ಚಾಮರಾಜನಗರ

ಬಿಎಸ್‍ಪಿ ಅಭ್ಯರ್ಥಿಯಾಗಿ ಡಾ.ಶಿವಕುಮಾರ್ ಆಯ್ಕೆ
ಚಾಮರಾಜನಗರ

ಬಿಎಸ್‍ಪಿ ಅಭ್ಯರ್ಥಿಯಾಗಿ ಡಾ.ಶಿವಕುಮಾರ್ ಆಯ್ಕೆ

March 20, 2019

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ದಿಂದ ಬಿಎಸ್‍ಪಿ ಪಕ್ಷದ ಅಭ್ಯರ್ಥಿಯಾಗಿ ಐಎಎಸ್ ತರÀ ಬೇತುದಾರ ಡಾ.ಶಿವಕುಮಾರ್ ಅವರನ್ನು ಕಣಕ್ಕಿಳಿಸಿದೆ. ರಾಜ್ಯಾಧ್ಯಕ್ಷ ಪ್ರೊ.ಎ.ಹರಿರಾಮ್ ಅವರು ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದಾರೆ. ಈ ಪಟ್ಟಿಯಲ್ಲಿ ಚಾಮ ರಾಜನಗರ ಕ್ಷೇತ್ರದಿಂದ ಡಾ.ಶಿವಕುಮಾರ್, ಚಿಕ್ಕಬ ಳ್ಳಾಪುರ ಕ್ಷೇತ್ರದಿಂದ ಡಾ.ಸಿ.ಎಸ್.ದ್ವಾರಕನಾಥ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ. ಚಾಮರಾಜನಗರ ಕ್ಷೇತ್ರದಿಂದ ಡಾ.ಶಿವಕುಮಾರ್ ಸ್ಪರ್ಧಿಸುವುದು ಖಚಿತ ಎಂದು ಮೈಸೂರು ಮಿತ್ರ ಫೆ.19 ಸಂಚಿಕೆಯಲ್ಲಿಯೇ ಪ್ರಕಟಿಸಿತ್ತು. ಅದರಂತೆ ಶಿವಕುಮಾರ್ ಅವರ ಆಯ್ಕೆ ನಿಜವಾಗಿದೆ. ಡಾ.ಶಿವಕುಮಾರ್ ಸಂಶೋಧಕ ಹಾಗೂ…

ಚಾಮರಾಜನಗರ ಮೀಸಲು ಲೋಕಸಭಾ ಚುನಾವಣೆ-2019 ಶ್ರೀನಿವಾಸ್ ಪ್ರಸಾದ್‍ಗೆ 14, ಧ್ರುವಗೆ 6ನೇ ಚುನಾವಣೆ
ಚಾಮರಾಜನಗರ

ಚಾಮರಾಜನಗರ ಮೀಸಲು ಲೋಕಸಭಾ ಚುನಾವಣೆ-2019 ಶ್ರೀನಿವಾಸ್ ಪ್ರಸಾದ್‍ಗೆ 14, ಧ್ರುವಗೆ 6ನೇ ಚುನಾವಣೆ

March 19, 2019

ಚಾಮರಾಜನಗರ: ಚಾಮ ರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಿ.ಶ್ರೀನಿವಾಸ್ ಪ್ರಸಾದ್ ಇದುವರೆಗೆ 13 ಚುನಾವಣೆಗಳನ್ನು ಎದುರಿಸಿದ್ದಾರೆ. ಇದರಲ್ಲಿ 7 ಬಾರಿ ಗೆಲುವು ಕಂಡಿದ್ದರೆ, 6 ಬಾರಿ ಸೋಲಿನ ಕಹಿ ಉಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕೆ ಇಳಿಯುತ್ತಿರುವ ಆರ್.ಧ್ರುವನಾರಾಯಣ್ 5 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಈ ಪೈಕಿ 1 ಬಾರಿ ಸೋಲು ಕಂಡಿದ್ದು, 4 ಚುನಾವಣೆಗಳಲ್ಲಿ ಸತತವಾಗಿ ಗೆಲುವಿನ ನಗೆ ಬೀರಿದ್ದಾರೆ. ವಿ.ಶ್ರೀನಿವಾಸ್ ಪ್ರಸಾದ್ ಎದುರಿಸಿರುವ 13 ಚುನಾವಣೆಗಳಲ್ಲಿ 8 ಲೋಕಸಭೆ ಚುನಾವಣೆಯಾಗಿದ್ದು, 5…

