ಜಿಲ್ಲೆಯ ವಿವಿಧೆಡೆ ಡಿಸಿ ಭೇಟಿ
ಚಾಮರಾಜನಗರ

ಜಿಲ್ಲೆಯ ವಿವಿಧೆಡೆ ಡಿಸಿ ಭೇಟಿ

April 29, 2021

ಚಾಮರಾಜನಗರ, ಏ.28- ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಬುಧವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಲಾಕ್‍ಡೌನ್ ಸಂದ ರ್ಭದ ಪರಾಮರ್ಶೆ, ಕೋವಿಡ್ ಕೇರ್ ಕೇಂದ್ರಗಳ ಸಿದ್ಧತೆ ಹಾಗೂ ನ್ಯಾಯಬೆಲೆ ಅಂಗಡಿ, ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ರಸಗೊಬ್ಬರ, ಬಿತ್ತನೆ ಬೀಜ ಅಂಗಡಿಗಳನ್ನು ಪರಿಶೀಲಿಸಿದರು.

ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಕೇರ್ ಕೇಂದ್ರ ಗಳನ್ನು ಆರಂಭಿಸುವ ಸಂಬಂಧ ತಾಲೂಕಿನ ಮಾದಾಪುರದ ಕಾಲೇಜು ಹಾಸ್ಟೆಲ್ ಹಾಗೂ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿ ಪುರದ ವಸತಿ ಶಾಲೆಗೆ ಭೇಟಿ ನೀಡಿ ಕೂಡಲೇ ಬಾಕಿ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಡಿಸಿ ಸೂಚನೆ ನೀಡಿದರು.

ಸೋಂಕಿತರ ಆರೈಕೆಗೆ ಈಗಾಗಲೇ ಇರುವ ಹಾಸಿಗೆ, ಮೇಜು ಮತ್ತಿತರ ಅಗತ್ಯ ಪೂರಕ ಸೌಲಭ್ಯಗಳೊಡನೆ ಉಳಿದ ಅವಶ್ಯಕ ವ್ಯವಸ್ಥೆಯೊಂದಿಗೆ ಕೋವಿಡ್ ಕೇರ್ ಕೇಂದ್ರಗಳನ್ನು ತ್ವರಿತವಾಗಿ ಸಜ್ಜುಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಯಳಂದೂರು, ಕೊಳ್ಳೇಗಾಲ ಪಟ್ಟಣಕ್ಕೆ ಭೇಟಿ ನೀಡಿ ಲಾಕ್ ಡೌನ್ ಪಾಲನೆ ಕುರಿತು ಪರಿವೀಕ್ಷಿಸಿದರು. ಅನವಶ್ಯಕ ಓಡಾಟ ಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಿದರು.

ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಮಹ ದೇಶ್ವರ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ಡಿಸಿ ಇನ್ನೂ ಹೆಚ್ಚಿನ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸದಿರುವುದನ್ನು ಗಮನಿಸಿ ಆಹಾರ ಪದಾರ್ಥಗಳ ಎತ್ತುವಳಿ ಸಮಯವನ್ನು ಪರಿಶೀಲಿಸಿದರು. ಪಡಿತರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿ ಹೊರತುಪಡಿಸಿ ಬೇರೊಂದು ಕೊಠಡಿ ಯಲ್ಲಿ ದಾಸ್ತಾನು ಮಾಡಿರುವುದು ಪರಿ ಶೀಲನೆ ವೇಳೆ ಕಂಡು ಬಂದಿತು. ಈ ಬಗ್ಗೆ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಯವರು ಇನ್ನು ಮುಂದೆ ಬೇರೆ ಕಡೆ ದಾಸ್ತಾನು ಮಾಡುವುದು ಕಂಡು ಬಂದಲ್ಲಿ ಅಂಗಡಿ ಪರವಾನಗಿ ಅಮಾನತು ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯಳಂದೂರಿನ ಟಿಎಪಿಸಿಎಂಎಸ್‍ನಲ್ಲಿ ತೆರೆಯಲಾಗಿರುವ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಉದ್ದನೆಯ ಸರತಿ ಸಾಲು ಕಂಡು ಬಂದ ಹಿನೆÀ್ನಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಟೋಕನ್ ವ್ಯವಸ್ಥೆ ಮೂಲಕ ನಿರ್ದಿಷ್ಟ ಸಂಖ್ಯೆಯ ಜನರು ನಿಗದಿಪಡಿಸಿದ ಸಮಯದಲ್ಲಿ ಪಡಿತರ ಪಡೆಯಲು ವ್ಯವಸ್ಥೆ ಮಾಡ ಬೇಕು. ಬಳಿಕ ಮತ್ತಷ್ಟು ಜನರು ಬಂದು ಪಡಿತರ ಪಡೆದು ಕೊಳ್ಳಲು ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಿದರು.

ಪಡಿತರವನ್ನು ನೆಲದಲ್ಲಿ ಸುರಿದು ವಿತರಣೆ ಮಾಡುತ್ತಿದ್ದ ಬಗ್ಗೆ ತರಾಟೆಗೆ ತೆಗೆದುಕೊಂಡ ಡಿಸಿ, ಮೂಟೆಯಿಂದಲೇ ನೇರವಾಗಿ ಪಡಿತರ ನೀಡುವಂತೆ ತಾಕೀತು ಮಾಡಿದರು. ಪಡಿತರ ಪ್ರಮಾಣ, ದಾಸ್ತಾನು ಮತ್ತಿತ್ತರ ವಿವರಗಳನ್ನು ಪಡೆದುಕೊಂಡರು. ಕೊಳ್ಳೇ ಗಾಲ ಪಟ್ಟಣದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರೈಸುವ ರಸಗೊಬ್ಬರ ಅಂಗಡಿಗೆ ಭೇಟಿ ನೀಡಿ ಯಾವ ರಸಗೊಬ್ಬರಗಳು ದಾಸ್ತಾನು ಇವೆ ಎಂಬ ಬಗ್ಗೆ ಪರಿಶೀಲಿಸಿದರು. ಹಳೆಯ ಸ್ಟಾಕ್ ಅನ್ನು ಹಳೆಯ ದರದಲ್ಲೇ ಮಾರಾಟ ಮಾಡಬೇಕೆಂದು ಸೂಚಿಸಿದರು. ರೈತರ ಕೃಷಿಗೆ ಅಗತ್ಯವಿರುವ ಗೊಬ್ಬರ, ಬಿತ್ತನೆ ಬೀಜ ಅಂಗಡಿಗಳನ್ನು ತೆರೆದು ಮಾರಾಟ ಮಾಡಬೇಕು. ಈ ಬಗ್ಗೆ ತಿಳಿವಳಿಕೆ ನೀಡುವ ಕೆಲಸವನ್ನು ಕೃಷಿ ಇಲಾಖೆ ಮಾಡಬೇಕು ಎಂದರು. ಈ ವೇಳೆ ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬಡೋಲೆ, ಡಿವೈಎಸ್‍ಪಿ ಅನ್ಸರ್ ಅಲಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ್, ತಹಶೀಲ್ದಾರರಾದ ಕೆ.ಕುನಾಲ್, ಜಯಪ್ರಕಾಶ್, ಚಿದಾನಂದ ಗುರುಸ್ವಾಮಿ ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Translate »