ರಾಪಂನಲ್ಲಿ 8 ಕೆರೆಗಳಿದ್ದು, 20245 ಮಂದಿ ಕೆಲಸ ಮಾಡುತ್ತಿದ್ದಾರೆ. 7 ಪಂಚಾಯ್ತಿ ವ್ಯಾಪ್ತಿಯಲ್ಲಿ 8 ಕೆರೆ ಇವೆ. ಯಳಂದೂರು ತಾಲೂಕಲ್ಲಿ 57 ಉದ್ಯೋಗ ಖಾತ್ರಿ ಕಾಮಗಾರಿ ನಡೆಯುತ್ತಿದೆ. ಇಲ್ಲಿ 12 ಗ್ರಾಪಂ ಹಾಗೂ ಸಂತೇಮರಳ್ಳಿ…

ಚಾ.ನಗರಕ್ಕೆ ಸಂಸದ ಶ್ರೀನಿವಾಸಪ್ರಸಾದ್ ಭೇಟಿ
ಚಾಮರಾಜನಗರ

ಚಾ.ನಗರಕ್ಕೆ ಸಂಸದ ಶ್ರೀನಿವಾಸಪ್ರಸಾದ್ ಭೇಟಿ

May 4, 2021

ಚಾಮರಾಜನಗರ, ಮೇ 3(ಎಸ್‍ಎಸ್)- ಜಿಲ್ಲೆಯಲ್ಲಿ ಒಂದೇ ದಿನ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟ ಹಿನ್ನೆಲೆಯಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ಸೋಮವಾರ ಸಂಜೆ ನಗರಕ್ಕೆ ಆಗಮಿಸಿ ಸಚಿವರಾದ ಡಾ. ಕೆ. ಸುಧಾಕರ್, ಎಸ್. ಸುರೇಶ್‍ಕುಮಾರ್ ಮತ್ತು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಜೊತೆ ಚರ್ಚೆ ನಡೆಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿ, ಕೊರೊನಾ ಒಂದು ಸಾಂಕ್ರಾಮಿಕ ರೋಗ. ಇದನ್ನು ತೊಡೆದು ಹಾಕಲು ಸರ್ವ ಪ್ರಯತ್ನ ಮಾಡುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 24 ಮಂದಿ ಸಾವನ್ನಪ್ಪಿರುವುದು ಆಕ್ಸಿಜನ್ ಕೊರತೆಯಿಂದಲ್ಲ. ನಾನು ನೇರವಾಗಿ…

ಕೊರೊನಾ ಪರಿಣಾಮಕಾರಿ ತಡೆಗೆ ಡಿಸಿ ಸೂಚನೆ
ಚಾಮರಾಜನಗರ

ಕೊರೊನಾ ಪರಿಣಾಮಕಾರಿ ತಡೆಗೆ ಡಿಸಿ ಸೂಚನೆ

May 3, 2021

ಚಾಮರಾಜನಗರ, ಮೇ 2-ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ವ್ಯಾಪಿಸ ದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾ ಗ್ರತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ಕೋವಿಡ್ ನಿಯಂತ್ರಣ ಹಾಗೂ ಕೋವಿಡ್ ಕೇರ್ ಕೇಂದ್ರಗಳ ನಿರ್ವಹಣೆ ಸಂಬಂಧ ನಡೆದ ಜಿಲ್ಲೆಯ ಹಿರಿಯ ಆರೋಗ್ಯಾಧಿಕಾರಿ-ವೈದ್ಯಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಹೆಚ್ಚುತ್ತಿರುವ ಕೊರೊನಾ ಪ್ರಕರಣ ಗಳನ್ನು ನಿಯಂತ್ರಿಸುವ ಸಂಬಂಧ ಇನ್ನಷ್ಟು ಪರಿಣಾಮಕಾರಿ ಕ್ರಮಗಳಿಗೆ ಮುಂದಾಗ ಬೇಕು. ವೈದ್ಯರ ನಿಯೋಜನೆ, ಆರೋಗ್ಯ ಸಿಬ್ಬಂದಿ ನೇಮಕವನ್ನು…