ನೀತಿ ಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಡಿಸಿ
ಚಾಮರಾಜನಗರ

ನೀತಿ ಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಡಿಸಿ

March 19, 2019

ಚಾಮರಾಜನಗರ: ಲೋಕಸಭಾ ಕ್ಷೇತ್ರದಲ್ಲಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಅಧಿಕಾರಿಗಳು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ ಕಾವೇರಿ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಾ.ನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅವಧಿ ಆರಂಭಗೊಂಡಿದ್ದು, ನಿಯೋಜಿಸಿರುವ ಕೆಲಸವನ್ನು ಎಲ್ಲೆಡೆ ಅತ್ಯಂತ ಕಟ್ಟುನಿಟ್ಟಾಗಿ ಕೈಗೊಳ್ಳಬೇಕು. ಚೆಕ್‍ಪೋಸ್ಟ್ ಗಳಲ್ಲಿ ತಪಾಸಣೆ…

ಸುಳವಾಡಿ ವಿಷ ಪ್ರಸಾದ ದುರಂತ ಪ್ರಕರಣ ನ್ಯಾಯಾಲಯಕ್ಕೆ 6,163 ಪುಟಗಳ ಆರೋಪ ಪಟ್ಟಿ ಸಲ್ಲಿಕೆ
ಚಾಮರಾಜನಗರ

ಸುಳವಾಡಿ ವಿಷ ಪ್ರಸಾದ ದುರಂತ ಪ್ರಕರಣ ನ್ಯಾಯಾಲಯಕ್ಕೆ 6,163 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

March 19, 2019

ಚಾಮರಾಜನಗರ: ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ಸಂಭವಿಸಿದ ವಿಷ ಪ್ರಸಾದ ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಪುಟ್ಟಮಾದಯ್ಯ 6,163 ಪುಟಗಳ ಆರೋಪ ಪಟ್ಟಿಯನ್ನು ನಗರದ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕಿಚ್‍ಗುತ್ ಮಾರಮ್ಮ ದೇವಸ್ಥಾನದ ಹಿಡಿತ ಸಂಪೂರ್ಣವಾಗಿ ತಮ್ಮ ಕೈಯಲ್ಲೇ ಇರಬೇಕೆಂಬ ದುರುದ್ದೇಶದಿಂದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ ಹಾಗೂ ದೊಡ್ಡಯ್ಯ ಅವರು ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ದೇವಾಲಯದ ಆದಾಯ, ಚಿನ್ನ, ಆಡಳಿತ ಎಲ್ಲವೂ ಇಮ್ಮಡಿ ಮಹದೇವಸ್ವಾಮಿ ನಿಯಂತ್ರಣಕ್ಕೆ ಬರಬೇಕು….

ಶಾಸಕರ ಕಾರ್ಯಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವ ಸಂಸದರು
ಚಾಮರಾಜನಗರ

ಶಾಸಕರ ಕಾರ್ಯಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವ ಸಂಸದರು

March 19, 2019

ಧ್ರುವನಾರಾಯಣ್ ನಾಜೂಕಯ್ಯನ ಪಾತ್ರ ನಿಲ್ಲಿಸಲಿ: ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಕಿಡಿ ಕೊಳ್ಳೇಗಾಲ: ಶಾಸಕರು ತಮ್ಮ ಅಧಿಕಾರಾವಧಿ ಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವ ಸಂಸದ ಆರ್.ಧ್ರುವನಾರಾಯಣ್ ಗಿಲಿಟ್ ರಾಜಕಾರಣ ಬಿಟ್ಟು ನಾಜೂಕಯ್ಯನ ಪಾತ್ರಕ್ಕೆ ಇತಿಶ್ರೀ ಹಾಡಬೇಕಿದೆ ಎಂದು ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಕಿಡಿಕಾರಿದರು. ಪಟ್ಟಣದ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರಾಗಿ 10ವರ್ಷ ಎಂಬ ಸಾಧನೆ ಪುಸ್ತಕದಲ್ಲಿ ಧ್ರುವನಾರಾಯಣರ ನಾಜೂಕಯ್ಯನ ಪಾತ್ರ ಬಯಲಾ ಗಿದೆ. ಕೆಲವು ಶಾಸಕರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಸಂಸದ…

ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್ ಬಿಜೆಪಿ ಅಭ್ಯರ್ಥಿ?
ಚಾಮರಾಜನಗರ, ಮೈಸೂರು

ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್ ಬಿಜೆಪಿ ಅಭ್ಯರ್ಥಿ?

