ಕೋವಿಡ್ ಸಂಬಂಧಿ ನೆರವು ಒದಗಿಸಲು ಸಹಾಯವಾಣಿ
ಚಾಮರಾಜನಗರ

ಕೋವಿಡ್ ಸಂಬಂಧಿ ನೆರವು ಒದಗಿಸಲು ಸಹಾಯವಾಣಿ

April 29, 2021

ಚಾಮರಾಜನಗರ, ಏ.28- ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕೋವಿಡ್ ಸಂತ್ರಸ್ಥ ರಿಗಾಗಿ ನೆರವಾಗಲು ಸಹಾಯವಾಣಿ ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪ ಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಎಸ್.ಸುಲ್ತಾನ್ ಪುರಿ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವ ರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಬುಧವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಉದ್ಬವಿಸಬಹು ದಾದ ಹಾಸಿಗೆ ಸಮಸ್ಯೆ, ಆಮ್ಲಜನಕ, ವೈದ್ಯರ ಸೇವೆ ಸಂಬಂಧ ಸಾರ್ವಜನಿಕರಿಗೆ ಸೂಕ್ತ ಸಲಹೆ ಹಾಗೂ ಪರಿಹಾರ ನೀಡಲು ಸಹಾಯ ವಾಣಿ ಆರಂಭಿಸಲಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊ.ಸಂ-9449547372 ಸಂಪರ್ಕಿಸಿ ಕೊರೊನಾ ಸಂಬಂಧ ಯಾವುದೇ ಸಮಸ್ಯೆ, ಸೌಲಭ್ಯಗಳ ಕುರಿತ ಮಾಹಿತಿ ಕೇಳಿ ಪರಿ ಹಾರ ಪಡೆದುಕೊಳ್ಳಬಹುದು. ಕೇಳಿಬರುವ ನೆರವು ಸಮಸ್ಯೆಗಳನ್ನು ಸಂಬಂಧಪಟ್ಟ ವೈದ್ಯರು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹರಿಸಲು ಕ್ರಮವಹಿಸಲಾಗು ತ್ತದೆ. ದಿನದ 24 ಗಂಟೆಯೂ ಸಹಾಯ ವಾಣಿ ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಲಾಕ್‍ಡೌನ್ ಜಾರಿಯಲ್ಲಿರುವ ಸಮಯ ದವರೆಗೂ ಸಹಾಯವಾಣಿ ಸೌಲಭ್ಯ ಇರ ಲಿದೆ. ಆ ನಂತರವೂ ಅವಶ್ಯಕತೆಯಿದ್ದರೆ ಸಹಾಯವಾಣಿ ಮುಂದುವರೆಸಲಾಗು ವುದು ಎಂದರು. ಕೋವಿಡ್ ಸಂಬಂಧಿ ನೆರವು ಪಡೆಯಲು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ- 15,100 ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿ ಕಾರದ ಸಹಾಯವಾಣಿ- 1800-425-90900 ಸಹ ಲಭ್ಯವಿದ್ದು ಇದರ ಬಳಕೆ ಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕೊರೊನಾ ರೋಗ ನಿರೋಧಕ ಶಕ್ತಿ ಒದಗಿ ಸುವ ಕೋವಿಡ್ ಲಸಿಕೆಯನ್ನು ನಾಗರಿ ಕರು ಪಡೆಯಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಪ್ರಸ್ತುತ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡ ಲಾಗುತ್ತಿದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಕೊಡಲಾಗುತ್ತದೆ. ಕೊರೊನಾ ತಡೆಗೆ ಲಸಿಕೆ ಪಡೆಯಲು ಯಾವುದೇ ಹಿಂಜರಿಕೆ ಬೇಡ. ಲಸಿಕೆಯನ್ನು ಪಡೆಯಲು ಪ್ರತಿ ಯೊಬ್ಬರೂ ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ ಮಾತನಾಡಿ, ಕೋವಿಡ್ 2ನೇ ಅಲೆಯಿಂದ ಜನರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತೆಡಗಟ್ಟುವ ಸಲುವಾಗಿ ಜಿಲ್ಲಾಡ ಳಿತ ಹಲವು ಕಾರ್ಯಕ್ರಮಗಳನ್ನು ರೂಪಿ ಸಿಕೊಂಡಿವೆ. ಇದರ ಜೊತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಜನರ ಸೇವೆ ಮಾಡುವ ನಿಟ್ಟಿನಲ್ಲಿ ಸಹಾಯ ವಾಣಿ ರಚಿಸಿದೆ ಎಂದರು. ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ನಾಗರಿಕರು ಕೋವಿಡ್ ಲಸಿಕೆ ಯನ್ನು ಪÀಡೆಯಬೇಕು. ಊಹಾಪೋಹಗಳಿಗೆ ಕಿವಿಗೊಡದೆ ದಯ ಮಾಡಿ ಲಸಿಕೆ ಪಡೆದು ಕೊಳ್ಳಿ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹಾಜರಿದ್ದರು.

