ಕೊರೊನಾ ಕಫ್ರ್ಯೂ: ಜಿಲ್ಲಾದ್ಯಂತ ಉತ್ತಮ ಸ್ಪಂದನೆ
ಚಾಮರಾಜನಗರ

ಕೊರೊನಾ ಕಫ್ರ್ಯೂ: ಜಿಲ್ಲಾದ್ಯಂತ ಉತ್ತಮ ಸ್ಪಂದನೆ

April 29, 2021

‘ಚಾಮರಾಜನಗರ, ಏ.28(ಎಸ್‍ಎಸ್)- ಬುಧ ವಾರದಿಂದ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರದ ನಿಯಮದನ್ವಯ ಕೊರೊನಾ ಕಫ್ರ್ಯೂ ಜಾರಿಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿದಂತೆ ಮಿಕ್ಕೆಲ್ಲ ಅಂಗಡಿ- ಮುಂಗಟ್ಟು ಬಂದ್ ಆಗಿದ್ದವು.
ಕೊರೊನಾ 2ನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದ್ದು, ಸಾವಿನ ಪ್ರಮಾಣವು ಅಧಿಕವಾಗಿದೆ. ಹಾಗಾಗಿ, ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮಂಗಳ ವಾರ ರಾತ್ರಿ 9 ಗಂಟೆಯಿಂದ ಮೇ 12ರವರೆಗೆ ರಾಜ್ಯಾದ್ಯಂತ 14 ದಿನ ಕೊರೊನಾ ಕಫ್ರ್ಯೂ ಜಾರಿ ಗೊಳಿಸಿದ್ದು, ಇದಕ್ಕೆ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನಲ್ಲಿ ಮೊದಲ ದಿನ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ಆ ಸಮಯದಲ್ಲಿ ಸಾರ್ವ ಜನಿಕರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿ ದ್ದರು. 9.30 ಆಗುತ್ತಿದ್ದಂತೆ ಪೆÇಲೀಸರು ರಸ್ತೆಗಿಳಿ ದರು. ಅಂಗಡಿ ಮುಚ್ಚಿಸುವ ಚಟುವಟಿಕೆ ನಡೆಸಿ ದರು. ಮಧ್ಯಾಹ್ನದ ವೇಳೆಗೆ ಇಡೀ ನಗರದ ಚಟು ವಟಿಕೆ ಸ್ತಬ್ಧಗೊಂಡಿತ್ತು, ಮೌನಕ್ಕೆ ಶರಣಾಗಿತ್ತು. ಔಷಧ ಅಂಗಡಿಗಳು, ಆಸ್ಪತ್ರೆ ಸೇರಿದಂತೆ ವೈದ್ಯಕೀಯ ಸೇವೆಗಳು ಎಂದಿನಂತೆ ಇದ್ದವು.

ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಡೀವಿಯೇಷನ್ ರಸ್ತೆ, ರಥದ ಬೀದಿ, ಜೋಡಿ ರಸ್ತೆ ಸೇರಿದಂತೆ ಹಲವೆಡೆ ಪೆÇಲೀಸರು ವಾಹನಗಳನ್ನು ತಪಾಸಣೆ ನಡೆಸಿ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ದಂಡ ವಿಧಿಸಿದರು. ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳು ರಸ್ತೆಗಿಳಿಯಲಿಲ್ಲ. ಇದರಿಂದ ಬಸ್ ನಿಲ್ದಾಣಗಳು ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಆಟೋ, ಟ್ಯಾಕ್ಸಿ, ಲಾರಿ ಸಂಚಾರವೂ ಸಂಪೂರ್ಣವಾಗಿ ಸ್ಥಗಿತ ಗೊಂಡಿತು. ಪೆಟ್ರೋಲ್ ಬಂಕ್ ತೆರೆದಿದ್ದರೂ ಪೆಟ್ರೋಲ್ ಕೊಳ್ಳವವರ ಸಂಖ್ಯೆ ವಿರಳವಾಗಿತ್ತು. ಕ್ಯಾಂಟಿನ್, ಹೊಟೇಲ್ ಬಾಗಿಲು ತೆರೆದಿದ್ದು, ಪಾರ್ಸಲ್‍ಗೆ ಮಾತ್ರ ಅವಕಾಶ ನೀಡಲಾಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆದರೆ, ಜನರು ಹಾಗೂ ಗ್ರಾಹಕರ ಭೇಟಿ ಕಡಿಮೆ ಇತ್ತು.

ಚಾಮರಾಜನಗರ ಜಿಲ್ಲೆಗೆ ಜನರು ಹಾಗೂ ವಾಹನಗಳು ಬಾರದಂತೆ ಎಲ್ಲಾ ಕಡೆ ಪೊಲೀಸರು ನಾಕಾಬಂದಿ ಹಾಕಿದ್ದರು. ಈ ಸ್ಥಳದಲ್ಲಿ ಪೊಲೀಸರು ಅನಗತ್ಯವಾಗಿ ಬರುವ ಜನರನ್ನು ಪ್ರಶ್ನಿಸಿ, ವಿನಾ ಕಾರಣ ಓಡಾಡದಂತೆ ಹೇಳಿ ಕಳುಹಿಸಿದರು.

Translate »