March 15, 2019

ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರೂ ಆದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅವರೇ ಕಣಕ್ಕಿಳಿಯುವುದು ಬಹುತೇಕ ಖಚಿತವಾ ಗಿದೆ. ಅಭಿಮಾನಿಗಳು ಹಾಗೂ ಪಕ್ಷದ ವರಿಷ್ಠರ ಒತ್ತಾಯಕ್ಕೆ ಮಣಿದಿರುವ ಪ್ರಸಾದ್ ಈಗಾಗಲೇ ರಾಜ್ಯದ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಾಳೆಯೂ ರಾಜ್ಯ ಮತ್ತು ಕೇಂದ್ರ ವರಿಷ್ಠರೊಂದಿಗೆ ಮತ್ತೊಂದು ಸುತ್ತಿನ ಮಾತು ಕತೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸಲಿ ದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇಂದು ರಾತ್ರಿ…

ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಆನೆ ಹೊಟ್ಟೆಗೆ ಅರೆಕಾಸಿನ `ವೆಚ್ಚ’
ಚಾಮರಾಜನಗರ

ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಆನೆ ಹೊಟ್ಟೆಗೆ ಅರೆಕಾಸಿನ `ವೆಚ್ಚ’

March 14, 2019

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯ ರ್ಥಿಗಳಿಗೆ ಚುನಾವಣಾ ಆಯೋಗ ವೆಚ್ಚದ ಮಿತಿ ಯನ್ನು ಕೇವಲ 70 ಲಕ್ಷ ರೂ.ಗೆ ಸೀಮಿತಗೊಳಿಸಿದ್ದು, ವಾಸ್ತವವಾಗಿ ಈ ಮೊತ್ತ ಅಭ್ಯರ್ಥಿಗಳ ಪಾಲಿಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರತಿದಿನ ತಮ್ಮ ಚುನಾವಣಾ ಖರ್ಚು ವೆಚ್ಚವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾ ಗಿದ್ದು, ಪ್ರತಿಯೊಬ್ಬ ಅಭ್ಯರ್ಥಿಯೂ ಚುನಾವಣಾ ಫಲಿತಾಂಶ ಘೋಷಣೆಯಾದ 30 ದಿನದೊಳಗೆ ತನ್ನ ಚುನಾವಣಾ ವೆಚ್ಚಗಳ ಲೆಕ್ಕದ ಸಂಪೂರ್ಣ ಪ್ರತಿಯೊಂದನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿ ಸುವುದು…

ಸ್ಪರ್ಧೆಗೆ ಶ್ರೀನಿವಾಸ್ ಪ್ರಸಾದ್ ಮೇಲೆ ಹೆಚ್ಚಿದ ಒತ್ತಡ
ಚಾಮರಾಜನಗರ

ಸ್ಪರ್ಧೆಗೆ ಶ್ರೀನಿವಾಸ್ ಪ್ರಸಾದ್ ಮೇಲೆ ಹೆಚ್ಚಿದ ಒತ್ತಡ

March 14, 2019

ಚಾಮರಾಜನಗರ: ಚಾ.ನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಕಾಂಗ್ರೆಸ್‍ನ ಆರ್. ಧ್ರುವನಾರಾಯಣ ಅವರನ್ನು ಮಣಿಸಲು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರೇ ಸ್ಪರ್ಧಿಸ ಬೇಕು ಎಂದು ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಸತತ ಎರಡು ಬಾರಿ ಗೆಲುವು ಸಾಧಿಸಿ, ಬೀಗುತ್ತಿರುವ ಧ್ರುವನಾರಾಯಣ ಅವ ರಿಗೆ ಜೆಡಿಎಸ್ ಜೊತೆಗಿನ ಮೈತ್ರಿಯು ಮತ್ತಷ್ಟು ಬಲ ತುಂಬಿದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ 5 ಬಾರಿ ಗೆಲುವು ಸಾಧಿಸಿ ಜನಪ್ರಿಯತೆ ಹೊಂದಿರುವ ವಿ.ಶ್ರೀನಿ ವಾಸಪ್ರಸಾದ್ ಅವರೇ ಸ್ಪರ್ಧಿಸಬೇಕು ಎಂಬುದು ಬಿಜೆಪಿ…