112 ತುರ್ತು ಸ್ಪಂದನ ಸೇವೆಗೆ ಎಸ್ಪಿ ಚಾಲನೆ
ಚಾಮರಾಜನಗರ

112 ತುರ್ತು ಸ್ಪಂದನ ಸೇವೆಗೆ ಎಸ್ಪಿ ಚಾಲನೆ

May 3, 2021

ಚಾಮರಾಜನಗರ, ಮೇ 2-ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಾಲಯದ ಮಹತ್ವಾಕಾಂಕ್ಷಿ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ ‘112’ ಯೋಜನೆ ಯಡಿ ಜಿಲ್ಲೆಗೆ ನೀಡಿರುವ ಇಆರ್ ಎಸ್‍ಎಸ್ ತುರ್ತು ವಾಹನಗಳ ಸೇವೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಚಾಲನೆ ನೀಡಿದರು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಸಿರು ನಿಶಾನೆ ತೋರುವ ಮೂಲಕ ವಾಹನಗಳ ಸೇವೆಗೆ ಚಾಲನೆ ನೀಡಿದ ಅವರು, ‘112’ ಸೇವೆ ಕುರಿತ ಪೋಸ್ಟರ್, ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಯಾವುದೇ ತುರ್ತು ಸಂದರ್ಭದಲ್ಲೂ ಕರೆ…

ಕೋವಿಡ್ ಸೆಂಟರ್‍ಗೆ ಸಿದ್ಧತೆ: ಡಿಸಿ ಸ್ಥಳ ಪರಿಶೀಲನೆ
ಚಾಮರಾಜನಗರ

ಕೋವಿಡ್ ಸೆಂಟರ್‍ಗೆ ಸಿದ್ಧತೆ: ಡಿಸಿ ಸ್ಥಳ ಪರಿಶೀಲನೆ

May 1, 2021

ಚಾಮರಾಜನಗರ, ಏ.30- ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಚಾಮರಾಜನಗರ ತಾಲೂಕಿನ ಮಲ್ಲಯ್ಯನ ಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಕೇಂದ್ರ ಆರಂಭಿಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ ಪರಿಶೀಲಿಸಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ಹಾಸಿಗೆ ಸೌಲಭ್ಯ ಒದಗಿಸ ಬಹುದಾದ ಕೋವಿಡ್ ಕೇರ್ ಸೆಂಟರ್‍ಗಾಗಿ ಅಗತ್ಯ ಸಿದ್ಧತೆ ಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಕೇರ್ ಆರಂಭಿಸಲು ಅಗತ್ಯವಿರುವ ಎಲ್ಲಾ ಸೌಕರ್ಯ…

ಚಾ.ನಗರದಲ್ಲಿ ಕಫ್ರ್ಯೂ ವೇಳೆ  ಅಡ್ಡಾದಿಡ್ಡಿ ವಾಹನ ಸಂಚಾರ
ಚಾಮರಾಜನಗರ

ಚಾ.ನಗರದಲ್ಲಿ ಕಫ್ರ್ಯೂ ವೇಳೆ ಅಡ್ಡಾದಿಡ್ಡಿ ವಾಹನ ಸಂಚಾರ

May 1, 2021

ಚಾಮರಾಜನಗರ, ಏ. 30(ಎಸ್‍ಎಸ್)- ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೊರೊನಾ ಕಫ್ರ್ಯೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಜಿಲ್ಲಾ ಕೇಂದ್ರವಾದ ಚಾಮರಾಜನಗರ ದಲ್ಲಿ ಶುಕ್ರವಾರ ಅನಗತ್ಯವಾಗಿ ಸಂಚಾರ ಮಾಡುತ್ತಿದ್ದ ಬೈಕ್, ಕಾರುಗಳನ್ನು ನೋಡಿದ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲೂ ಜಾರಿಯಲ್ಲಿರುವ ಕೊರೊನಾ ಕಫ್ರ್ಯೂ ವನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ರಸ್ತೆಗೆ ಇಳಿದಿದ್ದರು. ನಗರದ ಭುವನೇಶ್ವರಿ ವೃತ್ತಕ್ಕೆ ಆಗಮಿಸಿದ ಅವರು, ವಾಹನಗಳ ಓಡಾಟ ಹಾಗೂ ಜನ ಸಂಚಾರವನ್ನು ಕಂಡು…

ಕೋವಿಡ್ ಸಂಬಂಧಿ ನೆರವು ಒದಗಿಸಲು ಸಹಾಯವಾಣಿ
ಚಾಮರಾಜನಗರ

ಕೋವಿಡ್ ಸಂಬಂಧಿ ನೆರವು ಒದಗಿಸಲು ಸಹಾಯವಾಣಿ

April 29, 2021

ಚಾಮರಾಜನಗರ, ಏ.28- ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕೋವಿಡ್ ಸಂತ್ರಸ್ಥ ರಿಗಾಗಿ ನೆರವಾಗಲು ಸಹಾಯವಾಣಿ ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪ ಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಎಸ್.ಸುಲ್ತಾನ್ ಪುರಿ ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯದ ಆವ ರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಬುಧವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್…

1 9 10 11 12 13 141
Translate »