ಗುಂಡ್ಲುಪೇಟೆ, ಏ.28(ಸೋಮ್.ಜಿ)- ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮಗೆ ನರೇಗಾ ಯೋಜನೆಯಡಿ ಉದ್ಯೋಗ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ಬೊಮ್ಮಲಾಪುರ ಗ್ರಾಮ ಪಂಚಾಯಿತಿ ಎದುರು ಬುಧವಾರ ಮಹಿಳೆಯರು ಪ್ರತಿಭಟನೆ ನಡೆಸಿದರು.

ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಯಲ್ಲಿ ಕೆಲಸ ಮಾಡಲು ತಾವು ಮಂಗಳ ವಾರವೇ ಹೋಗಿದ್ದರೂ ಇಂದು ತಮಗೆ ಕೆಲಸ ಕೊಡದೆ ವಾಪಸ್ ಕಳುಹಿಸಿದ್ದಾರೆ. ಕೊರೊನಾದಿಂದ ಕಳೆದ 1 ವರ್ಷದಿಂದಲೂ ಸರಿಯಾಗಿ ಕೂಲಿ ಕೆಲಸವೂ ದೊರಕದೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಈಗಾಗಲೇ ಗ್ರಾಮದಲ್ಲಿ 32 ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸ ನೀಡಿದ್ದಾರೆ. ಅವರೊಂದಿಗೆ ನಮಗೂ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದರೂ ನಿರಾಕರಿಸಿ ಪಕ್ಷಪಾತ ಮಾಡುತ್ತಿ ದ್ದಾರೆ ಎಂದು ಪಿಡಿಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗ ಮಿಸಿದ ತಾಪಂ ಇಓ ಶ್ರೀಕಂಠರಾಜೇ ಅರಸ್, ಪಿಡಿಒ ರಷಿಯಾಬಿ ಅವರಿಂದ ಮಾಹಿತಿ ಪಡೆದರು. ಲಾಕ್‍ಡೌನ್ ಸಂದರ್ಭದಲ್ಲಿ ಜಾಬ್‍ಕಾರ್ಡ್ ಹೊಂದಿರುವ ಎಲ್ಲಾ ಕಾರ್ಮಿಕರಿಗೆ ಕೆಲಸ ನೀಡಲು ಗ್ರಾಮ ಪಂಚಾ ಯಿತಿಯು ಮುಂದಾಗಿದ್ದು, ಇವರಿಗೂ ಬೇರೆಕಡೆ ಕೆಲಸ ನೀಡುವ ಭರವಸೆ ನೀಡಿ ದರು. ಪ್ರತಿಭಟನೆ ನಡೆಸುತ್ತಿದ್ದ ಎಲ್ಲಾ ಮಹಿಳೆಯರಿಗೂ ಕೆಲಸಕ್ಕೆ ನಿಯೋಜಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಇಂತಹ ಕಠಿಣ ಸಂದರ್ಭದಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು ಗಮನ ಹರಿಸಿ ಹಳ್ಳಿ ಹಳ್ಳಿಗಳಲ್ಲಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಕಾಮಗಾರಿಗಳನ್ನು ಜನ ರಿಂದ ಮಾಡಿಸಿ ಕೆಲಸ ದೊರೆಕಿಸಿ ಕೊಡಲು ಸಹಕಾರ ನೀಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Translate »