ಮದ್ಯಪಾನಕ್ಕೆ ಹಣ ನೀಡದ ಪತ್ನಿಯನ್ನೇ ಹತ್ಯೆಗೈದ ಪತಿ
ಚಾಮರಾಜನಗರ

ಮದ್ಯಪಾನಕ್ಕೆ ಹಣ ನೀಡದ ಪತ್ನಿಯನ್ನೇ ಹತ್ಯೆಗೈದ ಪತಿ

March 14, 2019

ಹನೂರು: ಮದ್ಯಪಾನಕ್ಕಾಗಿ ಹಣ ನೀಡದ ಹಿನ್ನೆಲೆ ವ್ಯಸನಿಯೋರ್ವ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ಇಂದು ತಾಲೂಕಿನ ಹುತ್ತೂರು ಗ್ರಾಮದಲ್ಲಿ ಇಂದು ಬೆಳಕಿಗೆ ಬಂದಿದೆ. ಗ್ರಾಮದ ಅರಸಮ್ಮ ಹತ್ಯೆಗೀಡಾದ ಮಹಿಳೆಯಾಗಿದ್ದು, ಹತ್ಯೆ ಆರೋಪಿ ನಾಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂದಿನಂತೆ ಮಂಗಳವಾರ ಆರೋಪಿ ನಾಗ ಮದ್ಯಪಾನಕ್ಕಾಗಿ ಪತ್ನಿ ಅರಸಮ್ಮನ ಬಳಿ ದುಡ್ಡು ಕೇಳಿದ್ದಾನೆ ಎನ್ನಲಾಗಿದೆ. ಹಣ ಕೊಡಲು ನಿರಾಕರಿಸಿದ್ದರಿಂದ ಕುಪಿತನಾದ ನಾಗ ಪತ್ನಿ ಕಪಾಳಕ್ಕೆ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಅರಸಮ್ಮ ಮೃತಪಟ್ಟಿದ್ದಾರೆ. ಇದರಿಂದ ಗಾಬರಿಯಾದ ನಾಗ ಮೃತದೇಹವನ್ನು ಗ್ರಾಮದ ಹೊರವಲಯದ…

ಆಮೆ ಮಾರಾಟಗಾರನ ಬಂಧನ
ಚಾಮರಾಜನಗರ

ಆಮೆ ಮಾರಾಟಗಾರನ ಬಂಧನ

March 14, 2019

ಚಾಮರಾಜನಗರ: ಜೀವಂತ ಆಮೆಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ. ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿಯ ಸಿದ್ದಮಲ್ಲಪ್ಪ ಉರುಫ್ ಕೂಸಪ್ಪ (33) ಬಂಧಿತ. ಖಚಿತ ಮಾಹಿತಿ ಮೇರೆಗೆ ತಮ್ಮಡಹಳ್ಳಿ-ಲಕ್ಕೂರು ಮಾರ್ಗ ಮಧ್ಯ ಇರುವ ಸಿದ್ದಮಲ್ಲಪ್ಪ ಅವರ ಮನೆಗೆ ತೆರಳಿದ ಅರಣ್ಯ ಸಂಚಾರಿ ದಳ ಸಿಬ್ಬಂದಿ ಪರಿಶೀಲಿಸಿದರು. ಈ ವೇಳೆ ಮನೆಯ ಒಂದು ಚಿಕ್ಕತೊಟ್ಟಿಯಲ್ಲಿ ಎರಡು ಜೀವಂತ ಆಮೆಗಳು ಕಂಡು ಬಂದಿವೆ. ಈ ಬಗ್ಗೆ ವಿಚಾರಿಸಿದಾಗ ಹಣ ಸಂಪಾದಿಸುವ ಉದ್ದೇಶದಿಂದ ಮಾರಾಟ…

1 33 34 35 36 37 141
Translate »